PubGಯಲ್ಲೇ ಶುರುವಾಯ್ತು ಲವ್.. ಕನ್ನಡತಿ, ಪಶ್ಚಿಮ ಬಂಗಾಳದ ಯುವಕನ Love Story ನಿಜಕ್ಕೂ ಫಿಲ್ಮಿ

ಎರಡು ಕುಟುಂಬವೂ ಇವರಿಬ್ಬರ ಪ್ರೇಮ ವಿವಾಹಕ್ಕೆ ಸಮ್ಮತಿ ನೀಡಿತು. ನಂತರ ಇವರಿಬ್ಬರು ವಿವಾಹವಾದರು. ಕೇವಲ ಒಂದು ಪಬ್ ಜಿ ಆಟದಿಂದ ಗ್ರಾಮಕ್ಕೆ ಸೊಸೆ ಸಿಕ್ಕಿದ್ದಕ್ಕೆ ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ.

 ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:

  ಗೇಮ್ ಪ್ರಪಂಚದಲ್ಲಿ ದಿನಕ್ಕೆ ಹತ್ತಾರು ವಿಡಿಯೋ ಗೇಮ್‍ಗಳು ಬರುತ್ತಲೇ ಇರುತ್ತದೆ. ಇದರಲ್ಲಿ ಹೆಚ್ಚು ಪ್ರಸಿದ್ಧಿ ಪಡೆದದ್ದು ಮಾತ್ರ ಪಬ್ ಜೀ(PubG). ಆದರೆ ಪಬ್‍ಜೀ ವಿಡಿಯೋ ಗೇಮ್ (video game) ಇದೀಗ ಬ್ಯಾನ್(ban) ಆಗಿದೆ. ಆದರೆ ಮೊದಲು ಹದಿಹರೆಯದ ಯುವಕ ಯುವತಿಯರಿಂದ ಹಿಡಿದು ಪ್ರತಿಯೊಬ್ಬರ ಇಷ್ಟದ ಗೇಮ್ ಆಗಿತ್ತು. ಮನೆಯಲ್ಲೇ ಕುಳಿತು ಪ್ರಪಂಚದ ಯಾವುದೇ ಮೂಲೆಯಲ್ಲಿ ಕುಳಿತು ಆಡುವ ಈ ಗೇಮ್‍ಗೆ ಪ್ರತಿಯೊಬ್ಬರು ಮಾರುಹೋಗಿದ್ದರು. ಗೇಮ್‍ನಲ್ಲಿ ಬ್ಯಾಟಲ್ ಫೀಲ್ಡ್ ನಿರ್ಣಾಯಕ ಘಟ್ಟ. ಅಲ್ಲಿ ಇಳಿದು ಶತ್ರುಗಳನ್ನು ಸಂಹರಿಸಲು ಹರಸಾಹಸ ಪಡುವುದು ಮತ್ತು ಶತ್ರುಗಳಿಂದ ಬದುಕುಳಿಯುವುದೇ ಈ ಆಟದ ರೋಚಕತೆ.


  ಇದೀಗ ಭಾರತದಲ್ಲಿ ಪಬ್ ಜೀ ವಿಡಿಯೋ ಗೇಮ್ ಮೇಲೆ ನಿಷೇಧ ಹೇರಿದೆ. ಜಗತ್ತಿನ ವ್ಯಕ್ತಿಗಳ ಸಂಪರ್ಕ ನೀಡುವ ಈ ಗೇಮ್‍ನಲ್ಲಿ ಪ್ರಯೋಜನಗಳು ಎಷ್ಟಿವೆಯೋ ಅಷ್ಟೇ ಕೆಡುಕು ಸಹ ಉಂಟು. ಈ ಗೇಮ್ ಆಡುತ್ತಲೇ ಬೇರೆ ಬೇರೆ ರಾಜ್ಯದ ಯುವಕ-ಯುವತಿ ಪ್ರೇಮಿಸಿ ವಿವಾಹವಾಗಿರುವ ಅಪರೂಪದ ಘಟನೆ ನಡೆದಿದೆ. ಪಶ್ಚಿಮ ಬಂಗಾಳದ ಯುವಕ, ಕರ್ನಾಟಕದ ಯುವತಿಯನ್ನು ವಿವಾಹವಾಗಿದ್ದಾನೆ.


  ಕನ್ನಡತಿ-ಬಂಗಾಲಿ ಮಧ್ಯೆ LOVE

  ಪಶ್ಚಿಮ ಬಂಗಾಳದ ಧುಪ್ಗುರಿ ನಿವಾಸಿ ಸೈನೂರ್ ಆಲಂ ಮತ್ತು ಕರ್ನಾಟಕದ ಫ್ರಿಜಾ ಪಬ್ ಜೀ ಆಡುತ್ತಲೇ ಪ್ರೀತಿಸಿ ಮದುವೆಯಾದ ಜೋಡಿ.ಸೈನೂರ್ ಆಲಂ ನಿರಂತರವಾಗಿ ಪಬ್ಜಿ ಆಡುತ್ತಲೇ ಇದ್ದರು. ಆಟ ಆಡುವಾಗ ಕರ್ನಾಟಕದ ಫ್ರಿಜಾ ಎಂಬ ಯುವತಿಯ ಪರಿಚಯವಾಯಿತು. ಆಟ ಆಡುತ್ತಲೇ ಇಬ್ಬರೂ ಮೊದಲು ಸ್ನೇಹಿತರಾದರು. ನಂತರ, ಅವರು ಪರಸ್ಪರ ತಮ್ಮ ಭಾವನೆಗಳನ್ನು ಅರಿತುಕೊಂಡರು. ಫೋನ್ ನಂಬರ್‌ಗಳನ್ನು ಪಡೆದು ಮಾತನಾಡುತ್ತಾ ಇಬ್ಬರು ಪರಸ್ಪರ ಪ್ರೀತಿಯ ಜಾಲದಲ್ಲಿ ಬಿದ್ದಿದ್ದಾರೆ.


  ಇದನ್ನೂ ಓದಿ: Viral Story: ಮದುವೆಯಲ್ಲಿ ಹಾಡನ್ನು ಕೇಳಿ ಥಟ್ ಅಂತ Divorce ನೀಡಿದ ವರ!

  ಹಾರಿ ಬಂದ ಪ್ರೇಮಿ

  ಕೆಲವು ದಿನಗಳ ನಂತರ ಇಬ್ಬರ ಪ್ರೀತಿಯನ್ನು ಒಪ್ಪಿಕೊಂಡರು. ಆದರೆ ಅವರಿಬ್ಬರು ಪರಸ್ಪರ ಭೇಟಿಯಾಗದೇ ಫೋನಿನಲ್ಲೇ ಅವರ ಮಾತುಗಳು ಮುಂದುವರೆದಿದ್ದವು. ಒಂದು ದಿನ ಫ್ರಿಜಾ ಬೆಂಗಳೂರಿನಿಂದ ಬಾಗ್ದೋಗ್ರಾ ಮೂಲಕ ವಿಮಾನದಲ್ಲಿ ಧುಪ್ಗುರಿ ಸೈನೂರ್ ಮನೆಯ ಮುಂದೆ ನಿಂತು ಮನೆಯ ಬೆಲ್ ಬಾರಿಸಿದರು. ಆಕೆ ಬರುವ ವಿಚಾರ ಸೈನೂರ್‌ಗೆ ತಿಳಿದಿರಲಿಲ್ಲ. ಕಾಲಿಂಗ್ ಬೆಲ್ ಶಬ್ದ ಕೇಳಿ ಮನೆಯ ಬಾಗಿಲು ತೆರೆದಾಗ ಸೈನೂರ್ ಮುಂದೆ ಫ್ರಿಜಾ ನಿಂತಿದ್ದಳು. ಸೈನೂರ್, “ಫ್ರಿಜಾ ನನ್ನ ಮುಂದೆ ನಿಂತಿರುವುದನ್ನು ನೋಡಿದಾಗ ನನಗೆ ಆಘಾತವಾಯಿತು. ನಾನು ಇದನ್ನು ನಿರೀಕ್ಷಿಸಿರಲಿಲ್ಲ'' ಎಂದು ಹೇಳಿದರು.


  2,554 ಕಿ.ಮೀ  ದಾಟಿದ ಪ್ರೀತಿಗೆ ಮದುವೆ ಭಾಗ್ಯ

  ಮೊದಲಿಗೆ, ಸೈನೂರ್ ಅವರ ಕುಟುಂಬ ಸದಸ್ಯರು ಆಘಾತಕ್ಕೊಳಗಾಗಿದ್ದರು. ಕೇವಲ ಪ್ರೀತಿಯಿಂದಲೇ ಫ್ರಿಜಾ 2,554 ಕಿಲೋಮೀಟರ್ ದಾಟಿ ಪಶ್ಚಿಮ ಬಂಗಾಳದಲ್ಲಿರುವ ತಮ್ಮ ಮನೆಗೆ ಬರಬಹುದೆಂದು ಅವರು ನಂಬಿರಲಿಲ್ಲ. ನಂತರ, ಫ್ರಿಜಾ ಕೂಡ ಸೈನೂರ್ ಅವರನ್ನು ಪ್ರೀತಿಸುತ್ತಿರುವುದಾಗಿ ತನ್ನ ಕುಟುಂಬ ಸದಸ್ಯರಿಗೆ ತಿಳಿಸಿದರು. ಎರಡು ಕುಟುಂಬವೂ ಇವರಿಬ್ಬರ ಪ್ರೇಮ ವಿವಾಹಕ್ಕೆ ಸಮ್ಮತಿ ನೀಡಿತು. ನಂತರ ಇವರಿಬ್ಬರು ವಿವಾಹವಾದರು. ಕೇವಲ ಒಂದು ಪಬ್ ಜಿ ಆಟದಿಂದ ಗ್ರಾಮಕ್ಕೆ ಸೊಸೆ ಸಿಕ್ಕಿದ್ದಕ್ಕೆ ಸ್ಥಳೀಯರಾದ ಮಕ್ಬೂಲ್ ಹೊಸೈನ್ ಮತ್ತು ಫಿರೋಜ್ ಹೊಸೇನ್ ಸಂತಸ ವ್ಯಕ್ತಪಡಿಸಿದ್ದಾರೆ.


  ಇದನ್ನೂ ಓದಿ: Viral Story: ದ್ವೀಪದಲ್ಲಿ ವಾಸಿಸುತ್ತಾ ತಿಂಗಳಿಗೆ 14 ಲಕ್ಷ ಸಂಪಾದಿಸುತ್ತಿದ್ದಾರೆ ಈ ದಂಪತಿ!

  ಇನ್ನು ಸೈನೂರ್ ತಂದೆ ಕೂಡ ಮಗನ ಪ್ರೀತಿಯನ್ನು ಕಂಡು ಆಶ್ಚರ್ಯಪಟ್ಟರು. ತದನಂತರ, ಪಬ್‍ಜಿಯಿಂದ ಆರಂಭವಾದ ಪ್ರಿತಿ 4 ವರ್ಷಗಳ ಕಾಲ ಮುಂದುವರೆದು, ಮದುವೆಯವರೆಗೂ ಬಂದದ್ದು ನಿಜಕ್ಕೂ ಖುಷಿಯ ವಿಚಾರ. ಇದರಿಂದ ನಾವು ಸಂತೋಷವಾಗಿದ್ದೇವೆ ಎಂದು ಹೇಳಿದರು. ಒಟ್ಟಿನಲ್ಲಿ ಒಂದು ಗೇಮ್ ಎರಡು ಮನಸ್ಸು, ಎರಡು ಕುಟುಂಬ, ಸಂಬಂಧಿಕರನ್ನು ಒಟ್ಟುಗೂಡಿಸಿರುವುದು ಮಾತ್ರ ನಿಜಕ್ಕೂ ಆಶ್ಚರ್ಯವೇ ಹೌದು.

  Published by:Kavya V
  First published: