• Home
  • »
  • News
  • »
  • trend
  • »
  • Caucasian Shepherd: ಕೊಕೇಶಿಯನ್ ಶೆಫರ್ಡ್ ನಾಯಿಗೆ ಯಾಕೆ 20 ಕೋಟಿ ಕೊಡಬೇಕು? ಇದ್ಯಾಕಿಷ್ಟು ದುಬಾರಿ?

Caucasian Shepherd: ಕೊಕೇಶಿಯನ್ ಶೆಫರ್ಡ್ ನಾಯಿಗೆ ಯಾಕೆ 20 ಕೋಟಿ ಕೊಡಬೇಕು? ಇದ್ಯಾಕಿಷ್ಟು ದುಬಾರಿ?

ಕೊಕೇಶಿಯನ್ ಶೆಫರ್ಡ್

ಕೊಕೇಶಿಯನ್ ಶೆಫರ್ಡ್

ಕೊಕೇಶಿಯನ್ ಶೆಫರ್ಡ್ ಒಂದು ಗಾರ್ಡ್ ಬ್ರೀಡ್ ನಾಯಿಯಾಗಿದ್ದು, ಇದು ಜಾರ್ಜಿಯಾ, ಅರ್ಮೇನಿಯಾ ಅಜೆರ್ಬೈಜಾನ್, ಒಸ್ಸೆಟಿಯಾ, ಡಾಗೆಸ್ತಾನ್ ಮತ್ತು ರಷ್ಯಾದ ಕೆಲವು ಭಾಗಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ.

  • Share this:

ಒಂದು ಸುದ್ದಿ ಸ್ವಲ್ಪ ಜೋರಾಗಿಯೇ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿತ್ತು. ಅದು ಬಹುಶಃ ನಿಮ್ಮ ಕಣ್ಣಿಗೂ ಬಿದ್ದಿರುತ್ತದೆ. ಬೆಂಗಳೂರಿನ (Bengaluru) ಜನಪ್ರಿಯ ಸೆಲೆಬ್ರಿಟಿ ಶ್ವಾನ (Celebrity) ಸಾಕಣೆದಾರರಲ್ಲಿ ಒಬ್ಬರಾದ ಕ್ಯಾಡಬಮ್ಸ್ ಕೆನೆಲ್‌ನ ಮಾಲೀಕರು ಹೈದರಾಬಾದ್ ನಿಂದ 20 ಕೋಟಿ ರೂಪಾಯಿ ಕೊಟ್ಟು ಒಂದು ನಾಯಿಯನ್ನು (Dog) ಖರೀದಿಸಿದ್ದಾರೆ ಅನ್ನೋದು ಸುದ್ದಿ.


ಉತ್ತಮ ಗುಣಮಟ್ಟದ ಮತ್ತು ದುಬಾರಿ ನಾಯಿ ತಳಿಗಳನ್ನು ಸಾಕಲು ಹೆಸರುವಾಸಿಯಾಗಿರುವ ಸತೀಶ್, ಸುಮಾರು ಆರು ತಿಂಗಳ ಹಿಂದೆ ಈ ಅಪರೂಪದ ಕೊಕೇಶಿಯನ್ ಶೆಫರ್ಡ್ ತಳಿಯ ನಾಯಿಯನ್ನು ಖರೀದಿಸಿ ತಂದಿದ್ದಾರೆ.
ನ್ಯೂಸ್ 18 ಕೆಲವು ತಜ್ಞರೊಂದಿಗೆ ಮಾತನಾಡಿ, ಈ ಕೊಕೇಶಿಯನ್ ಶೆಫರ್ಡ್ (Caucasian Shepherd) ತಳಿಯ ನಾಯಿಗೆ 20 ಕೋಟಿ ರೂಪಾಯಿ ಕೊಟ್ಟು ಖರೀದಿಸುವಷ್ಟು ದುಬಾರಿಯೇ ಅಂತ ತಿಳಿದುಕೊಳ್ಳಲು ಪ್ರಯತ್ನಿಸಿದೆ. "ಈ ವ್ಯವಹಾರವನ್ನು ಹೇಗೆ ಮಾಡಲಾಯಿತು?


ಹೈದರಾಬಾದ್ ನ ತಳಿಗಾರರಿಂದ ಈ ನಾಯಿಯನ್ನು ತಂದಿದ್ದೇನೆ ಎಂದು ನಾಯಿಯ ಮಾಲೀಕ ಸತೀಶ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಂದೂವರೆ ವರ್ಷದ ಈ ನಾಯಿಗೆ 'ಕ್ಯಾಡಬಮ್ ಹೇಡರ್' ಎಂದು ಹೆಸರಿಡಲಾಗಿದೆ. ಹಲವಾರು ಶ್ವಾನ ಪ್ರದರ್ಶನಗಳಲ್ಲಿಯೂ ಸಹ ಭಾಗವಹಿಸಿ ಅನೇಕ ಪದಕಗಳನ್ನು ಗೆದ್ದಿದೆ ಅಂತ ಹೇಳಿದರು.


ಕೊಕೇಶಿಯನ್ ಶೆಫರ್ಡ್ ನಾಯಿ ಮೂಲತಃ ಯಾವ ದೇಶದ್ದು?


ಕೊಕೇಶಿಯನ್ ಶೆಫರ್ಡ್ ಒಂದು ಗಾರ್ಡ್ ಬ್ರೀಡ್ ನಾಯಿಯಾಗಿದ್ದು, ಇದು ಜಾರ್ಜಿಯಾ, ಅರ್ಮೇನಿಯಾ ಅಜೆರ್ಬೈಜಾನ್, ಒಸ್ಸೆಟಿಯಾ, ಡಾಗೆಸ್ತಾನ್ ಮತ್ತು ರಷ್ಯಾದ ಕೆಲವು ಭಾಗಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಜಾರ್ಜಿಯಾದ ಕಾಕಸಸ್ ಪರ್ವತಗಳು ಐತಿಹಾಸಿಕವಾಗಿ ಕಕೇಶಿಯನ್ ಶೆಫರ್ಡ್ ನಾಯಿಗಳ ಪ್ರಮುಖ ಪ್ರದೇಶವಾಗಿದೆ ಅಂತ ಹೇಳಲಾಗುತ್ತದೆ. ಈ ಪ್ರದೇಶದಲ್ಲಿ ಈ ತಳಿಯ ನಾಯಿಗಳ ಸಂಖ್ಯೆ ತುಂಬಾನೇ ಹೆಚ್ಚಿದೆ ಅಂತ ಹೇಳಬಹುದು.


ಅಮೇರಿಕನ್ ಕೆನ್ನೆಲ್ ಕ್ಲಬ್ ಪ್ರಕಾರ, ಶತಮಾನಗಳಿಂದ ಈ ತಳಿಯನ್ನು ಅತಿಕ್ರಮಣಕಾರರಿಂದ ಆಸ್ತಿಗಳನ್ನು ರಕ್ಷಿಸಲು, ತೋಳಗಳು ಮತ್ತು ದೊಡ್ಡ ಮತ್ತು ಸಣ್ಣ ಪರಭಕ್ಷಕಗಳಿಂದ ಜಾನುವಾರುಗಳನ್ನು ರಕ್ಷಿಸಲು ಮತ್ತು ಇತರ ಅನೇಕ ಕೆಲಸಗಳಿಗಾಗಿ ಬಳಸಲಾಗುತ್ತಿದೆ.


ಈ ತಳಿಯ ನಾಯಿಯ ಬೆಲೆ ಏನಾಗಿರಬಹುದು?


ಹಲವಾರು ವಿಐಪಿಗಳು ಮತ್ತು ಪೊಲೀಸ್ ಇಲಾಖೆಯ ಶ್ವಾನ ವಿಭಾಗದೊಂದಿಗೆ ನಿಕಟವಾಗಿ ಕೆಲಸ ಮಾಡುವ ಶ್ವಾನ ತರಬೇತುದಾರರೊಂದಿಗೆ ನ್ಯೂಸ್ 18 ಮಾತನಾಡಿದ್ದು, ಅವರ ಪ್ರಕಾರ, ಒಂದೂವರೆ ವರ್ಷದ ಕಕೇಶಿಯನ್ ಶೆಫರ್ಡ್ ನಾಯಿಮರಿಯ ಬೆಲೆ 50,000 ರೂಪಾಯಿಗಳಿಂದ ಅಬ್ಬಬ್ಬಾ ಅಂತ ಹೇಳಿದರೆ 1 ಲಕ್ಷ ರೂಪಾಯಿಯವರೆಗೆ ಇರಬಹುದು.


2 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಾಯಿಯನ್ನು ಆಮದು ಮಾಡಿಕೊಳ್ಳುವುದು ಕಾನೂನುಬಾಹಿರವಂತೆ!


ಹಿರಿಯ ಪಶುವೈದ್ಯ ಡಾ. ನಾಗೇಶ್ ರೆಡ್ಡಿ ಮಾತನಾಡಿ, ಕಾನೂನಿನ ಪ್ರಕಾರ ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ನಾಯಿಯನ್ನು ಮತ್ತೊಂದು ದೇಶದಿಂದ ತರಲು ಸಾಧ್ಯವಿಲ್ಲ. ಇದಲ್ಲದೆ, ಸಂತಾನೋತ್ಪತ್ತಿಗಾಗಿ ಯಾವುದೇ ನಾಯಿಯನ್ನು ನಮ್ಮ ದೇಶಕ್ಕೆ ಆಮದು ಮಾಡಿಕೊಳ್ಳುವುದು ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ. ಆದ್ದರಿಂದ ಯಾರಾದರೂ ಈ ನಾಯಿಯನ್ನು ಆಮದು ಮಾಡಿಕೊಂಡಿದ್ದರೆ ಅಥವಾ ನಾಯಿಮರಿಯನ್ನು ಮಾರಾಟ ಮಾಡಲು ಅದನ್ನು ಬೆಳೆಸಿದ್ದರೆ, ಅದನ್ನು ಖಂಡಿತವಾಗಿಯೂ ಕಾನೂನು ಅನುಮೋದಿಸುವುದಿಲ್ಲ" ಎಂದು ಹೇಳಿದರು.


ಇದನ್ನೂ ಓದಿ: Viral Video: ಬೀದಿ ನಾಯಿ ವಿಚಾರಕ್ಕೆ ಬೀದಿಯಲ್ಲೇ ನಾರಿಯರ ಕಿತ್ತಾಟ! ಜುಟ್ಟು ಹಿಡಿದು ರಸ್ತೆ ಮೇಲೆಲ್ಲಾ ರಂಪಾಟ!


ಶ್ವಾನ ಪ್ರೇಮಿ ಚಂದನ್ "ನನ್ನ ಮನೆಯಲ್ಲಿ 3 ನಾಯಿಗಳಿವೆ. ನಾನು ನಾಯಿಗಳನ್ನು ತುಂಬಾನೇ ಪ್ರೀತಿಸುತ್ತೇನೆ. ಯಾರಾದರೂ ನಿಜವಾಗಿಯೂ 20 ಕೋಟಿ ರೂಪಾಯಿಗೆ ಈ ನಾಯಿಯನ್ನು ಖರೀದಿಸಿದ್ದರೆ, ಅವರು ಮೂರ್ಖರಾಗಿರಬೇಕು. ಅಷ್ಟೊಂದು ಬೆಲೆಗೆ ಯಾರು ಖರೀದಿಸುತ್ತಾರೆ? ಅಲ್ಲದೆ, ಯಾರಾದರೂ 20 ಕೋಟಿ ರೂಪಾಯಿಗಳ ರಸೀದಿಯನ್ನು ಕೇಳಿದ್ದಾರೆಯೇ? ವಹಿವಾಟು ಹೇಗೆ ನಡೆಯಿತು? ಅದು ದುಡ್ಡಿನ ಮೂಲಕವೇ" ಅಂತ ಕೇಳಿದ್ದಾರೆ.


"ಭಾರತದಲ್ಲಿ ಅನೇಕ ಕಕೇಶಿಯನ್ ತಳಿಯ ನಾಯಿಗಳಿವೆ, ಬೆಂಗಳೂರಿನಿಂದ 70 ಕಿಲೋ ಮೀಟರ್ ದೂರದಲ್ಲಿರುವ ತುಮಕೂರಿನಲ್ಲಿ ಒಂದು ಇದೆ. ಇದು ಅಪರೂಪವಾಗಿರಬಹುದು, ಆದರೆ ಹಾಗಂತ ಯಾರೂ ಅದಕ್ಕಾಗಿ ಒಂದು ಲಕ್ಷಕ್ಕಿಂತ ಹೆಚ್ಚು ಪಾವತಿಸಿರುವುದಿಲ್ಲ ಎಂದು ನನಗೆ ಖಾತ್ರಿಯಿದೆ " ಎಂದು ನಾಯಿ ನಡವಳಿಕೆ ತಜ್ಞ ಹೇಳಿದರು.

Published by:Divya D
First published: