Indian Tourism: ನೀವು ಪ್ರವಾಸಕ್ಕೆ ಹೋಗಲು ಪ್ಲ್ಯಾನ್ ಮಾಡ್ತಾ ಇದ್ದೀರಾ? ಹಾಗಿದ್ರೆ ಈಶಾನ್ಯ ಭಾರತದ ಈ ಸ್ಥಳಗಳಿಗೆ ಹೋಗಿ ಬನ್ನಿ

ಈಶಾನ್ಯ ಭಾರತಕ್ಕೆ ನೀವು ವಿಹಾರಕ್ಕೆ ಹೋದರೆ ಈ ಸುಂದರವಾದ ಸ್ಥಳಗಳೊಂದಿಗೆ ಪ್ರಾರಂಭಿಸಿ, ಅಲ್ಲಿ ನೀವು ಜೂನ್ ನಲ್ಲಿ ನಿಮ್ಮ ಸಂಗಾತಿಯೊಂದಿಗೆ ಹೋದರೆ ಉತ್ತಮವಾದ ಸಮಯವನ್ನು ಕಳೆಯಬಹುದು. ಈ ಸ್ಥಳಗಳು ಹಚ್ಚ ಹಸಿರಿನಿಂದ ಕೂಡಿದ್ದು ಇಂದಿಗೂ ಪ್ರಕೃತಿಯೊಂದಿಗೆ ಸಾಕಷ್ಟು ಬೆರೆತು ಹೋಗಿರುವುದನ್ನು ಕಾಣಬಹುದು.

ಈಶಾನ್ಯ ಭಾರತದ ಪ್ರವಾಸಿ ತಾಣಗಳು

ಈಶಾನ್ಯ ಭಾರತದ ಪ್ರವಾಸಿ ತಾಣಗಳು

  • Share this:
ನೀವು ಮತ್ತು ನಿಮ್ಮ ಸಂಗಾತಿಯು ಈ ಮಹಾ ನಗರಗಳಲ್ಲಿ ದಿನವಿಡೀ ಕೆಲಸ ಮಾಡಿಕೊಂಡು ಸಂಜೆ ಮನೆಗೆ ಬಂದು ಮತ್ತೆ ಅಡುಗೆ (Cooking) ಮಾಡುವುದು ಮತ್ತು ಮಕ್ಕಳನ್ನು (Children) ನೋಡಿಕೊಳ್ಳುವುದು, ಅವರ ವಿದ್ಯಾಭ್ಯಾಸ (Education) ನೋಡುವುದು ಹೀಗೆ ಅನೇಕ ಕೆಲಸಗಳಲ್ಲಿ ಬ್ಯುಸಿ ಆಗಿದ್ದು, ಇದೆಲ್ಲದರ ಮಧ್ಯೆ ನಿಮಗೆ ‘ಸಾಕಪ್ಪಾ ಸಾಕು ಸ್ವಲ್ಪ ದಿನ ಆಫೀಸಿಗೆ ರಜೆ (Holiday) ಹಾಕಿ ಎಲ್ಲಾದರೂ ದೂರ ಪ್ರವಾಸಕ್ಕೆ (Tour) ಹೋಗಿ ಬರೋಣ’ ಅಂತ ಅನ್ನಿಸುವುದು ಸಹಜವಾದ ವಿಷಯವಾಗಿರುತ್ತದೆ. ಹಾಗಾದರೆ ಮತ್ಯಾಕೆ ತಡ ಸಂಗಾತಿ ಇಲ್ಲ ಕುಟುಂಬ (Family), ಸ್ನೇಹಿತರ ಜೊತೆ ಒಂದು ಭಾರಿ ಈಶಾನ್ಯ ಭಾರತದತ್ತ (North India) ಸುತ್ತಾಡಿಕೊಂಡು ಬನ್ನಿ.

ನೀವು ಪ್ರಕೃತಿ ಮತ್ತು ಸಾಹಸವನ್ನು ತುಂಬಾನೇ ಇಷ್ಟಪಡುತ್ತಿದ್ದರೆ, ನೀವು ಈಶಾನ್ಯ ಭಾರತಕ್ಕೆ ಭೇಟಿ ನೀಡಲು ಜೂನ್ ಅತ್ಯುತ್ತಮ ಸಮಯವಾಗಿದೆ . ಈಶಾನ್ಯ ಭಾರತದ ಸ್ಥಳಗಳು ಎಂದರೆ ನಾಗಲ್ಯಾಂಡ್, ಮಣಿಪುರ, ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ಅಂತಹ ರಾಜ್ಯಗಳನ್ನು ಒಳಗೊಂಡಿದೆ. ಸಾಮಾನ್ಯವಾಗಿ ನಾವು ಎಲ್ಲೇ ಹೋಗಬೇಕಾದರೂ ಮೊದಲು ಆ ಸ್ಥಳಗಳ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಪಡೆದುಕೊಂಡು ನಂತರವೇ ಅಲ್ಲಿರುವ ಹೊಟೇಲ್ ಗಳನ್ನು ಮುಂಗಡವಾಗಿ ಕಾಯ್ದಿರಿಸಿ ಪ್ರಯಾಣವನ್ನು ಶುರು ಮಾಡುತ್ತೇವೆ.

ಈಶಾನ್ಯ ಭಾರತದ ಪ್ರವಾಸಿ ತಾಣಗಳು
ಕೆಲವೊಮ್ಮೆ ಈ ಅಂತರ್ಜಾಲದಲ್ಲಿಯೂ ಸಹ ಕೆಲವು ಸ್ಥಳಗಳ ಬಗ್ಗೆ ಹೆಚ್ಚಿನ ಮಾಹಿತಿಯೇ ಇರುವುದಿಲ್ಲ. ಅಂತಹ ಸ್ಥಳಗಳಿಗೆ ನೀವೇ ಖುದ್ದು ಹುಡುಕಿಕೊಂಡು ಹೋದರೆ ಅಲ್ಲಿ ಸಿಗುವ ಮಜಾನೇ ಬೇರೆ ಆಗಿರುತ್ತದೆ. ಅಂತಹ ಯಾರು ನೋಡದ ಸ್ಥಳಗಳನ್ನು ಹುಡುಕಿಕೊಂಡು ಹೋದರೆ, ನೀವು ಎಂದಿಗೂ ಆ ಸ್ಥಳಗಳಿಂದ ಹಿಂತಿರುಗಿ ಬರಲು ಬಯಸುವುದಿಲ್ಲ.

ಈಶಾನ್ಯ ಭಾರತಕ್ಕೆ ನೀವು ವಿಹಾರಕ್ಕೆ ಹೋದರೆ ಈ ಸುಂದರವಾದ ಸ್ಥಳಗಳೊಂದಿಗೆ ಪ್ರಾರಂಭಿಸಿ, ಅಲ್ಲಿ ನೀವು ಜೂನ್ ನಲ್ಲಿ ನಿಮ್ಮ ಸಂಗಾತಿಯೊಂದಿಗೆ ಹೋದರೆ ಉತ್ತಮವಾದ ಸಮಯವನ್ನು ಕಳೆಯಬಹುದು. ಈ ಸ್ಥಳಗಳು ಹಚ್ಚ ಹಸಿರಿನಿಂದ ಕೂಡಿದ್ದು ಇಂದಿಗೂ ಪ್ರಕೃತಿಯೊಂದಿಗೆ ಸಾಕಷ್ಟು ಬೆರೆತು ಹೋಗಿರುವುದನ್ನು ಕಾಣಬಹುದು.

1. ಜುಕೋ ಕಣಿವೆ
ನಾಗಾಲ್ಯಾಂಡ್ ಮತ್ತು ಮಣಿಪುರದ ಗಡಿಯಲ್ಲಿರುವ ಜುಕೋ ಕಣಿವೆಯಿಂದ ನಿಮ್ಮ ವಿಹಾರ ಪ್ರಾರಂಭವಾಗಲಿ. ಈ ಸ್ಥಳವು ತನ್ನ ವ್ಯಾಪಕ ಶ್ರೇಣಿಯ ಋತುಮಾನದ ಹೂವುಗಳು, ಸಸ್ಯಗಳು ಮತ್ತು ಪ್ರಾಣಿಗಳಿಗೆ ತುಂಬಾನೇ ಹೆಸರುವಾಸಿಯಾಗಿದೆ. ಇದು ಪ್ರಾಥಮಿಕವಾಗಿ ಜುಕೋ ಲಿಲಿಗೆ ಜನಪ್ರಿಯವಾಗಿದೆ, ಇದು ಈ ಕಣಿವೆಯಲ್ಲಿ ಮಾತ್ರ ಕಂಡು ಬರುತ್ತದೆ. ಈ ಕಣಿವೆಯೂ ಸಮುದ್ರ ಮಟ್ಟದಿಂದ 2452 ಮೀಟರ್ ಎತ್ತರದಲ್ಲಿದೆ.

ಇದನ್ನೂ ಓದಿ:  Fort: ಚಕ್ರವರ್ತಿ ಪೃಥ್ವಿರಾಜ್ ಚೌಹಾಣ್ ಎಷ್ಟು ಸುಂದರ ಕೋಟೆ ಕಟ್ಟಿಸಿದ್ದರು ನೋಡಿ! ಫೋಟೋಗಳು ಇಲ್ಲಿವೆ

2. ಭಾಲುಕ್ಪಾಂಗ್
ಈ ಸ್ಥಳವು ಅರುಣಾಚಲ ಪ್ರದೇಶದಲ್ಲಿದೆ. ಒಮ್ಮೆ ಭೇಟಿ ನೀಡಿದ ನಂತರ ದಂಪತಿಗಳು ಈ ನಗರವನ್ನು ಬಿಟ್ಟು ಹಿಂತಿರುಗಿ ಬರಲು ಇಷ್ಟ ಪಡುವುದಿಲ್ಲ ಅಷ್ಟೊಂದು ಉತ್ತಮ ರಜಾ ಮಜಾ ನೀಡುತ್ತದೆ ಈ ಸ್ಥಳ. ಅದರ ಸಂಸ್ಕೃತಿ ಮತ್ತು ಜನರು ಈ ಸ್ಥಳವನ್ನು ಮತ್ತಷ್ಟು ಪ್ರೀತಿಸಲು ಕಾರಣವಾಗುತ್ತಾರೆ. ಭಾಲುಕ್ಪಾಂಗ್ ನಲ್ಲಿ ನೀವು ಪ್ರತಿದಿನ ಮುಂಜಾನೆ ಸೂರ್ಯೋದಯವಾಗುವುದನ್ನು ನೋಡುವುದೇ ಒಂದು ಚೆಂದ. ಭಾಲುಕ್ಪಾಂಗ್ ಅಸ್ಸಾಂನ ತೇಜ್ಪುರದಿಂದ 56 ಕಿಲೋ ಮೀಟರ್ ದೂರದಲ್ಲಿದೆ ಮತ್ತು ಇದು ಅರುಣಾಚಲ ಪ್ರದೇಶದ ಪ್ರವೇಶ ದ್ವಾರವಾಗಿದೆ.

3. ಸಂಗೆಸ್ಟ್ಸರ್ ಸರೋವರ
ಅರುಣಾಚಲ ಪ್ರದೇಶದಲ್ಲಿರುವ ಈ ನದಿಯನ್ನು ಮಾಧುರಿ ಝೀಲ್ ಎಂದೂ ಸಹ ಕರೆಯಲಾಗುತ್ತದೆ, ಏಕೆಂದರೆ ನಟಿ ಮಾಧುರಿ ದಿಕ್ಷಿತ್ ಮತ್ತು ನಟ ಶಾರುಖ್ ಖಾನ್ ಅಭಿನಯದ ಹಿಂದಿ ಚಿತ್ರವಾದ ‘ಕೋಯ್ಲಾ’ ಚಿತ್ರದ ಕೆಲವು ದೃಶ್ಯಗಳನ್ನು ಇದೇ ಸ್ಥಳದಲ್ಲಿಯೇ ಚಿತ್ರೀಕರಿಸಲಾಗಿತ್ತು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:  Pink River: ದೇವರ ನಾಡಿನಲ್ಲಿ 'ಪಿಂಕ್ ನದಿ'! ಈ ಬಗ್ಗೆ ಉದ್ಯಮಿ ಆನಂದ್ ಮಹೀಂದ್ರ ಹೇಳಿದ್ದೇನು?

ಭೂಕಂಪದ ನಂತರ ಈ ಸರೋವರವು ರೂಪುಗೊಂಡಿತು ಎಂದು ಹೇಳಲಾಗುತ್ತಿದೆ. ಇದು ಎಷ್ಟು ಸ್ಫಟಿಕ ಸ್ಪಷ್ಟವಾಗಿದೆಯೆಂದರೆ, ಅದರಲ್ಲಿ ಯಾವುದೇ ವಸ್ತು ಬಿದ್ದರೂ ಕಾಣುತ್ತದೆ ಮತ್ತು ವ್ಯಕ್ತಿಯ ಪ್ರತಿಬಿಂಬವನ್ನು ಸಹ ಸರೋವರದ ನೀರಿನಲ್ಲಿ ನೀವು ನೋಡಬಹುದು.
Published by:Ashwini Prabhu
First published: