Diet Plan: ಭಾರತೀಯ ಆಹಾರ ಪದ್ಧತಿಯಿಂದಲೇ ಇಳಿಸಿಕೊಳ್ಳಬಹುದು ತೂಕ

weight Loss Food :ಸಾಮಾನ್ಯವಾಗಿ ಪ್ರತಿನಿತ್ಯ ದೇಹದ ಆರೋಗ್ಯ ಕಾಪಾಡಿಕೊಂಡು ತೂಕ ಇಳಿಕೆ ಮಾಡಲು ಬಯಸುವ ಬಹುತೇಕರಿಗೆ ಯಾವ ರೀತಿಯ ಆಹಾರ ಸೇವನೆ ಮಾಡಬೇಕು ಎನ್ನುವುದು ತಿಳಿರುವುದಿಲ್ಲ.ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಲ್ಯಾಕ್ಟೋ ಸಸ್ಯಹಾರಿ ಪದಾರ್ಥ ಅಂದ್ರೆ ಧಾನ್ಯಗಳು, ತರಕಾರಿ,ಹಣ್ಣು ಹಾಗೂ ತೆಂಗಿ ಎಣ್ಣೆಯನ್ನ ಉಪಯೋಗಿಸಬೇಕು..

ಭಾರತೀಯ ಆಹಾರ

ಭಾರತೀಯ ಆಹಾರ

 • Share this:
  ಭಾರತೀಯರ ಅಡುಗೆ (Indian Food)ಕೇವಲ ರುಚಿ(Tasty) ರುಚಿಯಾದ ತಿಂಡಿ-ತಿನಿಸು ತಯಾರಿಕೆಗೆ ಮಾತ್ರ ಪ್ರಸಿದ್ಧವಾಗಿಲ್ಲ..ಭಾರತೀಯ ಪಾಕ ಪದ್ಧತಿಯಲ್ಲಿ ಬಳಸುವ ತಾಜಾ ಗಿಡಮೂಲಿಕೆ(Herbal),ಮಸಾಲೆಯಲ್ಲಿನ ಔಷಧೀಯ(Medicine) ಗುಣಗಳು,ಅದರ ಸುವಾಸನೆ)(Smell ಹಾಗೂ ರುಚಿ ಎಂಥವರನ್ನ ಬೆರಗುಗೊಳಿಸುತ್ತೆ..ಹೀಗಾಗಿ ಭಾರತೀಯರ ಪಾಕ ಪಧ್ದತಿಯಿಂದ ಸಿದ್ಧವಾಗುವ ರುಚಿಯಾದ ಶುಚಿಯಾದ ಆಹಾರಗಳು ಎಲ್ಲರನ್ನ ಒಮ್ಮೆ ಮೋಡಿ ಮಾಡಿ ಸದಾ ತಿನ್ನುವ ಕಡೆಯೇ ಗಮನ ಕೊಡುವಂತೆ ಮಾಡಿಬಿಡುತ್ತವೆ… ಆದ್ರೆನಾವು ಬೆಳಗಿನ ಸಮಯದಲ್ಲಿ ಸೇವನೆ ಮಾಡುವ ಉಪಹಾರದಿಂದ ಹಿಡಿದು ರಾತ್ರಿಯ ಸಮಯದ ಅಡುಗೆಯವರೆಗೆ ನಿತ್ಯವೂ ನಮ್ಮ ದೇಹಕ್ಕೆ ಹಿತಕರವೆನಿಸುವ ಆಹಾರಗಳನ್ನು ಸೇವನೆ ಮಾಡುತ್ತಾ ಹೋದರೆ, ನಮ್ಮ ದೇಹಕ್ಕೆ(Body) ಸಮತೋಲನವಾದ ಆಹಾರ ಸಿಕ್ಕಿದಂತೆ ಆಗುವ ಜೊತೆಗೆ ಉತ್ತಮ ಪ್ರಮಾಣದಲ್ಲಿ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳು, ವಿಟಮಿನ್(Vitamin) ಅಂಶಗಳು, ಖನಿಜಾಂಶಗಳು ಲಭ್ಯವಾಗುತ್ತದೆ ಮತ್ತು ನಮ್ಮ ದೇಹ ಆರೋಗ್ಯದಿಂದ ಕೂಡಿರುತ್ತದೆ. ಆದ್ರೆ ಇದು ಅತಿಯಾದ್ರೆ ಕೆಲವು ಅನಾರೋಗ್ಯದ ಸಮಸ್ಯೆಗಳಿಗೂ ಕಾರಣವಾಗಬಹುದು.. ಹೀಗಾಗಿ ನಮ್ಮ ಭಾರತೀಯ ಶೈಲಿಯ ಆಹಾರ ಪದಾರ್ಥಗಳನ್ನ ಬಳಸಿಕೊಂಡು ಹೇಗೆ ಉತ್ತಮವಾದ ಆರೋಗ್ಯ ಹಾಗೂ ಶಕ್ತಿ ಪಡೆಯಬಹುದು ಎಂಬ ಮಾಹಿತಿ ಇಲ್ಲಿದೆ

  ಸಸ್ಯಹಾರ ಸೇವನೆಯಲ್ಲಿದೆ ಹಲವಾರು ಪ್ರಯೋಜನ

  ಸಾಮಾನ್ಯವಾಗಿ ಮಾಂಸಹಾರ ಹಾಗೂ ಸಸ್ಯಹಾರ ಸೇವನೆ ಮಾಡುವ ಎರಡು ರೀತಿಯ ಜನರು ನಮ್ಮ ದೇಶದಲ್ಲಿ ಇದ್ದಾರೆ. ೨ ಬಗೆಯ ಆಹಾರ ಸೇವನೆ ನಮ್ಮ ದೇಹಕ್ಕೆ ಹಲವು ಆರೋಗ್ಯಕಾರಿ ಪ್ರಯೋಜನಗಳನ್ನ ತಂದು ಕೊಡುತ್ತೆ..ಆದ್ರೆ ಮಾಂಸಹಾರಕ್ಕೆ ಹೋಲಿಸಿದ್ರೆ ಸಸ್ಯಹಾರದಲ್ಲಿ ಇದರ ಪ್ರಯೋಜನ ತುಸು ಹೆಚ್ಚು. ಸಸ್ಯಾಹಾರ ಸೇವೆನೆಯಿಂದ ಹೃದಯರೋಗ ಮಧುಮೇಹ, ಸ್ತನ ಹಾಗೂ ಕರುಳಿನ ಕ್ಯಾನ್ಸರ್, ಅಲ್ಝೈಮರ್(ಮರೆವಿನ ಕಾಯಿಲೆ) ಹಾಗೂ ತೂಕನಷ್ಟಕ್ಕೆ ಸಹಾಯ ಮಾಡುತ್ತದೆ

  ಯಾವ ರೀತಿಯ ಆಹಾರ ಸೇವಿಸಬೇಕು..?

  ಸಾಮಾನ್ಯವಾಗಿ ಪ್ರತಿನಿತ್ಯ ದೇಹದ ಆರೋಗ್ಯ ಕಾಪಾಡಿಕೊಂಡು ತೂಕ ಇಳಿಕೆ ಮಾಡಲು ಬಯಸುವ ಬಹುತೇಕರಿಗೆ ಯಾವ ರೀತಿಯ ಆಹಾರ ಸೇವನೆ ಮಾಡಬೇಕು ಎನ್ನುವುದು ತಿಳಿರುವುದಿಲ್ಲ.ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಲ್ಯಾಕ್ಟೋ ಸಸ್ಯಹಾರಿ ಪದಾರ್ಥ ಅಂದ್ರೆ ಧಾನ್ಯಗಳು, ತರಕಾರಿ,ಹಣ್ಣು ಹಾಗೂ ತೆಂಗಿ ಎಣ್ಣೆಯನ್ನ ಉಪಯೋಗಿಸಬೇಕು..ಹೀಗಾಗಿ ಯಾವ ಯಾವ ತರಕಾರಿ, ಹಣ್ಣು, ಧಾನ್ಯ ನಮ್ಮ ಡಯೆಟ್ ಮೆನುವಿನಲ್ಲಿ ಇರ್ಬೇಕು ಎನ್ನುವ ಮಾಹಿತಿ ಇಲ್ಲಿದೆ

  ಇದನ್ನೂ ಓದಿ :ಮನೆಯಲ್ಲಿಯೇ ಸುಲಭವಾಗಿ ಮೊಳಕೆಕಾಳು ಹೀಗೂ ಮಾಡ್ಬೋದು

  ೧)ತರಕಾರಿಗಳು: ಟೊಮ್ಯಾಟೊ, ಪಾಲಕ, ಬಿಳಿಬದನೆ, ಸಾಸಿವೆ ಗ್ರೀನ್ಸ್, ಬೆಂಡೆಕಾಯಿ, ಈರುಳ್ಳಿ, ಹಾಗಲಕಾಯಿ, ಹೂಕೋಸು, ಅಣಬೆಗಳು, ಎಲೆಕೋಸು

  ೨)ಹಣ್ಣುಗಳು: ಮಾವು, ಪಪ್ಪಾಯಿ, ದಾಳಿಂಬೆ, ಪೇರಲ, ಕಿತ್ತಳೆ, ಹುಣಸೆಹಣ್ಣು, ಲಿಚಿ, ಸೇಬು, ಕಲ್ಲಂಗಡಿ, ಪೇರಳೆ, ಪ್ಲಮ್, ಬಾಳೆಹಣ್ಣು

  ೩)ಬೀಜಗಳು: ಗೋಡಂಬಿ, ಬಾದಾಮಿ, ಕಡಲೆಕಾಯಿ, ಪಿಸ್ತಾ, ಕುಂಬಳಕಾಯಿ ಬೀಜಗಳು, ಎಳ್ಳು ಬೀಜಗಳು, ಕಲ್ಲಂಗಡಿ ಬೀಜಗಳು

  ೪)ದ್ವಿದಳ ಧಾನ್ಯಗಳು: ಮುಂಗ್ ಬೀನ್ಸ್, ಕಪ್ಪು ಕಣ್ಣಿನ ಬಟಾಣಿ, ಕಿಡ್ನಿ ಬೀನ್ಸ್, ಮಸೂರ, ಕಾಳುಗಳು ಮತ್ತು ಕಡಲೆ

  ೫)ಬೇರುಗಳು ಮತ್ತು ಗೆಡ್ಡೆಗಳು: ಆಲೂಗಡ್ಡೆ, ಕ್ಯಾರೆಟ್, ಸಿಹಿ ಆಲೂಗಡ್ಡೆ, ಟರ್ನಿಪ್, ಗೆಣಸು

  ೬)ಧಾನ್ಯಗಳು: ಕಂದು ಅಕ್ಕಿ, ಬಾಸ್ಮತಿ ಅಕ್ಕಿ, ರಾಗಿ, ಹುರುಳಿ, ಕ್ವಿನೋವಾ, ಬಾರ್ಲಿ, ಕಾರ್ನ್, ಧಾನ್ಯದ ಬ್ರೆಡ್, ಅಮರಂಥ್, ಸೋರ್ಗಮ್

  ೭)ಡೈರಿ ಉತ್ಪನ್ನಗಳು : ಚೀಸ್, ಮೊಸರು, ಹಾಲು, ತುಪ್ಪ

  ೮)ಗಿಡಮೂಲಿಕೆಗಳು ಮತ್ತು ಮಸಾಲೆಗಳು: ಬೆಳ್ಳುಳ್ಳಿ, ಶುಂಠಿ, ಏಲಕ್ಕಿ, ಜೀರಿಗೆ, ಕೊತ್ತಂಬರಿ, ಗರಂ ಮಸಾಲಾ, ಕೆಂಪುಮೆಣಸು, ಅರಿಶಿನ, ಕರಿಮೆಣಸು, ಮೆಂತ್ಯ, ತುಳಸಿ ಇತ್ಯಾದಿ

  ೮)ಎಣ್ಣೆಕಾಳುಗಳು : ತೆಂಗಿನ ಎಣ್ಣೆ, ಸಾಸಿವೆ ಎಣ್ಣೆ, ಆಲಿವ್ ಎಣ್ಣೆ, ಕಡಲೆಕಾಯಿ ಎಣ್ಣೆ, ಎಳ್ಳಿನ ಎಣ್ಣೆ,

  ಇನ್ನೂ ಇದೆಲ್ಲದರ ಜೊತೆಗೆ ಅಧಿಕ ಸಕ್ಕರೆ ಅಂಶವಿರುವ ಸಿಹಿ ಪಾನೀಯಗಳ ಸೇವನೆಯನ್ನ ಕಡಿಮೆ ಮಾಡುವುದು ಹಾಗೂ ಹೆಚ್ಚು ಹೆಚ್ಚು ನೀರು ಸೇವನೆ ಮಾಡುವುದು, ಶುದ್ಧ ಚಹಾ ಸೇವನೆ ತೂಕ ಇಳಿಕೆ ಮಾಡಲು ಬಯಸುವವರಿಗೆ ಸಹಕಾರಿ

  ಈ ಪದಾರ್ಥಗಳ ಸೇವನೆಯನ್ನ ತಪ್ಪಿಸಿ

  ಬಾಯಿರುಚಿಗಾಗಿ ಮನೆಯಲ್ಲಿ ಅಥವಾ ಹೋಟೆಲ್ ನಲ್ಲಿ ಸಿಕ್ಕ ಸಿಕ್ಕಿದೆಲ್ಲ ತಿನ್ನುವುದು ನಮ್ಮ ದೇಹಕ್ಕೆ ಹಲವು ಸಮಸ್ಯೆಗಳನ್ನ ತಂದೊಡ್ಡಬಹುದು .ಅದ್ರಲ್ಲೂ ತೂಕ ಕಳೆದುಕೊಳ್ಳಲು ಬಯಸುವವರು ಸಿಕ್ಕ ಸಿಕ್ಕಿದನ್ನೆಲ್ಲ ಸೇವನೆ ಮಾಡುವುದು ವ್ಯಾಯಾಮ ಮಾಡಿದ್ರೂ ಯಾವುದೇ ಪ್ರಯೋಜಕ್ಕೆ ಬಾರದೇ ನೀರಲ್ಲಿ ಹೋಮ ಮಾಡಿದಂತೆ ಆಗುವುದು ಹೀಗಾಗಿ ಇವುಗಳನ್ನ ಸೇವನೆ ಮಾಡದೆ ಇರುವುದು ಸೂಕ್ತ

  ಇದನ್ನೂ ಓದಿ :ಮೊಟ್ಟೆ ಜೊತೆ ಯಾವುದೇ ಕಾರಣಕ್ಕೂ ಅಪ್ಪಿತಪ್ಪಿಯೂ ಈ ಆಹಾರ ಸೇವಿಸಬೇಡಿ

  ೧) ಸಿಹಿಯಾದ ಪಾನೀಯಗಳು: ಸೋಡಾ, ಹಣ್ಣಿನ ರಸ, ಸಿಹಿಯಾದ ಚಹಾ, ಸಿಹಿ ಲಸ್ಸಿ

  ೨)ಅಧಿಕ ಸಕ್ಕರೆಯ ಆಹಾರಗಳು: ಕ್ಯಾಂಡಿ, ಐಸ್ ಕ್ರೀಮ್, ಕುಕೀಸ್, ಅಕ್ಕಿ ಪುಡಿಂಗ್, ಪೇಸ್ಟ್ರಿಗಳು, ಕೇಕ್ಗಳು, ಸಿಹಿಯಾದ ಮೊಸರು, ಹೆಚ್ಚಿನ ಸಕ್ಕರೆಯ ಧಾನ್ಯಗಳು, ಜೀರ್ಣಕಾರಿ ಬಿಸ್ಕತ್ತುಗಳು

  ೩)ಸಿಹಿಕಾರಕಗಳು: ಬೆಲ್ಲ, ಸಕ್ಕರೆ, ಜೇನುತುಪ್ಪ, ಮಂದಗೊಳಿಸಿದ ಹಾಲು ಸೇವನೆ ಅಗತ್ಯಕ್ಕೆ ತಕ್ಕಂತೆ ಮಾತ್ರ ಬಳಸುವುದು

  ೪)ಸಿಹಿಯಾದ ಸಾಸ್‌ಗಳು: ಸಕ್ಕರೆ ಸೇರಿಸಿದ ಸಲಾಡ್ ಡ್ರೆಸ್ಸಿಂಗ್, ಕೆಚಪ್, ಬಾರ್ಬೆಕ್ಯೂ ಸಾಸ್,

  ೫)ಅಧಿಕ ಕೊಬ್ಬಿನ ಆಹಾರಗಳು: ಮೆಕ್‌ಡೊನಾಲ್ಡ್ಸ್, ಫ್ರೆಂಚ್ ಫ್ರೈಸ್, ಚಿಪ್ಸ್, ಕರಿದ ಆಹಾರಗಳು,

  ೬) ಸಂಸ್ಕರಿಸಿದ ಧಾನ್ಯಗಳು: ಬಿಳಿ ಬ್ರೆಡ್, ಬಿಳಿ ಪಾಸ್ಟಾ, ಬಿಸ್ಕತ್ತುಗಳು ಸೇರಿದಂತೆ ಹಲವುಉತ್ಪನ್ನಗಳು

  ೭)ಸಂಸ್ಕರಿಸಿದ ತೈಲಗಳು: ಕೆನೋಲಾ ಎಣ್ಣೆ, ಸೋಯಾಬೀನ್ ಎಣ್ಣೆ, ಕಾರ್ನ್ ಎಣ್ಣೆ, ದ್ರಾಕ್ಷಿ ಬೀಜದ ಎಣ್ಣೆ
  Published by:ranjumbkgowda1 ranjumbkgowda1
  First published: