Donne Biryani: ಅಜ್ಜಿ ಕೈರುಚಿಯ ದೊನ್ನೆ ಬಿರಿಯಾನಿಯಿಂದಲೇ 10 ಕೋಟಿ ರೂ ಆದಾಯ ಗಳಿಸಿದ ಸಹೋದರಿಯರು

ನಾವು ತಿಂದು ಬೆಳೆದ ಅದೇ ಬಿರಿಯಾನಿಯ ರುಚಿಯನ್ನು ಇತರರಿಗೂ ತಲುಪಿಸಲು ಒಂದು ಮಾರ್ಗವನ್ನು ಕಂಡು ಹಿಡಿಯಲು ನಾವು ಬಯಸಿದ್ದೇವು

ದೊನ್ನೆ ಬಿರಿಯಾನಿ

ದೊನ್ನೆ ಬಿರಿಯಾನಿ

  • Share this:
ಸಾಮಾನ್ಯವಾಗಿ ಈ ಬಿರಿಯಾನಿಯ (Donne Biryani) ಬಗ್ಗೆ ಮಾತಾಡುವಾಗ ನಾವು ‘ಸ್ವಾದಿಷ್ಟಕರವಾದ ಬಿರಿಯಾನಿ ಎಂದರೆ ಅದು ಹೈದರಾಬಾದ್‌ನಲ್ಲಿ (Hyderabad) ಮಾಡುವ ಬಿರಿಯಾನಿ’ ಅಂತ. ಇತರರು ಕೋಲ್ಕತ್ತಾ ಬಿರಿಯಾನಿಯಲ್ಲಿ (Kolkata Biriyani) ಬಳಸುವ ಕೋಮಲವಾದ ಮಾಂಸ ಚೆನ್ನಾಗಿರುತ್ತದೆ ಎಂದು ಹೇಳುವುದನ್ನು ನಾವು ಕೇಳಿರುತ್ತೇವೆ. ಬೆಂಗಳೂರಿಗೆ ಬಂದಾಗ ನಾವು ಹೆಚ್ಚಾಗಿ ಕೇಳುವುದು ಈ ದೊನ್ನೆ ಬಿರಿಯಾನಿ ಬಗ್ಗೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.  ಈ ದೊನ್ನೆ ಬಿರಿಯಾನಿ ಈಗ ಇಬ್ಬರು ಸಹೋದರಿಯರಿಗೆ ಜೀವನಕ್ಕೆ ದಾರಿ ಮಾಡಿಕೊಟ್ಟಿದೆ ನೋಡಿ.  ಬೆಂಗಳೂರು ಮೂಲದ ರಮ್ಯಾ ರವಿ ಅವರಿಗೆ ತಾವು ಯಾವ ಉದ್ಯಮವನ್ನು ಶುರು ಮಾಡಬೇಕೆಂದು ತುಂಬಾನೇ ಸ್ಪಷ್ಟವಾಗಿತ್ತು. ಅವರ ಅಜ್ಜಿ ತಯಾರಿಸುತ್ತಿದ್ದ ದೊನ್ನೆ ಬಿರಿಯಾನಿ ಪಾಕ ವಿಧಾನದಲ್ಲಿ  2020 ರಲ್ಲಿ ಆರ್‌ಎನ್ಆರ್ ದೊನ್ನೆ ಬಿರಿಯಾನಿ (RNR Donne Biriyanui)  ಉದ್ಯಮ ಪ್ರಾರಂಭಿಸಿದ ಇವರಿಗೆ ಯಶಸ್ಸು ಬೆನ್ನು ಹತ್ತಿತು.

ಇವರು ಶುರು ಮಾಡಿದ ಮೊದಲ ತಿಂಗಳಲ್ಲೇ ಇವರಿಗೆ 10,000 ಕ್ಕೂ ಹೆಚ್ಚು ಆರ್ಡರ್‌ಗಳು ಬಂದಿದ್ದವಂತೆ, ಇದು ಅವರ ಉದ್ಯಮಕ್ಕೆ ಒಂದು ಗಟ್ಟಿಯಾದ ಅಡಿಪಾಯ ಹಾಕಿಕೊಟ್ಟಿತು . ಅಂದಿನಿಂದ ಇವರು ಹಿಂದಿರುಗಿ ನೋಡಲಿಲ್ಲವಂತೆ ಎಂದು ರಮ್ಯಾ ಅವರು ಹೇಳುತ್ತಾರೆ.

ನಾವು ತಿಂದ ಆ ಬಿರಿಯಾನಿ ರುಚಿ ಜನರಿಗೆ ತಲುಪಿಸುವ ಯತ್ನ

ರಮ್ಯಾ ಮತ್ತು ಅವರ ಸಹೋದರಿ ಶ್ವೇತಾ ಸಹ ವ್ಯವಹಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ, ತಮ್ಮ ಅಜ್ಜಿ ಮಾಡುತ್ತಿದ್ದ ಆ ದೊನ್ನೆ ಬಿರಿಯಾನಿ ನಮಗೆ ಬಾಲ್ಯದ ದಿನಗಳನ್ನು ನೆನಪಿಸಿಕೊಡುತ್ತದೆ ಎಂದು ಹೇಳುತ್ತಾರೆ. "ನಾವು ತಿಂದು ಬೆಳೆದ ಅದೇ ಬಿರಿಯಾನಿಯ ರುಚಿಯನ್ನು ಇತರರಿಗೂ ತಲುಪಿಸಲು ಒಂದು ಮಾರ್ಗವನ್ನು ಕಂಡು ಹಿಡಿಯಲು ನಾವು ಬಯಸಿದ್ದೇವು" ಎಂದು ಅವರು ಹೇಳುತ್ತಾರೆ.

ಊಟ ನೀಡುವ ಸಂತೃಪ್ತಿ, ಸಂತೋಷ ಮತ್ತಿನೆಲ್ಲೂ ಇಲ್ಲ

"ನಾನು ಯಾವಾಗಲೂ ಆತಿಥ್ಯ ಕ್ಷೇತ್ರದಲ್ಲಿ ಕೆಲಸ ಮಾಡುವತ್ತ ಒಲವು ಹೊಂದಿದ್ದೆ. ನನ್ನ ತಂದೆ ಹಲವಾರು ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ನಡೆಸುತ್ತಿದ್ದಾರೆ. ನಾನು ಅವರಂತೆ ಆಗಲು ಬಯಸಿ ಬೆಳೆದಿದ್ದೇನೆ. ಒಳ್ಳೆಯ ಆಹಾರವು ನಿಮಗೆ ನೀಡುವ ಸಂತೃಪ್ತಿ ಮತ್ತು ಸಂತೋಷಕ್ಕೆ ಸಾಟಿಯಿಲ್ಲ ಎಂದು ನಾನು ಯಾವಾಗಲೂ ಭಾವಿಸಿದ್ದೇನೆ" ಎಂದು ರಮ್ಯಾ ಹೇಳುತ್ತಾರೆ.

ಈ ಕಲ್ಪನೆಯು ಆರ್‌ಎನ್ಆರ್ ದೊನ್ನೆ ಬಿರಿಯಾನಿಯ ಉದ್ಯಮದ ಉಗಮಕ್ಕೆ ಕಾರಣವಾಯಿತು. 200 ಚದರ ಅಡಿಯ ಕ್ಲೌಡ್ ಕಿಚನ್‌ನಲ್ಲಿ 5 ಲಕ್ಷ ರೂಪಾಯಿಗಳ ಆರಂಭಿಕ ಹೂಡಿಕೆಯೊಂದಿಗೆ ಪ್ರಾರಂಭವಾದ ಈ ಬ್ರ್ಯಾಂಡ್ ಇಂದು ಬೆಂಗಳೂರಿನಲ್ಲಿ 14 ಕ್ಲೌಡ್ ಕಿಚನ್‌ಗಳು ಮತ್ತು ಸ್ಟ್ಯಾಂಡ್-ಅಲೋನ್ ರೆಸ್ಟೋರೆಂಟ್ ಆಗಿ ಬೆಳೆದಿದೆ.

ದೊನ್ನೆ ಬಿರಿಯಾನಿ ಉಳಿದ ಬಿರಿಯಾನಿಗಳಿಂದ ಪ್ರತ್ಯೇಕಿಸುವುದು ಅದರ ಹಸಿರು ಬಣ್ಣ

ದೊನ್ನೆ ಬಿರಿಯಾನಿಯನ್ನು ತಯಾರಿಸುವಲ್ಲಿ ಬಳಸುವ ಅಕ್ಕಿ ಕೂಡ ವಿಶಿಷ್ಟವಾಗಿದೆ ಎಂದು ರಮ್ಯಾ ವಿವರಿಸುತ್ತಾರೆ. "ನಾವು ಸಣ್ಣ ಧಾನ್ಯದ ಅಕ್ಕಿಯನ್ನು ಬಳಸುತ್ತೇವೆ, ಇದನ್ನು ಜೀರಗ ಸಾಂಬಾ ಅಕ್ಕಿ ಎಂದು ಕರೆಯಲಾಗುತ್ತದೆ. ಈ ಹಸಿರು ಬಣ್ಣವು ತಯಾರಿಕೆಯಲ್ಲಿ ಹಾಕುವ ಕೆಲವು ಪದಾರ್ಥಗಳಿಂದ ಬರುತ್ತದೆ" ಎಂದು ಹೇಳುತ್ತಾರೆ.

"ದೊನ್ನೆ ಬಿರಿಯಾನಿ ಬೆಂಗಳೂರಿನಲ್ಲಿ ಅನೇಕ ಕಡೆಗಳಲ್ಲಿ ಲಭ್ಯವಿದ್ದರೂ, ಅದು ಇತರ ಪ್ರಕಾರಗಳಂತೆ ಏಕೆ ಜನಪ್ರಿಯವಾಗಿಲ್ಲ ಎಂದು ನಾನು ಯಾವಾಗಲೂ ಯೋಚಿಸುತ್ತಿದ್ದೆ" ಎಂದು ಅವರು ಹೇಳುತ್ತಾರೆ. ಆದ್ದರಿಂದ, ಸಹೋದರಿಯರು ದೊನ್ನೆ ಬಿರಿಯಾನಿಯನ್ನು ಮನೆ ಮಾತಾಗಿಸಲು ಹೊರಟರು.

ಮಾರ್ಕೆಂಟಿಕ್​ ಕೂಡ ಮುಖ್ಯ

"ಇತರ ಕೆಲವು ಬಿರಿಯಾನಿಗಳು ಪಡೆದ ಮಾರ್ಕೆಟಿಂಗ್‌ಗೆ ಇದು ಬಹಳಷ್ಟು ಸಂಬಂಧಿಸಿದೆ. ನಾವು ನಮ್ಮದರೊಂದಿಗೆ ಅದೇ ರೀತಿ ಮಾಡಲು ಉದ್ದೇಶಿಸಿದ್ದೇವೆ. ಈ ಭಕ್ಷ್ಯದಿಂದ ತುಂಬಿರುವ ರುಚಿ ಮತ್ತು ಪರಿಮಳವು ಹೆಚ್ಚು ಜನರನ್ನು ಆಕರ್ಷಿಸುತ್ತದೆ ಎಂದು ನಮಗೆ ಖಾತ್ರಿಯಿದೆ" ಎಂದು ಅವರು ಹೇಳುತ್ತಾರೆ.

ಅಜ್ಜಿಯ ಪಾಕವಿಧಾನವನ್ನು ಇವರು ಅನುಸರಿಸುತ್ತಿದ್ದು, ಆರ್‌ಎನ್ಆರ್ ಬಿರಿಯಾನಿ ಎಂಬ ಹೆಸರು ಇವರ ಅಜ್ಜ ರಾಮಸ್ವಾಮಿ ಮತ್ತು ತಂದೆ ರವಿಚಂದರ್ ಅವರ ಹೆಸರುಗಳನ್ನು ಸೂಚಿಸುತ್ತದೆ.

ಇದರ ಬಗ್ಗೆ ಈ ಸಹೋದರಿಯರು ಹೇಳುವುದೇನು?

ಈ ಸಹೋದರಿಯರು ಯಾವಾಗಲೂ ಆಹಾರ ಕೇಂದ್ರಿತ ಏನನ್ನಾದರೂ ಮಾಡುವ ಆಲೋಚನೆಯನ್ನು ಹೊಂದಿದ್ದರೂ, ಲಾಕ್‌ಡೌನ್‌ ಸಮಯದಲ್ಲಿ ಅವರು ಪಡೆದ ಸಮಯವು ಅವರ ಯೋಜನೆಗಳನ್ನು ದೃಢಗೊಳಿಸಲು ಸಹಾಯ ಮಾಡಿತು. "ಲಾಕ್ಡೌನ್ ನಮ್ಮ ಆಲೋಚನೆಗಳ ಬಗ್ಗೆ ಆಳವಾಗಿ ಯೋಚಿಸಲು ಮತ್ತು ಅವುಗಳನ್ನು ಬಲಪಡಿಸಲು ನಮಗೆ ಸಾಕಷ್ಟು ಸಮಯವನ್ನು ನೀಡಿತು. ದೊನ್ನೆ ಬಿರಿಯಾನಿ ವಲಯವು ಅಸಂಘಟಿತವಾಗಿದೆ. ಅಲ್ಲಿಯೇ ನಾವು ವ್ಯಾಪಾರದ ಅವಕಾಶವನ್ನು ನೋಡಿದ್ದೇವೆ" ಎಂದು ಶ್ವೇತಾ ಹೇಳುತ್ತಾರೆ.

ಇದನ್ನು ಓದಿ: ಬಾಯಲ್ಲಿ ನೀರೂರಿಸುವ ಉತ್ತರ ಕರ್ನಾಟಕ ಶೈಲಿಯ ಮಂಡಕ್ಕಿ ಅವಲಕ್ಕಿ ಮಾಡುವ ವಿಧಾನ

"ನಾವು ನಮ್ಮ ಗ್ರಾಹಕರೊಂದಿಗೆ ವಿಶ್ವಾಸವನ್ನು ಬೆಳೆಸುವಲ್ಲಿ ಕೆಲಸ ಮಾಡಿದೆವು. ನಾವು ಎಲ್ಲಾ ಗುಣಮಟ್ಟ ನಿಯಂತ್ರಣ ಮಾನದಂಡಗಳನ್ನು ಅನುಸರಿಸಿದ್ದೇವೆ ಮತ್ತು ಅತ್ಯಂತ ಆರೋಗ್ಯಕರ ಆಹಾರವನ್ನು ಮಾತ್ರ ಒದಗಿಸಿದ್ದೇವೆ. ನಾವು ನಮ್ಮ ಪ್ಯಾಕೇಜಿಂಗ್ ಬಗ್ಗೆ ಸಹ ತುಂಬಾನೇ ಕೆಲಸ ಮಾಡಿದ್ದೇವೆ" ಎಂದು ಹೇಳುತ್ತಾರೆ.

ಜನರಿಗೆ ಹೇಗೆ ತಲುಪಿಸಬೇಕು ಎಂದು ಯೋಜಿಸಿದ್ದೇವು

"ನಮ್ಮ ಗ್ರಾಹಕರಿಗೆ ಅವಿಸ್ಮರಣೀಯ ಅನುಭವವನ್ನು ನೀಡುವುದು ನಮ್ಮ ಆಲೋಚನೆಯಾಗಿತ್ತು" ಎಂದು ರಮ್ಯಾ ಹೇಳುತ್ತಾರೆ. ಇದಕ್ಕಾಗಿ, ನಾವು ಅವರಿಗೆ ಬಿರಿಯಾನಿಯನ್ನು ಹೇಗೆ ತಲುಪಿಸಬೇಕು ಎಂಬುದರ ಬಗ್ಗೆ ಯೋಚಿಸಲು ಬಹಳ ಸಮಯ ಕಳೆದಿದ್ದೇವೆ" ಎಂದು ಅವರು ಹೇಳಿದರು.

ಇದನ್ನು ಓದಿ: ಬಿರಿಯಾನಿ ಮಡಕೆಗಳ ಸುತ್ತ ಕೆಂಪು ಬಟ್ಟೆ ಸುತ್ತುವುದು ಯಾಕೆ ಗೊತ್ತಾ..? ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ

"ನಾವು ಅದನ್ನು ರಾಯಿತಾ, ಸಲಾಡ್ ಮತ್ತು ಸಿಹಿಯೊಂದಿಗೆ ಸುಂದರವಾಗಿ ವಿನ್ಯಾಸಗೊಳಿಸಿದ ತಗಡಿನ ಡಬ್ಬಾದಲ್ಲಿ ಕಳುಹಿಸುತ್ತೇವೆ. ಇದು ನಮ್ಮ ಬ್ರ್ಯಾಂಡ್ ಅನ್ನು ಮಾರುಕಟ್ಟೆಯಲ್ಲಿ ಇರಿಸಲು ನಮಗೆ ಸಹಾಯ ಮಾಡಿತು" ಎಂದು ಹೇಳುತ್ತಾರೆ.

ಈ ಬಿರಿಯಾನಿಯೊಂದಿಗೆ, ನುಗ್ಗೆಕಾಯಿ ಚಿಲ್ಲಿ ಸ್ಟಾರ್ಟರ್ ಮತ್ತು ಚಿಕನ್ ಘೀ ರೋಸ್ಟ್ ಸಹ ಗ್ರಾಹಕರಲ್ಲಿ ತುಂಬಾ ಜನಪ್ರಿಯವಾಗಿದೆ. ಸಸ್ಯಾಹಾರಿ ಬಿರಿಯಾನಿಗೆ 190 ರೂಪಾಯಿಗಿಂತ ಹೆಚ್ಚು ಮತ್ತು ಮಾಂಸಾಹಾರಿ ಬಿರಿಯಾನಿಗೆ 250 ರೂಪಾಯಿಗಿಂತ ಹೆಚ್ಚು ಖರ್ಚು ಮಾಡಲು ಸಿದ್ಧರಾಗಿರಬೇಕು. ಇವರ ಉದ್ಯಮವು ಇದುವರೆಗೆ 10 ಕೋಟಿ ರೂಪಾಯಿಗಳ ಆದಾಯವನ್ನು ಗಳಿಸಿಕೊಟ್ಟಿದೆ ಮತ್ತು ಈ ಬೆಳವಣಿಗೆಯ ಪಥದಲ್ಲಿ ಮುಂದುವರಿಯಲು ಸಜ್ಜಾಗಿದೆ ಎಂದು ಸಹೋದರಿಯರು ಹೇಳುತ್ತಾರೆ.
Published by:Seema R
First published: