Viral Video: ಬಾಲ್ಕನಿ ಮೇಲೆ ಚಿಲ್ ಮಾಡ್ತಿದೆ ನವಿಲು, ವಿಡಿಯೋ ನೋಡಿ ನೆಟ್ಟಿಗರು ಫಿದಾ

ನಾವು ಸಾಮಾನ್ಯವಾಗಿ ಬೆಳಿಗ್ಗೆ ಊರಿಂದಾಚೆಗೆ ಅಥವಾ ನಾವಿರುವ ಪಟ್ಟಣದ ಹೊರವಲಯದಲ್ಲಿ ವಾಕಿಂಗ್ ಗೆ ಹೋದರೆ ಅಲ್ಲಿರುವ ಹೊಲ ಗದ್ದೆಗಳಲ್ಲಿ ಅಲ್ಲಲ್ಲಿ ನವಿಲಿನ ಗುಂಪೊಂದು ಅಲೆದಾಡುತ್ತಿರುವುದನ್ನು ನೋಡಬಹುದು. ಆ ಗುಂಪಿನಲ್ಲಿರುವ ನವಿಲುಗಳು ಅಲ್ಲಲ್ಲಿ ಅಡ್ಡಾಡುತ್ತಾ ಸಿಕ್ಕ ಆಹಾರವನ್ನು ತಿನ್ನುತ್ತಾ ಹಾಗೆ ನಿಧಾನವಾಗಿ ಅಲೆದಾಡುತ್ತಾ ಇರುವುದನ್ನು ಕೆಲವು ಬಾರಿ ನೋಡಿರುತ್ತೇವೆ.

ನವಿಲು

ನವಿಲು

  • Share this:
ನಾವು ಸಾಮಾನ್ಯವಾಗಿ ಬೆಳಿಗ್ಗೆ ಊರಿಂದಾಚೆಗೆ ಅಥವಾ ನಾವಿರುವ ಪಟ್ಟಣದ ಹೊರವಲಯದಲ್ಲಿ ವಾಕಿಂಗ್ ಗೆ (Walking) ಹೋದರೆ ಅಲ್ಲಿರುವ ಹೊಲ ಗದ್ದೆಗಳಲ್ಲಿ ಅಲ್ಲಲ್ಲಿ ನವಿಲಿನ (Peacock)  ಗುಂಪೊಂದು ಅಲೆದಾಡುತ್ತಿರುವುದನ್ನು ನೋಡಬಹುದು. ಆ ಗುಂಪಿನಲ್ಲಿರುವ ನವಿಲುಗಳು ಅಲ್ಲಲ್ಲಿ ಅಡ್ಡಾಡುತ್ತಾ ಸಿಕ್ಕ ಆಹಾರವನ್ನು (Food) ತಿನ್ನುತ್ತಾ ಹಾಗೆ ನಿಧಾನವಾಗಿ ಅಲೆದಾಡುತ್ತಾ ಇರುವುದನ್ನು ಕೆಲವು ಬಾರಿ ನೋಡಿರುತ್ತೇವೆ. ಈ ನವಿಲುಗಳು ಅಲ್ಲಲ್ಲಿ ಸ್ವಲ್ಪ ಗಾಳಿಯಲ್ಲಿ ಹಾರಾಡಿಕೊಂಡು ಗಿಡ ಮರಗಳ ಮೇಲೆ ಕುಳಿತುಕೊಂಡು ಮಳೆ (Rain) ಬಂದರೆ ಹಾಗೆಯೇ ನಿಧಾನವಾಗಿ ತನ್ನ ರೆಕ್ಕೆಗಳನ್ನು (Wings) ಬಿಚ್ಚಿಕೊಂಡು ನೃತ್ಯ ಮಾಡುವುದನ್ನು ಸಹ ನೋಡಬಹುದು. ಅರೇ  ನವಿಲಿನ ಬಗ್ಗೆ ಯಾಕಿಷ್ಟು ಮಾತನಾಡುತ್ತಾ ಇದ್ದೇವೆ ಅಂತ ನಿಮಗೆ ಸ್ವಲ್ಪ ಆಶ್ಚರ್ಯವಾಗಬಹುದು.

ಮನೆಯ ಬಾಲ್ಕನಿಯಲ್ಲಿ ಹಾರಾಡುವ ಸುಂದರ ನವಿಲು
ಒಟ್ಟಿನಲ್ಲಿ ಇಂತಹ ವೀಡಿಯೋ ತೋರಿಸಿದ್ದಕ್ಕೆ ಇನ್‌ಸ್ಟಾಗ್ರಾಮ್ ರೀಲ್ ಗಳಿಗೆ ಧನ್ಯವಾದಗಳನ್ನು ನಾವು ಹೇಳಲೇಬೇಕು. ಏಕೆಂದರೆ ದೆಹಲಿ ನಿವಾಸಿಗಳು ಬೆಳ್ಳಂ ಬೆಳಗ್ಗೆ ತಮ್ಮ ಮನೆಯ ಬಾಲ್ಕನಿಯಲ್ಲಿ ಹಾರಾಡುವ ಒಂದು ಸುಂದರವಾದ ನವಿಲನ್ನು ನೋಡಿದ್ದಾರೆ. ಅಬ್ಬಾ ಎಂತಹ ಮುದ್ದಾದ ದೃಶ್ಯ ಅಲ್ಲವೇ ಇದು ಎಂದು ಮಂತ್ರಮುಗ್ಧರಾಗಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಈ ನವಿಲು ಹಾರಾಡಿಕೊಂಡು ಬಂದು ಮನೆಯ ಬಾಲ್ಕನಿಯಲ್ಲಿ ಕುಳಿತಿದ್ದನ್ನು ವೀಡಿಯೋ ಮಾಡಿ ಅದಕ್ಕೆ ಬಾಲಿವುಡ್ ನ ಬಿಗ್ ಬಿ ಎಂದೇ ಖ್ಯಾತಿ ಆಗಿರುವ ಅಮಿತಾಭ್ ಬಚ್ಚನ್ ಮತ್ತು ನಟಿ ರೇಖಾ ಅಭಿನಯದ ಹಳೆಯ ಸೂಪರ್ ಹಿಟ್ ಚಲನಚಿತ್ರವಾದ ‘ಸಿಲ್ಸಿಲಾ’ ದಲ್ಲಿನ 'ದೇಖಾ ಏಕ್ ಖ್ವಾಬ್’ ಎಂಬ ಹಾಡನ್ನು ಅದರ ಹಿನ್ನಲೆಯಲ್ಲಿ ಹಾಕಿ ಸಯೋಂಜಿಸಿದ್ದಾರೆ ಎಂದು ಹೇಳಬಹುದು.

ದೆಹಲಿಯಲ್ಲಿ ನವಿಲನ್ನು ನೋಡುವುದು ಅಪರೂಪದ ದೃಶ್ಯವಂತೆ
ಟ್ರಾವೆಲ್ ಬ್ಲಾಗರ್ ಒಬ್ಬರು ತಮ್ಮ ‘ಸಫರ್‌ನಾಮಾಬೈನಿಧಿ’ ಎಂಬ ಸಾಮಾಜಿಕ ಮಾಧ್ಯಮ ಪುಟದಲ್ಲಿ ಈ ನವಿಲಿನ ಮುದ್ದಾದ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ವೀಡಿಯೋ ಪೋಸ್ಟ್ ಮಾಡಿ ಅದಕ್ಕೆ "ದೆಹಲಿಯಂತಹ ನಗರದಲ್ಲಿ ನವಿಲನ್ನು ನೋಡುವುದು ಎಂತಹ ಅಪರೂಪದ ದೃಶ್ಯವಾಗಿದೆ. ನಾನು ಈಗ ಒಂದು ದಶಕದಿಂದ ಇವುಗಳನ್ನು ನೋಡುತ್ತಿದ್ದೇನೆ. ಅವು ಸುಂದರವಾಗಿವೆ, ಅಲ್ಲ ಅಲ್ಲ ಅವು ತುಂಬಾನೇ ಸುಂದರವಾಗಿವೆ" ಎಂದು ಬರೆದಿದ್ದಾರೆ.

ಇದನ್ನೂ ಓದಿ:  Deep Sea Fish: ಆಳ ಸಮುದ್ರದ ಮೀನಿನ ಫೋಟೋ ವೈರಲ್! ನೋಡಿ ನೆಟ್ಟಿಗರು ಹೆದರಿಕೊಂಡಿದ್ದೇಕೆ?

ಮಂತ್ರಮುಗ್ಧಗೊಳಿಸುವ ನವಿಲನ್ನು ದೆಹಲಿ ನಗರದಲ್ಲಿರುವ ವಿಕಾಸ್‌ಪುರಿ ಪ್ರದೇಶದಲ್ಲಿ ಕಂಡು ಬಂದಿರುವುದಾಗಿ ಹೇಳಲಾಗುತ್ತಿದೆ. ಈ ವೀಡಿಯೋ ಕ್ಲಿಪ್ ಬಾಲ್ಕನಿಯ ರೇಲಿಂಗ್ ಮೇಲೆ ಸುಂದರವಾದ ನವಿಲು ನಿಂತಿರುವುದರಿಂದ ಶುರುವಾಗುತ್ತದೆ ಮತ್ತು ಅದು ಸ್ವಲ್ಪ ಸೆಕೆಂಡಿನಲ್ಲಿಯೇ ಅಲ್ಲಿಂದ ಎದುರುಗಡೆ ಇರುವ ಇನ್ನೊಂದು ಮನೆಯ ಬಾಲ್ಕನಿಗೆ ಹಾರುವುದನ್ನು ಸಹ ಈ ವೀಡಿಯೋದಲ್ಲಿ ನಾವು ನೋಡಬಹುದು.

ಸೋಷಿಯಲ್ ಮೀಡಿಯಾದಲ್ಲಿಈ ವೈರಲ್ ಆಯಿತು ನವಿಲಿನ ವಿಡಿಯೋ
ದೆಹಲಿಯ ಸುತ್ತಲೂ ನವಿಲುಗಳನ್ನು ನೋಡುವುದು ಅಪರೂಪದ ದೃಶ್ಯವಾಗಿದ್ದರೂ, ಅವು ಹಾರಿಕೊಂಡು ಬರುವುದನ್ನು ನೋಡುವುದು ಇನ್ನೂ ವಿರಳ ಎಂದು ಹೇಳಬಹುದು. ಒಟ್ಟಿನಲ್ಲಿ ನೆಟ್ಟಿಗರು ಈ ಸುಂದರವಾದ ನವಿಲಿನ ವೀಡಿಯೋ ನೋಡಿ ಹೃದಯ ಮತ್ತು ಕಣ್ಣಿನ ಎಮೋಜಿಗಳೊಂದಿಗೆ ಕಾಮೆಂಟ್ ವಿಭಾಗವನ್ನು ತುಂಬಿಸುತ್ತಿದ್ದಾರೆ ಮತ್ತು ಈ ದೃಶ್ಯವನ್ನು 'ನಂಬಲಸಾಧ್ಯ' ಎಂದು ಹೇಳುತ್ತಿದ್ದಾರೆ.
"ನಾನು ಕಳೆದ 10 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇನೆ. ಪ್ರತಿ ವರ್ಷ ಮೇ ತಿಂಗಳ ಅಂತ್ಯದಲ್ಲಿ, ನವಿಲುಗಳು ಈ ಸ್ಥಳಕ್ಕೆ ಭೇಟಿ ನೀಡುತ್ತವೆ ಮತ್ತು ಅಕ್ಟೋಬರ್ ವರೆಗೆ ನಮ್ಮ ನೆರೆಹೊರೆಯಲ್ಲಿ ಉಳಿಯುತ್ತವೆ" ಎಂದು ಬ್ಲಾಗರ್ ವೀಡಿಯೋದಲ್ಲಿ ಬರೆದಿದ್ದಾರೆ. ಈ ಇನ್‌ಸ್ಟಾಗ್ರಾಮ್ ರೀಲ್ ಇದುವರೆಗೂ 4.8 ಮಿಲಿಯನ್ ವೀಕ್ಷಣೆಗಳನ್ನು ಮತ್ತು ಎಂಟು ಲಕ್ಷಕ್ಕಿಂತಲೂ ಹೆಚ್ಚು ಲೈಕ್ ಗಳನ್ನು ಪಡೆದಿದ್ದು, ತುಂಬಾನೇ ವೈರಲ್ ಆಗಿದೆ.

ಇದನ್ನೂ ಓದಿ:   Viral Video: ಈ ಆನೆ ಬಾಟಲಿಯಿಂದ ಹೇಗೆ ಹಾಲನ್ನು ಕುಡಿಯುತ್ತಿದೆ ನೋಡಿ; ನಗು ಬರಿಸೋದು ಗ್ಯಾರೆಂಟಿ

ಭಾರತದಲ್ಲಿ, ನವಿಲಿನ ಮಿಲನದ ಋತುವು ಮೇ ತಿಂಗಳ ಆಸುಪಾಸಿನಲ್ಲಿದ್ದು, ಮಾನ್ಸೂನ್ ಋತುವಿನೊಂದಿಗೆ ಸರಿಯಾಗಿ ಹೊಂದಿಕೆಯಾಗುತ್ತದೆ. ಸಂಗಾತಿಯನ್ನು ಆಕರ್ಷಿಸಲು, ನವಿಲುಗಳು ಹೆಣ್ಣು ನವಿಲಿಗೆ ತೋರಿಸಲು ತಮ್ಮ ಬಾಲದ ಗರಿಗಳನ್ನು ವಿಸ್ತಾರ ಮಾಡಿ ನೃತ್ಯವನ್ನು ಸಹ ಪ್ರದರ್ಶಿಸುವುದುಂಟು.
Published by:Ashwini Prabhu
First published: