HOME » NEWS » Trend » BEAUTY TIPS BULLDOG CLIP WOULD BE CHEAPER BIZARRE LIP JEWELLERY BAFFLES NETIZENS STG SCT

ಇದಕ್ಕಿಂತ ಬುಲ್‍ಡಾಗ್ ಕ್ಲಿಪ್ ಬೆಟರ್!; ವಿಚಿತ್ರವಾದ ಲಿಪ್ ಜ್ಯುವೆಲರಿ ನೋಡಿ ಮೂಗು ಮುರಿದ ಫ್ಯಾಷನ್ ಪ್ರಿಯರು

ಜರ್ಮನಿ ಮೂಲದ ಆಭರಣ ಬ್ರ್ಯಾಂಡ್‌ ಒಂದು ವಿನ್ಯಾಸ ಮಾಡಿರುವ ಆ ಮುಖ ಆಭರಣ, ಕ್ಲಿಪ್ ಆಕೃತಿಯಲ್ಲಿದ್ದು, “ನಿಮ್ಮ ಗಲ್ಲ ಮತ್ತು ಕೆಳತುಟಿಯನ್ನು ಸುಂದರವಾಗಿಸಲು” ಎಂಬ ಟ್ಯಾಗ್‍ಲೈನ್‍ನೊಂದಿಗೆ ಪ್ರಚಾರ ಪಡೆಯುತ್ತಿದೆ.

Trending Desk
Updated:June 10, 2021, 4:38 PM IST
ಇದಕ್ಕಿಂತ ಬುಲ್‍ಡಾಗ್ ಕ್ಲಿಪ್ ಬೆಟರ್!; ವಿಚಿತ್ರವಾದ ಲಿಪ್ ಜ್ಯುವೆಲರಿ ನೋಡಿ ಮೂಗು ಮುರಿದ ಫ್ಯಾಷನ್ ಪ್ರಿಯರು
ಲಿಪ್ ಜ್ಯುವೆಲರಿ
  • Share this:

ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಹೊಸ ಫ್ಯಾಷನ್ ಬರುತ್ತಲೇ ಇರುತ್ತದೆ. ಇದೀಗ ಲಿಪ್ಟ್​ ಜ್ಯುವೆಲರಿಯ ಟ್ರೆಂಡ್ ಸೃಷ್ಟಿಯಾಗಿದ್ದು, ಕ್ಲಿಪ್ ರೀತಿಯಲ್ಲಿರುವ ತುಟಿ ಆಭರಣವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ದಿ ಎಮ್‍ವೈಬರ್ಲಿನ್‍ನ ಈ ಮುಖ ಆಭರಣ, ದುಂಡಾದ ತುದಿಗಳನ್ನು ಹೊಂದಿರುವ ಎರಡು ಕೊಕ್ಕೆಗಳನ್ನು ಹೊಂದಿದ್ದು, ಕೆಳತುಟಿಗೆ ಸರಿಯಾಗಿ ಹೊಂದಿಕೊಳ್ಳುತ್ತದೆ. ಅದು ಗಲ್ಲದ ಕೆಳಗೆ ನೇತಾಡುವಂತಹ ಜೆಮೆಟ್ರಿಕ್ ಫಲಕವನ್ನು ಕೂಡ ಹೊಂದಿದೆ. 


ಜನಪ್ರಿಯ ವ್ಯಕ್ತಿಗಳು ಏನನ್ನು ಧರಿಸಿದರೂ ಅಥವಾ ಜನಪ್ರಿಯ ಬ್ರ್ಯಾಂಡ್‌ಗಳು ಎಂತಹ ಉತ್ಪನ್ನವನ್ನು ಮಾರುಕಟ್ಟೆಗೆ ತಂದರೂ ಅದು ಫ್ಯಾಶನ್ ಎನಿಸಿಕೊಳ್ಳುವ ಕಾಲವಿದು. ಹೊಸ ಅಥವಾ ವಿಲಕ್ಷಣ ಟ್ರೆಂಡ್ ಹುಟ್ಟು ಹಾಕುವುದರಲ್ಲಿ ಸಿನಿಮಾ ತಾರೆಯರದಂತೂ ಎತ್ತಿದ ಕೈ. ಬಾಲಿವುಡ್ ನಟ ರಣ್‍ವೀರ್ ಸಿಂಗ್ ಅದಕ್ಕೊಂದು ಉತ್ತಮ ಉದಾಹರಣೆ. ಫ್ಯಾಶನ್ ಪ್ರಪಂಚದಲ್ಲಿ ಟ್ರೆಂಡ್ ಆಗುವ ಆ ಫ್ಯಾಶನ್‍ಗಳು ಒಮ್ಮೊಮ್ಮೆ ‘ಆಹಾ’ ಎನ್ನುವಂತಿದ್ದರೆ, ಕೆಲವೊಮ್ಮೆ ವಿಲಕ್ಷಣವಾಗಿರುತ್ತದೆ. ವಿಲಕ್ಷಣ ಫ್ಯಾಶನ್ ಟ್ರೆಂಡ್‍ಗಳು ರ‍್ಯಾಂಪ್ ಮೇಲೆ ಮಿಂಚಿದರೂ ಸಹ, ಜನಸಾಮಾನ್ಯರ ಮಧ್ಯೆ ನಗೆಪಾಟಲಿಗೆ ಈಡಾಗುತ್ತದೆ. ಅಂತಹ ವಿಲಕ್ಷಣ ಫ್ಯಾಶನ್ ಮುಖ ಆಭರಣವೊಂದು ಈಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.ಇದನ್ನೂ ಓದಿ: Love Story: ಪಕ್ಕದ ಮನೆಯಲ್ಲೇ 11 ವರ್ಷ ಗುಟ್ಟಾಗಿ ಸಂಸಾರ; ಕೇರಳದಲ್ಲೊಂದು ವಿಚಿತ್ರ ಲವ್ ಸ್ಟೋರಿ!

ಜರ್ಮನಿ ಮೂಲದ ಆಭರಣ ಬ್ರ್ಯಾಂಡ್‌ ಒಂದು ವಿನ್ಯಾಸ ಮಾಡಿರುವ ಆ ಮುಖ ಆಭರಣ, ಕ್ಲಿಪ್ ಆಕೃತಿಯಲ್ಲಿದ್ದು, “ನಿಮ್ಮ ಗಲ್ಲ ಮತ್ತು ಕೆಳತುಟಿಯನ್ನು ಸುಂದರವಾಗಿಸಲು” ಎಂಬ ಟ್ಯಾಗ್‍ಲೈನ್‍ನೊಂದಿಗೆ ಪ್ರಚಾರ ಪಡೆಯುತ್ತಿದೆ. ನೆಟ್ಟಿಗರು ಅದನ್ನು ಬುಲ್‍ಡಾಗ್ ಕ್ಲಿಪ್ ಜೊತೆ ಹೋಲಿಕೆ ಮಾಡಿದ್ದಾರೆ. ‘ಈ ಮುಖ ಆಭರಣಕ್ಕಿಂತ ಬುಲ್‍ಡಾಗ್ ಕ್ಲಿಪ್ ಅಗ್ಗವಾಗಿದೆ ಮತ್ತು ಲಾಭದಾಯಕ’, ‘ವೈಯಕ್ತಿಕ ಅನುಭವದಿಂದ ಹೇಳುತ್ತೇನೆ, ಈ ತುಟಿ ಆಭರಣದ ಅಗತ್ಯವೇ ಇಲ್ಲ, ‘ತುಟಿಗಳಿಗೆ ಬುಲ್‍ಡಾಗ್ ಕ್ಲಿಪ್ ಹಾಕಿದಂತಿದೆ’ ಎಂದೆಲ್ಲಾ ಸಾಮಾಜಿಕ ಮಾಧ್ಯಮ ಬಳಕೆದಾರರು ಟೀಕೆ ಮಾಡುತ್ತಿದ್ದಾರೆ.
ದಿ ಎಮ್‍ವೈಬರ್ಲಿನ್‍ನ ಈ ಮುಖ ಆಭರಣ, ದುಂಡಾದ ತುದಿಗಳನ್ನು ಹೊಂದಿರುವ ಎರಡು ಕೊಕ್ಕೆಗಳನ್ನು ಹೊಂದಿದ್ದು, ಕೆಳತುಟಿಗೆ ಸರಿಯಾಗಿ ಹೊಂದಿಕೊಳ್ಳುತ್ತದೆ. ಅದು ಗಲ್ಲದ ಕೆಳಗೆ ನೇತಾಡುವಂತಹ ಜೆಮೆಟ್ರಿಕ್ ಪ್ಯಾನಲನ್ನು ಕೂಡ ಹೊಂದಿದೆ.


ಇದನ್ನೂ ಓದಿ: Crime News: ಮಗನಿಗೆ ತಿಳಿಯದಂತೆ ಸೊಸೆಯನ್ನೇ ಮಾರಾಟ ಮಾಡಿದ ಮಾವ; ಕಾರಣ ಕೇಳಿದ್ರೆ ಶಾಕ್ ಆಗ್ತೀರ!

ಮುಂಡ್‍ಸ್ಟಕ್ 2 ಎಂದು ಕರೆಯಲ್ಪಡುವ ಈ ಸ್ಟೇನ್‍ಲೆಸ್ ಸ್ಟೀಲ್ ಆಭರಣವು ದಿ ಎಮ್‍ವೈಬರ್ಲಿನ್ ಬ್ರಾಂಡ್‍ನ ವೈಶಿಷ್ಟ್ಯವಾಗಿದೆ. ಅದು ತುಟಿಯಿಂದ ನೇತಾಡುವಂತ ಆಭರಣವಾಗಿದ್ದು, ಎಲ್ಲಾ ಗಾತ್ರದ ಬಾಯಿ ಮತ್ತು ತುಟಿಗಳಿಗೆ ಹೊಂದಿಕೊಳ್ಳುತ್ತದೆ. “ಅದರ ಕನಿಷ್ಟ ವಿನ್ಯಾಸ ಮತ್ತು ಹಗುರ ರಚನೆಯಿಂದಾಗಿ, ಯಾವುದೇ ಒತ್ತಡದ ಅಗತ್ಯವಿಲ್ಲದೆ ನಿಮ್ಮ ತುಂಬಾ ಚೆನ್ನಾಗಿ ತುಟಿಗಳಿಗೆ ಹೊಂದಿಕೊಳ್ಳುತ್ತದೆ.ಈ ಅಭರಣ ಮೂರು ಬಣ್ಣಗಳಲ್ಲಿ ಲಭ್ಯವಿದ್ದು, ಖರೀದಿಗೆ ಅತ್ಯಂತ ಸೂಕ್ತವಾಗಿದೆ” ಎಂದು ಕಂಪನಿಯ ಅಧಿಕೃತ ವೆಬ್‍ಸೈಟ್‍ನಲ್ಲಿ ಬರೆಯಲಾಗಿದೆ. ಮೂರು ಬಣ್ಣಗಳು ಅಂದರೆ ಯಾವ ಯಾವ ಬಣ್ಣಗಳಲ್ಲಿ ಲಭ್ಯವಿದೆ ಅಂತೀರಾ? ಅವೇ ಬಂಗಾರ, ಬೆಳ್ಳಿ ಮತ್ತು ಕಪ್ಪು. ಹಾಗಾದರೆ ಮುಂಡ್‍ಸ್ಟಾಕ್‍ನ 2 ತುಟಿ ಆಭರಣದ ಬೆಲೆ ಎಷ್ಟು? ಬರೋಬ್ಬರಿ 9,700.42ರೂ. !

Youtube Video

“ಮುಂಡ್‍ಸ್ಟಾಕ್‍ 2ನಲ್ಲಿರುವ ಸೂಕ್ಷ್ಮವಾದ ಮತ್ತು ನಿಖರವಾದ ರೇಖಾಚಿತ್ರಗಳು ಪ್ರತಿಯೊಂದು ಉಡುಪಿನೊಂದಿಗೆ ಹೊಂದಿಕೊಂಡು, ಉಡುಪಿನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ನೀವು ಆಯ್ಕೆ ಮಾಡುವ ಬಣ್ಣವನ್ನು ಆಧರಿಸಿ, ನಿಮ್ಮ ಚರ್ಮದ ವಾರ್ಮ್ ಅಥವಾ ಕೂಲ್ ಆಗಿ ಕಾಣುವಂತೆ ಮಾಡುವ ಸಾಮರ್ಥ್ಯ ಈ ಆಭರಣಕ್ಕೆ ಇದೆ.” ಎಂದು ದ ಎಮ್‍ವೈಬರ್ಲಿನ್ ಕಂಪೆನಿಯ ಅಧಿಕೃತ ವೆಬ್‍ಸೈಟ್‍ನಲ್ಲಿ ಈ ಆಭರಣವನ್ನು ಮತ್ತಷ್ಟು ಹೊಗಳಲಾಗಿದೆ.Published by: Sushma Chakre
First published: June 10, 2021, 4:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories