• Home
  • »
  • News
  • »
  • trend
  • »
  • Weight Loss: ಈ ವೆರೈಟಿ ಮೀನು ತಿಂದ್ರೆ ಬೇಗ ತೂಕ ಕಡಿಮೆ ಆಗುತ್ತಂತೆ ನೋಡಿ!

Weight Loss: ಈ ವೆರೈಟಿ ಮೀನು ತಿಂದ್ರೆ ಬೇಗ ತೂಕ ಕಡಿಮೆ ಆಗುತ್ತಂತೆ ನೋಡಿ!

 ಮೀನು ಸೇವನೆ

ಮೀನು ಸೇವನೆ

Benefits of Fish : ಮೀನಿನಲ್ಲಿ ಪ್ರೋಟೀನ್, ವಿಟಮಿನ್ ಡಿ, ಕ್ಯಾಲ್ಸಿಯಂ, ಫೋಸ್ಫರಸ್ ಇದೆ . ಜೊತೆಗೆ ಮೀನಿನಲ್ಲಿ ಕಬ್ಬಿನ, ಸತು, ಮೆಗ್ನಿಶಿಯಂ, ಐಯೋಡಿನ್ ಮತ್ತು ಪೊಟಾಶಿಯಂನಂತಹ ಖನಿಜಾಂಶಗಳಿವೆ. ಮೀನಿನಲ್ಲಿ ಒಮೆಗಾ-3 ಕೊಬ್ಬಿನಾಮ್ಲವು ಸಮೃದ್ಧವಾಗಿದೆ

  • Share this:

    ಅಯ್ಯೋ ನಾನು ಎಷ್ಟೊಂದು ದಪ್ಪ(Weight) ಆಗಿದ್ದೀನಿ, ನಾನು ಸಣ್ಣ ಆಗ್ಬೇಕು, ಏನ್ ಮಾಡಿದ್ರೆ, ಏನು ತಿಂದ್ರೆ ನಾನು ಸಣ್ಣ ಆಗ್ತೀನಿ. ನನ್ನ ಆರೋಗ್ಯವನ್ನು(Health) ಕಾಪಾಡಿಕೊಳ್ಳುವುದರ ಜೊತೆಗೆ ತೂಕ ಇಳಿಕೆ ಹೇಗೆ ಮಾಡಬಹುದು ಅಂತ ವೇಯ್ಟ್ ಲಾಸ್(Weight Loss) ಬಗ್ಗೆ ಯೋಚಿಸುತ್ತಿರುವವರು ಅಂದುಕೊಳ್ತಾರೆ. ಹೀಗಾಗಿ ವ್ಯಾಯಾಮ,(Exercise) ಯೋಗ, (Yoga) ಜಿಮ್(Gym) ಅಂತ ನಾನು ಸರ್ಕಸ್ ಗಳನ್ನ ಮಾಡ್ತಾರೆ.. ಇದರ ಜೊತೆಗೆ ಯಾವ ಆಹಾರವನ್ನು(Food) ತಿಂದರೆ ಆದಷ್ಟು ಬೇಗ ಸಣ್ಣ ಆಗ್ಬಹುದು, ಈಗಿನ ನಮ್ಮ ತೂಕವನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವುದರ ಜೊತೆಗೆ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಅಂತ ಹುಡುಕಾಟ ನಡೆಸುತ್ತಲೇ ಇರುತ್ತಾರೆ.. ಈ ರೀತಿ ತೂಕ ಕಳೆದುಕೊಳ್ಳಲು ಹುಡುಕಾಟ ನಡೆಸುತ್ತಿರುವವರು ಖಂಡಿತ ಆಹಾರವನ್ನು ಪ್ರತಿನಿತ್ಯ ಸೇವನೆ ಮಾಡುವುದರಿಂದ, ತೂಕ ಕಳೆದುಕೊಳ್ಳುವುದರ ಜೊತೆಗೆ ಹತ್ತು ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.


    ಮೀನಿನಲ್ಲಿದೆ ಹತ್ತು ಹಲವು ಆರೋಗ್ಯಕಾರಿ ಅಂಶಗಳು


    ಪ್ರಾಕೃತಿಕ ದತ್ತವಾಗಿ ನಮಗೆ ಸಿಗುವ ಸುಲಭವಾದ ಆಹಾರ ಅಂದ್ರೆ ಅದು ಮೀನು. ಇಂತಹ ಮೀನು ಕರಾವಳಿ ಭಾಗದ ಜನರಿಗೆ ಅಚ್ಚುಮೆಚ್ಚಿನ ಆಹಾರ ಪದಾರ್ಥ..ಮೀನಿನಲ್ಲಿ ಪ್ರೋಟೀನ್, ವಿಟಮಿನ್ ಡಿ, ಕ್ಯಾಲ್ಸಿಯಂ, ಫೋಸ್ಫರಸ್ ಇದೆ . ಜೊತೆಗೆ ಮೀನಿನಲ್ಲಿ ಕಬ್ಬಿನ, ಸತು, ಮೆಗ್ನಿಶಿಯಂ, ಐಯೋಡಿನ್ ಮತ್ತು ಪೊಟಾಶಿಯಂನಂತಹ ಖನಿಜಾಂಶಗಳಿವೆ. ಮೀನಿನಲ್ಲಿ ಒಮೆಗಾ-3 ಕೊಬ್ಬಿನಾಮ್ಲವು ಸಮೃದ್ಧವಾಗಿದೆ. ಹೀಗಾಗಿ ನೀನು ಸೇವನೆಯಿಂದ ತೂಕ ಇಳಿಕೆಯ ಜೊತೆಗೆ ಹತ್ತು ಹಲವಾರು ಆರೋಗ್ಯಕಾರಿ ಪ್ರಯೋಜನಗಳು ಇವೆ..


    ಇದನ್ನೂ ಓದಿ :60 ದಿನಗಳ ನಿಷೇಧ ಕಾಲ ಮುಗಿದರೂ ಕರಾವಳಿಯಲ್ಲಿ ಮೀನುಗಾರಿಕೆ ಆರಂಭವಾಗುವುದು ಅನುಮಾನ!


    ವಿಟಮಿನ್-ಡಿ ಪ್ರಮುಖ ಮೂಲ ಮೀನು


    ಇತ್ತೀಚಿನ ದಿನಗಳಲ್ಲಿ ರಾತ್ರಿಯೆಲ್ಲಾ ಕೆಲಸ ಮಾಡಿ ಸೂರ್ಯ ಉದಯಿಸುವ ಸಮಯಕ್ಕೆ ಮಲಗುವವರು ಹೆಚ್ಚು. ಇಂಥವರ ಮೇಲೆ ಸೂರ್ಯನ ಕಿರಣಗಳು ಬೀಳುವುದು ಕಡಿಮೆ.. ಈ ರೀತಿ ಮಾಡುವವರಲ್ಲಿ ಡಿ ವಿಟಮಿನ್ ಕೊರತೆ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಹೀಗಾಗಿ ನಮ್ಮ ದೇಹದಲ್ಲಿ ವಿಟಮಿನ್ ಗಳ ಸಂಖ್ಯೆಯನ್ನು ಹೆಚ್ಚಳ ಮಾಡಿಕೊಳ್ಳಬೇಕು ಅಂದರೆ ಡಿ ವಿಟಮಿನ್ ನ ಮೂಲವಾಗಿರುವ ಮೀನು ಸೇವನೆ ಸಹಕಾರಿಯಾಗಿದೆ..


    ಒಮೆಗಾ-3 ಕೊಬ್ಬಿನಾಮ್ಲಗಳಿಂದ ತೂಕ ಇಳಿಕೆ : ಅಧ್ಯಯನಗಳ ಪ್ರಕಾರ, ಒತ್ತಡ ಮತ್ತು ಉರಿಯೂತವು ತೂಕ ಹೆಚ್ಚಳಕ್ಕೆ ಸಂಬಂಧಿಸಿದೆ, ಮೀನಿನಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳಿವೆ, ಅದು ಉರಿಯೂತವನ್ನು ಕಡಿಮೆ ಮಾಡುತ್ತದೆ, ಉತ್ತಮ ಚಯಾಪಚಯಕ್ಕೆ ಕೊಡುಗೆ ನೀಡುತ್ತದೆ. ಹೀಗಾಗಿ ತೂಕ ಇಳಿಸಿ ಕೊಳ್ಳುತ್ತಿರುವ ವರು ನೀನು ಸೇವನೆ ಮಾಡುವುದರಿಂದ ತಮ್ಮ ತೂಕವನ್ನು ನಿಯಂತ್ರಣಕ್ಕೆ ತಂದುಕೊಳ್ಳಬಹುದು..


    ಹೃದಯದ ಆರೋಗ್ಯ ಸುಧಾರಣೆಗೆ ಸಹಕಾರಿ


    ಯಾವುದೇ ಮೀನನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇವನೆ ಮಾಡುವುದರಿಂದ ಕೊಲೆಸ್ಟ್ರಾಲ್ ಮಟ್ಟವು ಕಡಿಮೆಯಾಗಿ ಹೃದಯದ ಆರೋಗ್ಯ ಕಾಪಾಡುವುದು. ಒಮೆಗಾ-3 ಕೊಬ್ಬಿನಾಮ್ಲವು ಸಂಕೋಚನಗೊಂಡಿರುವ ರಕ್ತನಾಳಗಳನ್ನು ಸರಿಪಡಿಸಿಕೊಂಡು ರಕ್ತಸಂಚಾರವು ಸರಿಯಾಗಿ ಆಗುವಂತೆ ಮಾಡುವುದು. ಇದರಿಂದ ಹೃದಯಕ್ಕೆ ರಕ್ತಸರಬರಾಜು ಸರಿಯಾಗಿ ಆಗಿ ಹೃದಯದ ಆರೋಗ್ಯ ಕಾಪಾಡಬಹುದು. ಅದರಲ್ಲೂ ಮೀನನ್ನು ದಿನಾಲೂ ಸೇವಿಸುವುದರಿಂದ ಮಾರಕ ಮತ್ತು ಪರಿಧಮನಿಗೆ ಸಂಬಂಧಿಸಿದ ಕಾಯಿಲೆಗಳ ಅಪಾಯ ಕಡಿಮೆ ಮಾಡಬಹುದು.


    ಮೀನಿನಲ್ಲಿದೆ ಕಡಿಮೆ ಕ್ಯಾಲರಿ


    ಕೋಳಿ ಮಾಂಸ ಹಾಗೂ ಇತರ ಮಾಂಸಗಳಿಗೆ ಹೋಲಿಕೆ ಮಾಡಿದ್ರೆ ಮೀನಿನಲ್ಲಿ ಕಡಿಮೆ ಪ್ರಮಾಣದ ಕ್ಯಾಲರಿ ಇದೆ. ಕ್ಯಾಲರಿ ದಹಿಸುವುದಕ್ಕಿಂತ ಅದನ್ನು ಸೇವನೆ ಮಾಡುವುದು ತುಂಬಾ ಸುಲಭ. ಇದಕ್ಕಾಗಿ ನೀವು ಕಡಿಮೆ ಕ್ಯಾಲರಿ ಹೊಂದಿರುವ ಮೀನನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕು. ಗ್ರಿಲ್ ಮಾಡಿದ ಅಥವಾ ಸ್ಟೀಮ್ ಮಾಡಿದ ಮೀನಿನಲ್ಲಿ ತುಂಬಾ ಕಡಿಮೆ ಕೊಬ್ಬು ಇರುವ ಕಾರಣದಿಂದಾಗಿ ಇದು ಅಧಿಕ ತೂಕ ಹೊಂದಿರುವವರಿಗೆ ತುಂಬಾ ಪರಿಣಾಮಕಾರಿ. ಯಾವುದೇ ಆಲಿವ್ ತೈಲವನ್ನು ಬಳಸಿಕೊಂಡು ಮೀನಿನ ಖಾದ್ಯವನ್ನು ತಯಾರಿಸಿದರೆ ಅದರಿಂದ ನಿಮ್ಮ ದೇಹಕ್ಕೆ ಸಿಗುವಂತಹ ಪೋಷಕಾಂಶಗಳನ್ನು ಹೆಚ್ಚಳ ಮಾಡುವುದು..


    ಇದನ್ನೂ ಓದಿ :ಮೀನು ಮಾರಿ ಟ್ರೋಲ್ ಆದ ಹುಡುಗಿ ಈಗ 'ವೈರಲ್ ಫಿಶ್' ಒಡತಿ


    ಈ 3 ಬಗೆಯ ಮೀನು ಸೇವನೆಯಿಂದ ಸಿಗಲಿದೆ ಸಂಪೂರ್ಣ ಆರೋಗ್ಯ


    1)ಸಾಲ್ಮನ್ ಮೀನು : ಸಾಲ್ಮನ್ ಮೀನಿನಲ್ಲಿ ಇರುವ ಒಮೇಗಾ 3 ಫ್ಯಾಟಿ ಆ್ಯಸಿಡ್, ಇಪಿಎ ಮತ್ತು ಡಿ ಏಚ್ ಎ ಇದು ದೇಹಕ್ಕೆ ಅತ್ಯಂತ ಅವಶ್ಯ. ಹಾಗಾಗಿ ಆಹಾರದಲ್ಲಿ ಇದರ ಬಳಕೆ ಒಳ್ಳೆಯದು. ಇದರಿಂದ ದೇಹದಲ್ಲಾಗುವ ಊತಗಳು ಕಡಿಮೆಯಾಗುತ್ತದೆ. ರಕ್ತದ ಒತ್ತಡವನ್ನು ತಡೆಯುತ್ತವೆ. ಕ್ಯಾನ್ಸರ್ ಬರದಂತೆ ತಡೆಯುತ್ತದೆ.ಸಾಲ್ಮನ್‌ನಲ್ಲಿ ವಿಟಮಿನ್ ಬಿ ಹೆಚ್ಚಿದ್ದು, ಇದು ಮೆದುಳು ಮತ್ತು ನರಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡಲು ಸಹಾಯ ಮಾಡುತ್ತದೆ.


    2)ಸಾರ್ಡಿನ್ ಮೀನು (ಬೂತಾಯಿ): ಕರಾವಳಿ ಭಾಗದಲ್ಲಿ ಸಿಗುವ ಬೂತಾಯಿ ಅಥವಾ ಸಾರ್ಡಿನ್ ಮೀನು ಸೇವನೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು, ಮಾನಸಿಕ ಆರೋಗ್ಯ ನಿಯಂತ್ರಿಸುವುದು, ದೇಹಕ್ಕೆ ವಿಟಮಿನ್ ಗಳು ಹಾಗೂ ಖನಿಜಾಂಶಗಳನ್ನು ಒದಗಿಸುವುದು, ಉರಿಯೂತ ತಗ್ಗಿಸುವುದು, ಹೃದಯದ ಕಾಯಿಲೆ ತಡೆಯುವದು ಮತ್ತು ತೂಕ ಕಳೆದುಕೊಳ್ಳಲು ಇದು ನೆರವಾಗುವುದು. ಇದು ಚರ್ಮದ ಕಾಂತಿ ಹೆಚ್ಚಿಸುವುದು, ಪ್ರತಿರೋಧ ಶಕ್ತಿ ವೃದ್ಧಿ ಮತ್ತು ಅಕ್ಷಿಪಟಲದ ಅವನತಿ ತಡೆಯುವುದು.


    3)ಮ್ಯಾಕೆರೆಲ್ ( ಬಂಗುಡೆ ಅಥವಾ ಬಾಂಗ್ಡಾ)


    ಮೀನುಗಳ ರಾಜ ಎಂದೇ ಖ್ಯಾತಿ ಪಡೆದಿರುವ ಬಂಗುಡೆ ಮೀನು, ತುಂಬಾ ರುಚಿಕರವಾದ ಮೀನುಗಳಲ್ಲಿ ಒಂದು.. ಬಂಗುಡೆ ಮೀನಿನಲ್ಲಿ ಬಿ12 ವಿಟಮಿನ್, ಸೆಲೆನಿಯಂ, ತಾಮ್ರ, ಸತು, ಮೆಗ್ನಿಶಿಯಂ, ಪೋಸ್ಪರಸ್ ಮತ್ತು ಕಬ್ಬಿನಾಂಶವಿದ್ದು, ವಿಟಮಿನ್ ಎ, ಪೊಟಾಶಿಯಂ, ಸತು ಮತ್ತು ಸೋಡಿಯಂ ಸಿಗುವುದರಿಂದ ಇದು ಮೂಳೆಯ ಸಾಂದ್ರತೆ ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಜೊತೆಗೆ ನಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ನಿಯಂತ್ರಿಸುವುದು ಇಳಿಕೆಗೂ ಇದು ಸಹಕಾರಿಯಾಗಿದೆ.

    Published by:ranjumbkgowda1 ranjumbkgowda1
    First published: