• Home
  • »
  • News
  • »
  • trend
  • »
  • Copper Utensils: ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವ ಮೊದಲು ಈ ವಿಷಯಗಳು ನೆನಪಿರಲಿ!

Copper Utensils: ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವ ಮೊದಲು ಈ ವಿಷಯಗಳು ನೆನಪಿರಲಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತಾಮ್ರದ ಪಾತ್ರೆಗಳು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಆಯುರ್ವೇದ ಹೇಳುತ್ತದೆ. ತಾಮ್ರದ ಪಾತ್ರೆಯಲ್ಲಿ ಇಟ್ಟ ನೀರನ್ನು ಕುಡಿಯುವುದರಿಂದ ಹಲವು ಪ್ರಯೋಜನಗಳಿವೆ. ಇದು ಹೊಟ್ಟೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದೆ.

  • Share this:

    ಇತ್ತೀಚಿನ ದಿನಗಳಲ್ಲಿ ಮತ್ತೆ ತಾಮ್ರದ ಪಾತ್ರೆ (Copper Vessel) ಮತ್ತು ವಿಶೇಷವಾಗಿ ತಾಮ್ರದ ನೀರಿನ ಬಾಟಲಿಯಲ್ಲಿ (Bottle) ನೀರು ಕುಡಿಯುವ (Water Drinking) ಟ್ರೆಂಡ್ (Trend) ಪ್ರಾರಂಭವಾಗಿದೆ. ಮೊದಲು ತಾಮ್ರದ ಪಾತ್ರೆಗಳ ಗುಣದ ಹಿನ್ನೆಲೆ ಜನರು ಬಳಸುತ್ತಿದ್ದರು. ಆದರೆ ಅವುಗಳನ್ನು ಸ್ವಚ್ಛಗೊಳಿಸುವುದು ಸ್ವಲ್ಪ ಜಟಿಲ ಸಮಸ್ಯೆ. ಅದಕ್ಕಾಗಿ ಜನರು ಸ್ಟೀಲ್ ಪಾತ್ರೆ ಬಳಸ ತೊಡಗಿದರು. ಈಗ ಮತ್ತೆ ಜನ ತಾಮ್ರದ ಪಾತ್ರೆ ಬಳಕೆಯತ್ತ ಮುಖ ಮಾಡುತ್ತಿದ್ದಾರೆ. ಆದರೆ ಯಾವುದನ್ನೂ ತಿಳಿಯದೆ ಇದನ್ನು ಬಳಸುವುದು ಆರೋಗ್ಯಕ್ಕೆ ಹಾನಿಕರ ಅಂತಾರೆ ತಜ್ಞರು. ತಾಮ್ರದ ಪಾತ್ರೆಗಳನ್ನು ಬಳಸುವುದಕ್ಕೆ ಕೆಲವು ನಿಯಮಗಳಿವೆ. ಅವುಗಳನ್ನು ನೆನಪಿಡಬೇಕು. ಅವುಗಳ ಬಗ್ಗೆ ನಾವು ಇಲ್ಲಿ ತಿಳಿಯೋಣ.


    ತಾಮ್ರದ ಪಾತ್ರೆಗಳು ಆರೋಗ್ಯಕ್ಕೆ ಪ್ರಯೋಜನಕಾರಿ


    ತಾಮ್ರದ ಪಾತ್ರೆಗಳು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಆಯುರ್ವೇದ ಹೇಳುತ್ತದೆ.  ತಾಮ್ರದ ಪಾತ್ರೆಯಲ್ಲಿ ಇಟ್ಟ ನೀರನ್ನು ಕುಡಿಯುವುದರಿಂದ ಹಲವು ಪ್ರಯೋಜನಗಳಿವೆ. ಇದು ಹೊಟ್ಟೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.  ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದೆ.


    ಆಯುರ್ವೇದ ತಜ್ಞೆ ಡಾ. ದೀಕ್ಸಾ ಭಾವಸರ್ ಸವಲಿಯಾ ಪ್ರಕಾರ, ಚಳಿಗಾಲದ ಮುಂಜಾನೆಯನ್ನು ಒಂದು ಲೋಟ ತಾಮ್ರದ ನೀರಿನಿಂದ ಪ್ರಾರಂಭಿಸುವುದು ಆರೋಗ್ಯಕರ ಎಂದು ಹೇಳುತ್ತಾರೆ.




    ತಾಮ್ರದ ಪಾತ್ರೆ ಬಳಕೆಯ ಆರೋಗ್ಯ ಪ್ರಯೋಜನಗಳು


    ತಾಮ್ರವು ಉತ್ಕರ್ಷಣ ನಿರೋಧಕ ಗುಣ ಹೊಂದಿದೆ. ಇದು ಸೂಕ್ಷ್ಮ ರೇಖೆಗಳು ಮತ್ತು ಸುಕ್ಕು ಕಡಿಮೆ ಮಾಡುತ್ತದೆ. ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿದ ನೀರನ್ನು ಕುಡಿಯುವುದರಿಂದ ನೀವು ಯಂಗ್ ಆಗಿ ಮತ್ತು ಫಿಟ್ ಆಗಿ ಕಾಣಿಸಬಹುದು.


    ಸಂಧಿವಾತ ಮತ್ತು ಕೀಲು ನೋವನ್ನು ಕಡಿಮೆ ಮಾಡುತ್ತದೆ. ಇದು ಪ್ಲ್ಯಾಟಿಂಗ್ ಗುಣಲಕ್ಷಣ ಹೊಂದಿದೆ. ರುಮಟಾಯ್ಡ್ ಸಂಧಿವಾತದಿಂದ ಉಂಟಾಗುವ ಕೀಲು ನೋವು ತಡೆಯುತ್ತದೆ.


    ತಾಮ್ರ ಹಲವು ಔಷಧೀಯ ಗುಣ ಹೊಂದಿದೆ. ರಕ್ತಹೀನತೆ ಅಪಾಯ ಕಡಿಮೆ ಮಾಡುತ್ತದೆ. ದೇಹದಲ್ಲಿ ತಾಮ್ರದ ಕೊರತೆಯು ರಕ್ತಹೀನತೆಗೆ ಕಾರಣವಾಗುತ್ತದೆ. ಒಂದು ಲೋಟ ನೀರು ನಿಮ್ಮ ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸುತ್ತದೆ.  ಗಾಯಗಳನ್ನು ತ್ವರಿತವಾಗಿ ಗುಣಪಡಿಸುತ್ತದೆ.


    ತೂಕವನ್ನು ಕಡಿಮೆ ಮಾಡಲು, ಜೀರ್ಣಕ್ರಿಯೆ ಸುಧಾರಿಸಲು, ಅಧಿಕ ರಕ್ತದೊತ್ತಡ, ಕೆಟ್ಟ ಕೊಲೆಸ್ಟ್ರಾಲ್, ಥೈರಾಯ್ಡ್ ಗ್ರಂಥಿಯ ಕಾರ್ಯನಿರ್ವಹಣೆ ನಿಯಂತ್ರಿಸಲು, ಚರ್ಮದ ಆರೋಗ್ಯ ಮತ್ತು ಮೆಲನಿನ್ ಉತ್ಪಾದನೆಗೆ ಸಹಕಾರಿ ಆಗಿದೆ.


    ತಾಮ್ರದ ಪಾತ್ರೆ ಬಳಸುವ ಪ್ರಮುಖ ನಿಯಮಗಳು


    ತಜ್ಞರ ಪ್ರಕಾರ ತಾಮ್ರದ ಪಾತ್ರೆ ನೀರನ್ನು ಕುಡಿಯಲು 8 ಗಂಟೆಗಳ ಕಾಲ ಪಾತ್ರೆಯಲ್ಲಿ ನೀರು ಇಡಬೇಕು. ಆಗ ತಾಮ್ರದ ಎಲ್ಲಾ ಗುಣಲಕ್ಷಣಗಳು ನೀರನ್ನು ಪ್ರವೇಶಿಸುತ್ತವೆ. ಈ ನೀರನ್ನು ಯಾವಾಗ ಬೇಕಾದರೂ ಸೇವಿಸಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಪ್ರಯೋಜನ ಹೆಚ್ಚು. ಒಂದೇ ಉಸಿರಿನಲ್ಲಿ ನೀರು ಕುಡಿಯಬಾರದು.


    ತಾಮ್ರದ ನೀರಿನ ಪರಿಣಾಮವು ಬಿಸಿ. ಅಸಿಡಿಟಿ ಇರುವವರು ಇದನ್ನು ಸೇವಿಸಬಾರದು. ಕಿಡ್ನಿ ಮತ್ತು ಹೃದ್ರೋಗಿಗಳು ಈ ನೀರನ್ನು ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ. ತಾಮ್ರದ ಪಾತ್ರೆಗಳಲ್ಲಿ ಹಾಲು, ಹುಳಿ ಪದಾರ್ಥಗಳು ಮತ್ತು ಇತರ ಆಹಾರ ಪದಾರ್ಥ ಸೇವಿಸಬೇಡಿ. ತಾಮ್ರದ ಬಾಟಲಿಗಳನ್ನು ವಾರಕ್ಕೆ ಎರಡು ಬಾರಿ ಸ್ವಚ್ಛಗೊಳಿಸಿ.


    ತಾಮ್ರದ ಪಾತ್ರೆ ಸ್ವಚ್ಛಗೊಳಿಸುವುದು ಹೇಗೆ?


    ತಾಮ್ರದ ಪಾತ್ರೆಗಳನ್ನು ನೈಸರ್ಗಿಕವಾಗಿ ಸ್ವಚ್ಛಗೊಳಿಸಲು, ನಿಂಬೆಹಣ್ಣನ್ನು ಅರ್ಧದಷ್ಟು ಕತ್ತರಿಸಿ ಮತ್ತು ಕತ್ತರಿಸಿದ ಭಾಗಕ್ಕೆ ಉಪ್ಪು ಸೇರಿಸಿ. ಅದನ್ನು ಪಾತ್ರೆಯ ಮೇಲೆ ನಿಧಾನವಾಗಿ ಉಜ್ಜಿ.


    ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಕಾಂತಿಯುತ ತ್ವಚೆಗಾಗಿ ಈ ಫೇಸ್ ಮಾಸ್ಕ್ ಟ್ರೈ ಮಾಡಿ!


    ಚಮಚ ಉಪ್ಪು ಮತ್ತು 1 ಕಪ್ ಬಿಳಿ ವಿನೆಗರ್ ಮಿಶ್ರಣ ಮಾಡಿ. ಈಗ ಈ ಮಿಶ್ರಣವನ್ನು ತಾಮ್ರದ ಮೇಲೆ ಮೃದುವಾದ ಬಟ್ಟೆಯಿಂದ ಉಜ್ಜಿ ಮತ್ತು ನೀರಿನಿಂದ ಸ್ವಚ್ಛಗೊಳಿಸಿ.

    Published by:renukadariyannavar
    First published: