Belgium: ವಾರದಲ್ಲಿ 4 ದಿನ ಕೆಲಸ, 3 ದಿನ ರಜಾ-ಮಜಾ, ನೌಕರರಿಗೆ ಬಂಪರ್ ಗಿಫ್ಟ್, ಇಲ್ಲಿ ಅಂತೀರಾ ಈ ಸ್ಟೋರಿ ಓದಿ

ಬೆಲ್ಜಿಯಂ ಉದ್ಯೋಗಿಗಳಿಗೆ ವಾರದಲ್ಲಿ ಐದು ದಿನಗಳ ಬದಲಿಗೆ ನಾಲ್ಕು ದಿನದ ಕೆಲಸ ಮೂರು ದಿನ ವಾರಾಂತ್ಯದ ರಜೆ ಘೋಷಣೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಲ್ಜಿಯನ್ (Belgium) ಉದ್ಯೋಗಿಗಳಿಗೆ ಅಲ್ಲಿನ ಸರ್ಕಾರ ಗುಡ್ ನ್ಯೂಸ್ ಒಂದನ್ನು ನೀಡಿದೆ. ಬೆಲ್ಜಿಯಮ್ ಉದ್ಯೋಗಿಗಳು ವಾರದಲ್ಲಿ ಐದು ದಿನಗಳ ಬದಲಿಗೆ ನಾಲ್ಕು ದಿನದ ಕೆಲಸ (4 days work) ಮಾಡುವ ಅವಕಾಶವನ್ನು ನೀಡಿದೆ ಮತ್ತು ವೇತನದಲ್ಲೂ ಯಾವುದೇ ರೀತಿಯ ಕಡಿತ ಆಗುವುದಿಲ್ಲ ಎಂದು ತಿಳಿಸಿದೆ. ಕೆಲಸ ಕಡಿಮೆ ಸಂಬಳ ಮಾತ್ರ ಜಾಸ್ತಿ ಇರಬೇಕು ಅಂತಾ ಯಾರು ಬಯಸಲ್ಲ ಹೇಳಿ. ಹೀಗೊಂದು ಸುವರ್ಣಾವಕಾಶವನ್ನು ಬೆಲ್ಜಿಯಮ್ ಕಾರ್ಮಿಕ ಮಾರುಕಟ್ಟೆ (Market) ಸುಧಾರಣೆಗಳ ಅಡಿಯಲ್ಲಿ ಉದ್ಯೋಗಿಗಳಿಗೆ ಈ ವ್ಯವಸ್ಥೆ ಮಾಡಿದೆ. ವಾರದಲ್ಲಿ 4 ದಿನ ಕೆಲಸಕ್ಕೆ ಹಾಜರಾಗುವಂತೆ ಮತ್ತು ಪೂರ್ತಿ ವೇತನ (Full salary) ನೀಡುವ ಭರವಸೆಯನ್ನು ನೀಡಿದೆ.

4 ದಿನಗಳ ಕೆಲಸದ ಜೊತೆಗೆ ಇಲ್ಲಿನ ಉದ್ಯೋಗಿಗಳಿಗೆ ಮತ್ತೊಂದು ಹಕ್ಕನ್ನು ನೀಡಿದೆ. ಅದೇನೆಂದರೆ ಉದ್ಯೋಗಿಗಳು ಕೆಲಸದ ಸಮಯ ಮುಗಿದ ನಂತರ ಸಿಸ್ಟಮ್ ಆಫ್ ಮಾಡುವ, ಕೆಲಸಕ್ಕೆ ಸಂಬಂಧಿಸಿದ ಸಂದೇಶಗಳನ್ನು ನಿರ್ಲಕ್ಷಿಸುವ ಮತ್ತು ತಮ್ಮ ಬಾಸನ್ನೂ ಕೂಡ ನಿರ್ಲಕ್ಷಿಸುವ ಹಕ್ಕನ್ನು ನೀಡಿದೆ. ಇತ್ತೀಚೆಗೆ ಘೋಷಿಸಲಾದ ಕಾರ್ಮಿಕ ಮಾರುಕಟ್ಟೆ ಸುಧಾರಣೆಗಳ ಸರಣಿಯ ಅಡಿಯಲ್ಲಿ ಬೆಲ್ಜಿಯಂನಲ್ಲಿನ ಕಾರ್ಮಿಕರು ಶೀಘ್ರದಲ್ಲೇ ಸಂಬಳವನ್ನು ಕಳೆದುಕೊಳ್ಳದೆ ನಾಲ್ಕು ದಿನಗಳ ವಾರವನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ.

ವಾರಕ್ಕೆ 4 ದಿನವಷ್ಟೆ ಕೆಲಸ

"ನಾವು ಕೊರೋನಾದಿಂದಾಗಿ ಕಳೆದ ಎರಡು ವರ್ಷಗಳನ್ನು ಕಷ್ಟದಲ್ಲಿ ಕಳೆದಿದ್ದೇವೆ. ಈಗ ತಂದಿರುವ ವ್ಯವಸ್ಥೆ ನಾವು ಹೆಚ್ಚು ನವೀನ, ಸಮರ್ಥನೀಯ ಮತ್ತು ಡಿಜಿಟಲ್ ಆರ್ಥಿಕತೆಗೆ ದಾರಿದೀಪವನ್ನು ಪಡೆಯಲು ಸಹಾಯವಾಗುತ್ತದೆ ಜನರು ಮತ್ತು ವ್ಯವಹಾರಗಳನ್ನು ಬಲಿಷ್ಠಗೊಳಿಸುವುದು ನಮ್ಮ ಗುರಿಯಾಗಿದೆ" ಎಂದು ಬೆಲ್ಜಿಯಂ ಪ್ರಧಾನಿ ಅಲೆಕ್ಸಾಂಡರ್ ಡಿ ಕ್ರೂ ಹೇಳಿದರು. ಕೆಲಸದ ಸಮಯವನ್ನು ತಮಗೆ ಬೇಕಾದಂತೆ ಹೊಂದಾಣಿಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಜನರು ಮತ್ತು ಕಂಪೆನಿಗಳಿಗೆ ನೀಡುವುದು ಗುರಿಯಾಗಿದೆ, ಎಂದು ಕೂಡ ಪ್ರಧಾನಮಂತ್ರಿ ಹೇಳಿದ್ದಾರೆ.

ಮೂರು ದಿನಗಳ ವಾರಾಂತ್ಯದ ರಜೆ

ಮೂರು ದಿನಗಳ ವಾರಾಂತ್ಯವನ್ನು ಪಡೆಯಲು ಉದ್ಯೋಗಿಗಳು ಕೆಲಸದ ವಾರದಲ್ಲಿ ಹೆಚ್ಚು ಸಮಯ ಕೆಲಸ ಮಾಡಬೇಕಾಗುತ್ತದೆ. ಇದರರ್ಥ ಅವರು ಹೆಚ್ಚುವರಿ ಆಫ್ ಪಡೆಯಲು 4 ದಿನದಲ್ಲಿ 38-ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ಅಂದರೆ ದಿನಕ್ಕೆ 10 ಗಂಟೆ ಕೆಲಸ ಮಾಡಿದ್ರೆ 3 ದಿನ ವೀಕೆಂಡ್ ಅನುಭವಿಸಬಹುದು.

ಇದನ್ನೂ ಓದಿ: Viral video: ಮನಬಂದಂತೆ ಥಳಿಸಿ ಕಸ ತಿನ್ನಿಸುವ ತನಕ ಬಿಟ್ಟಿಲ್ಲ ಈ ದುಷ್ಕರ್ಮಿಗಳು..!

ಬೆಲ್ಜಿಯಂ ಕಾರ್ಮಿಕ ಸಚಿವ ಪಿಯರೆ-ಯ್ವೆಸ್ ಡರ್ಮ್ಯಾಗ್ನೆ, "ಇದು ತಮ್ಮ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುವ ಜನರಿಗೆ ಸಹಾಯ ಮಾಡುತ್ತದೆ." ತಮ್ಮ ಮಕ್ಕಳ ಪಾಲನೆಯನ್ನು ಹಂಚಿಕೊಳ್ಳುವ ವಿಚ್ಛೇದಿತ ಅಥವಾ ಬೇರ್ಪಟ್ಟ ಪೋಷಕರಿಗೆ ಈ ಪ್ರಸ್ತಾಪವು ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಹೇಳಿದರು.

ಬೆಲ್ಜಿಯಂ ನೌಕರರಿಗೆ ಬಂಪರ್​  

ಅಲ್ಲದೇ ಕಡಿಮೆ ಅವಧಿಯ ವಾರದ ಕೆಲಸವನ್ನು ಮಾಡಬೇಕು ಎಂಬ ಉದ್ಯೋಗಿಗಳ ಮನವಿಯನ್ನು ತಿರಸ್ಕರಿಸುವ ಹಕ್ಕು ಉದ್ಯೋಗದಾತರಿಗೆ ಇದೆ. ಆದರೆ ಏಕೆ ತಿರಸ್ಕರಿಸಲಾಗಿದೆ ಎಂಬುದನ್ನು ಲಿಖಿತವಾಗಿ ವಿವರಿಸಬೇಕಾಗುತ್ತದೆ ಎಂದು ಉಪ ಪ್ರಧಾನಮಂತ್ರಿ ಮತ್ತು ಕಾರ್ಮಿಕ ಸಚಿವರಾದ ಪಿಯೆರೆ-ಯ್ವೆಸ್ ಡರ್ಮಗ್ನೆ ಹೇಳಿದ್ದಾರೆ. 20 ಕ್ಕಿಂತ ಹೆಚ್ಚು ಸಿಬ್ಬಂದಿಯನ್ನು ಹೊಂದಿರುವ ಎಲ್ಲಾ ಉದ್ಯೋಗದಾತರಿಗೆ ಹೊಸ ಕಾನೂನು ಅನ್ವಯಿಸುತ್ತದೆ.

ಸರ್ಕಾರಿ ವಕ್ತಾರ ಹೇಳುವ ಪ್ರಕಾರ, ಗೌರ್ ಮೆಂಟ್ ಉದ್ಯೋಗಿಗಳು ನಾಲ್ಕು ದಿನಗಳ ಕೆಲಸದ ವಾರವನ್ನು ಕೇಳುವ ಸಾಧ್ಯತೆ ಇದೆ. ಇದಕ್ಕಾಗಿ ನಾವು ಆರು ತಿಂಗಳ ಅವಧಿಗೆ ಈ ವ್ಯವಸ್ಥೆಯನ್ನು ನೀಡುತ್ತೇವೆ ಮತ್ತು ಅವರು ವ್ಯವಸ್ಥೆಯನ್ನು ಮುಂದುವರಿಸಲು ಅಥವಾ ಯಾವುದೇ ಋಣಾತ್ಮಕ ಪರಿಣಾಮಗಳಿಲ್ಲದೆ ಐದು ದಿನಗಳ ಕೆಲಸದ ವಾರಕ್ಕೆ ಮರಳಲು ಆಯ್ಕೆ ನೀಡುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ; ಕಳ್ಳತನಕ್ಕಾಗಿ ಮನೆಗೆ ನುಗ್ಗಿದವನು ಕೊನೆಗೆ ಮನೆಯವರಿಗೆ ಹಣ ಇಟ್ಟು ಹೋದ.. Viral Story ಇಲ್ಲಿದೆ ನೋಡಿ

ಮಾಡುವ ಪರವಾಗಿ ವಾದ ಮಂಡಿಸುತ್ತಿವೆ. 2015 ಮತ್ತು 2019 ರ ನಡುವೆ ಐಸ್‌ಲ್ಯಾಂಡ್‌ನ ನಾಲ್ಕು ದಿನಗಳ ಕೆಲಸದ ವಾರದ ಪ್ರಯೋಗವು ಯಶಸ್ವಿಯಾಗಿದೆ ಎಂದು ಘೋಷಿಸಿದ ನಂತರ ಬೆಲ್ಜಿಯಂ ಈ ವ್ಯವಸ್ಥೆ ತರಲು ಮುಂದಾಗಿದೆ. ಇದೇ ರೀತಿಯಾಗಿ ಸ್ಪೇನ್, ಸ್ಕಾಟ್ಲೆಂಡ್ ಮತ್ತು ಜಪಾನ್ ಅಮೆರಿಕ ಮತ್ತು ಐರ್ಲೆಂಡ್‌ನಲ್ಲಿಯೂ ಪ್ರಾರಂಭಿಸಲು ನಿರ್ಧರಿಸಲಾಗಿದೆ..

ಜನವರಿಯಲ್ಲಿ, ಸರ್ಕಾರಿ ನೌಕರರಿಗೆ ಕೆಲಸದ ಸಮಯದ ನಂತರ ಕೆಲಸಕ್ಕೆ ಸಂಬಂಧಿಸಿದ ಸಂದೇಶಗಳನ್ನು ನಿರ್ಲಕ್ಷಿಸುವ ಹಕ್ಕನ್ನು ನೀಡಲಾಯಿತು. ಈಗ ಎಲ್ಲಾ ಬೆಲ್ಜಿಯಂ ಕಾರ್ಮಿಕರು ಇದೇ ಹಕ್ಕನ್ನು ಪಡೆಯುತ್ತಿದ್ದಾರೆ.
Published by:Pavana HS
First published: