Winter Trip: ಚಳಿಗಾಲದಲ್ಲಿ ನೀವು ಪ್ರವಾಸ ಹೋಗಬೇಕು ಅಂದುಕೊಂಡಿದ್ದರೆ ಮಿಸ್ ಮಾಡದೇ ಈ ಸ್ಥಳಗಳಿಗೆ ಹೋಗಿ

Winter Tourist Place :ಡಾರ್ಜಿಲಿಂಗ್ ವಿಶ್ವವಿಖ್ಯಾತವಾಗಿರುವುದು ಮುಖ್ಯವಾಗಿ ಮೂರು ಪ್ರವಾಸಿ ಆಕರ್ಷಣೆಗಳಿಗಾಗಿ. ಮೊದಲನೆಯದು ಇಲ್ಲಿನ ಟೈಗರ್‍ ಹಿಲ್ಸ್‌ನಿಂದ ಕಾಣುವ ಕಾಂಚನಗಂಗ ಪರ್ವತದಲ್ಲಾಗುವ ಅಭೂತಪೂರ್ವ ಸೂರ್ಯೋದಯಕ್ಕೆ. ಎರಡನೆಯದು ಯುನೆಸ್ಕೊ ವಿಶ್ವಪ್ರವಾಸಿ ತಾಣ ಡಾರ್ಜಲಿಂಗ್‌ನ ಟಾಯ್‍ಟ್ರೈನಿಗೆ. ಮೂರನೆಯದಾಗಿ ಇಲ್ಲಿನ ವಿಶಿಷ್ಟ ಚಹಾಕ್ಕೆ. 

 ಚಳಿಗಾಲ

ಚಳಿಗಾಲ

 • Share this:
  ನಮ್ಮ ಭಾರತದಲ್ಲಿ(India) ಪ್ರವಾಸಿ ತಾಣಗಳಿಗೆ(Tourist Place) ಕೊರತೆಯೇನು ಇಲ್ಲ... ಒಂದೊಂದು ಕಾಲಕ್ಕೆ ಒಂದೊಂದು ಸ್ಥಳಗಳಿಗೆ ಭೇಟಿ ನೀಡಬಹುದಾದ ಪ್ರವಾಸಿ ತಾಣಗಳು ಇವೆ.ಕೆಲವೊಂದು ಪ್ರದೇಶಗಳಿಗೆ ವರ್ಷಪೂರ್ತಿ ಭೇಟಿ ನೀಡಬಹುದು.. (Trip)ಇನ್ನೂ ಕೆಲವು ಪ್ರದೇಶಗಳನ್ನು ಚಳಿಗಾಲದಲ್ಲಿ(Winter) ಮಳೆಗಾಲದಲ್ಲಿ(Rainy season) ಹೋಗಿ ಅಲ್ಲಿನ ಸೌಂದರ್ಯವನ್ನು ಆಸ್ವಾದಿಸಬಹುದು.. ಅದೇ ರೀತಿ ಭಾರತದಲ್ಲಿ ಚಳಿಗಾಲದ ಸಮಯದಲ್ಲಿ ಭೇಟಿ ನೀಡಬೇಕಾದ ಹಲವು ಅದ್ಭುತ ಸ್ಥಳಗಳಿದ್ದು, ಪ್ರಕೃತಿ ಪ್ರಿಯರು, ಪ್ರಾಕೃತಿಕ ಸೌಂದರ್ಯವನ್ನು ಆರಾಧಿಸುವುದರ ಜೊತೆಗೆ ಸಕ್ಕತ್ ವೆಕೇಶನ್ ಎಂಜಾಯ್ ಮಾಡಬಹುದು... ಹೀಗಾಗಿ ಚಳಿಗಾಲಕ್ಕೆ ನೀವು ಟ್ರಿಪ್ ಹೋಗಲು ಪ್ಲಾನ್ ಮಾಡುತ್ತಿದ್ದಾರೆ ಮಿಸ್ ಮಾಡದೆ ಈ ಸ್ಥಳಗಳಿಗೆ ಹೋಗಿ.

  1)ಗುಲ್ಮಾರ್ಗ್:ಸಮುದ್ರ ಮಟ್ಟದಿಂದ 2,730 ಮೀಟರ್ ಎತ್ತರದಲ್ಲಿರುವ ಗುಲ್ಮಾರ್ಗ್, ಮಧುಚಂದ್ರಕ್ಕೆ ಸೂಕ್ತವಾದ ತಾಣವಾಗಿದೆ. ಮನಾಲಿ ಮತ್ತು ಶಿಮ್ಲಾದಂತೆ ಹೆಚ್ಚು ಜನಸಂದಣಿಯಿಲ್ಲದ, ಸುಂದರವಾದ ಪಟ್ಟಣವಾಗಿದೆ.ಇನ್ನು ಗುಲ್ಮಾರ್ಗ್ ಸ್ಕೀಯಿಂಗ್‌ಗೆ ಮಾತ್ರವಲ್ಲ, ಗೊಂಡೊಲಾ ರೈಡ್‌ಗೂ ಹೆಸರುವಾಸಿಯಾಗಿದೆ.

  2)ಮುನ್ನಾರ್, ಕೇರಳ : ಮುನ್ನಾರ್ ಎಂದರೆ ಎಲ್ಲರಿಗೂ ಕಣ್ಣಮುಂದೆ ಬರುವ ಮೊದಲ ದೃಶ್ಯ ಸಾಲು ಸಾಲು ಹಸಿರು ಬೆಟ್ಟಗಳು ಅದರ ನಡುವೆ ವಿಸ್ತಾರವಾದ ಚಹಾ ತೋಟಗಳು, ವಿಶಿಷ್ಟವಾದ ಮೊಂಟೇನ್ ಶೋಲಾ ಹುಲ್ಲುಗಾವಲು. ಮುನ್ನಾರ್ ಎಂದರೆ ಮೂರು ನದಿಗಳ ಸಂಗಮ.  ವರ್ಷಪೂರ್ತಿ ಮುನ್ನಾರ್ ಗೆ ಭೇಟಿ ನೀಡಬಹುದಾಗಿದ್ದರೂ ಚಳಿಗಾಲದಲ್ಲಿ ಇಲ್ಲಿಗೆ ಬೈಕ್ ರೈಡ್ ಹೋಗುವುದು ಪ್ರವಾಸಿಗರ ಪಾಲಿಗೆ ಸ್ವರ್ಗ ಇದ್ದಂತೆ.

  ಇದನ್ನೂ ಓದಿ: ಲಡಾಕ್​ನ ರಸ್ತೆಗಳಲ್ಲಿ ಮೊಬೈಲ್​ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕ ಪ್ರಕೃತಿಯ ಸೌಂದರ್ಯ..!

  3)ಔಲಿ, ಉತ್ತರಖಂಡ್ :ಔಲಿ ನವೆಂಬರ್ ನಿಂದ ಫೆಬ್ರವರಿವರೆಗೆ ಅಂದರೆ ಚಳಿಗಾಲದ ತಿಂಗಳುಗಳಲ್ಲಿ ಭವ್ಯವಾದ ವಂಡರ್ ಲ್ಯಾಂಡ್ ಆಗಿ ಬದಲಾಗುತ್ತದೆ. ಸ್ಕೀಯಿಂಗ್ ಕಲಿತಿದ್ದರೆ ಸಮುದ್ರ ಮಟ್ಟದಿಂದ 2500 ರಿಂದ 3050 ಮೀಟರ್ ಎತ್ತರದಲ್ಲಿರುವ ಔಲಿ ಇಳಿಜಾರಿನಲ್ಲಿ ಇಳಿಯಬಹುದು. ಸ್ಕೀಯಿಂಗ್ ಬರದಿದ್ದರೆ ನೀವು ಹಿಮದಲ್ಲಿ ಆಟವಾಡಬಹುದು. ಸ್ನೋ ಬಾಲ್‌ಗಳನ್ನು ಎಸೆಯಬಹುದು

  4)ರೂಪ್‌ಕುಂಡ್: ಉತ್ತರಖಂಡದ ರಾಜ್ಯದ ಚಮೋಲಿ ಜಿಲ್ಲೆಯಲ್ಲಿ ಜನ ಜೀವನವೇ ಇಲ್ಲದ ಎತ್ತರದ ಹಿಮಾಲಯದ ಪರ್ವತಗಳ ನಡುವೆ 7000 ಮೀ. ಎತ್ತರದ ತ್ರಿಶೂಲ್ ಪರ್ವತದ ಮಡಿಲಲ್ಲಿರುವ ಚಿಕ್ಕ ಸರೋವರ ರೂಪ್‌ಕುಂಡ್. ಇದು ಜನರ ಪ್ರಮುಖ ಟ್ರೆಕಿಂಗ್ ತಾಣವೂ ಆಗಿದೆ.

  5)ಡಲ್ ಹೌಸಿ: ಬ್ರಿಟಿಷ್‌ ಆಡಳಿತದ ಕಾಲದಲ್ಲಿ ಬಹುದೊಡ್ಡ ಸೇನಾ ಬಿಡಾರವಾಗಿದ್ದ ಹಿಮಾಚಲ ಪ್ರದೇಶದ ಡಾಲ್‌ಹೌಸಿಯ ಪ್ರಾಕೃತಿಕ ಸೌಂದರ್ಯ ಅನುಪಮವಾದುದು. ಭಾರತದ ಸ್ವಿಟ್ಜರ್ಲೆಂಡ್‌ ಎಂದೇ ಖ್ಯಾತಿಯಾದ ಖಜ್ಜಿಯಾ ಇರುವುದು ಇಲ್ಲಿಯೇ. ಸುಭಾಷ್‌ಚಂದ್ರ ಬೋಸ್‌ ಅವರು ತಿಂಗಳುಪರ್ಯಂತ ವಿಶ್ರಾಂತಿ ಪಡೆದ ಪ್ರದೇಶವೂ ಇಲ್ಲಿದೆ. ಇತಿಹಾಸದ ಮೆಲುಕು ಹಾಕುತ್ತಾ ಈ ರಮಣೀಯ ತಾಣದಲ್ಲಿ ಸುತ್ತಾಡುವ ಮಜವೇ ಬೇರೆ.

  6)ಧರ್ಮಶಾಲಾ : ಧರ್ಮಶಾಲಾವು ಲಾಮಾಗಳ ನಾಡು ಎಂದು ಪ್ರಸಿದ್ಧವಾಗಿದೆ. ಪ್ರಕೃತಿಯ ಸೌಂದರ್ಯ ಮತ್ತು ಹಿಂದೂ ಮತ್ತು ಟಿಬೆಟಿಯನ್ ಸಂಸ್ಕೃತಿಯ ಪರಿಪೂರ್ಣ ಮಿಶ್ರಣದಿಂದ ಧರ್ಮಶಾಲಾ ಗಮನಸೆಳೆಯುತ್ತದೆ..

  7) ರಿಷಿಕೇಶ: ಉತ್ತರಖಂಡ್ ಜಿಲ್ಲೆಯ ರಿಷಿಕೇಶ ಚಳಿಗಾಲದಲ್ಲಿ ನೀವು ಭೇಟಿ ನೀಡಲೇಬೇಕಾದ ಸ್ಥಳಗಳಲ್ಲಿ ಒಂದು.. ಇಲ್ಲಿನ ಅಗಾಧವಾದ ಪ್ರಕೃತಿಸೌಂದರ್ಯ ದೇವಾಲಯಗಳು ಚಳಿಗಾಲದಲ್ಲಿ ನಿಮ್ಮ ಮನಸ್ಸನ್ನು ಮುದಗೊಳಿಸಲಿವೆ.

  ಇದನ್ನೂ ಓದಿ: ಚೇತರಿಕೆ ಕಾಣುತ್ತಿರುವ Coastal Tourism ಮೇಲೆ ಮತ್ತೆ Corona ಕರಿನೆರಳು; ಕರಾವಳಿ ಭಾಗದಲ್ಲಿ ಆತಂಕ

  8)ಗೋವಾ : ಗೋವಾ ಭಾರತದಲ್ಲಿ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಕಡಲತೀರಗಳು, ಅಡ್ರಿನಾಲಿನ್ ಚಟುವಟಿಕೆಗಳು, ಪಕ್ಷಗಳು, ಪ್ರಕೃತಿ ಮತ್ತು ಇತಿಹಾಸದ ವೈವಿಧ್ಯಮಯ ಸ್ಥಳ ಗಳಿಗಾಗಿ ದೇಶದ ನಾನಾ ಭಾಗಗಳಿಂದ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ..

  9)ಡಾರ್ಜಿಲಿಂಗ್ : ಡಾರ್ಜಿಲಿಂಗ್ ವಿಶ್ವವಿಖ್ಯಾತವಾಗಿರುವುದು ಮುಖ್ಯವಾಗಿ ಮೂರು ಪ್ರವಾಸಿ ಆಕರ್ಷಣೆಗಳಿಗಾಗಿ. ಮೊದಲನೆಯದು ಇಲ್ಲಿನ ಟೈಗರ್‍ ಹಿಲ್ಸ್‌ನಿಂದ ಕಾಣುವ ಕಾಂಚನಗಂಗ ಪರ್ವತದಲ್ಲಾಗುವ ಅಭೂತಪೂರ್ವ ಸೂರ್ಯೋದಯಕ್ಕೆ. ಎರಡನೆಯದು ಯುನೆಸ್ಕೊ ವಿಶ್ವಪ್ರವಾಸಿ ತಾಣ ಡಾರ್ಜಲಿಂಗ್‌ನ ಟಾಯ್‍ಟ್ರೈನಿಗೆ. ಮೂರನೆಯದಾಗಿ ಇಲ್ಲಿನ ವಿಶಿಷ್ಟ ಚಹಾಕ್ಕೆ.
  Published by:ranjumbkgowda1 ranjumbkgowda1
  First published: