ನಮಗೆ ಸ್ವಲ್ಪ ಮೊಬೈಲ್ ನಲ್ಲಿ (Mobile) ನೆಟ್ವರ್ಕ್ ಸಿಗಲಿಲ್ಲ ಅಂತಾದರೆ ಸಾಕು ‘ಅರೇ ಮೊಬೈಲ್ ಫೋನ್ ನಲ್ಲಿ ಸಿಗ್ನಲ್ ಸಿಗ್ತಿಲ್ಲಾ’ ಯಾರಾದರೂ ನಮಗೆ ಕಾಲ್ ಮಾಡಿದರೆ, ಅವರಿಗೆ ನಮ್ಮ ಫೋನ್ ಸಂಪರ್ಕ ಸಾಧಿಸಲು ಸಾಧ್ಯವಾಗದೆ ಇದ್ದರೆ ಹೇಗೆ ಅಂತೆಲ್ಲಾ ಚಡಪಡಿಸಲು ಶುರು ಮಾಡುತ್ತೇವೆ. ಎಂದರೆ ಇದರರ್ಥ ನಮಗೆ ಪ್ರಪಂಚದ ಸಂಪರ್ಕದಿಂದ (Network) ಒಂದು ಕ್ಷಣವೂ ದೂರವಿರಲು ಸಾಧ್ಯವಾಗುವುದಿಲ್ಲ. ಅಂತಹದರಲ್ಲಿ ಇಲ್ಲಿ ಸ್ಪೇನ್ ನ (Spane) ಮಹಿಳಾ ಅಥ್ಲೀಟ್ ಒಂದಲ್ಲ, ಎರಡಲ್ಲ ಬರೋಬ್ಬರಿ 500 ದಿನಗಳ ಕಾಲ ಭೂಗತವಾಗಿ ವಾಸಿಸುತ್ತಿದ್ದರಂತೆ. ಇದನ್ನು ಓದಿದ ನಿಮಗೆ ಒಂದು ಕ್ಷಣ ಆಶ್ಚರ್ಯವಾಗಬಹುದು. ಏಕೆಂದರೆ ಗುಹೆಯಲ್ಲಿ 500 ದಿನಗಳ ಕಾಲ ಇರುವುದು ಎಂದರೆ ಸಾಮಾನ್ಯವಾದ ವಿಷಯವಂತೂ ಅಲ್ಲವೇ ಅಲ್ಲ.
500 ದಿನಗಳ ಕಾಲ ಗುಹೆಯಲ್ಲಿ ನೆಲೆಸುವ ಮೂಲಕ ವಿಶ್ವದಾಖಲೆ ನಿರ್ಮಿಸಬಲ್ಲ ವೈಜ್ಞಾನಿಕ ಪ್ರಯೋಗದ ಭಾಗವಾಗಿ 50 ವರ್ಷದ ಸ್ಪ್ಯಾನಿಷ್ ಅಥ್ಲೀಟ್ ಇಂತಹ ಒಂದು ವಿನೂತನ ಪ್ರಯತ್ನವನ್ನು ಮಾಡಿದ್ದಾರೆ.
ನವೆಂಬರ್ 21, 2021 ರಂದು ಬಿಯಾಟ್ರಿಜ್ ಫ್ಲಾಮಿನಿ ಎಂಬ ಮಹಿಳೆ ಸ್ಪೇನ್ ನ ಗ್ರನಡಾದಲ್ಲಿನ ಗುಹೆಯನ್ನು ಪ್ರವೇಶಿಸಿದರಂತೆ, ಆಗ ಇನ್ನೂ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿರಲಿಲ್ಲವಂತೆ, ರಾಣಿ ಎಲಿಜಬೆತ್ II ಇನ್ನೂ ಯುನೈಟೆಡ್ ಕಿಂಗ್ಡಮ್ ನ ಅಧಿಪತಿ ಆಗಿದ್ದರಂತೆ ಮತ್ತು ಆಗ ಜಗತ್ತು ಕೋವಿಡ್-19 ಸಾಂಕ್ರಾಮಿಕ ರೋಗದ ಹಿಡಿತದಲ್ಲಿತ್ತು.
ಸ್ಪ್ಯಾನಿಷ್ ಕ್ರೀಡಾಪಟುವಿನ ಈ ಅದ್ಭುತ ಬದುಕಿನ ಕಥೆಯನ್ನು ಕೇಳಿ ಚೆಪ್ಪಾಳೆ ತಟ್ಟಿದ ಜನರು
ಇಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವೀಡಿಯೋದಲ್ಲಿ, ಜನರು ನಗುತ್ತಾ, ಚಪ್ಪಾಳೆ ತಟ್ಟಿ ಆ ಮಹಿಳೆಯನ್ನು ಹುರಿದುಂಬಿಸುತ್ತಿರುವಾಗ ಆಕೆ 500 ದಿನಗಳವರೆಗೆ ಕಳೆದ ಗುಹೆಯಿಂದ ಹೊರ ಬರುವುದನ್ನು ನಾವು ನೋಡಬಹುದು.
ಇದನ್ನೂ ಓದಿ: ಬೋಟಿಂಗ್ ಮಾಡಲು ಬಂದ ಪ್ರವಾಸಿಗರಿಗೆ ಶಾಕ್! ಬನ್ನೇರುಘಟ್ಟ ಪಾರ್ಕ್‌ನಲ್ಲಿ ಆಗಿದ್ದೇನು?
ಬಿಯಾಟ್ರಿಜ್ ಭೂಗತವಾಗಿ ಗುಹೆಯಲ್ಲಿ ಇದ್ದು ತಮ್ಮೆಲ್ಲಾ ಕೆಲಸಗಳನ್ನು ಮಾಡಿಕೊಂಡರು. ಎಂದರೆ ಚಿತ್ರಕಲೆ ಮತ್ತು ಉಣ್ಣೆ ಬಟ್ಟೆಗಳಲ್ಲಿ ಟೋಪಿಗಳನ್ನು ಹೆಣೆಯುವುದರಲ್ಲಿ ತಮ್ಮ ಸಮಯವನ್ನು ಕಳೆದರು.
As part of an experiment closely monitored by scientists seeking to learn more about the capacity of the human mind and circadian rhythms, Spanish elite mountaineer Beatriz Flamini completed a 500-day challenge living in a cave https://t.co/rPmhMotGjG pic.twitter.com/6xgB2BZ0ku
— Reuters (@Reuters) April 14, 2023
ಇದನ್ನೂ ಓದಿ: Barbie Doll ರೀತಿ ಕಾಣ್ಬೇಕಂತ ಈಕೆ ಮಾಡಿಸಿದ್ದು ಎಷ್ಟು ಸರ್ಜರಿ ಗೊತ್ತಾ? ಹೀಗೂ ಜನರು ಇರ್ತಾರಾ?
ಈ ಗುಹೆಯಲ್ಲಿ ವಾಸಿಸುವ ಸಮಯವನ್ನು ಟ್ರ್ಯಾಕ್ ಮಾಡಲು ಪ್ರಯತ್ನಿಸುವ ಮೂಲಕ ಅವರು ತಮ್ಮ ಸವಾಲನ್ನು ಪ್ರಾರಂಭಿಸಿರುವುದಾಗಿ ಹೇಳಿದ್ದಾರೆ. "65 ನೇ ದಿನದಂದು, ನಾನು ಎಣಿಕೆಯನ್ನು ನಿಲ್ಲಿಸಿದೆ ಮತ್ತು ನನ್ನ ಸಮಯ ಪ್ರಜ್ಞೆಯನ್ನು ಕಳೆದುಕೊಂಡೆ" ಎಂದು ಅವರು ವಿವರಿಸಿದರು.
"ನೊಣಗಳು ಗುಹೆಯ ಮೇಲೆ ಆಕ್ರಮಣ ಮಾಡಿದಾಗ ಸ್ವಲ್ಪ ಕಷ್ಟದ ಸಮಯ ಸಹ ಎದುರಿಸಬೇಕಾಗಿ ಬಂತು. ಆದರೆ ಇದು ನನ್ನ ಕನಸಾಗಿತ್ತು ಮತ್ತು ನಾನು ಅದನ್ನು ಮಾಡಬೇಕು ಅಂತ ನಿರ್ಧಾರ ಮಾಡಿದ್ದೆ. ಹಾಗಾಗಿ ಯಾವುದು ಕಠಿಣ ಅಂತ ಅನ್ನಿಸಲಿಲ್ಲ” ಎಂದು ಅಥ್ಲೀಟ್ ಹೇಳಿಕೊಂಡರು.
ಗುಹೆಯಿಂದ ಹೊರ ಬಂದ ಅಥ್ಲೀಟ್ ನ ಚಲನ-ವಲನಗಳನ್ನು ಗಮನಿಸಿದ ವೈದ್ಯರು
ಈಕೆ ಗುಹೆಯಲ್ಲಿ 500 ದಿನಗಳ ಕಾಲ ಒಳಗೆ ಇದ್ದು, ಹೊರ ಬಂದಾಗ ಮನಶ್ಶಾಸ್ತ್ರಜ್ಞರು, ಸಂಶೋಧಕರು, ಸ್ಪೆಲಿಯಾಲಜಿಸ್ಟ್ ಗಳು (ಗುಹೆ ಅಧ್ಯಯನ ತಜ್ಞರು) ಮತ್ತು ದೈಹಿಕ ತರಬೇತುದಾರರು ಬಿಯಾಟ್ರಿಜ್ ಅವರ ಆರೋಗ್ಯವನ್ನು ಗಮನಿಸುತ್ತಿದ್ದರು.
ಅವರೆಲ್ಲರೂ ಬಿಯಾಟ್ರಿಜ್ ಅವರ ಪ್ರತಿಯೊಂದು ಚಲನೆಯನ್ನು ಗಮನಿಸಿದರು ಮತ್ತು ಅವರ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಗಮನಿಸುತ್ತಿದ್ದರು. ಸ್ಪ್ಯಾನಿಷ್ ಸುದ್ದಿ ಸಂಸ್ಥೆ ಇಎಫ್ಇ ಪ್ರಕಾರ, ಗ್ರಾನಡಾ ಮತ್ತು ಅಲ್ಮೇರಿಯಾ ವಿಶ್ವವಿದ್ಯಾಲಯಗಳು ಮತ್ತು ಮ್ಯಾಡ್ರಿಡ್ ನ ಸ್ಲೀಪ್ ಕ್ಲಿನಿಕ್ ನ ವಿಜ್ಞಾನಿಗಳು ಅವರ ಅನುಭವವನ್ನು ಬಳಸಿಕೊಂಡಿದ್ದಾರೆ.
ಸಮಯದ ಬಗ್ಗೆ ಜನರ ಗ್ರಹಿಕೆಗಳ ಮೇಲೆ ಸಾಮಾಜಿಕ ಪ್ರತ್ಯೇಕತೆ ಮತ್ತು ತೀವ್ರ ತಾತ್ಕಾಲಿಕ ದಿಗ್ಭ್ರಮೆಯ ಪರಿಣಾಮಗಳು, ಭೂಗತವಾಗಿ ಸಂಭವಿಸುವ ಸಂಭಾವ್ಯ ನರವೈಜ್ಞಾನಿಕ ಮತ್ತು ಅರಿವಿನ ಬದಲಾವಣೆಗಳು ಮತ್ತು ಸಿರ್ಕಾಡಿಯನ್ ಲಯಗಳು ಮತ್ತು ನಿದ್ರೆಯ ಮೇಲಿನ ಪರಿಣಾಮವನ್ನು ಅವರು ತನಿಖೆ ಮಾಡಿದರು.
ಈ ವಿಡಿಯೋವನ್ನು ಪೋಸ್ಟ್ ಮಾಡಿದಾಗಿನಿಂದ, ಇದು 122.2 ಕೆ ವೀಕ್ಷಣೆಗಳು, 115 ಲೈಕ್ ಗಳು ಮತ್ತು 32 ರಿ-ಟ್ವೀಟ್ ಗಳನ್ನು ಗಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ