Swiggy: ಸ್ವಿಗ್ಗಿಯಲ್ಲಿ 75,000 ರೂಪಾಯಿಯ ಫುಡ್ ಆರ್ಡರ್ ಮಾಡಿದ ವ್ಯಕ್ತಿ! ಏನಪ್ಪಾ ಆ ಮೆನು?

ಐಟಿ ಸಿಟಿ ಬೆಂಗಳೂರು ಎಲ್ಲಾದ್ರಲ್ಲೂ ಮುಂದು. ಫುಡ್‌ ಆರ್ಡರ್‌ ನಲ್ಲೂ ದೊಡ್ಡ ಮೊತ್ತದ ಸಿಂಗಲ್‌ ಆರ್ಡರ್‌ ಮಾಡಿರುವ ಕಾರಣಕ್ಕೆ ಆನ್‌ ಲೈನ್‌ ಫುಡ್‌ ಆರ್ಡರ್‌ ನಲ್ಲೂ ಮುಂದಿದೆ ಎಂದು ಸ್ವಿಗ್ಗಿ ಹೇಳಿದೆ.

ಐಟಿ ಸಿಟಿ ಬೆಂಗಳೂರು ಎಲ್ಲಾದ್ರಲ್ಲೂ ಮುಂದು. ಫುಡ್‌ ಆರ್ಡರ್‌ ನಲ್ಲೂ ದೊಡ್ಡ ಮೊತ್ತದ ಸಿಂಗಲ್‌ ಆರ್ಡರ್‌ ಮಾಡಿರುವ ಕಾರಣಕ್ಕೆ ಆನ್‌ ಲೈನ್‌ ಫುಡ್‌ ಆರ್ಡರ್‌ ನಲ್ಲೂ ಮುಂದಿದೆ ಎಂದು ಸ್ವಿಗ್ಗಿ ಹೇಳಿದೆ.

ಐಟಿ ಸಿಟಿ ಬೆಂಗಳೂರು ಎಲ್ಲಾದ್ರಲ್ಲೂ ಮುಂದು. ಫುಡ್‌ ಆರ್ಡರ್‌ ನಲ್ಲೂ ದೊಡ್ಡ ಮೊತ್ತದ ಸಿಂಗಲ್‌ ಆರ್ಡರ್‌ ಮಾಡಿರುವ ಕಾರಣಕ್ಕೆ ಆನ್‌ ಲೈನ್‌ ಫುಡ್‌ ಆರ್ಡರ್‌ ನಲ್ಲೂ ಮುಂದಿದೆ ಎಂದು ಸ್ವಿಗ್ಗಿ ಹೇಳಿದೆ.

  • Trending Desk
  • 3-MIN READ
  • Last Updated :
  • Bangalore, India
  • Share this:

ಟೆಕ್ನಾಲಜಿ ಮುಂದುವರಿದು ಈಗ ಫುಡ್‌ ಆರ್ಡರ್‌ (Food Order) ಮಾಡೋದು ತುಂಬಾನೇ ಸುಲಭ. ಅದಕ್ಕಾಗಿ ಬೇರೆ ಬೇರೆ ಮೊಬೈಲ್‌ ಅಪ್ಲಿಕೇಷನ್‌ ಗಳೂ (Application) ಜನಪ್ರಿಯವಾಗಿವೆ. ಹಾಗಾಗಿ ನಗರಗಳಲ್ಲಂತೂ ಮನೆಗೇ ತರಿಸಿಕೊಂಡು ತಿನ್ನೋದು ಕಾಮನ್‌ ಆಗಿದೆ. ಸುಲಭದಲ್ಲಿ ಬೆರಳ ತುದಿಯಲ್ಲೇ ಸಿಗುವ ಆಪ್ಶನ್‌ ಗಳಿಂದ (Option) ಜನರಿಗೆ ಇದು ರೂಢಿಯಾಗಿಬಿಟ್ಟಿದೆ ಕೂಡ. ಈ ಮಧ್ಯೆ ಸ್ವಿಗ್ಗಿ ಒಂದು ಇಂಟೆರೆಸ್ಟಿಂಗ್‌ ವಿಚಾರ ಬಹಿರಂಗ ಪಡಿಸಿದೆ. ಅದೇನೆಂದರೆ ಈ ವರ್ಷದ ಅತಿದೊಡ್ಡ ಸಿಂಗಲ್‌ ಆರ್ಡರ್‌ ಬಂದಿದ್ದು ಬೆಂಗಳೂರಿನಿಂದ (Bengaluru). ಅದೂ ಬರೋಬ್ಬರಿ 75,378 ರೂ ಮೌಲ್ಯದ್ದು ಎಂದು ಸ್ವಿಗ್ಗಿ ಹೇಳಿದೆ.


ನಮ್ಮ ಐಟಿ ಸಿಟಿ ಬೆಂಗಳೂರು ಎಲ್ಲಾದ್ರಲ್ಲೂ ಮುಂದು. ಫುಡ್‌ ಆರ್ಡರ್‌ ನಲ್ಲೂ ದೊಡ್ಡ ಮೊತ್ತದ ಸಿಂಗಲ್‌ ಆರ್ಡರ್‌ ಮಾಡಿರುವ ಕಾರಣಕ್ಕೆ ಆನ್‌ ಲೈನ್‌ ಫುಡ್‌ ಆರ್ಡರ್‌ ನಲ್ಲೂ ಮುಂದಿದೆ ಎಂದು ಸ್ವಿಗ್ಗಿ ಹೇಳಿದೆ.


ಐಟಿ ಸಿಟಿಯ ತನ್ನ ಅಗ್ರ ಗ್ರಾಹಕ ಅಕ್ಟೋಬರ್‌ನಲ್ಲಿ ದೀಪಾವಳಿ ಸಮಯದಲ್ಲಿ ರೂ 75,378 ಮೌಲ್ಯದ ಸಿಂಗಲ್‌ ಆರ್ಡರ್ ಮಾಡಿದ್ದಾರೆ ಎಂದು ತನ್ನ ಇತ್ತೀಚಿನ ಟ್ರೆಂಡ್ ವರದಿಯಲ್ಲಿ ಬಹಿರಂಗಪಡಿಸಿದೆ.


ಪುಣೆಯ ಮತ್ತೊಬ್ಬ ಗ್ರಾಹಕರು ಹಲವಾರು ಯೂನಿಟ್ ಬರ್ಗರ್ ಮತ್ತು ಫ್ರೈಗಳನ್ನು ಖರೀದಿಸಲು 71229 ರೂ. ಗೆ ಆರ್ಡರ್‌ ಮಾಡಿದ್ದಾರೆ ಎಂದೂ ಸ್ವಿಗ್ಗಿ ತಿಳಿಸಿದೆ.


ಇನ್ನು ಬೆಂಗಳೂರಿನ ಮತ್ತೊಬ್ಬ ಗ್ರಾಹಕರು ಕೇವಲ ಒಂದು ವಾರದಲ್ಲಿ ಗೌರ್ಮೆಟ್ ಭಕ್ಷ್ಯಗಳಿಗಾಗಿ 118 ಆರ್ಡರ್ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.


ಸ್ವಿಗ್ಗಿ ಒನ್‌ ಮೂಲಕ ಹೆಚ್ಚು ಉಳಿಸಿದ ಗ್ರಾಹಕರೂ ಬೆಂಗಳೂರಿನವರೇ!


'Swiggy One' ಅನ್ನೋದು ಚಂದಾದಾರಿಕೆ ಯೋಜನೆಯಾಗಿದ್ದು, ಅದು ಉಚಿತ ವಿತರಣೆ, ಆಕರ್ಷಕ ಬೆಲೆಗಳು ಮತ್ತು ಇತರ ಸವಲತ್ತುಗಳನ್ನು ಒಳಗೊಂಡಿದೆ.


ಬೆಂಗಳೂರಿನ ಜನರು ಸ್ವಿಗ್ಗಿ ಒನ್‌ ಸೇವೆಯನ್ನೂ ಹೆಚ್ಚಾಗಿ ಬಳಸಿಕೊಂಡಿದ್ದಾರೆಂದು ಹೇಳಲಾಗಿದೆ. ಉಚಿತ ಡೆಲಿವರಿಗಳೊಂದಿಗೆ ಸ್ವಿಗ್ಗಿ ಒನ್ ಸೇವೆಯೊಂದಿಗೆ ಹೆಚ್ಚಿನ ಹಣವನ್ನೂ ಉಳಿಸಿದ್ದಾರೆ.


ಇದನ್ನೂ ಓದಿ: Swiggy: ಇನ್ಮುಂದೆ ಸ್ವಿಗ್ಗಿಯಲ್ಲಿ ನಿಮ್ಮ ನೆಚ್ಚಿನ ರೆಸ್ಟೋರೆಂಟ್​ ಇರೋದಿಲ್ಲ, ಕಾರಣ ಇದು!


ಹಾಗಾಗಿ “Swiggy One ಮೂಲಕ ಹೆಚ್ಚು ಉಳಿಸಿದ ಅಗ್ರ ನಗರವಾಗಿ ಬೆಂಗಳೂರು ಹೊರಹೊಮ್ಮಿದೆ. ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಳ್ಳುವುದಲ್ಲದೇ ಬೆಂಗಳೂರಿನ ಸದಸ್ಯರು INR 100 ಕೋಟಿಗಳನ್ನು ಉಳಿಸಿದ್ದಾರೆ.




ಮುಂಬೈ, ಹೈದರಾಬಾದ್ ಮತ್ತು ದೆಹಲಿಯಲ್ಲಿರುವ ಸಾಕಷ್ಟು ಗ್ರಾಹಕರೂ ಕೂಡ ಹೀಗೆಯೇ ಉಳಿಸಿದ್ದಾರೆ. ಅದರಲ್ಲೂ ದೆಹಲಿಯ ಒಬ್ಬ ಸದಸ್ಯರೇ ಅತ್ಯಧಿಕ ಮೊತ್ತ ಅಂದರೆ 2.48 ಲಕ್ಷ ರೂ.ಗಳನ್ನು ಉಳಿಸಿದ್ದಾರೆ ಎಂದು ವರದಿ ತಿಳಿಸಿದೆ.


2022 ರಲ್ಲಿ ಭಾರತೀಯರು ಪ್ರತಿ ನಿಮಿಷಕ್ಕೆ 137 ಪ್ಲೇಟ್‌ಗಳನ್ನು ಆರ್ಡರ್ ಮಾಡಿದ್ದರಿಂದ ಬಿರಿಯಾನಿ ಅತಿಹೆಚ್ಚು ಆರ್ಡರ್‌ ಮಾಡಿದ ಐಟಂ ಆಗಿತ್ತು. “2021 ರಲ್ಲಿ ಗ್ರಾಹಕರು ನಿಮಿಷಕ್ಕೆ 115 ಬಿರಿಯಾನಿಗಳನ್ನು ಆರ್ಡರ್ ಮಾಡುತ್ತಿದ್ದರು. ಇದು 2022 ರಲ್ಲಿ 137 ಕ್ಕೆ ಏರಿದೆ ಎಂದು ಹೇಳಲಾಗಿದೆ.


ನಾನ್‌ವೆಜ್ ಅಡುಗೆ


ಇನ್ನು , ರವಿಯೊಲಿ (ಇಟಾಲಿಯನ್) ಮತ್ತು ಬಿಬಿಂಬಾಪ್ (ಕೊರಿಯನ್) ಜನಪ್ರಿಯ ಆಯ್ಕೆಗಳಾಗಿ ಹೊರಹೊಮ್ಮಿವೆ ಎಂದು ವರದಿ ಹೇಳಿದೆ. ಅಲ್ಲದೇ ಮಸಾಲಾ ದೋಸೆ ಎರಡನೇ ಅತಿ ಹೆಚ್ಚು ಆರ್ಡರ್ ಮಾಡಿದ ಭಕ್ಷ್ಯವಾಗಿದೆ. ಚಿಕನ್ ಫ್ರೈಡ್ ರೈಸ್ ಮೂರನೇ ಸ್ಥಾನದಲ್ಲಿದೆ. ನಾಲ್ಕು ಮಿಲಿಯನ್ ಆರ್ಡರ್‌ಗಳೊಂದಿಗೆ, ಸಮೋಸಾ ವರ್ಷದ ಅಗ್ರ ತಿಂಡಿಯಾಗಿದೆ.




ಇಷ್ಟಲ್ಲದೇ 29.86 ಲಕ್ಷಕ್ಕೂ ಹೆಚ್ಚು ಆರ್ಡರ್‌ಗಳೊಂದಿಗೆ ಚಿಕನ್ ಹೆಚ್ಚು ಆರ್ಡರ್ ಮಾಡಿದ ಮಾಂಸದ ವಸ್ತುವಾಗಿದೆ. ಮಾಂಸ ವಿತರಣಾ ವಿಭಾಗದಲ್ಲಿ ಬೆಂಗಳೂರು ನಂ. 1 ಅದರ ನಂತರದ ಸ್ಥಾನ ಹೈದರಾಬಾದ್ ಮತ್ತು ಚೆನ್ನೈ ಪಡೆದುಕೊಂಡಿವೆ.


ಈ ಮಧ್ಯೆ, ಇಟಾಲಿಯನ್ ರವಿಯೊಲಿ ಮತ್ತು ಕೊರಿಯನ್ ಬಿಬಿಂಬಾಪ್‌ನಂತಹ ಭಕ್ಷ್ಯಗಳು ಈ ವರ್ಷದ ಅತ್ಯಂತ ಜನಪ್ರಿಯ ವಿದೇಶಿ ಆಯ್ಕೆಗಳಾಗಿವೆ ಎಂದು ಸ್ವಿಗ್ಗಿ ಹೇಳಿದೆ.

First published: