ಈ ಹಿಂದೆ ಎರಡು ಮೂರು ಆಹಾರ (Food) ಪದಾರ್ಥಗಳನ್ನು ಸೇರಿಸಿ ಒಂದು ವಿಭಿನ್ನವಾದ ಮತ್ತು ಬಹುತೇಕರಿಗೆ ವಿಚಿತ್ರ ಅಂತ ಅನ್ನಿಸುವ ಭಕ್ಷ್ಯವೊಂದನ್ನು ತಯಾರು ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಅವುಗಳ ವೀಡಿಯೋ ಮಾಡಿ ಹಂಚಿಕೊಂಡಿದ್ದನ್ನು ನಾವೆಲ್ಲಾ ನೋಡಿಯೇ ಇರುತ್ತೇವೆ. ಅದರಲ್ಲಿ ಐಸ್‌ಕ್ರೀಂ ನಲ್ಲಿ ಇಡ್ಲಿಯನ್ನು ಮಿಕ್ಸ್ ಮಾಡಿ ಇಡ್ಲಿ ಐಸ್‌ಕ್ರೀಂ ಮಾಡಿದ್ದು, ಮ್ಯಾಗಿ ನೂಡಲ್ಸ್ ನಲ್ಲಿ ಇನ್ನೇನೂ ಮಿಕ್ಸ್ ಮಾಡಿ ಇನ್ನ್ಯಾವುದೋ ವಿಚಿತ್ರವಾದ ಭಕ್ಷ್ಯವನ್ನ(Sweets) ತಯಾರಿಸಿದ್ದು ಹೀಗೆ ಅನೇಕ ರೀತಿಯ ಪ್ರಯೋಗಗಳು ಹಿಂದೊಮ್ಮೆ ನಡೆದಿದ್ದವು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಅದನ್ನೇಲ್ಲಾ ನೋಡಿ ಕೆಲವು ನೆಟ್ಟಿಗರು ‘ಏನಪ್ಪಾ ಇದು ತಿಂಡಿಗಳನ್ನ ಹೀಗೆಲ್ಲಾ ಹಾಳು ಮಾಡುತ್ತಿದ್ದೀರಿ’ ಅಂತೆಲ್ಲಾ ಹೇಳಿದರೆ, ಇನ್ನೂ ಕೆಲವರು ‘ಹೀಗೆಲ್ಲಾ ಮಾಡ್ಬೇಡಿ’ ಅಂತ ಹೇಳಿದ್ದು ಇದೆ. ಈಗ ಮತ್ತೊಂದು ಹೊಸ ಪ್ರಯೋಗಕ್ಕೆ (Experiment) ಜನರು ಕೈ ಹಾಕಿದಂಗಿದೆ ನೋಡಿ.
ಇಲ್ಲಿ ಇಡ್ಲಿಯನ್ನ ಸಾಮಾನ್ಯವಾಗಿ ನಾವು ಚಮಚದಿಂದ ಅಥವಾ ಕೈಯಿಂದ ತುಂಡು ಮಾಡಿಕೊಂಡು ಸಾಂಬಾರ್ ಮತ್ತು ಚಟ್ನಿಯಲ್ಲಿ ಹಚ್ಚಿಕೊಂಡು ತಿನ್ನುವುದನ್ನು ನೋಡಿರುತ್ತೇವೆ. ಆದರೆ ಇಲ್ಲಿ ಇಡ್ಲಿಯನ್ನು ಹೀಗೂ ತಿನ್ನಬಹುದು ಅಂತ ತೋರಿಸಿದ್ದಾರೆ ನೋಡಿ.
ನೀವು ಇಡ್ಲಿಯನ್ನ ಹೀಗೂ ತಿನ್ನಬಹುದು ಅಂತ ಎಂದಾದರೂ ಊಹಿಸಿದ್ರಾ?
ಹೊಟ್ಟೆಗೆ ಆರಾಮದಾಯಕ ಅಂತ ಅನ್ನಿಸುವ ಉಪಾಹಾರ ಇಡ್ಲಿ ಅಂತ ಹೇಳಿದರೆ ಸುಳ್ಳಲ್ಲ. ಇಡ್ಲಿಗೆ ಸಂಬಂಧಿಸಿದಂತೆ ಇಲ್ಲೊಂದು ಹೊಸ ಆವಿಷ್ಕಾರವೊಂದು ಬೆಳಕಿಗೆ ಬಂದಿದೆ. ಅನೇಕರು ಪಾಪ್ಸಿಕಲ್ ಆಕಾರದಲ್ಲಿ ಸ್ಟಿಕ್ ನ ಮೇಲೆ ಇಡ್ಲಿ ತಯಾರಿಸಲು ಪ್ರಯತ್ನಿಸುತ್ತಿದ್ದಾರೆ, ಈ ಹೊಸ ಐಡಿಯಾ ಆಹಾರ ಉತ್ಸಾಹಿಗಳು ಮತ್ತು ನೆಟ್ಟಿಗರ ಆಶ್ಚರ್ಯಕ್ಕೆ ಕಾರಣವಾಗಿದೆ. "ಸ್ಟಿಕ್ ಇಡ್ಲಿ" ಮೊದಲು ಅಕ್ಟೋಬರ್ 2021 ರಲ್ಲಿ ವೈರಲ್ ಆಯಿತು, ಯೂಟ್ಯೂಬ್ ನಲ್ಲಿ ಹಲವಾರು ಅಡುಗೆ ಚಾನೆಲ್ ಗಳು ಈ ಪಾಕವಿಧಾನ ವೀಡಿಯೋಗಳನ್ನು ಬಿಡುಗಡೆ ಮಾಡಿದವು.
ಇದನ್ನೂ ಓದಿ: ಹಳದಿ ಬಣ್ಣದ ಕೊಕ್ಕು, ಕೆಂಪು ಬಣ್ಣದ ಕಣ್ಣು! ಈರೋಡ್ನಲ್ಲಿ ಸಿಕ್ಕ ಅಪರೂಪದ ಪಕ್ಷಿ ಇದು!
ಥೇಟ್ ನಾವೆಲ್ಲಾ ತಿನ್ನುವ ಐಸ್ ಕ್ಯಾಂಡಿ ಥರ ಇರುವ ಇದು ಇಡ್ಲಿ ನೋಡಿ. ಇಡ್ಲಿ ಅಂದರೆ ನಮ್ಮ ಕಲ್ಪನೆ ಮೃದುವಾಗಿ, ಗುಂಡಾಗಿರುವ ಆಹಾರ. ಆದರೆ ಇಲ್ಲಿ ಇಡ್ಲಿಯ ಗುರುತನ್ನೇ ಬದಲಾಯಿಸಿ ಕ್ಯಾಂಡಿ ಇಡ್ಲಿಯನ್ನು ತಯಾರಿಸಿದ್ದಾರೆ.
ಇತ್ತೀಚಿನ ಟ್ವೀಟ್ ಮತ್ತೆ ಈ ಸ್ಟಿಕ್ ಇಡ್ಲಿ ವಿಷಯವನ್ನ ತಂದಿದೆ..
ಇತ್ತೀಚಿನ ಟ್ವೀಟ್ ಸ್ಟಿಕ್ ಇಡ್ಲಿ ಕುರಿತ ಚರ್ಚೆಯನ್ನು ಮತ್ತೆ ಬೆಳಕಿಗೆ ತಂದಿದೆ ಅಂತ ಹೇಳಬಹುದು. "ಬೆಂಗಳೂರಿನ ಆಹಾರ ದೃಶ್ಯವು ಹೊಸ ಆವಿಷ್ಕಾರವನ್ನು ಹೊಂದಿದೆ- ಸಾಂಬಾರ್ ಮತ್ತು ಚಟ್ನಿಯೊಂದಿಗೆ ಸ್ಟಿಕ್ ಮೇಲೆ ಇಡ್ಲಿ" ಎಂದು ಟ್ವಿಟ್ಟರ್ ಬಳಕೆದಾರರು ಪೋಸ್ಟ್ ಮಾಡಿದ್ದಾರೆ. ಈಗಾಗಲೇ 91,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಈ ಟ್ವೀಟ್ ಪಡೆದುಕೊಂಡಿದೆ.
ಕೇಂದ್ರ ಉದ್ಯಮಶೀಲತೆ, ಕೌಶಲ್ಯ ಅಭಿವೃದ್ಧಿ, ವಿದ್ಯುನ್ಮಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಕೂಡ ಈ ಟ್ವೀಟ್ ಗೆ ಪ್ರತಿಕ್ರಿಯಿಸಿ "ನಾನು ಮೊದಲಿನ ವಿಧಾನವನ್ನೇ ಮುಂದುವರೆಸುತ್ತೇನೆ" ಎಂದು ಹೇಳಿದರು.
ಈ ಸ್ಟಿಕ್ ಇಡ್ಲಿಯನ್ನ ನೋಡಿದ ನೆಟ್ಟಿಗರು ಹೇಳಿದ್ದೇನು?
"ನಿಷ್ಪ್ರಯೋಜಕ ಸೃಜನಶೀಲತೆ ಇದು. ಇಡ್ಲಿ ಇಡ್ಲಿಯಾಗಿರುವುದೇ ಉತ್ತಮವಾಗಿದೆ. ನಾನು ನನ್ನ ಸುಂದರವಾದ ಬೆರಳುಗಳಿಂದ ಆಹಾರವನ್ನು ಸ್ಪರ್ಶಿಸಿದಾಗ, ಆ ಆಹಾರದ ರುಚಿ ಇನ್ನಷ್ಟು ಹೆಚ್ಚಾಗುತ್ತದೆ" ಎಂದು ಮತ್ತೊಬ್ಬ ಇಂಟರ್ನೆಟ್ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಮಕ್ಕಳಿಗೆ ಈ ಇಡ್ಲಿ ಐಡಿಯಾ ಇಷ್ಟವಾಗಬಹುದು, ಕ್ಯಾಂಡಿ ಎಂದು ಇದನ್ನು ಅಬರು ಸುಲಭವಾಗಿ ತಿನ್ನಬಹುದು ಎಂದು ಇನ್ನೋರ್ವ ಬಳಕೆದಾರರ ಕಾಮೆಂಟ್ ಮಾಡಿದ್ದಾನೆ. ಇನ್ನೂ ಕೆಲವರ ಈ ಪ್ರಯೋಗಕ್ಕೆ ಹರಿಹಾಯ್ದಿದ್ದು, ಈ ಆವಿಷ್ಕಾರಗಳು ಇನ್ನು ಮುಂದೆ ಇಡ್ಲಿ ಸಾಂಬಾರ್ ತಿನ್ನಬೇಡಿ ಅಂತ ನನಗೆ ಹೇಳುವಂತೆ ಮಾಡುತ್ತಿವೆ" ಎಂದು ಟ್ವೀಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ