Viral Video: ಈತನ ಸೆಲ್ಫಿ ವಿಡಿಯೋದಲ್ಲಿ ಕಾಣಿಸಿದ್ದು ಏನು ಗೊತ್ತಾ? ನೀವೂ ಒಮ್ಮೆ ನೋಡಿ

ಬ್ರೆಜಿಲಿಯನ್ ವ್ಯಕ್ತಿ , ಫ್ರೆಂಚ್ ಆಲ್ಪ್ಸ್  ನಲ್ಲಿ ಸ್ನೋ ಬೋರ್ಡಿಂಗ್ ವೇಳೆ ಮಾಡಿರುವ ಸೆಲ್ಫಿ ವಿಡಿಯೋ ವೈರಲ್ ಆಗಿದೆ. ಈ ವ್ಯಕ್ತಿಗೆ ತನ್ನ ಹಿಂದೆ ಕರಡಿ ಬರುತ್ತಿರೋದು ತಿಳಿದಿರಲಿಲ್ಲ.

ವೈರಲ್ ವಿಡಿಯೋ

ವೈರಲ್ ವಿಡಿಯೋ

  • Share this:
ಈಗ ಜನರು ಎಲ್ಲೇ ಹೋದ್ರು ಅಲ್ಲಿ ಫೋಟೋ (Photo) ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾ(Social Media)ದಲ್ಲಿ ಹಂಚಿಕೊಳ್ಳುತ್ತಾರೆ. ವಿಡಿಯೋ (Video) ಹುಚ್ಚು ಇದ್ರೂ ತಾವು ಭೇಟಿ ನೀಡಿದ ಸ್ಥಳ(Tourist Place)ಗಳನ್ನು ಸೆರೆ ಹಿಡಿದು ಶೇರ್ ಮಾಡಿಕೊಳ್ಳುತ್ತಾರೆ. ಈ ಮೂಲಕ ಇಂದಿನ ಜನರು ತಮ್ಮ ಪ್ರವಾಸ(Tour)ವನ್ನು ಆನಂದಿಸುತ್ತಾರೆ. ಪ್ರವಾಸದ ಬಳಿಕ ತಾವು ಕ್ಲಿಕ್ಕಿಸಿಕೊಂಡ ಮತ್ತು ಸೆರೆ ಹಿಡಿದ ಫೋಟೋ ಹಾಗೂ ವಿಡಿಯೋಗಳನ್ನು ನೋಡಿ ಸಂಭ್ರಮಿಸುತ್ತಾರೆ. ಆದ್ರೆ ಕೆಲವೊಮ್ಮೆ ತಮಗೆ ಗೊತ್ತಿಲ್ಲದ ಕುತೂಹಲಕಾರಿ ದೃಶ್ಯಗಳು ತಮ್ಮಕ್ಯಾಮೆರಾದಲ್ಲಿ ಸೆರೆ ಆಗಿರೋದದನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಇದೀಗ ಅಂತಹವುದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಆ ಪ್ರವಾಸಿಗನ ತನ್ನ ಹಿಂದೆ ಏನು ನಡೆಯುತ್ತಿದೆ ಎಂಬುವುದೇ ಗೊತ್ತಿರಲಿಲ್ಲ. ಆತ ಸಂತೋಷದಿಂದ ಸೆಲ್ಫಿ ವಿಡಿಯೋ (Selfie Video) ಮಾಡುತ್ತಿರೋದನ್ನು ಗಮನಿಸಬಹುದಾಗಿದೆ.

ಬ್ರೆಜಿಲಿಯನ್ ವ್ಯಕ್ತಿ , ಫ್ರೆಂಚ್ ಆಲ್ಪ್ಸ್  ನಲ್ಲಿ ಸ್ನೋ ಬೋರ್ಡಿಂಗ್ ವೇಳೆ ಮಾಡಿರುವ ಸೆಲ್ಫಿ ವಿಡಿಯೋ ವೈರಲ್ ಆಗಿದೆ. ಈ ವ್ಯಕ್ತಿಗೆ ತನ್ನ ಹಿಂದೆ ಕರಡಿ ಬರುತ್ತಿರೋದು ತಿಳಿದಿರಲಿಲ್ಲ. ಸ್ನೋ ಬೋರ್ಡಿಂಗ್ ನಿಂದ ಬಂದ ಬಳಿಕ ಪ್ರವಾಸಿಗನಿಗೆ ತನ್ನನ್ನು ಕರಡಿ ಹಿಂಬಾಲಿಸಿರೋದು ಗಮನಕ್ಕೆ ಬಂದಿದೆ.

ವೈರಲ್ ವಿಡಿಯೋದಲ್ಲಿ ಏನಿದೆ?

ಡಿಜೆ ಅಲೋಕ್ ಸ್ನೋ ಬೋರ್ಡಿಂಗ್ ಮಾಡುವ ವೇಳೆ ಎತ್ತರ ಪ್ರದೇಶದಲ್ಲಿ ವಿಶ್ರಾಂತಿ ತೆಗೆದುಕೊಂಡಿದ್ದಾರೆ. ನಂತರ ಅಲ್ಲಿಂದ ಸ್ನೋ ಬೋರ್ಡಿಂಗ್ ಸ್ಲೈಡ್ ಆರಂಭಿಸಿದ್ದಾರೆ. ಈ ಸಮಯದಲ್ಲಿ ಡಿಜೆ ಅಲೋಕ್ ಮುಂದೆ ಬಂದ ಕೆಲವೇ ಕ್ಷಣಗಳಲ್ಲಿ ಹಿಂದೆ ದೈತ್ಯ ಕರಡಿ ಪ್ರತ್ಯಕ್ಷವಾಗಿದೆ. ಸ್ವಲ್ಪ ದೂರದವರೆಗೆ ಓಡಿ ಬಂದು ಹೋಗಿದೆ.

ಇದನ್ನೂ ಓದಿ; Viral News: ಮದುವೆ ಆಗಲ್ಲ, ಜೊತೆಯಾಗಿ ಇರ್ತೀವಿ: ಅನುಮತಿಗಾಗಿ ಕೋರ್ಟ್ ಮೊರೆ ಹೋದ 28ರ ಯುವಕ, 67ರ ವೃದ್ಧೆ

ಟ್ರೆಂಡಿಂಗ್ ನಲ್ಲಿರುವ ವಿಡಿಯೋ

ಈ ವಿಡಿಯೋವನ್ನು ಪ್ರವಾಸಿಗ ಡಿಜೆ ಅಲೋಕ್ ತನ್ನ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾನೆ. ಹಿಮದಿಂದ ಆವೃತವಾದ ಅದ್ಭುತ ಪ್ರದೇಶವನ್ನು ನೋಡುವಾಗ ನಮ್ಮ ಹಿಂದೆ ಕರಡಿ ಬಂದಿರೋದು ಗೊತ್ತಿರಲಿಲ್ಲ. ಇಲ್ಲಿಯ ಒಳ್ಳೆಯ ಸಮಯವನ್ನು ಕಳೆದಿದ್ದೇವೆ. ಹಿಮದಲ್ಲಿಯ ಸ್ನೋ ಬೋರ್ಡಿಂಗ್ ಚೆನ್ನಾಗಿತ್ತು ಎಂದು ಡಿಜೆ ಅಲೋಕ್ ಬರೆದುಕೊಂಡಿದ್ದಾರೆ.

ಈ ವಿಡಿಯೋಗೆ ಇದುವರೆಗೆ 60 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಬಂದಿವೆ ವೀಡಿಯೊ ಪ್ರಸ್ತುತ ಟ್ರೆಂಡಿಂಗ್‌ನಲ್ಲಿದೆ, 5.5 ಲಕ್ಷಕ್ಕೂ ಹೆಚ್ಚು ಲೈಕ್ಸ್ ಮತ್ತು 7,000 ಕ್ಕೂ ಹೆಚ್ಚು ಕಮೆಂಟ್ ಗಳು ಬಂದಿವೆ.
View this post on Instagram


A post shared by Alok (@alok)


ನೆಟ್ಟಿಗರಿಂದ ಪ್ರತಿಕ್ರಿಯೆ

ಈ ವಿಡಿಯೋ ನೋಡಿದ ನೆಟ್ಟಿಗರು ಕೆಮಂಟ್ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಓರ್ವ ಬಳಕೆದಾರ, ನಾನು ಈ ವಿಡಿಯೋವನ್ನ 28363 ಬಾರಿ ನೋಡಿದ್ದೇನೆ. ಹಿಂದೆ ಕರಡಿ ಓಡಿ ಬಂದಿರೋದನ್ನು ನನ್ನಿಂದ ನಂಬಲು ಆಗಲಿಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ ಪ್ರಸಿದ್ಧ ಡಿಜೆ ಜೊತೆ ಸೆಲ್ಫಿ ಕೇಳಲು ಕರಡಿ ಓಡಿ ಬಂದಿರಬಹುದು ಎಂದು ತಮಾಷೆ ಮಾಡಿದ್ದಾರೆ.

ಇದನ್ನೂ ಓದಿ:  Viral News: ಒಂದು ನಿಮಿಷ ಗ್ಯಾಸ್ ಬಳಸಿದ್ರೆ ಇಷ್ಟು ದುಬಾರಿ ಬಿಲ್ ಕೊಡೋದಾ? ದಂಪತಿ ಶಾಕ್

21 ದಿನಗಳಲ್ಲಿ 15 ಪುರುಷರೊಂದಿಗೆ ಡೇಟಿಂಗ್ ಮಾಡಿದ ಮಹಿಳೆ

ಆಸ್ಟ್ರೇಲಿಯಾದ ಸಿಡ್ನಿ ನಿವಾಸಿ ಹೆಲೆನ್ ಚಿಕ್ ಎಂಬವರು ಲೇಖಕಿ ಮತ್ತು ಡೇಟಿಂಗ್ ತಜ್ಞರಾಗಿದ್ದು, ಅವರು ಡೇಟಿಂಗ್‌ಗೆ ಸಂಬಂಧಿಸಿದ ಪುಸ್ತಕವನ್ನೂ ಬರೆದಿದ್ದಾರೆ. ಅದರಲ್ಲಿ ಅವರು ತಮ್ಮ ಸ್ವಂತ ಅನುಭವಗಳ ಆಧಾರದ ಮೇಲೆ ಹೇಗೆ ಡೇಟಿಂಗ್ ಮಾಡಬೇಕು ಎಂದು ಹೇಳಿದ್ದಾರೆ.

ಹೆಲೆನ್ ಬಗ್ಗೆ ಅತ್ಯಂತ ಆಶ್ಚರ್ಯಕರ ವಿಷಯವೆಂದರೆ ಅವರು ಕೇವಲ 21 ದಿನಗಳಲ್ಲಿ 15 ಹುಡುಗರೊಂದಿಗೆ ಡೇಟಿಂಗ್ ಮಾಡಿದ್ದಾರೆ. ಹೆಲೆನ್ ಅವರು ನ್ಯೂಯಾರ್ಕ್​ಗೆ ಭೇಟಿ ನೀಡಿದಾಗ, ಅವರು 21 ದಿನಗಳಲ್ಲಿ 15 ಪುರುಷರೊಂದಿಗೆ ಡೇಟಿಂಗ್ ಮಾಡಿರುವ ವಿಚಾರವನ್ನು ಹೇಳಿದ್ದಾರೆ. ಇತ್ತೀಚೆಗೆ ವಅರು ಕಿಂಡಾ ಸೋರ್ಟಾ ಡೇಟಿಂಗ್ ಎಂಬ ಪಾಡ್‌ಕ್ಯಾಸ್ಟ್‌ನಲ್ಲಿ ಅತಿಥಿಯಾಗಿ ಭಾಗವಹಿಸಿದರು. ಅದರಲ್ಲಿ ಅವರು ತಮ್ಮ ಡೇಟಿಂಗ್ ರಹಸ್ಯಗಳನ್ನು ಹೇಳಿಕೊಂಡರು.

ಹೆಲೆನ್ ಚಿಕ್ ಅವರು ಎರಡು ಬಾರಿ ವಿಚ್ಛೇದನ ಪಡೆದಿದ್ದಾರೆ. ಆದ್ದರಿಂದ ಅವರು ಡೇಟಿಂಗ್ ಅನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಅವರು ಟಿಂಡರ್ ಮೂಲಕ ಮಾತ್ರ ಡೇಟಿಂಗ್ ಮಾಡುತ್ತಾರೆ ಮತ್ತು ಕೆಲವು ವಿಷಯಗಳನ್ನು ನೋಡಿಕೊಳ್ಳುವ ಮೂಲಕ ಇತರ ಜನರು ಟಿಂಡರ್‌ನ ಸಂಪೂರ್ಣ ಲಾಭವನ್ನು ಪಡೆಯಬಹುದು ಎಂದು ಹೇಳಿದ್ದಾರೆ.
Published by:Mahmadrafik K
First published: