ಈಗಿನ ಹೆಣ್ಣು ಮಕ್ಕಳು ಮದುವೆ, ಸಮಾರಂಭ, ಇತ್ಯಾದಿ ಕಾರ್ಯಕ್ರಮಗಳಲ್ಲಿ ಸೀರೆ (Saree) ಧರಿಸುವುದನ್ನು ನೋಡಬಹುದು ಅಷ್ಟೇ, ಮಹಿಳೆಯರು (Womens) ಸೀರೆ ಉಡೋದೆ ಅಪರೂಪ ಅನ್ನೋದು ಹಲವರ ದೂರು. ಆದರೆ ಇದಕ್ಕೆ ವಿರುದ್ಧ ಎಂಬಂತೆ ಕೆಲವು ಮಹಿಳೆಯರು ಸೀರೆ ಉಟ್ಟುಕೊಳ್ಳುವ ಮೂಲಕ ಚಂದವಾಗಿ ಕಾಣುವುದಲ್ಲದೇ, ಸೀರೆಯಲ್ಲಿಯೇ ಸಾಹಸ ಚಟುವಟಿಕೆ ಮಾಡುವ ಹಲವಾರು ನಿದರ್ಶನಗಳು ಇವೆ. ಇದೇ ಸಾಲಿಗೆ ಸೇರಿದ ಇನ್ನೊಬ್ಬಳು ಯುವತಿ ತನ್ನ ಸಾಹಸ ಕಾರ್ಯದಲ್ಲಿ ಸೀರೆ ಧರಿಸಿ ಬ್ಯಾಕ್ಫ್ಲಿಪ್ (Back Flip) ಮಾಡಿ ಸುದ್ದಿಯಾಗಿದ್ದಾಳೆ. ನಿಮಗೆ ಜಿಮ್ನಾಸ್ಟಿಕ್ (Gymnastics) ಅಥವಾ ಕೆಲವು ಸಾಹಸ ದೃಶ್ಯಗಳ ಬಗ್ಗೆ ಗೊತ್ತಿದ್ದರೆ, ಅವುಗಳನ್ನು ಮಾಡುವುದು ಎಷ್ಟು ಕಷ್ಟ ಅಂತಲೂ ತಿಳಿದಿರುತ್ತದೆ. ಹಾಗೆಯೇ ಬ್ಯಾಕ್ಫ್ಲಿಪ್ ಅಥವಾ ಹಿಮ್ಮುಖವಾಗಿ ನೆಗೆಯುವ ಸಾಹಸವೂ ಸಹ ಹೆಚ್ಚು ರಿಸ್ಕಿ ಚಟುವಟಿಕೆ ಆಗಿದೆ. ಬ್ಯಾಕ್ಫ್ಲಿಪ್ ಮಾಡುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು, ಸ್ವಲ್ಪ ಹೆಚ್ಚು-ಕಮ್ಮಿಯಾದರೂ ಸಹ ಬೆನ್ನು ಮೂಳೆಯೇ ಮುರಿದು ಹೋಗುವ ಸಾಧ್ಯತೆ ಇದೆ.
ಹೀಗಾಗಿ ಅದಕ್ಕೆ ಅಂತ ಕೆಲವು ಮುನ್ನೆಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಕೆಲವು ಸಾಹಸ ಚಟುವಟಿಕೆಗೆ ಅದರದೇ ಆದ ಡ್ರೆಸ್ ಕೋಡ್ ಇರುತ್ತದೆ. ಬ್ಯಾಕ್ಫ್ಲಿಪ್ಗೆ ಅಂತಾ ಯಾವುದೇ ಡ್ರೆಸ್ ಕೋಡ್ ಇಲ್ಲದಿದ್ದರೂ ಸೀರೆ ಹಾಕಿಕೊಂಡು ಅದನ್ನು ಮಾಡುವುದು ಕಷ್ಟನೇ ಬಿಡಿ. ನಾವು ನೀವು ಹಾಗೆ ಅಂದುಕೊಂಡರೆ ನಮ್ಮ ಊಹೆ ತಪ್ಪು. ಸೀರೆಯಲ್ಲೂ ಸಲೀಸಾಗಿ ಬ್ಯಾಕ್ ಫ್ಲಿಪ್ ಮಾಡಬಹುದೆಂದು ಮಿಲಿ ಸರ್ಕಾರ್ ಎಂಬ ಯುವತಿ ತೋರಿಸಿ ಕೊಟ್ಟಿದ್ದಾಳೆ.
ಸಾಮಾನ್ಯವಾಗಿ ಇಂತಹ ಸಾಹಸಗಳನ್ನ ಮಾಡುವಾಗ ಅಥ್ಲೆಟಿಕ್ ಇಲ್ಲವೇ ಜಿಮ್ನಾಸ್ಟಿಕ್ ಉಡುಪುಗಳನ್ನ ಧರಿಸಲಾಗುತ್ತೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ವಿಡಿಯೋವೊಂದರಲ್ಲಿ ಯುವತಿಯೊಬ್ಬಳು ಸೀರೆ ಧರಿಸಿ ಬ್ಯಾಕ್ಫ್ಲಿಪ್ ಮಾಡಿ ಸಕತ್ ಸುದ್ದಿಯಾಗಿದ್ದಾರೆ.
ಇದನ್ನೂ ಓದಿ: World Record: ವಿಶ್ವ ದಾಖಲೆ ಸೃಷ್ಟಿಸಿದ ಈ ವ್ಯಕ್ತಿ ಎಂತಹ ಸಾಹಸ ಮಾಡಿದ್ದಾರೆ ಗೊತ್ತೇ..? ನೋಡಿದರೆ ಮೈ ಜುಮ್ಮೆನ್ನುತ್ತೆ..!
ಮಿಲಿ ಸರ್ಕಾರ್ ಬ್ಯಾಕ್ಫ್ಲಿಪ್ ಮಾಡಿದ ಯುವತಿ:
ಪಶ್ಚಿಮ ಬಂಗಾಳದ ರಾಯಗಂಜ್ನ ಮಿಲಿ ಸರ್ಕಾರ್ ವೃತ್ತಿಪರ ನೃತ್ಯಗಾರ್ತಿ ಮತ್ತು ಜಿಮ್ನಾಸ್ಟ್, ಇಂಥದೊಂದು ಸಾಹಸ ಮಾಡಿದ್ದಾಳೆ. ಆಗಾಗ್ಗೆ ಬ್ಯಾಕ್ಫ್ಲಿಪ್ಗಳು ಮತ್ತು ಇತರ ಜಿಮ್ನಾಸ್ಟಿಕ್ ಚಲನೆಗಳನ್ನು ಪ್ರದರ್ಶಿಸುವ ವಿಡಿಯೋಗಳನ್ನು ತನ್ನ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡುತ್ತಿರುತ್ತಾಳೆ. ಆಕೆಯ ಚಮತ್ಕಾರಿಕ ಕೌಶಲ್ಯಗಳು ಸಾಮಾನ್ಯವಾಗಿ ನೆಟ್ಟಿಗರನ್ನು ಬೆರಗುಗೊಳಿಸುತ್ತವೆ.
ಸೀರೆಯಲ್ಲಿ ಬ್ಯಾಕ್ಫ್ಲಿಪ್:
ಬ್ಯಾಕ್ ಫ್ಲಿಪ್ ಮಾಡುವಾಗ ಸೀರೆ ಧರಿಸುವುದು ಅನಾನುಕೂಲ ಮತ್ತು ಕಾರ್ಯಸಾಧ್ಯವಲ್ಲ ಎಂಬ ಕಲ್ಪನೆಯನ್ನು ಮಿಲಿ ಹುಸಿ ಮಾಡಿದ್ಧಾಳೆ. ಇತ್ತೀಚಿನ ವಿಡಿಯೋದಲ್ಲಿ, ಬಂಗಾಳದ ಹುಡುಗಿ ಮಿಲಿ ಸರ್ಕಾರ್ ಸೀರೆಯಲ್ಲಿ ಬ್ಯಾಕ್ಫ್ಲಿಪ್ ಮಾಡುತ್ತಿರುವುದು ಕಂಡುಬಂದಿದೆ. ಏಪ್ರಿಲ್ 2ರಂದು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸೀರೆ ಧರಿಸಿ ಡ್ಯಾನ್ಸ್ ಮಾಡಿ ನಂತರ ಬ್ಯಾಕ್ ಫ್ಲಿಪ್ ಮಾಡಿದ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾಳೆ. ‘ಸೀರೆಯಲ್ಲಿ ನೃತ್ಯ‘ ಎಂಬ ಕ್ಯಾಪ್ಷನ್ ಹಾಕಿ ತನ್ನ ಡ್ಯಾನ್ಸ್ ಮತ್ತು ಬ್ಯಾಕ್ ಫ್ಲಿಪ್ ಕೌಶಲ್ಯವನ್ನು ತೊರಿಸಿದ್ದಾಳೆ.
ಇದನ್ನೂ ಓದಿ: ಜಗತ್ತಿನ ಶ್ರೀಮಂತ ವ್ಯಕ್ತಿಗಳಾದ Jeff Bezos - Bill Gates ಪ್ರತಿ ರಾತ್ರಿ ಮಲಗುವ ಮುನ್ನ ಪಾತ್ರೆ ತೊಳೆಯುತ್ತಾರಂತೆ..! ಕಾರಣ ಗೊತ್ತೆ?
ಬ್ಯಾಕ್ಫ್ಲಿಪ್ ವಿಡಿಯೋ ವೈರಲ್:
ಈ ಸಾಹಸ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಲಾಗಿದ್ದು, 26,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ, ಮತ್ತು ಮಿಲಿಯ ಧೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅದ್ಭುತ, ಔಟ್ ಸ್ಟ್ಯಾಡಿಂಗ್, ವಾವ್ ಎಂತೆಲ್ಲಾ ನೆಟ್ಟಿಗರು ಕಾಮೆಂಟ್ ಮಾಡುವ ಮೂಲಕ ಮಿಲಿಯ ಸಾಹಸ ದೃಶ್ಯವನ್ನು ಹೊಗಳಿದ್ದಾರೆ. ಮಿಲಿ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ 198k ಅನುಯಾಯಿಗಳನ್ನು ಹೊಂದಿದ್ದಾರೆ.
ಈಗ ವೈರಲ್ ಆಗಿರುವ ವಿಡಿಯೊದಲ್ಲಿ, ಮಿಲಿ ಸರ್ಕಾರ್ ಬಿಳಿ ಸೀರೆಯಲ್ಲಿ ತುಂಬಾ ಸುಲಭವಾಗಿ, ಸಲೀಸಾಗಿ ಬ್ಯಾಕ್ಫ್ಲಿಪ್ ಮಾಡುವುದನ್ನು ಕಾಣಬಹುದು. ಜಿಮ್ನಾಸ್ಟಿಕ್ ಪಟು ಮಿಲಿ ಈ ಹಿಂದೆಯೂ ನೈಟಿಯಲ್ಲಿ ಬ್ಯಾಕ್ಫ್ಲಿಪ್ ಮಾಡಿದ್ದಾಳೆ. ದೇಹದಲ್ಲಿ ಮೂಳೆಯೇ ಇಲ್ಲ ಎನ್ನುವಂತೆ ಮೀನಿನ ರೀತಿ ಎಲ್ಲಾ ಜಿಮ್ನಾಸ್ಟಿಕ್ ಭಂಗಿಗಳನ್ನು ಮಿಲಿ ಸರ್ಕಾರ್ ಸುಲಭವಾಗಿ ಮಾಡುತ್ತಾಳೆ. ಇವಳ ಈ ಸಾಹಸ ಭಂಗಿಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ನೋಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ