MTR ಈಗ Londonನಲ್ಲೂ ಶುರುವಾಗಿದೆ, ಅಲ್ಲಿನ್ನು ದಕ್ಷಿಣ ಭಾರತದ ಖಾದ್ಯಗಳ ರುಚಿ ಹೆಚ್ಚಲಿದೆ!

ಬೆಂಗಳೂರಿನಲ್ಲಿ ಎಂಟಿಆರ್‌ನ 8 ಶಾಖೆಗಳಿವೆ. ಇನ್ನು, ಮೈಸೂರು ಮತ್ತು ಉಡುಪಿಯಲ್ಲಿ ತಲಾ ಒಂದು ಶಾಖೆಯಿದೆ. ಸಿಂಗಾಪುರ ಮತ್ತು ದುಬೈನಲ್ಲಿ ಸಹ 2015ರಲ್ಲಿ ತಲಾ ಒಂದೊಂದು ಶಾಖೆ ತೆರೆಯಲಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಬೆಂಗಳೂರಿಗರ ಹಾಟ್ ಫೇವರೇಟ್ ರೆಸ್ಟೋರೆಂಟ್ ಮಾವಳ್ಳಿ ಟಿಫಿನ್ (Mavalli Tiffin Rooms) ರೂಮ್ಸ್ (MTR) ಇಂಗ್ಲೆಂಡ್‌ನ ಲಂಡನ್‌ನಲ್ಲಿ ತೆರೆದಿದೆ. ಸುಮಾರು ಒಂದು ಶತಮಾನದಿಂದ ಬೆಂಗಳೂರಿನಲ್ಲಿ ಎಂಟಿಆರ್ ಹೋಟೆಲ್ ಹೆಸರುವಾಸಿಯಾಗಿದೆ. ಇಲ್ಲಿ ಸಿಗುವ ಕಾಫಿ, ಟೀ, ಇಡ್ಲಿ, ದೋಸೆ, ಊಟ ಮತ್ತು ಇತರ ವಿಶೇಷತೆ ಭೋಜನಕ್ಕೆ ಎಂಟಿಆರ್ ಹೋಟೆಲ್ಲೇ ಸಾಟಿ. ಸದ್ಯ ಮಾವಳ್ಳಿ ಟಿಫಿನ್ ರೂಮ್ಸ್ ತನ್ನ ರುಚಿಯನ್ನು ವಿದೇಶಕ್ಕೆ ಪಸರಿಸಲು ಸಜ್ಜಾಗಿದೆ. ಲಂಡನ್‌ನ ಹೈರೋ ಪ್ರದೇಶದಲ್ಲಿ ಎಂಟಿಆರ್ ಶಾಖೆ ತೆರೆದಿದೆ. ಈ ಪ್ರದೇಶದಲ್ಲಿ ಈಗಾಗ್ಲೆ ಇರುವ ನಮ್ಮ ದಕ್ಷಿಣ ಭಾರತದ ಸರವಣ ಭವನ (Saravana Bhavan) ಸೇರಿದಂತೆ ಹೈರೋದಲ್ಲಿ ಇತರೆ ರೆಸ್ಟೋರೆಂಟ್‌ಗಳಿಗೆ ಎಂಟಿಆರ್ ಹೋಟೆಲ್ ಕಠಿಣ ಸ್ಪರ್ಧೆ ನೀಡಲು ಸಜ್ಜಾಗಿದೆ. ಈ ಬಗ್ಗೆ ಮಾತನಾಡಿರುವ ಎಂಟಿಆರ್ ರೆಸ್ಟೋರೆಂಟ್‌ಗಳ(Restaurant) ನಿರ್ವಹಣಾ ಪಾಲುದಾರರಾಗಿರುವ ಹೇಮಾಮಾಲಿನಿ ಮಯ್ಯ (Hemamalini Mayya) “ವಿದೇಶದಲ್ಲಿರುವ ರೆಸ್ಟೋರೆಂಟ್‌ಗಳನ್ನು ನಮ್ಮ ಪರಿಕಲ್ಪನೆಯಲ್ಲಿ ಆಸಕ್ತಿ ಹೊಂದಿರುವ ಸ್ನೇಹಿತರು ನಡೆಸುತ್ತಿದ್ದಾರೆ' ಎಂದು ತಿಳಿಸಿದ್ದಾರೆ.

ಎಂಟಿಆರ್ 1924
MTR ತನ್ನ ಸುವಾಸನೆ, ಗುಣಮಟ್ಟ, ಶುಚಿತ್ವ ಮತ್ತು ಹೋಟೆಲ್‌ನ ವಾತಾವರಣದಿಂದಲೇ ಪ್ರಸಿದ್ಧಿ ಪಡೆದಿದೆ. ಇದಕ್ಕೆ ಅನುಗುಣವಾಗಿ, ಲಂಡನ್ ಶಾಖೆಯಲ್ಲೂ ಕರ್ನಾಟಕದಲ್ಲಿರುವಂತೆ MTR ಹೋಟೆಲ್ ಗೋಡೆಗಳ ಮೇಲೆ MTR ಇತಿಹಾಸವನ್ನು ಹೊಂದಿರುವ, ಸಾಂಪ್ರದಾಯಿಕ ಕೆಂಪು ಗೋಡೆ ಮತ್ತು ಒಳಾಂಗಣಗಳನ್ನು ಮಾಡಿದ್ದಾರೆ.

ಲಂಡನ್‌ನಲ್ಲಿ ಗ್ರ್ಯಾನೈಟ್ ಟೇಬಲ್ ಸಿಗುವುದು ಕಷ್ಟವಾಗಿದೆ. ಹೀಗಾಗಿ ಗ್ರ್ಯಾನೈಟ್‌ನಂತೆ ಕಾಣುವ ಟೇಬಲ್‌ಗಳನ್ನು ಅಳವಡಿಸಿದ್ದೇವೆ ಎಂದು ಮಯ್ಯ ತಿಳಿಸಿದ್ದಾರೆ. 98 ವರ್ಷಗಳ ಹಿಂದೆ ಮಾವಳ್ಳಿ ಟಿಫಿನ್ ರೂಮ್ಸ್ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಆರಂಭಗೊಂಡಿತ್ತು. ಮಾವಳ್ಳಿ ಎಂಬುದು ಆ ಪ್ರದೇಶದ ಹೆಸರು. ಇತ್ತೀಚಿನ ವರ್ಷಗಳಲ್ಲಿ 'ಎಂಟಿಆರ್ 1924' ಎಂದು ಹೆಸರನ್ನು ಮರುನಾಮಕರಣಗೊಳಿಸಲಾಗಿದೆ.

ಲಾಲ್‌ಬಾಗ್‌ ಟು ಲಂಡನ್- MTRನ ಇತಿಹಾಸ
1924ರಲ್ಲಿ ಉಡುಪಿಯ ಇಬ್ಬರು ಸಹೋದರರಾದ ಪಾರಂಪಳ್ಳಿ ಯಜ್ಞನಾರಾಯಣ ಮಯ್ಯ ಮತ್ತು ಗಣಪ್ಪಯ್ಯ ಮಯ್ಯ ಅವರು ಉಡುಪಿ ಶೈಲಿಯ ಸಣ್ಣ ರೆಸ್ಟೋರೆಂಟ್ ಅನ್ನು ಪ್ರಾರಂಭಿಸಿದರು ಮತ್ತು ಅದನ್ನು ಬ್ರಾಹ್ಮಣ ಕಾಫಿ ಹೌಸ್ ಎಂದು ಕರೆಯುತ್ತಿದ್ದರು.

ಇದನ್ನೂ ಓದಿ: ಬೆಂಗಳೂರಲ್ಲಿ ಸಖತ್ತಾಗಿರೋ North Indian ಊಟ ಸವಿಯಬೇಕು ಅಂದ್ರೆ ಈ ಸ್ಥಳಗಳಿಗೆ ಭೇಟಿ ಕೊಡಿ

ಫಿಲ್ಟರ್ ಕಾಫಿ ಮತ್ತು ಇಡ್ಲಿಗೆ ಹೆಸರುವಾಸಿಯಾಯಿತು. ಕ್ರಮೇಣ ಇದು ಬೆಂಗಳೂರಿಗರ ನೆಚ್ಚಿನ ತಾಣವಾಗುತ್ತಾ ಹೋಯಿತು. ಲಾಲ್‌ಬಾಗ್‌ನಲ್ಲಿರುವ ಈ ಸಣ್ಣ ಮಳಿಗೆಯು ಮಯ್ಯ ಸಹೋದರರ ಯಶಸ್ಸಿಗೆ ಕಾರಣವಾಯಿತು. ಉಪ್ಪಿನಕಾಯಿ, ಹಪ್ಪಳ, ಪಲ್ಯ, ರಾಯತ, ಸಾರು, ಹುಳಿ, ಮಜ್ಜಿಗೆಹುಳಿ, ತುಪ್ಪ ಶುದ್ಧ ಸಸ್ಯಹಾರಿ ಊಟ ಇಲ್ಲಿನ ವಿಶೇಷ. ಬೆಂಗಳೂರಲ್ಲಿ ಮ್ಯಾಜಿಕ್ ಮಾಡಿದ್ದ ಮಾವಳ್ಳಿ ಟಿಫೀನ್ ರೂಮ್ ಸದ್ಯ ಲಂಡನ್‌ನಲ್ಲಿ ತನ್ನ ಯಶೋಗಾಥೆ ಮುಂದುವರಿಸಲು ಹೊರಟಿದೆ.

4 ತಿಂಗಳ ಕಾಲ ತರಬೇತಿ
'ಲಂಡನ್‌ನಿಂದ ಆಗಮಿಸಿದ್ದ ಇಬ್ಬರಿಗೆ 4 ತಿಂಗಳ ಕಾಲ ತರಬೇತಿ ನೀಡಲಾಗಿದೆ. ಲಂಡನ್‌ನಲ್ಲಿ ರೆಸ್ಟೋರೆಂಟ್ ಸಿಬ್ಬಂದಿಯಾಗಿ ಸ್ಥಳೀಯ ಭಾರತೀಯರನ್ನೇ ನೇಮಿಸಲಾಗಿದೆ. ಈ ಸಿಬ್ಬಂದಿಗಳು ಲಂಡನ್‌ನ ನಿವಾಸಿಗಳಿಗೆ ತಮ್ಮ ಹೋಟೆಲ್‌ನ ಭೋಜನದ ಬಗ್ಗೆ ವಿವರಿಸುತ್ತಾರೆ. ಉದಾಹರಣೆಗೆ ಉಪ್ಪಿಟ್ಟು, ಬಿಸಿಬೆಳೆ ಬಾತ್ ಹೀಗೆ ಅನೇಕ ವಿಚಾರಗಳ ಬಗ್ಗೆ ವಿವರಿಸಿ ಅವರಿಗೆ ಸಹಾಯ ಮಾಡುತ್ತಾರೆ.

ಬೆಂಗಳೂರಿನಲ್ಲಿ ಎಂಟಿಆರ್‌ನ 8 ಶಾಖೆಗಳಿವೆ. ಇನ್ನು, ಮೈಸೂರು ಮತ್ತು ಉಡುಪಿಯಲ್ಲಿ ತಲಾ ಒಂದು ಶಾಖೆಯಿದೆ. ಸಿಂಗಾಪುರ ಮತ್ತು ದುಬೈನಲ್ಲಿ ಸಹ 2015ರಲ್ಲಿ ತಲಾ ಒಂದೊಂದು ಶಾಖೆ ತೆರೆಯಲಾಗಿದೆ. ಎರಡು ವರ್ಷಗಳ ಹಿಂದೆ ಮಲೇಷ್ಯಾದಲ್ಲಿ ಒಂದು ಶಾಖೆ ತೆರೆಯಲಾಗಿದೆ ಎಂದು ಮಯ್ಯರ ಮೊಮ್ಮಗಳಾದ ಹೇಮಾಮಾಲಿನಿ ಮಯ್ಯ ತಿಳಿಸಿದ್ದಾರೆ.

ಇದನ್ನೂ ಓದಿ: Chinese Restaurants: ಸಿ ಫಾರ್ ಚೈನೀಸ್ ಫುಡ್ ಎನ್ನುವವರು ಈ ರೆಸ್ಟೋರೆಂಟ್​ಗಳಿಗೆ ಹೋಗಲೇಬೇಕು

ಎಂಟಿಆರ್ ರುಚಿ ಪಸರಿಸಲಿ
ಲಂಡನ್‌ನಲ್ಲಿ ನಮ್ಮ ಬೆಂಗಳೂರಿನ ಸುವಾಸನೆಯನ್ನು ಬಯಸುವ ಎನ್‌ಆರ್‌ಐಗಳಿಗೆ, ಎಂಟಿಆರ್‌ ಇನ್ನು ಸಾಥ್ ನೀಡಲಿದೆ. ಲಂಡನ್ ನಲ್ಲೂ ಸಹ ಅಧಿಕೃತ ಕರ್ನಾಟಕ ಆಹಾರವನ್ನು ಪೂರೈಸುವ ಗುರಿಯನ್ನು MTR ಶಾಖೆ ಹೊಂದಿದೆ. ಸಾಗು ಜೊತೆ ರವಾ ಇಡ್ಲಿ, ಖಾರಾ ಬಾತ್, ವೆಜ್ ಪಲಾವ್, ವೆಜ್ ಥಾಲಿ ಮತ್ತು ದೋಸೆ ಲಂಡನ್ ಶಾಖೆಯಲ್ಲಿ ದೊರೆಯುತ್ತದೆ.

ಹೀಗಾಗಿ ಲಂಡನ್‌ನಲ್ಲಿರುವ ಕರ್ನಾಟಕದವರು ಅಧಿಕೃತ ದಕ್ಷಿಣ ಭಾರತೀಯ ಆಹಾರದ ರುಚಿ ಸವಿಯಲು MTRಗೆ ಹೋಗಬಹುದು. ಕರ್ನಾಟಕದಲ್ಲಿ ಯಶಸ್ಸು ಪಡೆದಂತೆ ಹೊರ ದೇಶದಲ್ಲೂ ಎಂಟಿಆರ್ ರುಚಿ ಪಸರಿಸಲಿ ಎಂಬುದೇ ನಮ್ಮ ಆಶಯ.
Published by:vanithasanjevani vanithasanjevani
First published: