ಕೆಲವೊಮ್ಮೆ ಏನೋ ಮಾಡಲು ಹೋಗಿ ಇನ್ನೆನೋ ಎಡವಟ್ಟುಗಳಾಗಿರುತ್ತವೆ.. ಇಂತಹ ಅನೇಕ ಘಟನೆಗಳು (Incident) ನಮ್ಮ ಸುತ್ತಮುತ್ತಲೂ ತುಂಬಾನೇ ನಡೀತಾ ಇರುತ್ತವೆ ಅಂತ ಹೇಳಬಹುದು. ಇಲ್ಲೊಬ್ಬ ವ್ಯಕ್ತಿ (A Person) ಜೊತೆ ಸಹ ಹೀಗೆ ಆಗಿದೆ ನೋಡಿ. ಕಾಂಟ್ಯಾಕ್ಟ್ ಲೆನ್ಸ್ (Eye Lens) ಹಾಗೆಯೇ ಧರಿಸಿಕೊಂಡು ನಿದ್ದೆ ಮಾಡುತ್ತಿದ್ದ ಅಮೆರಿಕದ (America) ಯುವಕನೊಬ್ಬನನ್ನು (Young Boy) ಮಾಂಸ ತಿನ್ನುವ ಪರಾವಲಂಬಿ (ಪ್ಯಾರಾಸೈಟ್) ಕುರುಡುಗೊಳಿಸಿದ ಪರಿಣಾಮ ಒಂದು ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದಾನೆ.
ಕಳೆದ ವರ್ಷ ಡಿಸೆಂಬರ್ ನಲ್ಲಿ ನಡೆದಿದೆಯಂತೆ ಈ ಘಟನೆ
ಈ ಘಟನೆ ನಿನ್ನೆ ಮೊನ್ನೆಯದಲ್ಲ ಬಿಡಿ, ಈ ಘಟನೆ ಫ್ಲೋರಿಡಾದಲ್ಲಿ ಕಳೆದ ವರ್ಷ ಡಿಸೆಂಬರ್ ನಲ್ಲಿ ನಡೆದಿದ್ದು ಅಂತ ಹೇಳಲಾಗುತ್ತಿದೆ. ಈ ಭಯಾನಕ ಘಟನೆಯಲ್ಲಿ 21 ವರ್ಷದ ವಿದ್ಯಾರ್ಥಿ ಮೈಕ್ ಕ್ರುಮ್ಹೋಲ್ಜ್, ಡಿಸೆಂಬರ್ 19 ರಂದು 40 ನಿಮಿಷಗಳ ಕಿರು ನಿದ್ದೆಗೆ ಜಾರಿದಾಗ ಬಲಗಣ್ಣಿನಲ್ಲಿ ಏನೋ ಕಿರಿಕಿರಿ ಆಗುತ್ತಿದೆ ಅಂತ ನಿದ್ರೆಯಿಂದ ಎಚ್ಚರಗೊಂಡರು.
ನಿದ್ದೆಯಿಂದ ಎದ್ದ ಕೂಡಲೇ ಅವನು ತನ್ನ ಕಾಂಟ್ಯಾಕ್ಟ್ ಲೆನ್ಸ್ಗಳನ್ನು ಹೊಂದಿದ್ದನು ಮತ್ತು ಅವು ಅವನ ಕಣ್ಣಿನಲ್ಲಿ ತೇಲುತ್ತಿರುವುದನ್ನು ಗಮನಿಸಿದನು ಮತ್ತು ಆದ್ದರಿಂದ ಅವನು ಕೂಡಲೇ ಆ ಲೆನ್ಸ್ ಅನ್ನು ಹೊರತೆಗೆದನು.
ಆದರೂ ಸಹ ಉರಿಯೂತ ಮತ್ತು ಕಿರಿಕಿರಿ ಕಣ್ಣಿನಲ್ಲಿ ಕಡಿಮೆಯಾಗಲಿಲ್ಲ, ನಂತರ ವಿದ್ಯಾರ್ಥಿ ಮರುದಿನ ವೈದ್ಯರ ಬಳಿಗೆ ಹೋದನು. ಆಗ ವೈದ್ಯರು ಅವನಿಗೆ ಹರ್ಪಿಸ್ ಸಿಂಪ್ಲೆಕ್ಸ್ 1 ವೈರಸ್ ತಗುಲಿರುವುದರಿಂದ ಹೀಗೆ ಆಗಿದೆ ಅಂತ ತಪ್ಪಾಗಿ ಗುರುತಿಸಿದ್ದಾರೆ ಅಂತ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ತಿಂಗಳಾದ್ರೂ ಕಣ್ಣಿನಲ್ಲಿರುವ ಕಿರಿಕಿರಿ ಕಡಿಮೆ ಅಗಲಿಲ್ವಂತೆ..
ಒಂದು ತಿಂಗಳ ನಂತರ ಸಹ ಕಣ್ಣಿನಲ್ಲಿರುವ ಆ ಕಿರಿಕಿರಿ ಮತ್ತು ಮಸುಕಾದ ದೃಷ್ಟಿ ಕಡಿಮೆ ಆಗದೆ ಇದ್ದಾಗ, ಕ್ರುಮ್ಹೋಲ್ಜ್ ಮತ್ತೆ ಆಸ್ಪತ್ರೆಗೆ ಹೋದರಂತೆ.
ಅಲ್ಲಿ ಹಲವಾರು ಪರೀಕ್ಷೆಗಳನ್ನು ಮಾಡಿಸಿದ ನಂತರ ಅವರಿಗೆ ಅಕಾಂಥಮೋಬಾ ಕೆರಾಟಿಟಿಸ್ ಇರುವುದು ಪತ್ತೆಯಾಯಿತು. ಇದು "ಸೂಕ್ಷ್ಮ, ಮುಕ್ತ-ಜೀವಂತ ಅಮೆಬಾದಿಂದ ಉಂಟಾಗುವ ಗಂಭೀರ ಸೋಂಕಾಗಿದೆ - ಸಾಮಾನ್ಯವಾಗಿ ಇವು ನೀರು, ಮಣ್ಣು ಮತ್ತು ಗಾಳಿಯಲ್ಲಿ ಕಂಡುಬರುವ ಏಕಕೋಶೀಯ ಜೀವಿಗಳು" ಎಂದು ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಹೇಳುತ್ತದೆ.
ಈ ರೋಗವು ಶಾಶ್ವತ ಕುರುಡುತನಕ್ಕೆ ಕಾರಣವಾಗಬಹುದು ಮತ್ತು ರೋಗಲಕ್ಷಣಗಳಲ್ಲಿ ಕಣ್ಣಿನ ನೋವು, ಕಣ್ಣು ಕೆಂಪಾಗುವುದು, ಮಸುಕಾದ ದೃಷ್ಟಿ, ಬೆಳಕಿಗೆ ಸೂಕ್ಷ್ಮತೆ ಮತ್ತು ಅತಿಯಾದ ಕಣ್ಣೀರು ಸುರಿಯುವುದು ಸೇರಿರುತ್ತವೆ.
ಇನ್ನೂ ನೋವಿನಿಂದ ಬಳಲುತ್ತಿರುವ ವಿದ್ಯಾರ್ಥಿಯನ್ನು ಫೋಟೋಡೈನಾಮಿಕ್ ಥೆರಪಿ ಎಂದು ಕರೆಯಲಾಗುವ ಕಾರ್ಯವಿಧಾನಕ್ಕೆ ಒಳಪಡಿಸಲಾಯಿತು, ಅಲ್ಲಿ ಪರಾವಲಂಬಿಯ ವಿರುದ್ಧ ಹೋರಾಡುವ ಪ್ರಯತ್ನದಲ್ಲಿ ಕಣ್ಣಿನ ಬಿಳಿ ಭಾಗ ಕಣ್ಣಿನ ಮೇಲೆ ಬಂದಿರುವುದನ್ನು ಗಮನಿಸಲಾಯಿತು.
ಇದನ್ನೂ ಓದಿ:Blind Students: ವಿಶೇಷ ಚೇತನ ಮಕ್ಕಳಿಗೆ ಈ ರೀತಿ ಪಾಠಮಾಡಿ, ಅವರಿಗೂ ಅನುಕೂಲವಾಗುತ್ತೆ
ಲೆನ್ಸ್ ಗಳನ್ನು ಧರಿಸುವ ಜನರು ಇಂತಹ ಸೋಂಕಿನಿಂದ ಆಗಾಗ್ಗೆ ಬಳಲ್ತಾರಂತೆ..
ಕಾಂಟ್ಯಾಕ್ಟ್ ಲೆನ್ಸ್ ಧರಿಸುವ ಜನರು ವಿಶೇಷವಾಗಿ ಕಣ್ಣಿನಲ್ಲಿ ಕಿರಿಕಿರಿ ಅಂತ ಅನ್ನಿಸಿದಾಗ, ಅದನ್ನು ಸರಿಯಾಗಿ ನಿರ್ವಹಿಸದಿದ್ದರೆ ಇಂತಹ ಸೋಂಕಿನ ಹೆಚ್ಚಿನ ಅಪಾಯದಲ್ಲಿರುತ್ತಾರೆ.
"ನನ್ನ ಜೀವನದಲ್ಲಿ ಈ ರೀತಿಯ ಒಂದು ನೋವನ್ನು ಹೇಗೆ ವಿವರಿಸಬೇಕೆಂದು ನನಗೆ ಅರ್ಥವಾಗುತ್ತಿಲ್ಲ. ಇದು ನಿರಂತರ ಆಘಾತದಂತೆ, ಈ ನೋವು ನನ್ನ ಜೊತೆಗೆ ಇರುತ್ತದೆ.
ನಾನು ಈ ನೋವನ್ನು ಸಹಿಸಿರುವುದರ ಬಗ್ಗೆ ನನಗೆ ತುಂಬಾನೇ ಹೆಮ್ಮೆ ಇದೆ, ಏಕೆಂದರೆ ಈ ನೋವು ನನಗೆ ಕಿರುಚುವಂತೆ ಮಾಡುತ್ತಿದೆ" ಎಂದು ಕ್ರುಮ್ಹೋಲ್ಜ್ ನ್ಯೂಯಾರ್ಕ್ ಪೋಸ್ಟ್ ಗೆ ತಿಳಿಸಿದರು.
ತನ್ನ ಸ್ಥಿತಿಯಿಂದಾಗಿ ಈಗ ಅಧ್ಯಯನ ಮಾಡಲು ಸಾಧ್ಯವಾಗದ ವಿದ್ಯಾರ್ಥಿ, ಅವನ ಆರೋಗ್ಯದ ಕಾರಣದಿಂದಾಗಿ ಕಣ್ಣಿನ ಕಸಿ ಮಾಡಿಸಲು ಸಹ ಆಗುವುದಿಲ್ಲವಂತೆ.
ಅವರು ಈಗ ಕಾಂಟ್ಯಾಕ್ಟ್ ಲೆನ್ಸ್ ಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಮತ್ತು ಅವುಗಳನ್ನು ಧರಿಸಿಕೊಂಡು ಮಲಗದಂತೆ ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ