ರಜಾದಿನಗಳು ಬಂತೆಂದರೆ ಸಾಕು, ಬೆಂಗಳೂರು, ಹುಬ್ಬಳಿ ಮತ್ತು ಧಾರವಾಡದ ಅನೇಕ ಜನರು ಸುಂದರವಾದ ಸಮುದ್ರ ಮತ್ತು ಕಡಲತೀರಗಳಲ್ಲಿ ಸ್ವಲ್ಪ ರಿಲ್ಯಾಕ್ಸ್ ಆಗಲು ಹೋಗುವ ಸ್ಥಳ ಎಂದರೆ ಅದು ಗೋಕರ್ಣ. ಈ ಸ್ಥಳ ಅಂದ್ರೆ ಎಂತಹವರಿಗಾದರೂ ಮೊದಲು ನೆನಪಿಗೆ ಬರುವುದು ಅಲ್ಲಿನ ಸುಂದರವಾದ ಕಡಲತೀರಗಳು ಮತ್ತು ದೇವಸ್ಥಾನಗಳು (Temple). ಅಲ್ಲಿನ ಮಹಾಬಲೇಶ್ವರ ದೇವಸ್ಥಾನ ಮತ್ತು ಸುಂದರವಾದ ಕಡಲತೀರಗಳು ಪ್ರವಾಸಿಗರನ್ನು ವರ್ಷವಿಡೀ ತನ್ನೆಡೆಗೆ ಆಕರ್ಷಿಸುತ್ತಲೇ ಇರುತ್ತವೆ. ಗೋಕರ್ಣದಲ್ಲಿ ತುಂಬಾ ಜನರಿಗೆ ಗೊತ್ತಿರದೆ ಇರುವಂತಹ ಇನ್ನೊಂದು ಜಾಗವಿದೆ. ಮಿರ್ಜಾನ್ ಕೋಟೆ (Mirjan Fort) ಹಚ್ಚ ಹಸಿರಿನಿಂದ ಕೂಡಿದ್ದು ತುಂಬಾನೇ ಸುಂದರವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಕರಾವಳಿಯಲ್ಲಿರುವ ಗೋಕರ್ಣದಿಂದ ಈ ಕೋಟೆ ಬರೀ 21 ಕಿಲೋ ಮೀಟರ್ ದೂರದಲ್ಲಿದೆ.
ನಿರ್ಜನ ಪ್ರದೇಶದಲ್ಲಿದೆ ಸುಂದರವಾದ ಮಿರ್ಜಾನ್ ಕೋಟೆ
ಮಿರ್ಜಾನ್ ಕೋಟೆಯ ಬಗ್ಗೆ ಪ್ರವಾಸಿಗರಿಗೆ ಅಷ್ಟಾಗಿ ಗೊತ್ತಿಲ್ಲ, ಏಕೆಂದರೆ ಇದು ಸ್ವಲ್ಪ ನಿರ್ಜನವಾದ ಸ್ಥಳದಲ್ಲಿದೆ. ಈ ಪ್ರತ್ಯೇಕತೆಯು ಅದಕ್ಕೆ ಒಂದು ವಿಶಿಷ್ಟವಾದ ಮೋಡಿ ಮಾಡುವ ಭಾವನೆಯನ್ನು ನೀಡಿದೆ.
ಅಘನಾಶಿನಿ ನದಿಯ ದಡದಲ್ಲಿರುವ ಈ ಕೋಟೆಯನ್ನು ವಿಶಾಲವಾದ ಮೆಟ್ಟಿಲುಗಳನ್ನು ಹತ್ತಿಕೊಂಡು ತಲುಪಬಹುದು, ಇದು ನಿಮ್ಮನ್ನು ಕೋಟೆಯ ಒಳಭಾಗಕ್ಕೆ ಕರೆದೊಯ್ಯುತ್ತದೆ.
ಇದನ್ನೂ ಓದಿ: ಪ್ರಿ ವೆಡ್ಡಿಂಗ್ ಪಾರ್ಟಿಯಲ್ಲಿ ಭಾವಿ ಪತ್ನಿ ಜೊತೆ ಅಸಭ್ಯವಾಗಿ ವರ್ತಿಸಿದ ವರ! ಕೋಟಿ ವರದಕ್ಷಿಣೆ ತಗೊಂಡ್ರು ಅಂತ ಕೇಸ್ ಹಾಕಿದ ವಧು
ಈ ಕೋಟೆಯೊಳಗೆ ವಿಶಾಲವಾದ ತೆರೆದ ಸ್ಥಳವಿದೆ ಮತ್ತು ಈ ಅಷ್ಟಭುಜಾಕೃತಿಯ ಕೋಟೆಯು ಎತ್ತರದ ದಿಬ್ಬದ ಮೇಲೆ 11.8 ಎಕರೆ ಪ್ರದೇಶದಲ್ಲಿ ಹರಡಿದೆ. ಈ ಸುಂದರವಾದ ಕೋಟೆಯ ಸುತ್ತಲಿನ ಗೋಡೆಗಳು ಕಂದು ಬಣ್ಣದಿಂದ ಕೂಡಿದ್ದು, ಕೋಟೆ ಒಂದು ಕಾಲದಲ್ಲಿ ಒಳನುಸುಳುವವರ ವಿರುದ್ಧ ಏಕೈಕ ರಕ್ಷಣೆಯಾಗಿದ್ದ ಸಮಯದ ಬಗ್ಗೆ ಹೇಳುತ್ತದೆ.
ಈ ಸುಂದರವಾದ ಕೋಟೆ ಅನೇಕ ಕಥೆಗಳನ್ನ ಹೊಂದಿದೆ ನೋಡಿ..
ಈ ಕೋಟೆಯ ಬಗ್ಗೆ ಅನೇಕ ರೀತಿಯ ಬೇರೆ ಬೇರೆ ಕಥೆಗಳಿವೆ. ವಿದ್ವಾಂಸ ಇಬ್ನ್ ಬಟ್ಟೂಟಾ ಅವರ ಪ್ರಕಾರ, ಈ ಕೋಟೆಯನ್ನು 1200 ರ ದಶಕದ ಆರಂಭದಲ್ಲಿ ನವಾಯತ್ ಸುಲ್ತಾನರು ನಿರ್ಮಿಸಿದರು.
ಇದು ನಂತರ ವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿ ಬಂದಿತು. ಮತ್ತೊಂದು ಕಥೆಯು 1552 ಮತ್ತು 1606 ರ ನಡುವೆ ನಿರ್ಮಿಸಿದ ಕೋಟೆಯ ನಿರ್ಮಾಣಕ್ಕೆ ತುಳುವ-ಸಾಲುವ ಕುಲದ ರಾಣಿ ಚೆನ್ನಭೈರಾದೇವಿ ಕಾರಣ ಎಂದು ಹೇಳುತ್ತದೆ. ಹಿಂದೆ ಮಿರ್ಜಾನ್ ಬಂದರಿನಿಂದ ಮೆಣಸನ್ನು ರಫ್ತು ಮಾಡಿದ್ದಕ್ಕಾಗಿ ಅವರಿಗೆ 'ಪೆಪ್ಪರ್ ಕ್ವೀನ್' ಎಂಬ ಬಿರುದನ್ನು ನೀಡಲಾಯಿತಂತೆ.
ಕುಮಟಾ ಪಟ್ಟಣವನ್ನು ರಕ್ಷಿಸಲು ಮೊದಲ ಸಾಲಿನ ರಕ್ಷಣೆಯಾಗಿ ಬಿಜಾಪುರದ ರಾಜ ಶರೀಫ್ ಉಲ್ ಮುಲ್ಕ್ ಈ ಕೋಟೆಯನ್ನು ನಿರ್ಮಿಸಿದನೆಂದು ಮತ್ತೊಂದು ಆವೃತ್ತಿಯು ಹೇಳುತ್ತದೆ. ಅದರ ಇತಿಹಾಸ ಏನೇ ಇರಲಿ, ಕೋಟೆ ಮಾತ್ರ ನೋಡಲು ತುಂಬಾನೇ ಸುಂದರವಾಗಿದ್ದು, ಸುರಂಗಗಳು, ಅಪೂರ್ಣ ಮೆಟ್ಟಿಲುಗಳು, ಬಾವಿಗಳು ಮತ್ತು ಭೂಗತ ಮಾರ್ಗಗಳನ್ನು ಒಳಗೊಂಡಿದೆ.
ಇದನ್ನೂ ಓದಿ: ಸಂತೋಷವಾಗಿರೋ ದೇಶಗಳಲ್ಲಿ ಫಿನ್ಲ್ಯಾಂಡ್ ಮೊದಲ ಸ್ಥಾನ; ಭಾರತ ಯಾವ ಪ್ಲೇಸ್ನಲ್ಲಿದೆ?
ಅಲ್ಲಿಯೇ ಕೋಟೆಯೊಳಗೆ ಮರದ ಕೆಳಗೆ ಪೊದೆಗಳು ಮತ್ತು ಕಲ್ಲುಗಳ ನಡುವೆ ದೇವಿಯ ಪ್ರತಿಮೆಯನ್ನು ಇರಿಸಲಾಗಿದ್ದು, ಅಲ್ಲೊಂದು ದೊಡ್ಡ ಅರಳಿ ಮರ ಸಹ ಇದೆ. ಅನೇಕ ರಹಸ್ಯ ಮಾರ್ಗಗಳು ಮತ್ತು ಭೂಗತ ಸುರಂಗಗಳನ್ನು ಹೊಂದಿರುವ ಈ ಕೋಟೆಯೊಳಗೆ ಹಿಂದಿನ ರಾಜರು ಹೇಗೆ ವಾಸಿಸಿರಬಹುದು ಎಂಬುದನ್ನು ಒಮ್ಮೆ ಆಲೋಚಿಸಿದರೆ ಮೈ ಜುಮ್ ಅಂತ ಅನ್ನುವುದಂತೂ ಗ್ಯಾರೆಂಟಿ.
ಆದರೆ ನೀವು ಮುಂದಿನ ಸಾರಿ ಗೋಕರ್ಣಕ್ಕೆ ಭೇಟಿ ನೀಡಿದಾಗ ಈ ಸುಂದರವಾದ ಕೋಟೆಯನ್ನು ನೋಡುವುದನ್ನು ಮಾತ್ರ ಮಿಸ್ ಮಾಡಲೇಬೇಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ