Viral Video: ಬೆಲುಗಾ ತಿಮಿಂಗಿಲ, ಸೀಗಲ್ ಜೊತೆಗಿನ ತುಂಟಾಟ ಮೆಚ್ಚಿದ ನೆಟ್ಟಿಗರು

ಬೆಲುಗಾ ತಿಮಿಂಗಿಲ ಸೀಗಲ್ ಜೊತೆ ಆಟವಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೋ 207 ಸಾವಿರ ವೀಕ್ಷಣೆಗಳನ್ನು ಕಂಡಿದೆ ಮತ್ತು ಇದನ್ನು ಟ್ವಿಟರ್ ಖಾತೆಯಲ್ಲಿ ಬ್ಯುಟೆಂಜೆಬೀಡೆನ್ ಹೆಸರಿನ ವ್ಯಕ್ತಿಯೊಬ್ಬರು ಆಗಸ್ಟ್ 12ರಂದು ಹಂಚಿಕೊಂಡಿದ್ದಾರೆ

ಬೆಲುಗಾ ತಿಮಿಂಗಿಲ-ಸೀಗಲ್

ಬೆಲುಗಾ ತಿಮಿಂಗಿಲ-ಸೀಗಲ್

  • Share this:

ಮನುಷ್ಯರ ಸ್ನೇಹದಂತೆ ಪ್ರಾಣಿಗಳ ನಡುವಿನ ಸ್ನೇಹಪರತೆಯು ಅಮೋಘವಾದುದು. ಪ್ರಾಣಿಗಳ ಸ್ನೇಹ ಸಂಬಂಧದ ಬಗ್ಗೆ ನಾವು ಹಲವಾರು ಕಥೆ, ಪುರಾಣಗಳನ್ನು ಕೇಳಿದ್ದೇವೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಪುರಾಣಗಳಿಗೆ ಸಾಕ್ಷಿ ಎಂಬಂತೆ ಪ್ರಾಣಿ, ಪಕ್ಷಿಗಳ ಒಡನಾಟದ ಸಾಕಷ್ಟು ವಿಡಿಯೋಗಳನ್ನು ನೋಡುತ್ತಿದ್ದೇವೆ. ಇದೇ ರೀತಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಮನಗೆದ್ದಿದೆ.


ಬೆಲುಗಾ ತಿಮಿಂಗಿಲ ಸೀಗಲ್ ಜೊತೆ ಆಟವಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೋ 207 ಸಾವಿರ ವೀಕ್ಷಣೆಗಳನ್ನು ಕಂಡಿದೆ ಮತ್ತು ಇದನ್ನು ಟ್ವಿಟರ್ ಖಾತೆಯಲ್ಲಿ ಬ್ಯುಟೆಂಜೆಬೀಡೆನ್ ಹೆಸರಿನ ವ್ಯಕ್ತಿಯೊಬ್ಬರು ಆಗಸ್ಟ್ 12ರಂದು ಹಂಚಿಕೊಂಡಿದ್ದಾರೆ. ಇದನ್ನು 14 ಸಾವಿರಕ್ಕೂ ಹೆಚ್ಚು ಮಂದಿ ಇಷ್ಟಪಟ್ಟಿದ್ದಾರೆ. 2 ಸಾವಿರಕ್ಕೂ ಅಧಿಕ ಮಂದಿ ರೀಟ್ವೀಟ್ ಮಾಡಿದ್ದಾರೆ. ಇದು ಅವರ ಸ್ನೇಹಪರತೆಯನ್ನು ಪ್ರದರ್ಶಿಸುವ ಒಂದು ಮುದ್ದಾದ ವಿಡಿಯೋ ಎಂದೇ ಹೇಳಬಹುದು. ಏಕೆಂದರೆ ವಿಡಿಯೋ ಅಷ್ಟೊಂದು ಸೊಗಸಾಗಿದೆ. ಈ ವೈರಲ್ ವೀಡಿಯೋಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.


ಒಂದು ನಿಮಿಷವಿರುವ ಈ ವೀಡಿಯೋದಲ್ಲಿ, ಬೆಲುಗಾ ತಿಮಿಂಗಿಲವು ನಿರಂತರವಾಗಿ ಕಡಲಿನಲ್ಲಿ ಈಜುತ್ತಿರುವುದನ್ನು ಕಾಣಬಹುದು ಮತ್ತು ಸೀಗಲ್ ಪಕ್ಷಿಯು ಬೆಲುಗಾ ತಿಮಿಂಗಿಲ ಹಿಂದೆ ಹಿಂದೆ ಬರುತ್ತಿದ್ದರೂ ಹೆದರುವುದಿಲ್ಲ ಅಥವಾ ಕಿರಿಕಿರಿಗೊಳ್ಳುವುದಿಲ್ಲ. ಸೀಗಲ್ ಈಜುವುದನ್ನು ಮುಂದುವರಿಸುತ್ತದೆ ಮತ್ತು ತಿಮಿಂಗಿಲವು ಅದರೊಟ್ಟಿಗೆ ತುಂಟಾಟ ಮಾಡುತ್ತಾ ಚಲಿಸುತ್ತಿದೆ. ಬ್ಯುಟೆಂಜೆಬೀಡೆನ್ ಅವರು "ಬೆಲುಗಾ ತಿಮಿಂಗಿಲವು ಸೀಗಲ್‍ನೊಂದಿಗೆ ಆಟವಾಡುತ್ತಿದೆ ಎಂಬ ಶೀರ್ಷಿಕೆಯಡಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ.


ಹೃದಯಸ್ಪರ್ಶಿ ವಿಡಿಯೋವನ್ನು ನೆಟಿಜನ್‍ಗಳು ಇಷ್ಟಪಟ್ಟಿದ್ದಾರೆ. “ಹಕ್ಕಿಯು ತಿಮಿಂಗಿಲ ಎಷ್ಟೇ ಹಿಂದೆ ಹಿಂದೆ ಬಂದು ತುಂಟಾಟ ಮಾಡಿದರೂ ಸುಮ್ಮನಿರುತ್ತದೆ. ಇದಕ್ಕೆ ಪ್ರತಿಕ್ರಿಯಿಸಿದ ವ್ಯಕ್ತಿಯೊಬ್ಬರು ಮನೆಯಲ್ಲಿ ಕಿರಿಕಿರಿಗೊಳಿಸುವ ಚಿಕ್ಕ ಸಹೋದರ ಹಾಗೂ ಸುಮ್ಮನಿರುವ ದೊಡ್ಡ ಸಹೋದರನನ್ನು ನೆನಸಪಿಸುತ್ತದೆ ಬರೆದಿದ್ದಾರೆ. ಅವರು ತುಂಬಾ ಅಮೂಲ್ಯರು. ಈ ಜೀವಿಗಳು ಆತ್ಮಗಳು ಮತ್ತು ಅನನ್ಯ ವ್ಯಕ್ತಿತ್ವಗಳನ್ನು ಹೊಂದಿಲ್ಲ ಎಂದು ನೀವು ನನಗೆ ಎಂದಿಗೂ ಮನವರಿಕೆ ಮಾಡಲು ಸಾಧ್ಯವಿಲ್ಲ ಎಂದು ಇನ್ನೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. "ನಾನು ವರ್ಷಪೂರ್ತಿ ನೋಡಿದ ಅತ್ಯುತ್ತಮ ವಿಷಯ! ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.





ಬೆಲುಗಾ ತುಂಬಾ ಸುಂದರವಾಗಿದೆ. ಇವುಗಳು ಸಾಗರದಡಿಯ ದೇವತೆಗಳಂತೆ ಕಾಣುತ್ತವೆ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಇದು ಹುಚ್ಚುತನ! ನನ್ನ ತಲೆಯಲ್ಲಿ ಸೀಗಲ್ ಆಟವೇ ಓಡಾಡುತ್ತಿದೆ ಎಂದು ಹೇಳಿದ್ದಾರೆ. ಇವೆರಡರ ಸ್ನೇಹಪರತೆಯನ್ನು ನೋಡುವ ಅದೃಷ್ಟವಂತ ನಾನು ಆಗುತ್ತೇನೆ ಎಂದು ಊಹಿಸಿರಲಿಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು ಸೀಗಲ್ ಮತ್ತು ಬೆಲುಗಾ ತಿಮಿಂಗಿಲ ನಿಜವಾಗಿಯೂ ಸ್ನೇಹಿತರು ಎಂದು ನಾನು ಭಾವಿಸುತ್ತೇನೆ. ಸೀಗಲ್ ಭಯಪಡದಿರುವುದು ಅಸಾಮಾನ್ಯವಾಗಿ ಕಾಣುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ.. ಮತ್ತೊಬ್ಬರು "ಇವೆರಡು ಆಟವಾಡುತ್ತಿದ್ದಾವೆ ಎಂದು ನನಗೆ ಅನಿಸುತ್ತಿಲ್ಲ, ಸೀಗಲ್ ತನ್ನ ಬಾಯಿಯಲ್ಲಿ ಮೀನನ್ನು ಹೊಂದಿರುವಂತೆ ತೋರುತ್ತಿದೆ ಮತ್ತು ಬೆಲುಗ ಮೀನುಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂದು ಅನಿಸುತ್ತಿದೆ ಎಂದು ಹೇಳಿದ್ದಾರೆ.

First published: