Petrol Diesel Price Today: ಬೆಂಗಳೂರಲ್ಲಿ 100ರೂಗಿಂತ ಕಡಿಮೆ ಪೆಟ್ರೋಲ್ ಡೀಸೆಲ್ ಇಲ್ಲ, ಬೆಲೆ ಇಳಿಯೋ ಸೂಚನೆ ಇದೆಯಾ ?

Petrol Price Today: ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 105 ರೂ ದಾಟಿದೆ. ಸದ್ಯ 105.25 ರೂಪಾಯಿಗೆ ಬಂದು ಮುಟ್ಟಿದೆ. ಇನ್ನು, ಡೀಸೆಲ್ ಬೆಲೆ ಇಲ್ಲಿ ಲೀಟರ್​ಗೆ 95.26 ರೂ ಇದೆ. ಬೆಂಗಳೂರಿನಲ್ಲಿ ಕಳೆದ 10 ದಿನಗಳಿಂದ ಪೆಟ್ರೋಲ್ ಬೆಲೆ 1.49 ರೂಪಾಯಿಯಷ್ಟು ಏರಿಕೆ ಕಂಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬಹಳ ಅಪರೂಪ ಎನ್ನುವಂತೆ ಪೆಟ್ರೋಲ್ ಮತ್ತು ಡೀಸೆಲ್​ಗಳ ಬೆಲೆಗಳಲ್ಲಿ ಇಂದು ಏರಿಕೆಯಾಗಿಲ್ಲ. ಪ್ರತಿದಿನ ಮನೆಯಿಂದ ಗಾಡಿ ಹೊರಗೆ ತೆಗೆಯಬೇಕಾದ್ರೂ ಒಂದು ಸಲ ಇವತ್ತು ಪೆಟ್ರೋಲ್ ಅಥವಾ ಡೀಸೆಲ್ ಬೆಲೆ ಏನಾಗಿದೆ ಅಂತ ನೋಡ್ಕೊಂಡು, ವಿಚಾರ ಮಾಡಿ ಆಮೇಲೆ ವಾಹನ ಬಳಸುವ ಸಂದರ್ಭ ಬಂದುಬಿಟ್ಟಿದೆ. ಪ್ರತಿದಿನ ಇಷ್ಟಿಷ್ಟೇ ಎನ್ನುವಂತೆ ಇಂಧನ ಬೆಲೆಯೇರಿಕೆ ಆಗುತ್ತಿದ್ದು ವಾಹನ ಸವಾರರಂತೂ ಇರುವ ಖರ್ಚಿನ ಜೊತೆ ಅನಿವಾರ್ಯವಾಗಿ ಪೆಟ್ರೋಲ್​ಗೆ ಹೆಚ್ಚಿನ ಬೆಲೆ ನೀಡಬೇಕಾಗಿದೆ ಎಂದು ಬೇಸರದಲ್ಲೇ ಇದ್ದಾರೆ. ಆದ್ರೆ ಬೇರೆ ದಾರಿ ಕಾಣದೆ ಬೆಲೆಯೇರಿಕೆಗೆ ಹೊಂದಿಕೊಳ್ಳಲೇಬೇಕಾಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 105 ರೂ ದಾಟಿದೆ. ಸದ್ಯ 105.25 ರೂಪಾಯಿಗೆ ಬಂದು ಮುಟ್ಟಿದೆ. ಇನ್ನು, ಡೀಸೆಲ್ ಬೆಲೆ ಇಲ್ಲಿ ಲೀಟರ್​ಗೆ 95.26 ರೂ ಇದೆ. ಬೆಂಗಳೂರಿನಲ್ಲಿ ಕಳೆದ 10 ದಿನಗಳಿಂದ ಪೆಟ್ರೋಲ್ ಬೆಲೆ 1.49 ರೂಪಾಯಿಯಷ್ಟು ಏರಿಕೆ ಕಂಡಿದೆ. ಇದೇ ಅವಧಿಯಲ್ಲಿ ಡೀಸೆಲ್ ಬೆಲೆಯಲ್ಲಿ 37 ಪೈಸೆಯಷ್ಟು ಹೆಚ್ಚಳವಾಗಿದೆ.

ಇದನ್ನೂ ಓದಿ: Gold Price Today: ಬಹು ದಿನಗಳ ನಂತರ ಇಳಿಕೆಯಾಗಿದೆ ಚಿನ್ನದ ಬೆಲೆ, ಕೊಳ್ಳುವವರಿಗೆ ಇದು ರೈಟ್ ಟೈಮ್ !

ದೇಶದ 20 ರಾಜ್ಯಗಳಲ್ಲಿ ಇದೀಗ ಪೆಟ್ರೋಲ್ ಬೆಲೆ ನೂರು ರೂ ಗಡಿ ದಾಟಿದೆ. ಮಧ್ಯಪ್ರದೇಶ ರಾಜಧಾನಿ ಭೋಪಾಲ್​ನಲ್ಲಿ ಪೆಟ್ರೋಲ್ ಬೆಲೆ 110 ರೂ ಮುಟ್ಟಿದೆ. ಇನ್ನು, ರಾಜಸ್ಥಾನದಲ್ಲಿ ಪಾಕಿಸ್ತಾನದ ಗಡಿ ಸಮೀಪವೇ ಇರುವ ಶ್ರೀ ಗಂಗಾನಗರ್ ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ 113.21 ರೂ ಇದೆ. ಇದು ದೇಶದಲ್ಲೇ ಅತಿ ದುಬಾರಿ ಪೆಟ್ರೋಲ್ ಇರುವ ಜಿಲ್ಲೆ ಎನಿಸಿದೆ. ಈ ಜಿಲ್ಲೆಯಲ್ಲಿ ಡೀಸೆಲ್ ಬೆಲೆ ಕೂಡ ಕೆಲ ದಿನಗಳ ಹಿಂದೆಯೇ ಶತಕ ಭಾರಿಸಿದೆ. ಇಲ್ಲಿ ಡೀಸೆಲ್ ಬೆಲೆ ಲೀಟರ್​ಗೆ 103.15 ರೂ ಇದೆ. ರಾಜಸ್ಥಾನ, ಒಡಿಶಾ ಮತ್ತು ಮಧ್ಯ ಪ್ರದೇಶದ ಕೆಲ ಜಿಲ್ಲೆಗಳಲ್ಲಿ ಡೀಸೆಲ್ ಬೆಲೆ ಶತಕ ದಾಟಿ ಮುಂದೆ ಹೋಗಿದೆ.
 ದೇಶದ ಪ್ರಮುಖ ನಗರಗಳಲ್ಲಿ ಇಂದು ಪೆಟ್ರೋಲ್ - ಡೀಸೆಲ್ ಬೆಲೆ ಹೀಗಿದೆ:



ವಿವಿಧೆಡೆ ಇರುವ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ:

ಪೆಟ್ರೋಲ್ ಬೆಲೆ:  
ಬೆಂಗಳೂರು: 105.25 ರೂ
ಚೆನ್ನೈ: 102.49
ಮುಂಬೈ: 107.83ನವದೆಹಲಿ: 101.84 ರೂ
ಕೋಲ್ಕತಾ: 102.08
ಹೈದರಾಬಾದ್: 105.83
ಚಂದೀಗಡ್: 97.93
ಭುಬನೇಶ್ವರ್: 102.65 ರೂ

ಡೀಸೆಲ್ ಬೆಲೆ:
ಬೆಂಗಳೂರು: 95.26 ರೂ
ಚೆನ್ನೈ: 94.39
ಮುಂಬೈ: 97.45
ನವದೆಹಲಿ: 89.87 ರೂ
ಕೋಲ್ಕತಾ: 93.02
ಹೈದರಾಬಾದ್: 97.96
ಚಂದೀಗಡ್: 89.50
ಭುಬನೇಶ್ವರ್: 97.94 ರೂ



ನಿಮ್ಮ ನಗರದ ತೈಲ ಬೆಲೆಯನ್ನು ಪರಿಶೀಲಿಸುವುದು ಹೇಗೆ?

ದೇಶದ ಮೂರು ತೈಲ ಮಾರುಕಟ್ಟೆ ಕಂಪನಿಗಳಾದ ಎಚ್‌ಪಿಸಿಎಲ್, ಬಿಪಿಸಿಎಲ್ ಮತ್ತು ಐಒಸಿ ಬೆಳಿಗ್ಗೆ 6 ಗಂಟೆಯ ನಂತರ ಹೊಸ ದರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಿತರಿಸುತ್ತವೆ. ಹೊಸ ದರಗಳಿಗಾಗಿ, ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಮಾಹಿತಿಯನ್ನು ಪಡೆಯಬಹುದು. ಅದೇ ಸಮಯದಲ್ಲಿ, ನೀವು ಮೊಬೈಲ್ ಫೋನ್‌ಗಳಲ್ಲಿ ಎಸ್‌ಎಂಎಸ್ ಮೂಲಕವೂ ದರವನ್ನು ಪರಿಶೀಲಿಸಬಹುದು.

92249 92249 ಗೆ ಎಸ್‌ಎಂಎಸ್ ಕಳುಹಿಸುವ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಬಗ್ಗೆಯೂ ನೀವು ತಿಳಿದುಕೊಳ್ಳಬಹುದು. ನೀವು ಆರ್​ಎಸ್​ಪಿ <ಸ್ಪೇಸ್> ಪೆಟ್ರೋಲ್ ಪಂಪ್ ಡೀಲರ್ ಕೋಡ್ ಅನ್ನು 92249 92249 ಗೆ ಕಳುಹಿಸಬೇಕು. ನೀವು ದೆಹಲಿಯಲ್ಲಿದ್ದರೆ ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಸಂದೇಶದ ಮೂಲಕ ತಿಳಿದುಕೊಳ್ಳಲು ಬಯಸಿದರೆ, ನೀವು ಆರ್​ಎಸ್​ಪಿ 102072 ಅನ್ನು 92249 92249 ಗೆ ಕಳುಹಿಸಬೇಕು.

ಬೆಲೆಗಳು ಪ್ರತಿದಿನ ಬದಲಾಗುತ್ತವೆ:

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ದೈನಂದಿನ ಬದಲಾವಣೆ ಬೆಳಿಗ್ಗೆ 6 ಗಂಟೆಗೆ ಸಂಭವಿಸುತ್ತದೆ. ಬೆಳಿಗ್ಗೆ 6 ರಿಂದ ಹೊಸ ದರಗಳು ಅನ್ವಯವಾಗುತ್ತವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕ, ವ್ಯಾಪಾರಿ ಆಯೋಗ ಮತ್ತು ಇತರ ವಸ್ತುಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ವಿದೇಶಿ ವಿನಿಮಯ ದರಗಳ ಜೊತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ಬೆಲೆಗಳು ಯಾವುವು ಎಂಬುದರ ಆಧಾರದ ಮೇಲೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿದಿನ ಬದಲಾಗುತ್ತವೆ.
Published by:Soumya KN
First published: