Bengaluru: ವೀಕೆಂಡ್​ನಲ್ಲಿ ರ್‍ಯಾಪಿಡೋ ಓಡಿಸುವ ಎಂಜಿನಿಯರ್! ಹೀಗೇಕೆ ಮಾಡ್ತಾರೆ ಗೊತ್ತಾ?

ನಿಖಿಲ್ ಸೇಠ್ ಎಂಬುವವರು ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದು, ವಾರಾಂತ್ಯದಲ್ಲಿ ರ್‍ಯಾಪಿಡೋ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಅರೇ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿ ವಾರಾಂತ್ಯದಲ್ಲಿ ವಿಶ್ರಾಂತಿ ಪಡೆಯುವ ಬದಲು ಡ್ರೈವರ್ ಆಗಿ ಕೆಲಸಕ್ಕೆ ಇಳಿದಿದ್ದಾರೆ.

ರ್‍ಯಾಪಿಡೋ ಡ್ರೈವರ್ ಆಗಿ ಕೆಲಸ ಮಾಡುವ ಎಂಜಿನಿಯರ್

ರ್‍ಯಾಪಿಡೋ ಡ್ರೈವರ್ ಆಗಿ ಕೆಲಸ ಮಾಡುವ ಎಂಜಿನಿಯರ್

  • Share this:
ಸಾಮಾನ್ಯವಾಗಿ ಈ ಸಾಫ್ಟ್‌ವೇರ್ ಕಂಪನಿಗಳಲ್ಲಿ (Software Company) ಕೆಲಸ ಮಾಡುವ ಎಂಜಿನಿಯರ್ ಗಳು (Engineer) ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕೆಲಸ ನಿರ್ವಹಿಸುತ್ತಾರೆ ಹಾಗೂ ವಾರಾಂತ್ಯಗಳ ರಜೆಯನ್ನು (Holiday) ಪಡೆಯುತ್ತಾರೆ ಅಂತ ನಮಗೆಲ್ಲಾ ತಿಳಿದೇ ಇದೆ. ಹೀಗೆ ವಾರವಿಡಿ ಕೆಲಸ ಮಾಡಿ ಸುಸ್ತಾದ ಕೆಲ ಉದ್ಯೋಗಿಗಳು ವಾರಾಂತ್ಯದಲ್ಲಿ ಮನೆಯಿಂದ ಹೊರಗೆ ಹೋಗದೆ ವಿಶ್ರಾಂತಿ ಪಡೆದರೆ, ಇನ್ನೂ ಕೆಲವರು ಶುಕ್ರವಾರ ಸಂಜೆಯಿಂದಲೇ ವಿಕೇಂಡ್ (Weekend) ಎಂದರೆ ವಾರಾಂತ್ಯ ಶುರು ಅಂತ ಪಾರ್ಟಿ (Party) ಮಾಡಿ ಮನೆಯಲ್ಲಿ ಶನಿವಾರ ತಡವಾಗಿ ಎದ್ದೇಳುತ್ತಾರೆ ಮತ್ತು ಆ ಇಡೀ ದಿನ ವಿಶ್ರಾಂತಿ ಪಡೆದು ಭಾನುವಾರ ಸ್ವಲ್ಪ ಸುತ್ತಾಡಲು ಎಲ್ಲಾದರೂ ಹೊರಗಡೆ ಹೋಗುತ್ತಾರೆ.

ಕೆಲವೊಮ್ಮೆ ಈ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾಡುವ ಕೆಲಸ ಕೆಲವರಿಗೆ ಕೆಲ ವರ್ಷಗಳು ಕಳೆದ ನಂತರ ಬೋರ್ ಅಂತಾನೂ ಅನ್ನಿಸುವುದಕ್ಕೆ ಶುರುವಾಗುತ್ತದೆ. ಆಗ ಜನರು ಆ ಏಕತಾನತೆಯನ್ನು ಮುರಿಯಲು ರಜೆಗೆ ಹೊರ ಹೋಗಿ ಬರುತ್ತಾರೆ, ಅನೇಕರು ತಮ್ಮ ಮನಸ್ಸನ್ನು ವಿಶ್ರಾಂತಿಗೊಳಿಸಲು ತಮ್ಮ ಬಿಡುವಿನ ಸಮಯವನ್ನು ಜಿಮ್, ಟ್ರೆಕ್ಕಿಂಗ್, ಕ್ಯಾಂಪಿಂಗ್ ಅಥವಾ ಪಾರ್ಟಿಗಳಲ್ಲಿ ಕಾಲ ಕಳೆಯುತ್ತಾರೆ. ಆದರೆ ಇಲ್ಲೊಬ್ಬ ಟ್ವಿಟ್ಟರ್ ಬಳಕೆದಾರಾದ ನಿಖಿಲ್ ಸೇಠ್ ಎಂಬುವವರು ಒಬ್ಬ ವ್ಯಕ್ತಿಯನ್ನು ಭೇಟಿಯಾದರು.

ವಾರಾಂತ್ಯದಲ್ಲಿ ರ್‍ಯಾಪಿಡೋ ಡ್ರೈವರ್ ಆಗಿ ಕೆಲಸ ಮಾಡೋದು ಯಾಕೆ?
ನಿಖಿಲ್ ಸೇಠ್ ಎಂಬುವವರು ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದು, ವಾರಾಂತ್ಯದಲ್ಲಿ ರ್‍ಯಾಪಿಡೋ ಚಾಲಕನಾಗಿ ಕೆಲಸ ಮಾಡುತ್ತಿರುವುದು ತಿಳಿಯಿತು. ಅರೇ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿ ವಾರಾಂತ್ಯದಲ್ಲಿ ವಿಶ್ರಾಂತಿ ಪಡೆಯುವ ಬದಲು ಡ್ರೈವರ್ ಆಗಿ ಕೆಲಸಕ್ಕೆ ಇಳಿದಿದ್ದಾರೆ ಅಂತ ನೀವು ಆಶ್ಚರ್ಯ ಪಡಬಹುದು. ಆದರೆ ಈ ಹಿಂದಿನ ಕಾರಣ ತಿಳಿದಿದರೆ ನಿಮಗೆ ಖುಷಿ ಆಗುವುದಂತೂ ಖಂಡಿತ. ಈ ಎಂಜಿನಿಯರ್ ಅವರ ಹವ್ಯಾಸ ಮತ್ತು ಸ್ವಲ್ಪ ಹಣ ಗಳಿಕೆ ಮಾಡುವ ಮಾರ್ಗ ತುಂಬಾನೇ ಅನನ್ಯವಾಗಿತ್ತು ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಇದನ್ನೂ ಓದಿ: Traffic Challan: ಬೈಕ್​ನಲ್ಲಿ ಪೆಟ್ರೋಲ್ ಇಲ್ಲದಿದ್ರೂ ಪೊಲೀಸರು ದಂಡ ಹಾಕಬಹುದೇ?

ಟ್ವಿಟ್ಟರ್ ಬಳಕೆದಾರರು ಇತ್ತೀಚೆಗೆ ರ್‍ಯಾಪಿಡೋ ಸವಾರಿಯನ್ನು ಬುಕ್ ಮಾಡಿದ್ದಾರೆ, ಅವರ ಚಾಲಕ ಬೆಂಗಳೂರಿನ ಮೈಕ್ರೋಸಾಫ್ಟ್ ಕಂಪನಿಯ ಎಸ್‌ಡಿಇಟಿ ಹುದ್ದೆಯಲ್ಲಿ ಕೆಲಸ ಮಾಡುವ ಸುಶಿಕ್ಷಿತ ಎಂಜಿನಿಯರ್ ಎಂದು ಕಂಡುಕೊಂಡರು.

ಹೊಸ ಹೊಸ ಜನರನ್ನು ಭೇಟಿ ಮಾಡುವುದೇ ಇದರ ಉದ್ದೇಶವಂತೆ
ಟ್ವಿಟ್ಟರ್ ಬಳಕೆದಾರರು ಹಂಚಿಕೊಂಡಿರುವ ಈ ಘಟನೆಯನ್ನು ಗಮನಿಸಿದಾಗ, ರ್‍ಯಾಪಿಡೋ ಡ್ರೈವರ್ ಆಗಿ ಕೆಲಸ ಮಾಡುವ ಎಂಜಿನಿಯರ್ ಗೆ ತುಂಬಾ ಜನರು ಸ್ನೇಹಿತರು ಇರಲಿಕ್ಕಿಲ್ಲ ಅಂತ ನಾವು ಅಂದು ಕೊಳ್ಳಬಹುದು. ಆ ವ್ಯಕ್ತಿಗೆ ಹೆಚ್ಚು ಜನರು ಮಾತನಾಡಲು ಸಿಗುತ್ತಿರಲಿಲ್ಲ, ಆದ್ದರಿಂದ ಈ ಕೆಲಸದಲ್ಲಿ ಹೊಸ ಹೊಸ ಜನರನ್ನು ಭೇಟಿ ಮಾಡಬಹುದು, ಮಾತನಾಡಲು ಅವಕಾಶ ಸಿಗುತ್ತದೆ ಎಂಬುದು ಇವರ ಅಭಿಪ್ರಾಯವಾಗಿದೆ.

ಈ ವೈರಲ್ ಕಥೆಯ ಪ್ರಕಾರ, ಈ ಅಪರಿಚಿತ ವ್ಯಕ್ತಿ ಮೈಕ್ರೋಸಾಫ್ಟ್ ನಲ್ಲಿ ಕೆಲಸ ಮಾಡುತ್ತಿದ್ದು, ವಾರಾಂತ್ಯದಲ್ಲಿ ರ್‍ಯಾಪಿಡೋ ಚಾಲಕನಾಗಿ ಕೆಲಸ ಮಾಡುತ್ತಾನೆ. ಅವನು ಇದನ್ನು ಬರೀ ಹೊಸ ಜನರೊಂದಿಗೆ ಮಾತನಾಡಲು ಮಾಡುತ್ತಾನೆ. ಅಂತರ್ಜಾಲದಲ್ಲಿ ಅವರ ಕಥೆಯನ್ನು ಹಂಚಿಕೊಂಡ ನಿಖಿಲ್ ಸೇಠ್ ಅವರು "ನನ್ನ ರ್‍ಯಾಪಿಡೋ ಡ್ರೈವರ್ ಮೈಕ್ರೋಸಾಫ್ಟ್ ನ ಎಸ್‌ಡಿಇಟಿ ಆಗಿದ್ದರು ಮತ್ತು ಅವರು ಜನರೊಂದಿಗೆ ಮಾತನಾಡಲು ಮತ್ತು ವಾರಾಂತ್ಯಗಳಲ್ಲಿ ಹವ್ಯಾಸವಾಗಿ ಈ ಕೆಲಸ ಮಾಡುತ್ತಾರೆ ಎಂದು ಅವರು ನನಗೆ ಹೇಳಿದರು" ಎಂದು ಬರೆದುಕೊಂಡಿದ್ದಾರೆ.

ಟ್ವಿಟ್ಟರ್ ನಲ್ಲಿ ವೈರಲ್ ಪೋಸ್ಟ್ ನೋಡಿ ನೆಟ್ಟಿಗರು ಹೇಳಿದ್ದೇನು?
ಈ ಟ್ವೀಟ್ ಆನ್‌ಲೈನ್ ನಲ್ಲಿ ಕಾಣಿಸಿಕೊಂಡ ತಕ್ಷಣ, ಇದು ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ನಲ್ಲಿ ವಿವಿಧ ಪ್ರತಿಕ್ರಿಯೆಗಳನ್ನು ಪ್ರೇರೇಪಿಸಿತು. ಕೆಲವು ಬಳಕೆದಾರರು ತಮ್ಮ ವಿಲಕ್ಷಣ ಕ್ಯಾಬ್ ಸವಾರಿಯ ಕಥೆಗಳನ್ನು ಹಂಚಿಕೊಂಡರೆ, ಅನೇಕರು ಹಾಸ್ಯಭರಿತ ಮೀಮ್ ಗಳೊಂದಿಗೆ ಕಾಮೆಂಟ್ ವಿಭಾಗವನ್ನು ತುಂಬಿದರು.

ಇದನ್ನೂ ಓದಿ:  Haj 2023: ಹಜ್ ಯಾತ್ರೆಗೆ ಕಾಲ್ನಡಿಗೆಯಲ್ಲೇ ಹೊರಟ ಕೇರಳಿಗ! ಬರೋಬ್ಬರಿ 280 ದಿನ ನಡೆಯಬೇಕಂತೆ!

ಒಮ್ಮೆ ಅವರು ಕ್ಯಾಬ್ ಚಾಲಕನನ್ನು ಕಂಡರು, ಅವರು ಉದ್ಯಮಿ ಎಂದು ಹೇಳಿಕೊಂಡರು ಎಂದು ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಕ್ಯಾಬ್ ಚಾಲನೆಯ ಹಿಂದಿನ ಕಾರಣವನ್ನು ಕೇಳಿದಾಗ, ಉದ್ಯಮಿ ತನ್ನ ಮಕ್ಕಳು ಕೆಲಸದಲ್ಲಿ ತುಂಬಾನೇ ಬ್ಯುಸಿ ಆಗಿದ್ದು, ಅವರೊಂದಿಗೆ ಮಾತನಾಡಲು ಆಗದೆ ಇರುವುದರಿಂದ ಸಮಯವನ್ನು ಕಳೆಯಲು ಈ ಕೆಲಸವನ್ನು ಮಾಡುತ್ತೇನೆ ಎಂದು ವಿವರಿಸಿದರು.
Published by:Ashwini Prabhu
First published: