ಬೆಂಗಳೂರು: ಪ್ರೀತಿಯಲ್ಲಿ (Love) ಮುಳುಗಿದವರು ದಿನವಿಡೀ ಫೋನ್‌ನಲ್ಲಿ (Phone) ಮಾತಾಡುತ್ತಾರೆ, ಮೆಚ್ಚುಗೆಯ ಮಾತುಗಳನ್ನು ಮೆಸೇಜ್‌ಗಳಲ್ಲಿ (Massage) ತೋರಿಸಿ ವ್ಯಕ್ತಪಡಿಸುತ್ತಾರೆ. ಕೆಲವರು ಇಷ್ಟವಾದ ವಸ್ತುಗಳನ್ನು ಪ್ರೀತಿ ಪಾತ್ರರಿಗೆ ಕೊಟ್ಟು ತೋರ್ಪಡಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ತನ್ನ ಗಂಡನ ಮೇಲಿನ ಪ್ರೀತಿಯನ್ನು ತೋರಿಸಲು ಆತನ ಹೆಸರನ್ನು ತನ್ನ ಹಣೆಯ ಮೇಲೆ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಅಭಿವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೆಂಗಳೂರು ಮಹಿಳೆಯಿಂದ ಹಣೆ ಮೇಲೆ ಗಂಡನ ಹೆಸರು ಹಚ್ಚೆ
ಬೆಂಗಳೂರಿನ ಮಹಿಳೆಯೊಬ್ಬರು ತಮ್ಮ ಹಣೆಯ ಮೇಲೆ ಪತಿಯ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ಹಚ್ಚೆ ಹಾಕಿಸಿಕೊಳ್ಳುವ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಬಿಡುಗಡೆ ಮಾಡಿದ್ದು, ಮಹಿಳೆ ಕುರ್ಚಿಯ ಮೇಲೆ ಕುಳಿತುಕೊಂಡು ತನ್ನ ಹಣೆಯ ಮೇಲೆ ಹಚ್ಚೆ ಹಾಕಿಸಿಕೊಂಡಿರುವುದನ್ನು ಕಾಣಬಹುದು.
ಟ್ರೂ ಲವ್ ಎಂದು ಬರೆದುಕೊಂಡ ವಿಡಿಯೋ ಶೇರ್
ಹಚ್ಚೆ ಹಾಕುವ ಕಲಾವಿದ ಮೊದಲು ಹೆಸರನ್ನು ಕಾಗದದ ಮೇಲೆ ಬರೆದಿದ್ದು, ನಂತರ ಮಹಿಳೆಯ ಹಣೆಯ ಮೇಲೆ ಕಾಗದವನ್ನು ಅಂಟಿಸಿದ್ದಾರೆ. ನಂತರ ಹಚ್ಚೆ ಯಂತ್ರವನ್ನು ಬಳಸಿ ಹಚ್ಚೆ ಹಾಕಿದ್ದಾರೆ. ಹಚ್ಚೆ ಹಾಕಲು ಶುರು ಮಾಡಿದಾಗ ನೋವನ್ನು ತಡೆದುಕೊಳ್ಳಲಾಗದೆ , ಕಲಾವಿದನನ್ನು ತಡೆಯಲು ಪ್ರಯತ್ನಿಸಿದ್ದಾರೆ. ನಂತರ ಹಾಕಿಸಿಕೊಳ್ಳುವ ಫೋಟೋವನ್ನ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ರೀಲ್‌ಗೆ ಟ್ರೂ ಲವ್ ಎಂದು ಬರೆದುಕೊಂಡಿದ್ದಾಳೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್
ಈ ವಿಡಿಯೋವನ್ನು ಟ್ಯಾಟೂ ಪಾರ್ಲರ್ ಕಿಂಗ್ ಮೇಕರ್ ಟ್ಯಾಟೂ ಸ್ಟುಡಿಯೋ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಹಿಳೆಗೆ ಟ್ಯಾಟೂ ಹಾಕುವ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ರೀಲ್ಸ್ನಲ್ಲಿ ಮಹಿಳೆ ತನ್ನ ಪತಿ ಸತೀಶ್ ಹೆಸರನ್ನ ಹಣೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಈ ವಿಡಿಯೋ 2.68 ಲಕ್ಷ ವೀಕ್ಷಣೆ ಪಡೆದಿದೆ. ಇದಕ್ಕೆ 6 ಸಾವಿರಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ.
View this post on Instagram
ಮಹಿಳೆಯ ಈ ವಿಡಿಯೋ ನೋಡಿದ ನೆಟ್ಟಿಗರಲ್ಲಿ ಕೆಲವರ ಮಹಿಳೆಗೆ ನಿಮ್ಮದು ನಿಜವಾದ ಪ್ರೀತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು, ಜೀವನದಲ್ಲಿ ಏನು ಮಾಡಬೇಕು ಮಾಡಬಾರದು ಎಂಬುದು ಅವರ ವ್ಯಯಕ್ತಿಕ ವಿಚಾರ. ಕೆಲವರು ನೆಗೆಟಿವ್ ಆಗಿ ಕಮೆಂಟ್ ಮಾಡಿದ್ದಾರೆ. ಇದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಕಮೆಂಟ್ ಮಾಡಿದ್ದಾರೆ. ಕೆಲವರು ಅವರ ದುಡ್ಡು, ಅವರ ದೇಹ ಯಾರೂ ಪ್ರಶ್ನಿಸುವ ಅಗತ್ಯವಿಲ್ಲ ಎಂದಿದ್ದಾರೆ.
ಇದನ್ನೂ ಓದಿ: Weird News: ಮೊಮ್ಮಗಳ ಕಣ್ಣು ನೋಡಿ ಸೊಸೆ ಮೇಲೆ ಅನುಮಾನ! ಡಿಎನ್ಎ ಟೆಸ್ಟ್ ವೇಳೆ ಬಯಲಾಯ್ತು ಅತ್ತೆಯದ್ದೇ ಅಕ್ರಮ ಸಂಬಂಧ!
ಇನ್ನೂ ಕೆಲವರು ಇದು ಟ್ರೂ ಲವ್ ಅಲ್ಲ, ಹುಚ್ಚುತನ ಎಂದ್ರೆ, ಇನ್ನೂ ಕೆಲವರು ಇದು ಓವರ್ ಆಕ್ಷನ್ ಎಂದು ಕರೆಯಬಹುದು ಎಂದಿದ್ದಾರೆ. ಕೆಲವರು ಒಳ್ಳೆಯ ಶಿಕ್ಷಣ ಇದ್ದಿದ್ದರೆ ಈಗೆಲ್ಲಾ ಮಾಡುವುದಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ