ನಿಮಿಷಗಳಲ್ಲಿ ಟನ್​ಗಟ್ಟಲೆ ಕಸವನ್ನು ಬೇರ್ಪಡಿಸೋ ಯಂತ್ರ ತಯಾರಿಸಿರುವ 25ರ ಯುವತಿ, ಈ ಯಂತ್ರಕ್ಕೀಗ ವಿಶ್ವದೆಲ್ಲೆಡೆ ಭಾರೀ ಡಿಮ್ಯಾಂಡ್ !

2016ರಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಕಲಿಯುತ್ತಿದ್ದಾಗಲೇ ಈ ಬಗ್ಗೆ ಆಲೋಚನೆ ಮಾಡಿದ್ದ ನಿವೇದಾಗೆ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಒಳ್ಳೆಯ ಉದ್ಯೋಗ ಅವಕಾಶ ಸಿಕ್ಕಿತ್ತು. ಅಷ್ಟರಲ್ಲಿ ಕಸದ ಸಮಸ್ಯೆ ಇಷ್ಟೊಂದು ದೊಡ್ಡದಾಗೋಕೆ ಕಾರಣ ಅದರ ಅಸಮರ್ಪಕ ವಿಂಗಡನೆ ಎನ್ನುವುದನ್ನು ಅರಿತ ಆಕೆ ಕಸ ವಿಂಗಡಿಸೋ ಯಂತ್ರವನ್ನು ತಾನೇ ಸ್ವತಃ ಡಿಸೈನ್ ಮಾಡಿ ನಿರ್ಮಿಸಿದ್ರು. ಒಳ್ಳೆ ಕೆಲಸ ಸಿಕ್ಕಿದೆ, ಕೆಲವು ವರ್ಷ ಕೆಲಸ ಮಾಡಿ ನಂತರ ಈ ಪ್ರಾಜೆಕ್ಟ್ ಮುಂದುವರೆಸಿದ್ರಾಯ್ತು ಎಂದುಕೊಂಡಿದ್ರಂತೆ ನಿವೇದಾ. ಆದ್ರೆ ಆಕೆಯ ತಾಯಿ ಮಾತ್ರ ಹಾಗಂದುಕೊಳ್ಳಲಿಲ್ಲ.

ನಿವೇದಾ ಆರ್ ಎಂ

ನಿವೇದಾ ಆರ್ ಎಂ

  • Share this:
Startup Story (ಏಪ್ರಿಲ್ 12): ಬೆಂಗಳೂರಿನ ಎಂದೂ ಮುಗಿಯದ ಸಮಸ್ಯೆ ಯಾವ್ದು ಅಂತ ಯಾಋನ್ನಾದ್ರೂ ಕೇಳಿದ್ರೆ `ಕಸ’ ಅಂತ ಸ್ವಲ್ಪವೂ ಯೋಚಿಸದೇ ಹೇಳಿಬಿಡಬಹುದು. ಅಷ್ಟರಮಟ್ಟಿಗೆ ಇದು ಜನರನ್ನು ಕಾಡುತ್ತಿದೆ. ಆದ್ರೆ ಕಸ ನಮ್ಮ ಮನೆಗಳಿಂದ ಹೊರ ಹೋದ ಮೇಲೆ ಸುತ್ತಿ ಬಳಸಿ ಹೋಗಿ ಬೀಳೋದು ಊರಿಂದ ಹೊರಗಿರುವ ರಾಶಿಯಲ್ಲೇ. ಈ ಕಸವನ್ನು ಅಲ್ಲಿವರಗೆ ಕಳಿಸದೆ ನಡುವೆಯೇ ನಾಶ ಮಾಡೋ ಹಾಗಾದ್ರೆ ಎಷ್ಟು ಚೆನ್ನಾಗಿರುತ್ತಲ್ವಾ? ನಾಶ ಮಾಡೋದು ಅಂದ್ರೆ ಸುಡೋದು, ಹೂಳೋದು ಅಲ್ಲ…ಆ ಕಸದಿಂದಲೂ ಹಣ ಬರುವಂಥಾ ಮಾರ್ಗ ಹುಡುಕಬೇಕು. ಆಗ ಕಸ ಸಮಸ್ಯೆಯಾಗಿ ಉಳಿಯುವುದಿಲ್ಲ. ಹೀಗೆಲ್ಲಾ ವಿದ್ಯಾರ್ಥಿಯಾಗಿದ್ದಾಗ್ಲೇ ಯೋಚಿಸಿ ಅದಕ್ಕೊಂದು ಸಖತ್ ಪರಿಹಾರವನ್ನೂ ಹುಡುಕಿದ ಯುವತಿಯ ಹೆಸರು ನಿವೇದಾ ಆರ್​ ಎಂ, ಮತ್ತು ಆಕೆಯ ವಯಸ್ಸು 25.

2016ರಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಕಲಿಯುತ್ತಿದ್ದಾಗಲೇ ಈ ಬಗ್ಗೆ ಆಲೋಚನೆ ಮಾಡಿದ್ದ ನಿವೇದಾಗೆ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಒಳ್ಳೆಯ ಉದ್ಯೋಗ ಅವಕಾಶ ಸಿಕ್ಕಿತ್ತು. ಅಷ್ಟರಲ್ಲಿ ಕಸದ ಸಮಸ್ಯೆ ಇಷ್ಟೊಂದು ದೊಡ್ಡದಾಗೋಕೆ ಕಾರಣ ಅದರ ಅಸಮರ್ಪಕ ವಿಂಗಡನೆ ಎನ್ನುವುದನ್ನು ಅರಿತ ಆಕೆ ಕಸ ವಿಂಗಡಿಸೋ ಯಂತ್ರವನ್ನು ತಾನೇ ಸ್ವತಃ ಡಿಸೈನ್ ಮಾಡಿ ನಿರ್ಮಿಸಿದ್ರು. ಒಳ್ಳೆ ಕೆಲಸ ಸಿಕ್ಕಿದೆ, ಕೆಲವು ವರ್ಷ ಕೆಲಸ ಮಾಡಿ ನಂತರ ಈ ಪ್ರಾಜೆಕ್ಟ್ ಮುಂದುವರೆಸಿದ್ರಾಯ್ತು ಎಂದುಕೊಂಡಿದ್ರಂತೆ ನಿವೇದಾ. ಆದ್ರೆ ಆಕೆಯ ತಾಯಿ ಮಾತ್ರ ಹಾಗಂದುಕೊಳ್ಳಲಿಲ್ಲ.

ಒಂದು ವರ್ಷದವರಗೆ ಈ ಪ್ರಯತ್ನ ಮಾಡು. ಎಲ್ಲರೂ ಇದನ್ನು ಸಮಸ್ಯೆಯಾಗೇ ನೋಡ್ತಾ ಹೋದ್ರೆ ಪರಿಹಾರ ಹುಡುಕೋದು ಯಾರು ಎಂದು ನಿವೇದಾರನ್ನು ಹುರಿದುಂಬಿಸಿದ್ರು. ಆರಂಭಿಕ ಪ್ರೊಟೋಟೈಪ್ ಮಾಡೋಕೆ ತಾನು ಉಳಿಸಿದ್ದ 2 ಲಕ್ಷ ರೂಪಾಯಿ ಹಣವನ್ನೂ ನೀಡಿದ್ರು. Trashbot ಎನ್ನುವ ಚಮತ್ಕಾರಿ ಯಂತ್ರದ ಆರಂಭ ಆಗಿದ್ದು ಹಾಗೆ. ಮೊದಲು ಕರ್ನಾಟಕ ರಾಜ್ಯ ಸರ್ಕಾರದ ನೂತನ ಆವಿಷ್ಕಾರಗಳಿಗೆ ಬೆಂಬಲ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ 10 ಲಕ್ಷ ರೂಪಾಯಿ ಹೂಡಿಕೆ ಗೆದ್ದರು ನಿವೇದಾ. ಅಲ್ಲಿಂದ ಶುರುವಾದ ಅವರ ಪಯಣ ಇಂದು ಕೋಟಿಗಟ್ಟಲೆ ವಹಿವಾಟು ನಡೆಸುವ ದೊಡ್ಡ ಸಂಸ್ಥೆಯಾಗಿ ಬೆಳೆದಿದೆ.

Bengaluru girl innovation segregates tonnes of waste in minutes and every big company wants to buy it
ಕಸ ವಿಂಗಡಿಸುವ ಯಂತ್ರ


ಹಸಿ ಮತ್ತು ಒಣಕಸ ಎರಡನ್ನೂ ಒಟ್ಟಾಗಿ ಈ ಯಂತ್ರದೊಳಗೆ ಹಾಕಿದಾಗ ಮೊದಲು ಆಯಸ್ಕಾಂತದ ಬೆಲ್ಟ್​ ಕಸದೊಳಗಿನ ಬ್ಯಾಟರಿ, ಮೊಳೆ ಮುಂತಾದ ಎಲ್ಲಾ ಲೋಹವನ್ನು ಎಳೆದುಕೊಳ್ಳುತ್ತದೆ. ಉಳಿದ ವಸ್ತುಗಳನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಲು ಕನ್ವೆಯರ್ ಬೆಲ್ಟ್ ಮೇಲೆ ಸಾಗುತ್ತದೆ. ನಂತರ ಹೆಚ್ಚಿನ ಒತ್ತಡ ಮತ್ತು ವೇಗವಿರುವ ಫ್ಯಾನ್​ ಎದುರು ತುಂಡಾದ ಕಸದ ರಾಶಿ ಬೀಳುತ್ತದೆ. ಆಗ ಮಣ್ಣಿನಲ್ಲಿ ಕರಗುವ ಮತ್ತು ಕರಗದ ಕಸಗಳು ಬೇರೆಯಾಗುತ್ತವೆ. ಒಂದು ಭಾಗ ಗೊಬ್ಬರವಾಗಿ ಗಿಡಗಳಿಗೆ ಅಥವಾ ಬಯೋಗ್ಯಾಸ್ ಬಳಕೆಗೆ ಪ್ರಯೋಜನಕಾರಿಯಾಗುತ್ತದೆ.

ಎಲ್ಲೂ ಕರಗದ ಮತ್ತೊಂದು ವಿಭಾಗವೇ ಯಾವಾಗಲೂ ತಲೆನೋವು ತರುವುದು. ಅದಕ್ಕೊಂದು ಅದ್ಭುತ ಪರಿಹಾರ ಕಂಡುಹಿಡಿದಿರುವ ನಿವೇದಾ ಈ ಎಲ್ಲಾ ವಸ್ತುಗಳಿಂದ ಪ್ಲೈವುಡ್​ನ್ನು ಹೋಲುವ ಶೀಟ್​ಗಳನ್ನು ತಯಾರಿಸುತ್ತಾರೆ. ಇವು ಪ್ಲೈವುಡ್​ಗಿಂದ ಅರ್ಧದಷ್ಟು ಕಡಿಮೆ ಬೆಲೆಗೆ ಸಿಗುವುದು ಮಾತ್ರವಲ್ಲ, ಅದರಷ್ಟೇ ಗಟ್ಟಿಯಾಗಿರುತ್ತದೆ. ಈಗಾಗಲೇ ಈ ಶೀಟ್​ಗಳಿಂದ ಶಾಲೆಯ ಬೆಂಚ್, ಡೆಸ್ಕ್ ಮುಂತಾದ ಪೀಠೋಪಕರಣಗಳನ್ನು ತಯಾರಿಸಿ ಗ್ರಾಮೀಣ ಭಾಗದ 3000ಕ್ಕೂ ಹೆಚ್ಚು ಶಾಲೆಗಳಿಗೆ ಸರಬರಾಜು ಮಾಡಿದ್ದಾರಿವರು. ಅಲ್ಲಿಯ ಮಕ್ಕಳು ನಿಮ್ಮ ಶಾಲೆಯ ಬೆಂಚ್ ಎಲ್ಲಿಂದ ಬಂತು ಅಂದರೆ ಮನೆಯಲ್ಲಿ ನಾವು ಬಿಸಾಡಿದ ಕವರ್ ಫ್ಯಾಕ್ಟರಿಗೆ ಹೋಗಿ ನಮಗೆ ಬೆಂಚ್ ಆಗಿ ಬದಲಾಗಿ ಬಂತು ಎನ್ನುವಾಗ ತಾನು ಮಾಡಿದ್ದೆಲ್ಲಾ ಸಾರ್ಥಕ ಎನಿಸುತ್ತದಂತೆ ನಿವೇದಾಗೆ.

Bengaluru girl innovation segregates tonnes of waste in minutes and every big company wants to buy it
ಕಸದಿಂದ ತಯಾರಿಸಿದ ಬುಕ್ ಶೆಲ್ಫ್


ಕಸದ ಬಗ್ಗೆ ಬದಲಾಗಬೇಕಿರುವುದು ಜನರ ಆಲೋಚನೆ ಎನ್ನುತ್ತಾರೆ ಆಕೆ. ಆರಂಭದಲ್ಲಿ ತಾನೊಬ್ಬಳೇ ಸಂಸ್ಥೆಯನ್ನು ಶುರುಮಾಡಿದಾಗಿನಿಂದ ಇಂದು 5 ವರ್ಷಗಳ ನಂತರ 60 ಜನರ ತಂಡ ಇರುವುದು ಖಂಡಿತವಾಗಿಯೂ ಆಕೆಗೆ ಹೆಮ್ಮೆಯ ವಿಚಾರವೇ. ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವ ಈಕೆಯ ಪ್ರಯತ್ನಕ್ಕೆ ಸಾಥ್ ಕೊಟ್ಟಿದ್ದು ಚಾರ್ಟೆಡ್ ಅಕೌಂಟೆಂಟ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿಯರ್ ಆಗಿರುವ ಸೌರಭ್ ಜೈನ್. ಸಮಾಜದ ಒಳಿತಿಗೆ ಈ ಕೆಲಸ ಮಾಡಲೇಬೇಕು ಎನ್ನುವ ಹಂಬಲದಲ್ಲಿ ತಾನೇ ಕಟ್ಟಿ ಬೆಳೆಸಿದ ಸಂಸ್ಥೆಯಿಂದ ಹೊರಬಂದು Trashcon ಜೊತೆಗೆ ನಿಂತಿದ್ದಾರೆ ಸೌರಭ್. ಅನೇತ ತಾಂತ್ರಿಕ ವಿಚಾರಗಳಲ್ಲಿ ಸೌರಭ್ ಮಾರ್ಗದರ್ಶನ ನಿವೇದಾಗೆ ಅತ್ಯವಶ್ಯಕವಾಗಿತ್ತಂತೆ.

2020-21 ವರ್ಷದಲ್ಲಿ 8.5 ಕೋಟಿ ವ್ಯವಹಾರ ಮಾಡಿರುವ ಈ ಸಂಸ್ಥೆ ಇನ್ನೆರಡು ತಿಂಗಳಲ್ಲಿ 1.7 ಕೋಟಿ ರೂಪಾಯಿಯ ವಹಿವಾಟು ನಿರ್ವಹಿಸುತ್ತಿದೆ. ಅಮ್ಮ ನೀಡಿದ 2 ಲಕ್ಷ ರೂಪಾಯಿಯಲ್ಲಿ ಶುರುವಾದ ಈ ಕೆಲಸಕ್ಕೆ ಈಗ World Bank ಮತ್ತು Unikted Kingdomನ ಸರ್ಕಾರಗಳು ಹೂಡಿಕೆ ಮಾಡುತ್ತಿವೆ. ಭಾರತದಾದ್ಯಂತ 15 ತಯಾರಿಕಾ ಘಟಕಗಳನ್ನು ಹೊಂದಿರುವ ಈ ಸಂಸ್ಥೆ ಸದ್ಯ ಥೈಲ್ಯಾಂಡ್, ಇಂಡೊನೇಷ್ಯಾ ಮತ್ತು ಸಿಂಗಾಪುರ ದೇಶಗಳೊಡನೆ ಒಡಂಬಡಿಕೆ ಮಾಡಿಕೊಂಡಿದೆ. Cadbury, Unilever ಮುಂತಾದ ದೊಡ್ಡ ಕಂಪೆನಿಗಳು ಇವರ ಬಳಿ ಕಸ ವಿಂಗಡನೆಯ ಯಂತ್ರಗಳನ್ನು ಕೊಳ್ಳುತ್ತಿವೆ.

ಹೆಚ್ಚು ವಿದ್ಯಾಭ್ಯಾಸವಿಲ್ಲದ ವರ್ಗ ಕಸ ವಿಂಗಡನೆಯನ್ನು ಮಾಡುತ್ತದೆ. ಆ ವರ್ಗದ ಜನರಿಗೆ ಹೆಚ್ಚು ಶ್ರಮವಿಲ್ಲದೆ ತಮ್ಮ ಕೆಲಸ ಆಗುವಂತೆ ಮಾಡಿದೆ Trashcon. ಅವರಿಗೆ ಗೌರವಯುವತವಾಗಿ ಬಾಳುವ ಒಂದು ಅವಕಾಶ ತಾವು ನೀಡಲು ಸಾಧ್ಯವಾಯ್ತಲ್ಲಾ, ಅದೇ ಖುಷಿ ಎನ್ನುತ್ತಾರೆ ನಿವೇದಾ.
Published by:Soumya KN
First published: