ಸಾಮಾಜಿಕ ಜಾಲತಾಣದಲ್ಲಿ ಕ್ರೇಜ್​ ಹುಟ್ಟುಹಾಕುತ್ತಿರುವ #Faceapp: ಆ್ಯಪ್​ ಬಳಕೆಗೆ ಮುನ್ನ ಖಾಸಗಿ ಮಾಹಿತಿ ಬಗ್ಗೆ ಎಚ್ಚರವಹಿಸಿ

ಪ್ರಾರಂಭದಲ್ಲಿ ನಿಮ್ಮ ಖಾಸಗಿತನ ಕಾಪಾಡುವುದಾಗಿ ಈ ಆ್ಯಪ್​ ತಿಳಿಸಿದರೂ ಬಳಿಕ ಸಾರ್ವಜನಿಕವಾಗಿ ಇದನ್ನು ತದನಂತರ ಬಳಕೆ ಮಾಡುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

Seema.R | news18
Updated:July 17, 2019, 8:14 PM IST
ಸಾಮಾಜಿಕ ಜಾಲತಾಣದಲ್ಲಿ ಕ್ರೇಜ್​ ಹುಟ್ಟುಹಾಕುತ್ತಿರುವ #Faceapp: ಆ್ಯಪ್​ ಬಳಕೆಗೆ ಮುನ್ನ ಖಾಸಗಿ ಮಾಹಿತಿ ಬಗ್ಗೆ ಎಚ್ಚರವಹಿಸಿ
ಫೇಸ್​ ಆ್ಯಪ್​​
  • News18
  • Last Updated: July 17, 2019, 8:14 PM IST
  • Share this:
ವಯಸ್ಸಾದ ಮೇಲೆ ನಾವು ಹೇಗೆ ಕಾಣಬಹುದು ಎಂಬ ಕುತೂಹಲ ಪ್ರತಿಯೊಬ್ಬರಲ್ಲಿಯೂ ಸಹಜ. ಈ ಕುತೂಹಲ ತಣಿಸಲೆಂದು ಫೇಸ್​ ಆ್ಯಪ್​ವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಕಳೆದೆರಡು ದಿನಗಳಿಂದ ಕ್ರಿಕೆಟ್, ಬಾಲಿವುಡ್​ ತಾರೆಯರಿಂದ ವಯಸ್ಸಾದ ಮೇಲೆ ಹೇಗೆ ಕಾಣುತ್ತಾರೆ ಎಂಬ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನು ಕಂಡ ಅನೇಕ ಜಾಲತಾಣಿಗರು ಕೂಡ ಈ ಆ್ಯಪ್​ ಬಳಕೆಗೆ ಮುಂದಾಗಿದ್ದು, ಅವರ ಚಿತ್ರಗಳನ್ನು ಕೂಡ ಸಾಮಾಜಿಕ ಜಾಲತಾಣದಲಲ್ಲಿ ಪ್ರಕಟಿಸುತ್ತ ಸಂತಸ ಪಡುತ್ತಿದ್ದಾರೆ.  ಜಾಲತಾಣಿಗರಲ್ಲಿ ಕ್ರೇಜ್​ ಹುಟ್ಟು ಹಾಕುತ್ತಿರುವ ಈ ಆ್ಯಪ್​ ಬಳಕೆಗೆ ಮುನ್ನ ಅದರಲ್ಲಿನ ಕೆಲವು ಎಚ್ಚರಿಕೆ ಅರಿಯುವುದು ಅವಶ್ಯಕ.

2017ರಲ್ಲಿ ಐಒಎಸ್​ ಮತ್ತು ಆ್ಯಂಡ್ರಾಯ್ಡ್​ ನಲ್ಲಿ 2017ರಲ್ಲಿಯೇ ಬಿಡುಗಡೆಯಾಗಿದ್ದ ಈ ಆ್ಯಪ್​ ಈಗ ಬಳಕೆಗೆ ಸಿದ್ಧವಾಗಿದೆ. 60 ವರ್ಷದ ಬಳಿಕ ಮುಖ ಹೇಗೆ ಕಾಣಲಿದೆ ಎಂಬುದಕ್ಕೆ ನಿಮ್ಮ ಗ್ಯಾಲರಿಯಿಂದ ಫೋಟೊ ಅನುಮತಿ ಪಡೆಯುತ್ತದೆ. ನಿಮ್ಮ ಗ್ಯಾಲರಿಯ ಕೇವಲ ಒಂದು ಫೋಟೊಗೆ ಅನುಮತಿ ನೀಡಿದರು. ಅದರಲ್ಲಿನ ಎಲ್ಲ ಫೋಟೊಗಳನ್ನು ಈ ಆ್ಯಪ್​ ಪಡೆಯಬಹುದಾಗಿದೆ.

ಇದನ್ನೂ ಓದಿ: ಸರ್ಕಾರ ರಚನೆಗೂ ಮುನ್ನವೇ ಬಿಜೆಪಿಯಲ್ಲಿ ಶುರುವಾಯ್ತು ಮಂತ್ರಿಗಿರಿ ಲೆಕ್ಕಾಚಾರ; ಯಾರಿಗೆ ಯಾವ ಸ್ಥಾನವಂತೆ ಗೊತ್ತೆ?

ಪ್ರಾರಂಭದಲ್ಲಿ ನಿಮ್ಮ ಖಾಸಗಿತನ ಕಾಪಾಡುವುದಾಗಿ ಈ ಆ್ಯಪ್​ ತಿಳಿಸಿದರೂ ಬಳಿಕ ಸಾರ್ವಜನಿಕವಾಗಿ ಇದನ್ನು ತದನಂತರ ಬಳಕೆ ಮಾಡುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

ಜೊತೆಗೆ ಕಂಪನಿ ಖಾಸಗಿ ನಿಯಮಗಳು ನಿಮ್ಮ ಫೋಟೊ ಹಾಗೂ ಮಾಹಿತಿಯನ್ನು ಸಂಗ್ರಹಿಸಿಕೊಳ್ಳಲು ಅನುಮತಿಯನ್ನು ಪಡೆಯುವುದರಿಂದ ನಿಮ್ಮ ಖಾಸಗಿ ಮಾಹಿತಿ ಸೋರಿಕೆಯಾಗುವ ಎಲ್ಲ ಲಕ್ಷಣಗಳಿವೆ

ಈ ಹಿನ್ನೆಲೆಯಲ್ಲಿ ಈ ಆ್ಯಪ್​ ಬಳಕೆಗೆ ಮುನ್ನ ಎಚ್ಚರಿಕೆವಹಿಸುವುದು ಅಗತ್ಯ.
First published:July 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ