ಒಂದೆರಡು ಮಕ್ಕಳಿದ್ದರೆ ಓಕೆ. ಅಬ್ಬಬ್ಬಾ ಅಂದರೆ ಮೂರು ಮಕ್ಕಳಿದ್ದರು ಸಾಕು. ಆದರೆ ಇಲ್ಲೊಬ್ಬ ವ್ಯಕ್ತಿ ಮಾತ್ರ ಬರೋಬ್ಬರಿ 23 ಮಕ್ಕಳ ತಂದೆಯಾಗಿದ್ದಾನೆ. ಆ ಮೂಲಕ ಸಾಕಷ್ಟು ಜನರ ಅಚ್ಚರಿಗೆ ಕಾರಣನಾಗಿದ್ದಾನೆ.
ಅಲ್ಲೆನ್ (40) ಎಂಬ ಆಸ್ಟ್ರೇಲಿಯಾ ಮೂಲದ ವ್ಯಕ್ತಿ ಕಳೆದ ವರ್ಷ 23 ಮಕ್ಕಳ ತಂದೆಯಾಗಿದ್ದಾನೆ. ಅಂದರೆ ಆತ ತನ್ನ ವೀರ್ಯ ಮಾರಾಟ ಮಾಡುವ ಮೂಲಕ ಬಹು ಮಕ್ಕಳ ಹುಟ್ಟಿಗೆ ಕಾರಣನಾಗಿದ್ದಾನೆ.
ವಿವಾಹಿತ ಅಲ್ಲೆನ್ಗೆ ಬೇರೆ ಯುವತಿಯ ಜತೆಗೆ ಮದುವೆ ಆಗಿದೆ. ಎರಡು ಮಕ್ಕಳು ಕೂಡ ಇದ್ದಾರೆ. ಆದರೆ ಈತನಿಗೆ ವೀರ್ಯ ದಾನ ಮಾಡುವ ಅಭ್ಯಾಸವೊಂದಿತ್ತು. ಅದೇ ಅಭ್ಯಾಸವನ್ನು ಫುಲ್ ಟೈಮ್ ಆಗಿ ಮಾಡಿಕೊಂಡುಬಿಟ್ಟಿದ್ದಾನೆ.
ಅಂದಹಾಗೆಯೇ, ಕಳೆದ ಒಂದು ವರ್ಷದಲ್ಲಿ ಅಲ್ಲೆನ್ ಬರೋಬ್ಬರಿ 23 ಜನರಿಗೆ ಸ್ಪರ್ಮ್ ಮಾರಾಟ ಮಾಡಿದ್ದಾನೆ. ಅನೇಕ ಹೆಣ್ಣು ಮಕ್ಕಳಿಗೆ ನನ್ನ ಸ್ಪರ್ಮ್ ಬೇಕಂತೆ ಹಾಗೆ ನನ್ನ ಬಳಿ ಕೇಳುತ್ತಾರೆ. ಅವರಿಗಾಗಿ ನಾನು ಕೊಡುತ್ತಿದ್ದೇನೆ ಎಂದು ಹೇಳುತ್ತಾನೆ. ಅಚ್ಚರಿ ಎಂದರೆ ಪ್ರತಿದಿನ ಮೂರು ಹೆಣ್ಣು ಮಕ್ಕಳು ಈತನ ಬಳಿ ಸ್ಪರ್ಮ್ ಕೇಳುತ್ತಾರಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ