• Home
  • »
  • News
  • »
  • trend
  • »
  • vaccination: ಒಂದಲ್ಲ ಎರಡಲ್ಲ 9ನೇ ಬಾರಿ ಲಸಿಕೆ ಪಡೆಯಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಭೂಪ

vaccination: ಒಂದಲ್ಲ ಎರಡಲ್ಲ 9ನೇ ಬಾರಿ ಲಸಿಕೆ ಪಡೆಯಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಭೂಪ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Belgium: ಪ್ರತಿಬಾರಿಯೂ ಲಸಿಕೆ ಪಡೆದುಕೊಳ್ಳಲು ಬೆಲ್ಜಿಯಂನ ಈ ವ್ಯಕ್ತಿ ಸುಳ್ಳು ದಾಖಲೆಗಳನ್ನು ನೀಡುತ್ತಿದ್ದ ಹೀಗೆ ಸುಳ್ಳು ದಾಖಲೆ ನೀಡಿ 8 ಡೋಸ್ ಲಸಿಕೆ ಪಡೆದುಕೊಂಡಿದ್ದು 9ನೇ ಡೋಸ್ ಲಸಿಕೆಯ ಪಡೆದುಕೊಳ್ಳಲು ನಕಲಿ ದಾಖಲಾತಿಗಳೊಂದಿಗೆ ಕೇಂದ್ರಕ್ಕೆ ಹೋದಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ

ಮುಂದೆ ಓದಿ ...
  • Share this:

    ಕೊರೊನಾ(Corona) ಆತಂಕದಿಂದ ಕಳೆದೆರಡು ವರ್ಷಗಳಿಂದ  ಜನರು ಸೋಂಕಿನಿಂದ ರಕ್ಷಣೆ(Protect) ಪಡೆಯುವುದು ಹೇಗೆ ಎನ್ನುವ ಚಿಂತೆಯಲ್ಲಿ ಪ್ರತಿನಿತ್ಯ(Daily) ಇದ್ದಾರೆ. ಇತ್ತ ಸರ್ಕಾರಗಳು ಸಹ ತಮ್ಮ ಪ್ರಜೆಗಳ ಆರೋಗ್ಯ(Health) ರಕ್ಷಣೆಯ ಮಾಡಲು ಕೊರೊನಾ ಮಹಾಮಾರಿ ಇಂದ ಪ್ರಜೆಗಳನ್ನು ರಕ್ಷಣೆ ಮಾಡಲು 2 ಡೋಸ್ ಲಸಿಕೆ(Vaccine) ನೀಡುತ್ತಿದೆ. ಆದರೆ ಎಷ್ಟೋ ಜನರು ಲಸಿಕೆಯಿಂದ ಆಗುವ ಸೈಡ್ ಎಫೆಕ್ಟ್(Side Effect) ಗಳ ಬಗ್ಗೆ ಭಯಭೀತರಾಗಿದ್ದು, ಲಸಿಕೆ ಪಡೆಯಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಹೀಗಾಗಿ ಆರೋಗ್ಯ ಸಿಬ್ಬಂದಿಗಳು ಇಂಥವರ ಮನವೊಲಿಸಿ ಲಸಿಕೆಯ ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ.. ಆದ್ರೆ ಇನ್ನೂ ಕೆಲವರು ಉತ್ಸಾಹದಿಂದ ಮುಂದೆ ಹೋಗಿ ಲಸಿಕೆ ಹಾಕಿಸಿ ಕೊಂಡು ಮಾದರಿಯಾಗುತ್ತಿದ್ದಾರೆ.. ಇನ್ನು ಕೆಲವರು ಸ್ವಲ್ಪ ಹೆಚ್ಚಿನ ಲಸಿಕೆ ಸಿಕ್ಕರೆ ಇನ್ನೂ ಆರೋಗ್ಯವಾಗಿ ಇರಬಹುದು ಎಂಬ ಉದ್ದೇಶದಿಂದ 3 ಬಾರಿ ಲಸಿಕೆ ಪಡೆದ ಘಟನೆ ಗಳು ಇವೆ.. ಆದರೆ ಇಲ್ಲೊಬ್ಬ ಭೂಪ ಬರೋಬ್ಬರಿ ಒಂಬತ್ತು ಲಸಿಕೆ ಪಡೆಯಲು ಹೋಗಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.


    9ನೇ ಬಾರಿ ಲಸಿಕೆ ಪಡೆಯಲು ಹೋಗಿ ಪೊಲೀಸರ ಅತಿಥಿಯಾದ ಭೂಪ


    ಹೌದು ಇಂಥದ್ದೊಂದು ಘಟನೆ ನಡೆದಿರುವುದು ಬೆಲ್ಜಿಯಂನಲ್ಲಿ(Belgium). ಕೊರೊನಾ ಮಹಾಮಾರಿ ಇಂದ ಜನರನ್ನು ರಕ್ಷಿಸಲು ಸರ್ಕಾರ ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆಯುವಂತೆ ಆದೇಶ ಮಾಡಿದೆ.. ವಿಶ್ವಸಂಸ್ಥೆ ಸಹ ಜನಸಾಮಾನ್ಯರಿಗೆ ಲಸಿಕೆಯ ಪಡೆಯುವಂತೆ ಮನವಿ ಮಾಡಿಕೊಳ್ಳುತ್ತಲೇ ಇದೆ.. ಆದರೂ ಕೆಲವರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಆದ್ರೆ ಬೆಲ್ಜಿಯಂನ ಚಾರ್ಲೆರಾಯ್ ನಗರದಲ್ಲಿ ಮಾತ್ರ ಮಹಾಪುರುಷನೊಬ್ಬ ಒಂದಲ್ಲ ಎರಡಲ್ಲ ಬರೋಬ್ಬರಿ ಒಂಬತ್ತು ಬಾರಿ ಲಸಿಕೆ ಪಡೆದುಕೊಳ್ಳಲು ಹೋಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ವಿಲಕ್ಷಣ ಘಟನೆ ನಡೆದಿದೆ.


    ಇದನ್ನೂ ಓದಿ: 236 ಬಾರಿ ಮುಖಕ್ಕೆ ಪಂಚ್, ಕೊನೆಗೆ ಮುಖದ ಶೇಪ್ ಹೇಗಾಗಿದೆ ನೋಡಿ: ಬಾಕ್ಸಿಂಗ್ ಅಂದ್ರೆ ಸುಮ್ನೆನಾ?


    ಸುಳ್ಳು ದಾಖಲೆ ನೀಡಿ ಲಸಿಕೆ ಪಡೆದುಕೊಂಡ ವ್ಯಕ್ತಿ


    ಪ್ರತಿಬಾರಿಯೂ ಲಸಿಕೆ ಪಡೆದುಕೊಳ್ಳಲು ಬೆಲ್ಜಿಯಂನ ಈ ವ್ಯಕ್ತಿ ಸುಳ್ಳು ದಾಖಲೆಗಳನ್ನು ನೀಡುತ್ತಿದ್ದ.. ಹೀಗೆ ಸುಳ್ಳು ದಾಖಲೆ ನೀಡಿ 8 ಡೋಸ್ ಲಸಿಕೆ ಪಡೆದುಕೊಂಡಿದ್ದು, 9ನೇ ಡೋಸ್ ಲಸಿಕೆಯ ಪಡೆದುಕೊಳ್ಳಲು ನಕಲಿ ದಾಖಲಾತಿಗಳೊಂದಿಗೆ ನಕಲಿ ಕೇಂದ್ರಕ್ಕೆ ಹೋದಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.. ಅದೇ ಪ್ರತಿ ಬಾರಿ ಲಸಿಕೆ ಪಡೆದುಕೊಂಡಿರುವುದಕ್ಕೆ ಪ್ರಮಾಣಪತ್ರ ಹಾಗೂ ಹಣವನ್ನು ಈ ಕದೀಮ ಪಡೆದುಕೊಂಡಿದ್ದಾನೆ. 9ನೇ ಬಾರಿ ಲಸಿಕೆ ಪಡೆಯಲು ಲಸಿಕಾ ಕೇಂದ್ರಕ್ಕೆ ಹೋದಾಗ ಲಸಿಕಾ ಕೇಂದ್ರದಲ್ಲಿ ಕರ್ತವ್ಯಕ್ಕೆ ನಿಯೋಜನೆ ಮಾಡಿದ್ದ, ಆರೋಗ್ಯ ಕಾರ್ಯಕರ್ತರು ಸುಳ್ಳು ದಾಖಲೆ ನೀಡಿ ಲಸಿಕೆ ಪಡೆಯಲು ಬಂದವನ ಗುರುತು ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ವ್ಯಕ್ತಿಯನ್ನ ಬಂಧಿಸಿದ್ದಾರೆ.


    8 ಬಾರಿ ಲಸಿಕೆ ಪಡೆದರೂ ಆರೋಗ್ಯವಾಗಿರುವ ವ್ಯಕ್ತಿ


    ಇನ್ನು ಈಗಾಗಲೇ ಎಂಟು ಬಾರಿ ಲಸಿಕೆ ಪಡೆದುಕೊಂಡು 9ನೇ ಬಾರಿ ಲಸಿಕೆ ಪಡೆಯಲು ಹೋದ ವ್ಯಕ್ತಿ ಪೊಲೀಸರ ಕೈಗೆ ಅತಿಥಿಯಾಗಿದ್ದಾನೆ.. ಆದರೆ ಆಶ್ಚರ್ಯ ಅಂದ್ರೆ ಎಂಟು ಬಾರಿ ಲಸಿಕೆಯ ಪಡೆದುಕೊಂಡಿದ್ದರು ಸಹ ಈತನ ಮೇಲೆ ಯಾವುದೇ ಅಡ್ಡಪರಿಣಾಮಗಳು ಬೀರಿಲ್ಲ.ಯಾವುದೇ ರೋಗ ಲಕ್ಷಣಗಳು ಕಾಣಿಸಿಕೊಳ್ಳದೇ ಎಲ್ಲ ಜನರಂತೆ ಈತ ಕೂಡ ಸಹಜವಾಗಿ ಇದ್ದಾನೆ.


    ಇದನ್ನೂ ಓದಿ: ಭಾರತ ಸೇರಿ ಯಾವ್ಯಾವ ದೇಶದಲ್ಲಿ ಮದುವೆಯ ವಯಸ್ಸು ಎಷ್ಟಿದೆ ಗೊತ್ತಾ..?


    ಬೆಲ್ಜಿಯಂನಲ್ಲಿ ಹೆಚ್ಚಿದ ಕೊರೊನಾ ಆರ್ಭಟ


    ಇನ್ನು ಪ್ರಸ್ತುತ ಇಲ್ಲಿಯವರೆಗೆ ಬೆಲ್ಜಿಯಂನಲ್ಲಿ 1,06,122 ಕ್ಕೂ ಅಧಿಕ ಜನರಿಗೆ ಸೋಂಕು ವಕ್ಕರಿಸಿಕೊಂಡಿದೆ. ಹೀಗಾಗಿ ಹೆಚ್ಚು ಜಾಗೃತೆ ವಹಿಸಿರುವ ಬೆಲ್ಜಿಯಂ ಓಮಿಕ್ರಾನ್ ನಿಂದ ರಕ್ಷಣೆ ಪಡೆದುಕೊಳ್ಳಲು ಸಾಕಷ್ಟು ಮುಂಜಾಗೃತೆಗಳನ್ನು ತೆಗೆದುಕೊಂಡಿದೆ. ಒಳಾಂಗಣ ಮಾರುಕಟ್ಟೆಗಳು ಚಿತ್ರಮಂದಿರಗಳೂ ಸೇರಿ ಹಲವು ಜನನಿಬಿಡ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಬಂಧ ವಿಧಿಸಲಾಗಿದೆ. ಪ್ರೇಕ್ಷಕರಿಲ್ಲದೆ ಕ್ರೀಡಾಕೂಟಗಳನ್ನು ನಡೆಸಲಾಗುತ್ತದೆ.. ಇಷ್ಟೇ ಅಲ್ಲದೆ ಮತ್ತಷ್ಟು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಬೆಲ್ಜಿಯಂ ಸರ್ಕಾರ ಡಿಸೆಂಬರ್ 26ರಿಂದ ಹೊಸ ಮಾರ್ಗಸೂಚಿಗಳನ್ನು ತರಲು ಮುಂದಾಗಿದೆ.

    Published by:ranjumbkgowda1 ranjumbkgowda1
    First published: