ನೀವು ಒಂದು ಆಟೋ ರೈಡ್ ಬುಕ್ ಮಾಡ್ತೀರಿ. ಅದನ್ನು ನಂಬರ್ ಪ್ಲೇಟ್ (Number Plate) ಓದುವ ಮೂಲಕ ನಾವು ಬುಕ್ ಮಾಡಿದ ಆಟೋ ಇದೇ ಅಂತಾ ಗೊತ್ತು ಮಾಡಿಕೊಳ್ಳುತ್ತೀರಾ. ಆದರೆ ಹೀಗೆ ಬಂದ ಆಟೋದಲ್ಲಿ ಮೂರ್‌ಮೂರು ನಂಬರ್ ಪ್ಲೇಟ್ ಇದ್ರೆ ಏನ್ ಕಥೆ. ಆ ಆಟೋ (Auto) ಹತ್ತುವ ಆಲೋಚನೆ ಬರುತ್ತಾ? ಇದ್ಯಾಕೋ ಸೇಫ್ ಇಲ್ಲ ಅನ್ಸತ್ತೆ. ಆದರೆ ಬೆಂಗಳೂರಿನಲ್ಲಿ ಹೀಗೆ ನಿಯಮ ಮೀರಿದ ಅಟೋಗಳು ಓಡಾಡುತ್ತಿವೆ ಅಂತೆ. ಇಷ್ಟೆಲ್ಲಾ ಸಮಸ್ಯೆಗಳಿದ್ರು (Problems) ಇಂತಹ ಆಟೋಗಳು ರಾಜಾರೋಷವಾಗಿ ಬೆಂಗಳೂರಿನ ರಸ್ತೆ ಮೇಲಿವೆ ಅಂದ್ರೆ ನಮ್ಮ ವ್ಯವಸ್ಥೆ ಬಗ್ಗೆ ಆಕ್ರೋಶ ಬರದೇ ಸುಮ್ನೇ ಇರುತ್ತಾ? ಹೀಗಂತ ಟ್ವಿಟ್ಟರ್ನಲ್ಲಿ ನೆಟ್ಟಿಗರು ರೈಡಿಂಗ್ ಕಂಪನಿಗಳನ್ನು(Company) ತರಾಟೆಗೆ ತೆಗೆದುಕೊಂಡಿದ್ದಾರೆ.
ಒಂದೇ ವಾಹನ 3 ನಂಬರ್ ಪ್ಲೇಟ್ಸ್
ಬೆಂಗಳೂರಿನಲ್ಲಿ ಒಂದಷ್ಟು ವಿಶೇಷ ಆಟೋಗಳಿವೆ. 1 ಆಟೋ ನಂಬರ್ ಪ್ಲೇಟ್ ಜಾಗದಲ್ಲಿ 3 ನೋಂದಣಿ ವಾಹನದ ಸಂಖ್ಯೆ ಇದೆ. ಇದು ಹೇಗೆ ಸಾಧ್ಯ? ಯಾವುದೇ ಒಂದು ವಾಹನಕ್ಕೆ ಒಂದೇ ರೆಜಿಸ್ಟರ್ಡ್ ನಂಬರ್ ಇರುವುದು ನಿಯಮ. ಆದರೆ ಇಲ್ಲಿ 3 ನಂಬರ್ ಪ್ಲೇಟ್ ಇದೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಒಂದು ಆಟೋ 3 ನಂಬರ್ ಪ್ಲೇಟ್
ಈ ಆಟೋದಲ್ಲಿ 3 ನೋಂದಣಿ ನಂಬರ್ಗಳಿವೆ. ಓಲಾ ಗ್ರಾಹಕರ ಸೇವೆಗೆ ಒಂದು ನಂಬರ್ ಪ್ಲೇಟ್, ರ್ಯಾಪಿಡೊ ಗ್ರಾಹಕರನ್ನು ಸೆಳೆಯಲು ಇನ್ನೊಂದು ನಂಬರ್ ಪ್ಲೇಟ್ಗಳಿದ್ದು ಇದನ್ನು ಪ್ರಿಂಟ್ ತೆಗೆಸಿ ಆಟೋ ಹಿಂದೆ ಅಂಟಿಸಲಾಗಿದೆ. ಇನ್ನೂ ಎಂದಿನಂತೆ ಆಟೋ ಹಳದಿ ಬಣ್ಣದ ರೆಜಿಸ್ಟ್ರೇಷನ್ ನಂಬರ್ ಹೊಂದಿದೆಯಂತೆ.
ವೈರಲ್ ಆಯ್ತು ಫೋಟೋ!
ಸುಪ್ರೀತ್ ಹೆಸರಿನ ಬಳಕೆದಾರರು ಈ ಫೋಟೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ಎಷ್ಟು ನೋಂದಣಿಗಳಿವೆ ಬಹಳಷ್ಟು ನೋಂದಣಿಗಳು’ ಎಂದು ವ್ಯಂಗ್ಯವಾಗಿ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಅಷ್ಟೇ ಅಲ್ಲದೇ ಈಗಾಗಲೇ ಒಂದಕ್ಕಿಂತ ಎರಡು ಕೆಲಸಗಳನ್ನು ಮಾಡುವ ಪೂರ್ಣ ಕಾಲಿಕ ಉದ್ಯೋಗಿಗಳಂತೆ ಈ ಆಟೋದವರು ಮೂನ್ ಲೈಟಿಂಗ್ ಉದ್ಯೋಗ ಮಾಡುತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ.
ಇದನ್ನೂ ಓದಿ: ನಾಗರ ಹಾವಿನ ತಲೆಯ ಮೇಲೆ ನಾಗಮಣಿ! ಇದು ಕಂಡಿದ್ದೆಲ್ಲಿ?
ಕಮೆಂಟರ್ಸ್ ಏನಂತಾರೆ?
‘ಈ ರೀತಿಯ ವಾಹನಗಳು ಸುರಕ್ಷತೆಯ ವಿಷಯದಲ್ಲಿ ನಮ್ಮ ಹೃದಯ ಬಡಿತ ಹೆಚ್ಚಿಸುತ್ತವೆ’ ಎಂದು ಒಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ‘ಆಟೋ, ಇಂಜಿನ್ ಮತ್ತು ಚಕ್ರಗಳು 3 ಬೇರೆ ಬೇರೆ ಆಟೋಗಳಿಂದ ಪಡೆದ ಆಟೋ ಇದಾಗಿದೆ. ಅದಕ್ಕೆ 3 ನಂಬರ್ಸ್’ ಎಂದು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಈ ನಂಬರ್ ಪ್ಲೇಟ್ನಲ್ಲಿ ಊಬರ್ ಇಲ್ಲವಲ್ಲ ಎಂದು ಪಾಪಾ ಅಳುತ್ತಿದೆ’ ಎಂದು ವ್ಯಂಗ್ಯವಾಗಿ ಬರೆದಿದ್ದಾರೆ. ಅಲ್ಲದೇ ‘ಅಪಾಯದ ಸಂದರ್ಭದಲ್ಲಿ ಓಲಾ ಇಲ್ಲವೇ ಪೊಲೀಸರು ಇಂತಹ ವಾಹನಗಳನ್ನು ಹೇಗೆ ಟ್ರ್ಯಾಕ್ ಮಾಡುತ್ತಾರೆ’ ಎನ್ನುವ ಆತಂಕವನ್ನು ಹೊರ ಹಾಕಿದ್ದಾರೆ.
Another #PeakBangalore moment in E-city. How many registrations is too many registrations? @peakbengaluru pic.twitter.com/SaW9hMKBQV
— suprit j (@jadhav_suprit96) April 5, 2023
ಆಟೋ, ಇನ್ನಿತರ ಸಾರಿಗೆ ವಾಹನಗಳು ನಂಬರ್ ಪ್ಲೇಟ್ಸ್ಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಕೆಲವು ಕಡೆ ನಂಬರ್ ಪ್ಲೇಟ್ಸ್ಗಳಲ್ಲಿ ಸಂಖ್ಯೆ, ಅಕ್ಷರಗಳು ಬಿಟ್ಟು ಹೋಗಿರುತ್ತವೆ. ಆದರೂ ಯಾರಿಗೂ ಕೇರ್ ಮಾಡದೇ ನಿಯಮ ಉಲ್ಲಂಘನೆ ಮಾಡಿ ಈ ವಾಹನಗಳು ರಾಜಾರೋಷವಾಗಿ ರಸ್ತೆಯ ಮೇಲಿರುತ್ತವೆ. ಇದಕ್ಕೆಲ್ಲಾ ಕಡಿವಾಣ ಯಾವಾಗ ಎನ್ನುವುದು ಕೂಡ ಕಮೆಂಟ್ಸ್ಗಳಲ್ಲಿ ಚರ್ಚೆಯಾಗಿದೆ.
ಒಟ್ಟಿನಲ್ಲಿ ಸದಾ ಎಲ್ಲೆಂದರಲ್ಲಿ ಕೈ ಅಡ್ಡ ಹಾಕಿ ಪ್ರಶ್ನಿಸುವ ಸಂಚಾರಿ ಪೊಲೀಸರನ್ನೇ ಯಾಮಾರಿಸಿಕೊಂಡು ಓಡಾಡುತ್ತಿರುವ ಇಂತಹ ಆಟೋಗಳು ನಿಜಕ್ಕೂ ಕೂಡ ಆತಂಕಕಾರಿಯಾಗಿದೆ. ಆದ್ದರಿಂದ ಕೂಡಲೇ ಇವುಗಳನ್ನು ಗುರುತಿಸಿ ಇದರ ಬಗ್ಗೆ ವಿಚಾರಣೆ ಮಾಡಬೇಕು ಎನ್ನುವ ಒತ್ತಡವೂ ಬರುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ