ಇತ್ತೀಚಿನ ಕಾಲದಲ್ಲಿ ಜನ ಎಲ್ಲೆಲ್ಲಿ ಹೇಗೆ ಇರುತ್ತಾರೆ ಎಂಬುದು ಹೇಳಲು ಅಸಾಧ್ಯ. ಅದರಲ್ಲೂ ಈ ಪಟ್ಟಣದ ಜನತೆಯನ್ನಂತೂ ಕೇಳೋದೇ ಬೇಡ. ಬೆಂಗಳೂರು ಭಾರೀ ಮಳೆಗೆ ತತ್ತರಿಸಿದ ಪರಿಣಾಮವಾಗಿ ಪ್ರತಿಯೊಂದೂ ಹಾನಿಗೀಡಾಗಿದೆ. ಅದೆಷ್ಟೋ ಕಂಪನಿಯೊಳಗೂ ಕೂಡ ನೀರು ನುಗ್ಗಿ ತ್ತರಿಸುವಂತಾಗಿದೆ. ಇದೇ ಕಾರಣದಲ್ಲಿ ಇಲ್ಲೊಬ್ಬ ವ್ಯಕ್ತಿ ಕಾಫಿ ಡೇ ನಲ್ಲಿ ಏನು ಮಾಡಿದ್ದಾನೆ ಎಂದು ನಿಮಗೆ ತಿಳಿದರೆ ನಿಜಕ್ಕೂ ಶಾಖ್ ಆಗ್ತೀರ. ಯಾಕೆ ಅಂದರೆ ಇಡೀ ಆಫೀಸ್ನ ಸೆಟ್ನ್ನೇ ತಮ್ಮ ಕಾಫಿ ಡೇ ನಲ್ಲಿ ತಂದು ಇಟ್ಟುಕೊಂಡಿದ್ದಾನೆ. ಅವುಗಳನ್ನೆಲ್ಲಾ ನೋಡಿ ಆಶ್ಚರ್ಯವಂತೂ ಆಗ್ತೀವಿ ಬಿಡಿ. ಅದರ ಜೊತೆಗೆ ಟ್ರೋಲ್ (Trolls) ಮತ್ತು ಮೀಮ್ಸ್ಗಳ (Meme) ಕಣ್ಣುಗಳಿಗೆ ಗುರಿಯಾಗುತ್ತೇವೆ. ಪ್ರಪಂಚವೇ ಒಂದು ರೀತಿಯಾಗಿ ಟ್ರೋಲ್ ಮಯವಾಗಿದೆ ಎನ್ನಬಹುದು ಬಿಡಿ. ಇದೇ ರೀತಿಯಾಗಿ ಬೆಂಗಳೂರಿನ (Bangalore) ಯುವಕ ಟ್ರೋಲ್ ಆಗಿದ್ದಾನೆ.
ಏನದು ಟ್ರೋಲ್?
ಹೌದು. ಇತ್ತೀಚೆಗೆ ಬೆಂಗಳೂರಿನಲ್ಲಿ ಭಾರಿ ಮಳೆಯಾದ ಹಿನ್ನಲೆಯಲ್ಲಿ ವಾಹನಗಳು ಕೊಚ್ಚಿಕೊಂಡು ಹೋಗಿ, ಜನರು ಅಸ್ಥವ್ಯಸ್ಥವಾಗಿದ್ದರು. ಇದೇ ಸಮಯದಲ್ಲಿ ಇಲ್ಲೊಬ್ಬ ಯುವಕ ಎಲ್ಲರ ಕಣ್ಣಿನಲ್ಲಿ ಮೋಜಿಗೀಡಾಗಿದ್ದಾನೆ.
ಕಾಫಿ ಶಾಪ್ಗಳಲ್ಲಿ ಲ್ಯಾಪ್ ಟಾಪ್ ಇಲ್ಲದೇ ಇರುವವರನ್ನು ಕಾಣ ಸಿಗುವುದೇ ಕಮ್ಮಿ. ತಮ್ಮ ಕೆಲಸ ಮತ್ತು ಇಡೀ ಜಗತ್ತನ್ನೇ ತಮ್ಮ ಅಂಗೈಯಲ್ಲಿ ಹಿಡಿದಿರುತ್ತಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹವು ತನ್ನ ಡೆಸ್ಕ್ಟಾಪ್ ಅನ್ನು ಕೆಫೆಗೆ ಕೊಂಡೊಯ್ಯುವ ಪರಿಸ್ಥಿತಿ ನಿರ್ಮಾಣ ಮಾಡಿದೆ. ಆದರೆ, ಈ ವ್ಯಕ್ತಿ ಮಾತ್ರ, ಕೇವಲ ಲ್ಯಾಪ್ಟಾಪ್ ಮಾತ್ರವಲ್ಲದೆ , ಕಂಪ್ಯೂಟರ್ನ ಸೆಟಪ್ನ್ನೇ ತಂದಿದ್ದಾನೆ. ಜೊತೆಯಲ್ಲಿ ಸಿಪಿಯು ಕೂಡ ಹೊತ್ತುಕೊಂಡು ಬಂದು ಕೆಫೆಯಲ್ಲಿ ಕೆಲಸ ಮಾಡಿದ್ದು, ಈ ಫೋಟೋ ವೈರಲ್ ಆಗಿದೆ.
ಇದನ್ನೂ ಓದಿ: Viral Post: ನಾಯಿಯಂತೆ ಕಾಣಲು 12 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ ಈ ವ್ಯಕ್ತಿ!
ಇದನ್ನು ಕಂಡ ಟ್ವಿಟ್ಟರ್ ಬಳಕೆದಾರನಾದ ಸಂಕೇತ್ ಸಾಹು ಎಂಬಾತ ಒಂದು ಫೋಟೋ ಅಪ್ಲೋಡ್ ಮಾಡುವುದರ ಜೊತೆಗೆ ಕ್ಯಾಪ್ಶನ್ ಕೂಡ ನೀಡಿದ್ದಾರೆ. ಇದು ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಸದ್ಧು ಮಾಡ್ತಾ ಇದೆ.
'I just saw a group working from the Third Wave Coffee with a full fledged desktop setup because their offices are flooded' ಎಂಬ ಅಡಿ ಬರಹವನ್ನು ಸೆಪ್ಟೆಂಬರ್ 7 ರಂದು ಹಾಕಿದ್ದಾನೆ.
I just saw a group working from the Third Wave Coffee with "a full-fledged desktop setup" because their offices are flooded 🤯@peakbengaluru pic.twitter.com/35ooB1TOqU
— Sanket Sahu (@sanketsahu) September 7, 2022
ಈ ಚಿತ್ರವನ್ನು ಹಂಚಿಕೊಂಡಾಗಿನಿಂದ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಹುಟ್ಟುಹಾಕಿದೆ. 'ಲ್ಯಾಪ್ಟಾಪ್ ಅನ್ನು ತಂದು ಕೆಲಸವನ್ನು ಮಾಡುವುದನ್ನು ನೋಡಿದ್ದೇವೆ ಮತ್ತು ಆ ರೀತಿಯಾಗಿ ನಾವು ಮಾಡಿದ್ದೇವೆ, ಆದರೆ ಈತ ಸಂಪೂರ್ಣ ಸಿಪಿಯುವನ್ನೇ ತಂದು ಕೆಲಸ ಮಾಡುತ್ತಿದ್ದಾರೆ, ಯಾಕೆಂದರೆ ಈತನ ಆಫೀಸ್ಗೆ ನೀರು ನುಗ್ಗಿ ಪ್ರವಾಹವಾಗಿದುದರಿಂದ ಈತ ಈ ಪರಿಸ್ಥಿತಿಯಲ್ಲಿದ್ದಾನೆ' ಎಂದು ಕಾಮೆಂಟ್ಗಳು ಬಂದಿವೆ.
ಕೆಲ ಇಂಟರ್ನೆಟ್ ಬಳಕೆದಾರರು ವಿಷಕಾರಿ 'ಹಸ್ಲ್ ಕಲ್ಚರ್' ನ ಆಳವಾದ ಸಮಸ್ಯೆಯ ಕಡೆಗೆ ಗಮನ ಸೆಳೆದಿದ್ದಾರೆ. ಇದು ನಿಜವಾಗಿಯೂ ಕೆಟ್ಟದ್ದು. ಬೆಂಗಳೂರು ವಿಷಕಾರಿ ಕಾರ್ಪೋರೇಟ್ ಸಂಸ್ಕೃತಿ ಇತ್ತೀಚಿಗಿನ ನಗರವೇ?' ಎಂದು ಒಬ್ಬ ಕಾಮೆಂಟ್ ಮಾಡಿದ. 'ನಾವು ಇಂತಹ ವಿಚಾರಗಳನ್ನು ರೊಮ್ಯಾಂಟಿಸೈಸ್ ಮಾಡಬಾರದು ಎಂದು ನಾನು ಭಾವಿಸುತ್ತೇನೆ. ಇದು ನಿಜವಾಗಿ ದುಖಃಕರವಾಗಿದೆ" ಎಂದು ಪ್ರತ್ಯುತ್ತರವಾಗಿ ಟ್ಟೀಟ್ ಮಾಡಿದ್ದಾನೆ.
ಕಳೆದ ವಾರ ಬೆಂಗಳೂರು ಪ್ರವಾಹದಿಂದ ಹಲವು ನಷ್ಟಗಳನ್ನು ತಪ್ಪಿಸಲು ಆಗಲಿಲ್ಲ. ಮನೆಗಳು, ವಾಹನಗಳು ತೊಳೆದು ಹೋಗಿದ್ಧರಿಂದ ಹಲವೆಡೆ ಅಂಗಡಿ, ಅಪಾರ್ಟ್ಮೆಂಟ್ಗಳು ನೆಲಮಾಳಿಗೆಗೆ ಜಲಾವೃತಗೊಂಡಿವೆ. ಇದರಿಂದ ಬೆಂಗಳೂರನ್ನು ಬಿಟ್ಟು ಹೋಗುವಷ್ಟು ತಲೆ ಕೆಟ್ಟಿದೆ ಜನಗಳಿಗೆ. ಇದರ ಬಗ್ಗೆ ಪ್ರತೀ ವರ್ಷವು ನಕರಾತ್ಮಕ ಪೋಸ್ಟ್ಗಳನ್ನು, ಬರಹಗಳನ್ನು ಹಲವಾರು ಜನರು ಹಾಕುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಾಣಬಹುದಾಗಿದೆ.
ಇದನ್ನೂ ಓದಿ: Queen Elizabeth II: ಕಪ್ಪು ಬಣ್ಣದ ಡೂಡಲ್ ರಚಿಸಿ ರಾಣಿ ಎಲಿಜಬೆತ್ಗೆ ಭಾವನಾತ್ಮಕ ಗೌರವ ಸೂಚಿಸಿದ ಗೂಗಲ್
ಭಾರೀ ಮಳೆಯಿಂದಾಗಿ ಸಿಲಿಕಾನ್ ಸಿಟಿಯಲ್ಲಿ ಪ್ರವಾಹ ಸಂಭವಿಸಿದಾಗಿನಿಂದ, ಐಟಿ ಉದ್ಯಮವು ದೊಡ್ಡ ನಷ್ಟವನ್ನು ಅನುಭವಿಸಿದೆ. ಇದು ಮತ್ತಷ್ಟು ಆರ್ಥಿಕ ಹಿಂಜರಿತಕ್ಕೆ ಕಾರಣವಾಗಬಹುದು ಮತ್ತು ಅನೇಕ ಜನರು ನಿರುದ್ಯೋಗಿಗಳಾಗಬಹುದು. ಇದರಿಂದಾಗಿ ಜನರು ಬೇಸತ್ತು ಊರಿನಿಂದ ಪಾರಾಗಲು ಕೂಡ ಹೊರಟಿದ್ದಾರೆ. ಬೆಂಗಳೂರು ನಾಗರಿಕ ರಾಜಧಾನಿಯಾಗಿ ಅಭಿವೃದ್ಧಿ ಹೊಂದಿಲ್ಲ ಎಂದು ಹಲವು ಜನರು ದೂರಿದ್ದಾರೆ.ಈ ಎಲ್ಲಾ ಸಮಸ್ಯೆಗಳನ್ನು ಎಲ್ಲರೂ ಅನುಭವಿಸುತ್ತಿರುತ್ತಾರೆ. ಆದರೆ ಟ್ರೋಲ್ ಕಣ್ಣಿಗೆ ಎಡೆಯಾದವನು ಈತ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ