ಅಬ್ಬಾಬ್ಬಾ! ಈ ಕಂಜೂಸಿ ಮಹಿಳೆ ಹಣ ಉಳಿಸಲು ಏನೆಲ್ಲಾ ಮಾಡುತ್ತಾಳೆ ನೋಡಿ...

ಹಣ ಉಳಿಸುವುದಕ್ಕಾಗಿ ಕೆಲವೊಂದು ಹುಚ್ಚು ಹುಚ್ಚು ಕೆಲಸಗಳನ್ನು ಮಾಡಿಕೊಂಡು ಅಮೆರಿಕಾದಲ್ಲಿ ಫೇಮಸ್ ಆಗಿಬಿಟ್ಟಿದ್ದಾಳೆ ಈಕೆ

ಡಾಲರ್​​

ಡಾಲರ್​​

  • Share this:

ಖರ್ಚುಗಳನ್ನು ತೂಗಿಸಿಕೊಂಡು ಹಣ ಉಳಿತಾಯ ಮಾಡುವುದು ದೊಡ್ಡ ಸವಾಲಿನ ಕೆಲಸವೆ. ಇದಕ್ಕಾಗಿಯೇ ಅನೇಕ ಹೊಸ ಹೊಸ ಮಾರ್ಗಗಳನ್ನು ಕೆಲವರು ಅನ್ವೇಷಿಸುತ್ತಿರುತ್ತಾರೆ.ಉಳಿತಾದ ಕಾರಣದಿಂದ ಕೆಲವೊಮ್ಮೆ ತುಂಬಾ ಕಂಜೂಸ್​ ಆಗುವುದು ಸಹಜ. ಆದರೆ ಅಮೇರಿಕಾದಲ್ಲಿರುವ ಮಹಿಳೆಯೊಬ್ಬಳು ಮಹಾ ಜುಗ್ಗಿ ಎಂದು ಕರೆಯಿಸಿಕೊಂಡು ಬಿಟ್ಟಿದ್ದಾಳೆ. ಅಮೇರಿಕದಲ್ಲಿ ಅತ್ಯಂತ ಮಿತವ್ಯಯದ ಅಮ್ಮ ಎಂಬುದಾಗಿ ಸ್ವಯಂ ತಪ್ಪೊಪ್ಪಿಕೊಂಡಿರುವ ಈ ಮಹಿಳೆ ಕಂಡು ಕೊಂಡಿರುವ ಉಪಾಯ ಎಲ್ಲರನ್ನು ನಿಬ್ಬೆರಗಾಗಿಸಿದೆ. ಹಣ ಉಳಿತಾಯಕ್ಕಾಗಿ ಈಕೆ ತನ್ನ ಪತಿ ತನಗಿಂತ ಹೆಚ್ಚು ಆಹಾರ ಸೇವಿಸಿದರೆ ಶುಲ್ಕ ವಿಧಿಸಿಕೊಳ್ಳುತ್ತಾಳಂತೆ. ಅಲ್ಲದೇ, ಹಿಮದಿಂದ ಹಲ್ಲುಜ್ಜುವುದು ಮತ್ತು ರಿಪೇರಿಗಳನ್ನು ಸ್ವತಃ ತಾನೇ ಮಾಡಿಕೊಳ್ಳುವುದು.. ಹೀಗೆ ಹಣ ಉಳಿಸುವುದಕ್ಕಾಗಿ ಕೆಲವೊಂದು ಹುಚ್ಚು ಹುಚ್ಚು ಕೆಲಸಗಳನ್ನು ಮಾಡಿಕೊಂಡು ಅಮೆರಿಕಾದಲ್ಲಿ ಫೇಮಸ್ ಆಗಿಬಿಟ್ಟಿದ್ದಾಳೆ.


ಅಮೇರಿಕಾದಲ್ಲಿ ನೆಲೆಸಿರುವ ಬೆಕ್ಕಿ ಗೀಲ್ಸ್‌ಗೆ ಉಳಿತಾಯ ಮಾಡುವ ಹುಚ್ಚು. ತನ್ನ ಮೊದಲ ಮಗ ಜನಿಸಿದ ನಂತರ ಆಕೆ ಮನೆಯಲ್ಲಿಯೇ ಉಳಿಯಲು ನಿರ್ಧರಿಸಿದಳು. ಮನೆಯಲ್ಲಿ ಪೂರ್ಣ ಪ್ರಮಾಣದ ಗೃಹಿಣಿಯಾಗಿ ನೆಲೆ ನಿಂತು ನಂತರ ದುಡ್ಡು ಉಳಿತಾಯ ಮಾಡುವ ಬಯಕೆಯನ್ನು ಹೊಂದಿದ ಆಕೆ ಇಂತಹ ಹುಚ್ಚು ಸಾಹಸಕ್ಕೆ ಕೈಹಾಕಿದ್ದಾಳಂತೆ. ಇದೀಗ ಬೆಕ್ಕಿ ಯಾವ ರೀತಿಯಲ್ಲೆಲ್ಲಾ ಹಣ ಉಳಿಸುತ್ತಾಳೆ ಎಂಬುದು ವೈರಲ್ ಆಗಿದ್ದು, ತಾನು ಮಾಡುವ ಹುಚ್ಚು ಪ್ರವೃತ್ತಿಯನ್ನು ಸ್ವತಃ ಆಕೆಯೇ ಒಪ್ಪಿಕೊಂಡಿದ್ದಾಳೆ. ಯಾವ ಕೆಲಸದಿಂದ ಎಲ್ಲಾ ತಾನೇ ಉಳಿತಾಯ ಮಾಡಬಹುದು ಎಂದು  ಸಾಧ್ಯವೋ  ಅಲ್ಲೆಲ್ಲಾ ಹುಚ್ಚುಚ್ಚಾಗಿ ಉಳಿತಾಯ ಮಾಡುತ್ತಿದ್ದಾಳೆ.


ಬೆಕ್ಕಿ ಎರಡು ಮಕ್ಕಳು ಹಾಗೂ ಪತಿ ಜೇಯೊಂದಿಗೆ ಮುದ್ದಾದ ಸಂಸಾರವನ್ನು ನಡೆಸುತ್ತಿದ್ದರು ಪತ್ನಿಯ ಉಳಿತಾಯದ ಅತಿರೇಕ ವರ್ತನೆ ಪತಿಗೆ ಇರಿಸುಮುರಿಸು ಉಂಟು ಮಾಡಿದೆಯಂತೆ. ಬೆಕ್ಕಿ ತನ್ನ ಮೊದಲ ಮಗನ ಜನನದ ಸಮಯದಲ್ಲಿ ಒಳ್ಳೆಯ ಸಂಬಳದ ಉದ್ಯೋಗವನ್ನು ತೊರೆದು ಮನೆಯಲ್ಲಿಯೇ ನಿಲ್ಲಲು ನಿರ್ಧರಿಸಿದಳು.  ಹಣ ಉಳಿತಾಯ ಮಾಡುವುದನ್ನೇ ಈಗ ಈಕೆ ಕಸುಬು ಆಗಿಸಿಕೊಂಡಿದ್ದಾಳೆ ಎನ್ನುತ್ತಾನೆ.


ಇದನ್ನು ಓದಿ: ವಿಶ್ವದ ಅತೀ ದೊಡ್ಡ ಲಾಲಿಪಾಪ್ ಮಾಡಿದ ಕೇರಳದ ಯುಟ್ಯೂಬರ್

ಜೀವನದಲ್ಲಿ ಹಣ ಉಳಿಸುವುದು ಬಹಳ ಮುಖ್ಯ ಎಂಬುದನ್ನು ನಾನು ಅರಿತಿದ್ದೇನೆ.. ಆ ವರ್ಷದಲ್ಲಿ ನಮ್ಮ ಖರ್ಚುಗಳನ್ನು ಮಿತ ವ್ಯಯಗೊಳಿಸಿದೆವು. ಮನೆಯ ಪಾತ್ರೆಗಳನ್ನು ಬೆಕ್ಕಿ ಬಟ್ಟೆಗಳೊಂದಿಗೆ ವಾಶಿಂಗ್ ಮೆಶಿನ್‌ನಲ್ಲಿ ತೊಳೆಯಲು ಆರಂಭಿಸಿದಳು. ಪುಡಿಮಾಡಿದ ಪತ್ರಿಕೆಗಳನ್ನು ಗೋಡೆಯ ನಿರೋಧನವಾಗಿ ಬಳಸಿದಳು ಅಂತೆಯೇ ಮುರಿದ ಕ್ಯಾಬಿನೆಟ್‌ಗಳನ್ನು ಸರಿಪಡಿಸಲು ಅಂಟನ್ನು ಬಳಸಿದಳು.


ಇದನ್ನು ಓದಿ: ರಾಜ್ಯದಲ್ಲಿ ಇನ್ನು ಐದು ದಿನ ಭಾರೀ ಮಳೆ ಸಾಧ್ಯತೆ; ಕೊಡಗಿನಲ್ಲಿ ರೆಡ್​ ಆಲರ್ಟ್​​

ಅದೇ ರೀತಿ ನಲ್ಲಿ ನೀರನ್ನು ಉಳಿಸುವುದಕ್ಕಾಗಿ ಹೊರಗಿನ ಹಿಮವನ್ನು ಬಳಸಿ ಹಲ್ಲು ಉಜ್ಜುತ್ತಿದ್ದರಂತೆ. ನಲ್ಲಿಯಿಂದ ಬರುವ ನೀರಿಗೆ ನಾವು ದುಡ್ಡು ನೀಡಬೇಕಾಗುತ್ತದೆ. ರಸ್ತೆಯ ಕೆಳಗೆ ಮುಕ್ತವಾಗಿ ಮಂಜುಗಡ್ಡೆ ದೊರೆಯುತ್ತದೆ. ಹಾಗಾಗಿ ನಾವು ಅದನ್ನೇ ನೀರಿನಂತೆ ಬಳಸುತ್ತೇವೆ. ಬೆಕ್ಕಿ ಹಣ ಉಳಿಸಲು ಉಳಿತಾಯ ಮಾಡುವ ಇಚ್ಛೆಯಿಂದ ಚಿತ್ರ ವಿಚಿತ್ರ ಕೆಲಸಗಳನ್ನು ಮಾಡುತ್ತಿದ್ದಾಳೆ. ನಾನು ಎಲ್ಲಿಯಾದರೂ ಮೊಜರೆಲ್ಲಾ ಸ್ಟಿಕ್ ಅನ್ನು ಆರ್ಡರ್ ಮಾಡಿದಲ್ಲಿ ಅದರಲ್ಲಿ ನಾಲ್ಕು ಸ್ಟಿಕ್ ಇದ್ದು ಮೂರು ನಾನು ತಿಂದು ಒಂದನ್ನು ಆಕೆ ತಿನ್ನುತ್ತಾಳೆ ನಂತರ ಜೇ ನೀನು 75% ಶುಲ್ಕ ಪಾವತಿಸುತ್ತಿರುವೆ ಎಂದು ಹೇಳುತ್ತಾಳೆ.


ವರ್ಷಗಳಿಂದೀಚೆಗೆ ಬೆಕ್ಕಿ ಸಾಕಷ್ಟು ಹಣವನ್ನು ಉಳಿಸಿದ್ದಾಳೆ. ಆಕೆ ಉದ್ಯೋಗಕ್ಕೆ ಹೋಗುತ್ತಿರುವಾಗ ಕೂಡ ಆಕೆಯ ಬಳಿ ಇಷ್ಟೊಂದು ಹಣವಿರುತ್ತಿರಲಿಲ್ಲ ಎಂಬುದು ಬೆಕ್ಕಿಯ ಮನದಾಳದ ಮಾತಾಗಿದೆ.First published: