Honeymoonಗೆ ಪ್ಲಾನ್​ ಮಾಡಿದ್ರೆ ಈ ತಾಣಗಳು ಬೆಸ್ಟ್​ ಅಂತೆ

ನೀವು ಭೇಟಿ ನೀಡುವ ಮೂಲಕ ನಿಮ್ಮ ಸಂಗಾಂತಿ ಜೊತೆಗೆ ನಿಮ್ಮ ಹನಿಮೂನ್ ಅನ್ನು ಸುಂದರಗೊಳಿಸಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವ ವಿವಾಹಿತರು (Newly Married) ಮದುವೆಯ ಆರಂಭದ ದಿನಗಳನ್ನು ಸಂತೋಷವಾಗಿ ಕಳೆಯಲು, ಒಬ್ಬರಿಗೊಬ್ಬರು ಏಕಾಂತದಿಂದ ಕಳೆಯಲು ಸೂಕ್ತ ಸಮಯವೆಂದರೆ ಹನಿಮೂನ್ (Honeymoon). ಮದುವೆ ನಂತರ ಹನಿಮೂನ್ ಗೆ ಎಲ್ಲಿಗೆ ಹೋಗಬೇಕು ಎಂಬುದರ ಬಗ್ಗೆ ಪ್ಲ್ಯಾನ್ (Plan) ಮಾಡುತ್ತಿರುತ್ತಾರೆ. ಅದರಲ್ಲೂ ಕೆಲವರು ಅಂತರಾಷ್ಟ್ರೀಯ ಪ್ರವಾಸ (International Trip) ಹೋಗಲು ಬಯಸುತ್ತಾರೆ. ಅಂತವರಿಗೆ ಅಂತಾನೇ ಇಲ್ಲಿ ನಾವು ಕೆಲವು ವಿಶೇಷ ತಾಣಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಈ ಎಲ್ಲಾ ವಿದೇಶಿ ಜಾಗಗಳಿಗೆ ನೀವು ಭೇಟಿ ನೀಡುವ ಮೂಲಕ ನಿಮ್ಮ ಸಂಗಾಂತಿ ಜೊತೆಗೆ ನಿಮ್ಮ ಹನಿಮೂನ್ ಅನ್ನು ಸುಂದರಗೊಳಿಸಬಹುದು.

1) ಪ್ರೇಗ್
ಬರೊಕ್ ಶೈಲಿಯ ಕಟ್ಟಡಗಳಿಗೆ ಹೆಸರುವಾಸಿಯಾದ ಪ್ರೇಗ್ ಒಂದು ವಿಶಿಷ್ಟವಾದ ಹಳೇ ಪ್ರಪಂಚದ ಅನುಭವ ನೀಡುವ ನಗರ. ಪ್ರೇಗ್ ನಗರ ನಿಮ್ಮ ಹನಿಮೂನ್ ಅನ್ನು ಮತ್ತಷ್ಟು ಚಂದಗೊಳಿಸುತ್ತದೆ. ನಿಮ್ಮ ಸಂಗಾತಿಗೆ ವಿಶಿಷ್ಟ ರೀತಿಯಲ್ಲಿ ಸರ್ಪ್ರೈಸ್ ಕೊಡಲು ನೀವು ಉತ್ಸುಕರಾಗಿದ್ದರೆ, ನಿಮ್ಮ ಉತ್ತಮ ಆಯ್ಕೆ ಪ್ರೇಗ್ ಆಗಿರಬೇಕು. ಪ್ರೇಗ್ ನಗರವನ್ನು ಯುನೆಸ್ಕೊ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಸಲಾಗಿದೆ. ಪ್ರೇಗ್‌ನ ಕಾಲುವೆ, ಅಲ್ಲಿನ ಸೌಂದರ್ಯ ನಿಮಗೆ ಹೊಸ ಅನುಭವ ನೀಡುತ್ತದೆ.

2) ಬಾಲಿ
ಬಾಲಿ ಕೇವಲ ಒಂದು ರಮಣೀಯ ಸ್ಥಳ. ಇಲ್ಲಿ ನೀವು ನಿಮ್ಮ ಸಂಗಾತಿಯೊಂದಿಗೆ ರೋಮ್ಯಾಂಟಿಕ್ ಕ್ಷಣಗಳನ್ನು ಕಲೆಹಾಕಬಹುದಾದ ಅತ್ಯದ್ಭುತ ತಾಣಗಳಲ್ಲಿ ಒಂದಾಗಿದೆ. ಬಾಲಿಯ ಕೆಲವು ಸುಂದರವಾದ ಸ್ಥಳಗಳು ನಿಮ್ಮ ಮಧುಚಂದ್ರವನ್ನು ಉತ್ತಮಗೊಳಿಸುತ್ತದೆ. ನೀವು ಇಲ್ಲಿ ಉಲುವಾಟು ದೇವಸ್ಥಾನವನ್ನು ಮಿಸ್ ಮಾಡದೇ ನೋಡಬೇಕು, ಎಲ್ಲಕ್ಕಿಂತ ಹೆಚ್ಚಾಗಿ ಬಾಲಿ ಕಡಲತೀರಗಳಿಗೆ ಹೆಸರುವಾಸಿಯಾಗಿದ್ದು ಈ ತಾಣವು ಬೀಚ್ ಪ್ರೇಮಿಗಳಿಗೆ ಸ್ವರ್ಗವಾಗಿದೆ ಮತ್ತು ಹೊಸ ಜೋಡಿಗೆ ಏಕಾಂತದ ಸಮಯ ಕಳೆಯಲು ಬಾಲಿ ಉತ್ತಮ ತಾಣವಾಗಿದೆ.

3) ದಕ್ಷಿಣ ಆಫ್ರಿಕಾ
ನೀವು ಮತ್ತು ನಿಮ್ಮ ಸಂಗಾತಿ ರೋಡ್ ಟ್ರಿಫ್ ಇಷ್ಟಪಡುವರಾಗಿದ್ದರೆ ದಕ್ಷಿಣ ಆಫ್ರಿಕಾ ಪ್ರವಾಸವು ನಿಮ್ಮ ಕನಸನ್ನು ನನಸಾಗಿಸುತ್ತದೆ. ಆಫ್ರಿಕಾದ ಖಂಡದ ದಕ್ಷಿಣದ ದೇಶವು ಹಲವು ವಿವಿಧತೆಗಳಲ್ಲಿ ಅದ್ಭುತವಾಗಿದೆ. ಅಟ್ಲಾಂಟಿಕ್ ಮತ್ತು ಭಾರತೀಯ ಸಾಗರಗಳು ಸಂಧಿಸುವ ಈ ಭವ್ಯವಾದ ಸ್ಥಳಕ್ಕೆ ಹೋಗಿರಿ ಮತ್ತು ನಿಮ್ಮ ಪ್ರಿಯಕರನೊಂದಿಗೆ ನಿಮ್ಮ ಜೀವನದ ಅತ್ಯಂತ ಸ್ಮರಣೀಯ ಸಮಯವನ್ನು ಕಳೆಯಿರಿ.

4) ಟರ್ಕಿ
ರಮಣೀಯ ಭೂದೃಶ್ಯ, ಶ್ರೀಮಂತ ಇತಿಹಾಸ, ವರ್ಣರಂಜಿತ ಹಬ್ಬಗಳು, ರುಚಿಕರವಾದ ಆಹಾರ ಮತ್ತು ಅಸಂಖ್ಯಾತ ಶಾಪಿಂಗ್ ಆಯ್ಕೆಗಳು ಟರ್ಕಿಯಲ್ಲಿ ನಿಮ್ಮ ಹನಿಮೂನ್ ಅನ್ನು ಸುಂದರವಾಗಿಸುತ್ತದೆ. ಧಾರ್ಮಿಕ ಸ್ಥಳಗಳಿಂದ ಹಿಡಿದು ಐತಿಹಾಸಿಕ ಹೆಗ್ಗುರುತುಗಳವರೆಗೆ ಮತ್ತು ಅನೇಕ ನೈಸರ್ಗಿಕ ರಮಣೀಯ ದೃಶ್ಯವೀಕ್ಷಣೆಯ ಆಯ್ಕೆಗಳಿವೆ. ನೀವು ಟರ್ಕಿಯಲ್ಲಿ ನೀಲಿ ಮಸೀದಿ, ಹಗಿಯಾ ಸೋಫಿಯಾ, ಟೋಪ್ಕಾಪಿ ಅರಮನೆ, ಬೆಸಿಲಿಕಾ ಸಿಸ್ಟರ್ನ್ ಮತ್ತು ಬೋಡ್ರಮ್ ಕ್ಯಾಸಲ್ಗೆಗಳಿಗೆ ಭೇಟಿ ನೀಡಲು ಮರೆಯದಿರಿ.

ಇದನ್ನು ಓದಿ: ಅದೃಷ್ಟ ಎಂದ್ರೆ ಇದು; ಸಿಗ್ನಲ್​ನಲ್ಲಿ ಬಲೂನ್​ ಮಾರುತ್ತಿದ್ದ ಹುಡುಗಿ ಇಂದು ಮಾಡೆಲ್​​​

5) ಸೀಶೆಲ್ಸ್
ಸೀಶೆಲ್ಸ್ಪ್ರಾಚೀನ ನೀಲಿ ನೀರು, ಹಸಿರು ತೋಟಗಳು ಮತ್ತು ಹಲವಾರು ಖಾಸಗಿ ದ್ವೀಪಗಳ ವಿಹಾರಗಳು ನಿಮ್ಮ ಹನಿಮೂನ್‌ಗಾಗಿ ನಿಮ್ಮ ಸೇಶೆಲ್ಸ್ ಪ್ರವಾಸದಲ್ಲಿ ಇರುತ್ತವೆ. ಸಾಕಷ್ಟು ಕಡಲತೀರಗಳು ಸಹ ಇಲ್ಲಿವೆ, ಮತ್ತು ಹೆಚ್ಚಿನ ಹೋಟೆಲ್‌ಗಳು ಏಕಾಂತ ಕಡಲತೀರಗಳನ್ನು ಸಹ ಒಳಗೊಂಡಿವೆ. ಈ ಹೋಟೆಲ್‌ಗಳಲ್ಲಿ ಒಂದನ್ನು ಆರಿಸಿ ಮತ್ತು ಸಿಶೆಲ್ಸ್‌ನಲ್ಲಿರುವಾಗ ನೀವು ಅತ್ಯಂತ ರೋಮ್ಯಾಂಟಿಕ್ ಅನುಭವ ಹೊಂದುತ್ತೀರಿ

6) ಸ್ವಿಟ್ಜರ್ಲೆಂಡ್
ಸ್ವಿಟ್ಜರ್ಲೆಂಡ್‌ನ ಸೌಂದರ್ಯವು ಕಣಿವೆಗಳು, ಪರ್ವತ ಶ್ರೇಣಿಗಳು ಮತ್ತು ಪ್ರಸ್ಥಭೂಮಿಗಳಿಂದ ಸುಂದರವಾಗಿದೆ. ಕೆಲವು ಉತ್ತಮ ಪ್ರಯಾಣದ ಅನುಭವಗಳನ್ನು ಪಡೆಯಲು ನೀವು ನಿಮ್ಮ ಸಂಗಾತಿ ಜೊತೆ ಸ್ವಿಟ್ಜರ್ಲೆಂಡ್ಗೆ ಹಾರಬಹುದು.

ಇದನ್ನು ಓದಿ: Spoon ಬದಲು ಕೈಯಿಂದ ಊಟ ಮಾಡಬೇಕು ಎಂಬುದರ ಹಿಂದಿದೆ ವೈಜ್ಞಾನಿಕ ಕಾರಣ..!

7) ದುಬೈ
ಶ್ರೀಮಂತ ನಗರವಾದ ದುಬೈ ನವಜೋಡಿಗೆ ರೋಮ್ಯಾಂಟಿಕ್ ಸ್ಥಳವಾಗಿದೆ. ದುಬೈನಲ್ಲಿ ನೀವು ಅದ್ಬುತ ಸ್ಥಳಗಳಿಗೆ ಭೇಟಿನೀಡಬಹುದು. ಬುರ್ಜ್ ಖಲೀಫಾ, ಗಾರ್ಡನ್, ಮಾಲ್, ಸ್ಕೀ ದುಬೈ, ರೆಸ್ಟೋರೆಂಟ್ ಅಂತ ಹಲವು ಸುಂದರ ಸ್ಥಳಗಳಿಗೆ ಭೇಟಿ ನೀಡಬಹುದು.

8) ಫಿಜಿ ದ್ವೀಪಗಳು
ಭಾರತೀಯರಿಗೆ ಅತ್ಯಂತ ಪ್ರಿಯವಾದ ಹನಿಮೂನ್ ತಾಣಗಳಲ್ಲಿ ಇದು ಒಂದಾಗಿದೆ.ನಿಮ್ಮ ಪ್ರೀತಿಪಾತ್ರರ ಜೊತೆ ಕೈ ಜೋಡಿಸಿ ನಡೆಯಲು ಫಿಜಿ ದ್ವೀಪದ ಕಡಲ ತೀರ ಉತ್ತಮ ಸ್ಥಳವಾಗಿದೆ. ಇಲ್ಲಿ ನೀವು ಮತ್ತು ನಿಮ್ಮ ಪ್ರೀತಿಪಾತ್ರರು ಒಟ್ಟಿಗೆ ಸುಂದರವಾದ ಸೂರ್ಯಾಸ್ತವನ್ನು ವೀಕ್ಷಿಸಬಹುದು.
Published by:Seema R
First published: