• Home
  • »
  • News
  • »
  • trend
  • »
  • Artificial Intelligence: ತಮ್ಮದೇ ಅಪ್ಲಿಕೇಷನ್ ಅಭಿವೃದ್ಧಿಪಡಿಸೋ ಆಸೆ ಇದೆಯಾ? ಹಾಗಾದ್ರೆ ಈ ಆನ್​ಲೈನ್​ ಕೋರ್ಸ್​ಗಳ ಬಗ್ಗೆ ತಿಳಿಯಿರಿ

Artificial Intelligence: ತಮ್ಮದೇ ಅಪ್ಲಿಕೇಷನ್ ಅಭಿವೃದ್ಧಿಪಡಿಸೋ ಆಸೆ ಇದೆಯಾ? ಹಾಗಾದ್ರೆ ಈ ಆನ್​ಲೈನ್​ ಕೋರ್ಸ್​ಗಳ ಬಗ್ಗೆ ತಿಳಿಯಿರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಐಬಿಎಂ ರಚಿಸಿರುವ ಆರು ಮಾಡೆಲ್‍ಗಳ ಪ್ರೋಗ್ರಾಂ, ಎಐ ತಂತ್ರಜ್ಞಾನ, ಅಪ್ಲಿಕೇಶನ್ ಮತ್ತು ಅದರ ಬಳಕೆಯ ಸಂದರ್ಭಗಳ ಬಗ್ಗೆ ತಿಳುವಳಿಕೆಯನ್ನು ನೀಡುತ್ತದೆ.

  • Share this:

ನಿಮಗೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (Artificial Intelligence) ನಿಂದ  ಚಾಲಿತವಾದ ಅಪ್ಲಿಕೇಶನ್‍ಗಳನ್ನು(Application) ಅಭಿವೃದ್ಧಿಪಡಿಸುವ (Developing) ಕುರಿತು ಆಸಕ್ತಿ ಅಥವಾ ಆಸೆ ಇದೆಯೇ? ಹಾಗಾದರೆ ನೀವು ಆನ್‍ಲೈನ್ ಕಲಿಕಾ ಪೋರ್ಟಲ್‍ಗಳಲ್ಲಿ ಲಭ್ಯವಿರುವ ಕೋರ್ಸ್‍ಗಳಿಗೆ ಸೇರಿಕೊಳ್ಳುವುದು ಉತ್ತಮ ಆಯ್ಕೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮತ್ತು ಅದರ ಅಪ್ಲಿಕೇಶನ್‍ಗಳ ಬಗ್ಗೆ ತಿಳಿದುಕೊಳ್ಳಲು ಇದು ಅಗತ್ಯ. ನಮ್ಮ ಹುಡುಕಾಟ ಮಾದರಿಗಳನ್ನು ಆಧರಿಸಿ, ಯೂಟ್ಯೂಬ್ (YouTube) ವಿಡಿಯೋಗಳನ್ನು ಶಿಫಾರಸ್ಸು ಮಾಡುವ ವರೆಗೆ ಅರ್ಟಿಫಿಶಿಯಲ್ ಇಂಟಲಿಜೆನ್ಸ್ ಕ್ಷೇತ್ರ ವಿಶಾಲ ವ್ಯಾಪ್ತಿಯನ್ನು ಹೊಂದಿದೆ. 


ಎಐ ಈಗಿನ ಜಗತ್ತಿನಲ್ಲಿ ಏಕೆ ಪ್ರಸ್ತುತ ಎನಿಸಿದೆ?


ಎಐ ,ಕಂಪ್ಯೂಟರ್ ಮತ್ತು ಯಂತ್ರಗಳನ್ನು , ಮನುಷ್ಯನ ಮನಸ್ಸಿನ ಸಮಸ್ಯೆ, ಅವುಗಳನ್ನು ಪರಿಹರಿಸುವುದು ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯಗಳನ್ನು ಪುನರಾವರ್ತಿಸಲು ಬಳಸುತ್ತದೆ.


ಈ ಕ್ಷೇತ್ರದಲ್ಲಿ ಇಂಜಿನಿಯರ್‍ಗಳು ಮಾತ್ರ ಕೆಲಸ ಮಾಡಬೇಕು ಎಂದೇನಿಲ್ಲ, ತಾಂತ್ರಿಕೇತರ ಜನರು ಕೂಡ ಕೆಲಸ ನಿರ್ವಹಿಸಬಹುದು. ಏಕೆಂದರೆ, ಪಠ್ಯ ಸಂದೇಶಗಳನ್ನು ಸ್ವಯಂಚಾಲಿತವಾಗಿ ಪೂರ್ಣಗೊಳಿಸುವುದರಿಂದ ಹಿಡಿದು, ನಮ್ಮ ಹುಡುಕಾಟ ಮಾದರಿಗಳನ್ನು ಆಧರಿಸಿ, ಯ್ಯೂಟ್ಯೂಬ್ ವಿಡಿಯೋಗಳನ್ನು ಶಿಫಾರಸ್ಸು ಮಾಡುವ ವರೆಗೆ ಅರ್ಟಿಫಿಶಿಯಲ್ ಇಂಟಲಿಜೆನ್ಸ್ ಕ್ಷೇತ್ರ ವಿಶಾಲ ವ್ಯಾಪ್ತಿಯನ್ನು ಹೊಂದಿದೆ. ಎಐ ನಮ್ಮ ದೈನಂದಿನ ಜೀವನ ಮತ್ತು ವ್ಯಾಪಾರ ಉದ್ದಿಮೆ ಕ್ಷೇತ್ರಗಳಲ್ಲಿ ತನ್ನ ಸ್ಥಾನವನ್ನು ರೂಪಿಸಿಕೊಂಡಿದೆ. ಕೆಲವು ಆನ್‍ಲೈನ್ ಎಐ ಕೋರ್ಸ್‍ಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.


ಇದನ್ನೂ ಓದಿ: Twitter ಸದ್ಯದಲ್ಲೇ ಪರಿಚಯಿಸಲಿದೆ ಹೊಸ ಬಟನ್! ನಿಮಗೆ conversation ಇಷ್ಟವಿಲ್ಲದಿದ್ದರೆ, ನೀವು ಹೊರ ಬರಬಹುದು!


ಎಐ ಫಾರ್ ಎರ್ವಿವನ್ – ಕೋರ್ಸೆರಾ


ಡೀಪ್ ಲರ್ನಿಂಗ್ ಸಹಯೋಗದಿಂದ ಕೋರ್ಸೆರಾ ಈ ಕೋರ್ಸ್ ಅನ್ನು ರಚಿಸಿದ್ದು, ಇದರಲ್ಲಿ ಎಐ ಮತ್ತು ಆ ಕ್ಷೇತ್ರದಲ್ಲಿ ಬಳಸಲಾಗುವ ವಿವಿಧ ನಿಯಮಗಳ ಸಂಪೂರ್ಣ ತಿಳುವಳಿಕೆ ನೀಡಲಾಗುತ್ತದೆ. ಖ್ಯಾತ ವಿಜ್ಞಾನಿ ಅಂಡ್ರೂ ಎನ್‍ಜಿ ಈ 12 ಗಂಟೆಗಳ ಅವಧಿಯ ಆರಂಭಿಕ ಕೋರ್ಸ್ ಅನ್ನು ಕಲಿಸುತ್ತಾರೆ.


ಸಿಎಸ್50’ಯ ಇಂಟ್ರಡಕ್ಷನ್ ಟು ಅರ್ಟಿಫಿಶಿಯಲ್ ಇಂಟಲಿಜೆನ್ಸ್ ವಿತ್ ಪೈತಾನ್ – ಇಡಿಎಕ್ಸ್


ಈ ಕೋರ್ಸ್ ಅನ್ನು ಹಾರ್ವರ್ಡ್ ವಿಶ್ವ ವಿದ್ಯಾನಿಲಯದ ಸಹಯೋಗದೊಂದಿಗೆ ಕೋರ್ಸೆರಾ ಅಭಿವೃದ್ಧಿ ಪಡಿಸಿದ್ದು, ನಿಜವಾದ ಜಗತ್ತಿನ ಪ್ರಮುಖ ಸವಾಲುಗಳನ್ನು ಪರಿಹರಿಸುವತ್ತ ಮೊದಲ ಹೆಜ್ಜೆ ಇಡಲು ನಿಮಗೆ ಅನುವು ಮಾಡಿಕೊಡುತ್ತದೆ.


ಐಬಿಎಂ ಅಪ್ಲೈಡ್ ಎಐ ಪ್ರೊಫೆಶನಲ್ ಸರ್ಟಿಫಿಕೇಟ್


ಐಬಿಎಂ ರಚಿಸಿರುವ ಆರು ಮಾಡೆಲ್‍ಗಳ ಪ್ರೋಗ್ರಾಂ, ಎಐ ತಂತ್ರಜ್ಞಾನ, ಅಪ್ಲಿಕೇಶನ್ ಮತ್ತು ಅದರ ಬಳಕೆಯ ಸಂದರ್ಭಗಳ ಬಗ್ಗೆ ತಿಳುವಳಿಕೆಯನ್ನು ನೀಡುತ್ತದೆ. ಇದರಲ್ಲಿ, ಮೆಶಿನ್ ಕಲಿಕೆ, ಡಾಟಾ ವಿಜ್ಞಾನ , ನೈಸರ್ಗಿಕ ಭಾಷಾ ಸಂಸ್ಕರಣೆ, ಇಮೇಜ್ ಪ್ರೊಸೆಸಿಂಗ್, ಐಬಿಎಂ ವಾಟ್ಸನ್ ಎಐ ಸೇವೆಗಳು, ಒಪನ್‍ಸಿವಿ ಮತ್ತು ಎಪಿಐ ಗಳಂತಹ ಅತ್ಯಾಧುನಿಕ ವಿಷಯಗಳು ಮತ್ತು ಸಾಧನಗಳನ್ನು ಕಲಿಯಬಹುದು.


ಇದನ್ನೂ ಓದಿ: WhatsApp: ಶೀಘ್ರದಲ್ಲೇ ಹೊಸ ವೈಶಿಷ್ಟ್ಯ ಪರಿಚಯಿಸಲಿರುವ ವಾಟ್ಸ್​ಆ್ಯಪ್​! ಅದೇನು ಗೊತ್ತಾ?


ದ ಬಿಗಿನರ್ಸ್ ಗೈಡ್ ಟು ಅರ್ಟಿಫಿಶಿಯಲ್ ಇಂಟಲಿಜೆನ್ಸ್ ಇನ್ ಯುನಿಟಿ – ಯುಡೆಮಿ


ಇದು 15 ಗಂಟೆಗಳ ಕೋರ್ಸ್ ಆಗಿದ್ದು, ಗೂಗಲ್ ಪ್ಲೆ ಮತ್ತು ಆ್ಯಪ್ ಸ್ಟೋರ್ ಗೇಮ್‍ಗಳಲ್ಲಿ , ಆಟಗಾರರಲ್ಲದ ಪಾತ್ರಗಳನ್ನು ಹೇಗೆ ವಿನ್ಯಾಸ ಮಾಡಲು ಮತ್ತು ನಿರ್ವಹಿಸಲು C# ಅನ್ನು ಬಳಸುವುದು ಹೇಗೆ ಎಂಬುದನ್ನು ಕಲಿಸುತ್ತದೆ. ಇದರಲ್ಲಿ ಎನ್‍ಪಿಸಿಗಳ ರಚನೆ ಮತ್ತು ಅನ್ವಯಿಸುವಿಕೆಯ ಬಗ್ಗೆಯು ಕಲಿಯಬಹುದು. ಆಟಗಳಲ್ಲಿ ಎಐ ಏನು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ ಮತ್ತು ಅದನ್ನು ನಿಮ್ಮ ಸ್ವಂತ ಯೋಜನೆಗಳಿಗೆ ಅದನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಈ ಕೋರ್ಸ್‍ನಲ್ಲಿ ನೀವು ಕಲಿಯುತ್ತೀರಿ.


ಇಂಟ್ರಡಕ್ಷನ್ ಟು ಅರ್ಟಿಫಿಶಿಯಲ್ ಇಂಟಲಿಜೆನ್ಸ್ – ಕೋರ್ಸೆರಾ


ಇದು 11 ಗಂಟೆಗಳ ಕೋರ್ಸ್ ಆಗಿದ್ದು, ಇದರಲ್ಲಿ ಎಐ ಎಂದರೇನು ಮತ್ತು ಎಐ ಬಳಕೆಯ ಪ್ರಕರಣಗಳು ಮತ್ತು ಅಪ್ಲಿಕೇಶನ್‍ಗಳ ಪರಿಶೀಲನೆಯ ಬಗ್ಗೆ ಕಲಿಯಬಹುದು. ಇಲ್ಲಿ ಎಐಗೆ ಸಂಬಂಧಿಸಿದ ನಿಯಮಗಳ ಪ್ರಾಥಮಿಕ ತಿಳುವಳಿಕೆ ಸಿಗುತ್ತದೆ. ಈ ಕೋರ್ಸ್‍ನಲ್ಲಿ ಭಾಗವಹಿಸುವವರು ಒಂದು ಚಿಕ್ಕ ಪ್ರಾಜೆಕ್ಟ್ ಮಾಡಬೇಕಾಗುತ್ತದೆ. ಅದು ಯಶಸ್ವಿಯಾಗಿ ಪೂರ್ಣಗೊಂಡರೆ ಅವರು ಪ್ರಮಾಣ ಪತ್ರ ಪಡೆಯುತ್ತಾರೆ. ಈ ಕೋರ್ಸ್ ಮಾಡಲು ಪ್ರೋಗ್ರಾಮಿಂಗ್ ಅಥವಾ ಕಂಪ್ಯೂಟರ್ ಸೈನ್ಸ್ ಜ್ಞಾನದ ಅವಶ್ಯಕತೆ ಇರುವುದಿಲ್ಲ.


ಅರ್ಟಿಫಿಶಿಯಲ್ ಇಂಟಲಿಜೆನ್ಸ್ : ಎ-ಝೆಡ್: ಲರ್ನ್ ಹೌ ಟು ಬಿಲ್ಡ್ ಆ್ಯನ್ ಎಐ- ಯುಡೆಮಿ


18 ಗಂಟೆಗಳ ಈ ಯುಡೆಮಿ ಕೋರ್ಸ್ ಕಿರಿಲ್ ಎರೆಮೆಂಕೋ ಮತ್ತು ಅವರ ಸೂಪರ್ ಡಾಟಾ ಸೈನ್ಸ್ ಅಭಿವೃದ್ಧಿ ಪಡಿಸಿದೆ. ನೈಜ ಪ್ರಪಂಚದ ಅಪ್ಲಿಕೇಶನ್‍ಗಳಿಗಾಗಿ ಶಕ್ತಿಶಾಲಿ ಎಐ ರಚಿಸಲು ಡಾಟಾ ಸೈನ್ಸ್, ಮೆಷಿನ್ ಲರ್ನಿಂಗ್ ಮತ್ತು ಡೀಪ್ ಲರ್ನಿಂಗ್‍ನಂತಹ ಶಕ್ತಿಯನ್ನು ಹೇಗೆ ಸಂಯೋಜಿಸುವುದು ಎಂಬುವುದನ್ನು ಇದರಿಂದ ಕಲಿಯಬಹುದು. ಇದು ಎಲ್ಲರಿಗಾಗಿ ವಿನ್ಯಾಸಗೊಳಿಸಲಾಗಿದ್ದು, ನಿಮಗೆ ಗಣಿತದ ಸಂಕೀರ್ಣ ಸಮಸ್ಯೆಗಳನ್ನು ಎದುರಿಸುವು ಅವಶ್ಯಕತೆ ಎದುರಾಗುವುದಿಲ್ಲ.


ಗೂಗಲ್ ಎಐ – ಗೂಗಲ್


ವಿವಿಧ ಸಮುದಾಯಗಳಲ್ಲಿ ಸಾಮಾಜಿಕ ಅಜೆಂಡಾವನ್ನು ಮುನ್ನಡೆಸಲು ಎಐಯನ್ನು ಹೇಗೆ ಬಳಸಬಹುದು ಎಂಬ ಕುರಿತು ಗೂಗಲ್ ತರಬೇತಿ ಕಾರ್ಯಕ್ರಮವನ್ನು ರಚಿಸಿದೆ. ಇಲ್ಲಿ ಗ್ರಾಹಕರು ಹ್ಯಾಕಿಂಗ್ ಮತ್ತು ಇತರ ಉಲ್ಲಂಘನೆಗಳಿಂದ ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದನ್ನು ಕಲಿಯಬಹುದು.

Published by:Pavana HS
First published: