HOME » NEWS » Trend » BE CAREFUL WHEN YOU SEARCH FOR THESE 8 THINGS ON GOOGLE LG

Google Search: ನೀವು ಗೂಗಲ್​​ನಲ್ಲಿ ಈ 8 ವಿಷಯಗಳ ಬಗ್ಗೆ ಸರ್ಚ್​ ಮಾಡುವಾಗ ಎಚ್ಚರದಿಂದಿರಿ..!

ಆರೋಗ್ಯ, ಪರ್ಸನಲ್ ಫೈನಾನ್ಸ್​ ವಿಷಯಗಳು ಒಬ್ಬರಿಂದ ಒಬ್ಬರಿಗೆ ವೈಶಿಷ್ಟ್ಯವಾಗಿರುತ್ತವೆ. ಕೇವಲ ಒಂದು ಇನ್ವೆಸ್ಟ್​ಮೆಂಟ್ ಪ್ಲ್ಯಾನ್​ನಿಂದ ಯಾರೂ ಸಹ ಶ್ರೀಮಂತರಾಗಲು ಸಾಧ್ಯವಿಲ್ಲ. ಹೀಗಾಗಿ ಬಂಡವಾಳ ಹೂಡಿಕೆ ವಿಷಯದಲ್ಲಿ ಗೂಗಲ್​ ನೀಡುವ ಸಲಹೆಗಳನ್ನು ತೆಗೆದುಕೊಳ್ಳಬೇಡಿ.

news18-kannada
Updated:February 25, 2021, 2:58 PM IST
Google Search: ನೀವು ಗೂಗಲ್​​ನಲ್ಲಿ ಈ 8 ವಿಷಯಗಳ ಬಗ್ಗೆ ಸರ್ಚ್​ ಮಾಡುವಾಗ ಎಚ್ಚರದಿಂದಿರಿ..!
ಗೂಗಲ್ ಸರ್ಚ್
  • Share this:
ನಮಗೆ ಯಾವುದಾದರೂ ವಿಷಯದ ಬಗ್ಗೆ ಮಾಹಿತಿ ಬೇಕೆಂದಲ್ಲಿ ಕೂಡಲೇ ಗೂಗಲ್​ನಲ್ಲಿ ಹುಡುಕುತ್ತೇವೆ. ಅಡ್ರೆಸ್, ವೆಬ್​ಸೈಟ್ಸ್​​, ಮೂವೀಸ್ ಹೀಗೆ ಯಾವುದರ ಬಗ್ಗೆ ಬೇಕಾದರೂ ಗೂಗಲ್ ಸರ್ಚ್ ಮಾಡುತ್ತೇವೆ. ಹೀಗಾಗಿ ಇಂಟರ್​​ನೆಟ್​​​ನಲ್ಲಿ ಗೂಗಲ್ ಸರ್ಚ್​ ನಮ್ಮ ಬೆಸ್ಟ್​ ಫ್ರೆಂಡ್ ಆಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಆದರೆ ಕೆಲವೊಂದು ಸಂದರ್ಭದಲ್ಲಿ ಗೂಗಲ್​ ಸರ್ಚ್​ ನಿಮ್ಮನ್ನು ತೊಂದರೆಗೆ ಸಿಕ್ಕಿಸಬಹುದು. ಗೂಗಲ್​ನಲ್ಲಿ ನೀವು ಹುಡುಕಿದ ಮಾಹಿತಿಯು ಸರಿಯಾಗಿ ಪರಿಶೀಲನೆ ಆಗದಿದ್ದಾಗ ಸಮಸ್ಯೆ ಉಂಟಾಗಬಹುದು. ನೀವು ಸರ್ಚ್ ಮಾಡಿದ ವಿಷಯಗಳನ್ನು ಸ್ಕ್ಯಾಮರ್​​ಗಳು ಲಾಭ ಪಡೆಯಲು ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ. ಜೊತೆಗೆ ವೈದ್ಯಕೀಯ ಅಥವಾ ವೃತ್ತಿ ಸಲಹೆ ವಿಷಯಕ್ಕೆ ಬಂದಾಗ ಕೆಲವೊಮ್ಮೆ ನೀವು ತಪ್ಪು ಮಾಹಿತಿ ಪಡೆಯಲೂಬಹುದು.

ಗೂಗಲ್​ನಲ್ಲಿ ನಾವು ಹುಡುಕುವ ವಿಷಯದ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಬಹಳ ಕಷ್ಟ. ಏಕೆಂದರೆ ಗೂಗಲ್ ಸರ್ಚ್ ಕೇವಲ ಒಂದು ಆನ್​ಲೈನ್​ ಪ್ಲಾಟ್​ಫಾರ್ಮ್​ ಆಗಿದ್ದು, ನಿಮಗೆ ಅಗತ್ಯವಿರುವ ಮಾಹಿತಿಯನ್ನು ನೀಡುವ ವೆಬ್​ಸೈಟ್​​ಗಳನ್ನು ಕಂಡುಕೊಳ್ಳುತ್ತೀರಿ. ನೀವು ಯಾವ ವಿಷಯವನ್ನು ಹುಡುಕುತ್ತೀರಿ ಎಂಬುದಕ್ಕಿಂತ ಹೆಚ್ಚಾಗಿ, ಗೂಗಲ್ ಹುಡುಕಾಟದಲ್ಲಿ ನೀವು ಯಾವ ರಿಸಲ್ಟ್​ ಪಡೆಯುತ್ತೀರಿ ಎಂಬುದರ ಹಿಂದೆ ಎಸ್​​​ಇಒ ಕೌಶಲ್ಯಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಹ್ಯಾಕರ್ಸ್​​ಗಳು ಇಲ್ಲಿ ಲಾಭ ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ನೀವು ಗೂಗಲ್​ನಲ್ಲಿ ಈ 8 ವಿಷಯಗಳ ಬಗ್ಗೆ ಹುಡುಕುವಾಗ ಎಚ್ಚರಿಕೆಯಿಂದ ಇರಬೇಕು.

1. ಕಸ್ಟಮರ್​ ಕೇರ್​ ಕಾಂಟ್ಯಾಕ್ಟ್​​ ನಂಬರ್​ ಸರ್ಚ್​ ಮಾಡುವಾಗ ಎಚ್ಚರ..!
ಇದೊಂದು ಜನಪ್ರಿಯ ಆನ್​ಲೈನ್ ಹಗರಣಗಳಲ್ಲಿ​ ಒಂದಾಗಿದೆ. ವಂಚಕರು ಫೇಕ್ ಅಥವಾ ನಕಲಿ ಬ್ಯುಸಿನೆಸ್ ಲಿಸ್ಟ್​ ಮತ್ತು ಕಸ್ಟಮರ್​​ ಕೇರ್​ ನಂಬರ್​ಗಳನ್ನು ವೆಬ್​ಸೈಟ್​​ಗಳಲ್ಲಿ ಪೋಸ್ಟ್​ ಮಾಡಿರುತ್ತಾರೆ. ಇದನ್ನರಿಯದ ಜನರು ಅದೇ ನಿಜವಾದ ಮಾಹಿತಿ ಎಂದು ನಂಬುತ್ತಾರೆ. ಹೆಚ್ಚಿನ ಅಪ್ಲಿಕೇಶನ್​ಗಳು ಇನ್​ ಬಿಲ್ಟ್​ ಕಸ್ಟಮರ್​ ಕೇರ್​​ ಚಾಟ್​ ವಿಂಡೋಸ್​​ನ್ನು ಹೊಂದಿರುತ್ತವೆ. ಆದರೆ ನೀವು ಕರೆ ಮಾಡಬಹುದಾದ ಕಾಂಟ್ಯಾಕ್ಟ್​ ನಂಬರ್​ನ್ನು ಹೊಂದಿರುವುದಿಲ್ಲ.

2. ಬ್ಯಾಂಕಿಂಗ್​ಗೆ ಸಂಬಂಧಿಸಿದ ವೆಬ್​ಸೈಟ್ ಚೆಕ್​ ಮಾಡುವಾಗ​​ URL ​​​​​​​​ನ್ನು ಎರಡೆರಡು ಬಾರಿ ಪರಿಶೀಲಿಸಿ.

ಬ್ಯಾಂಕಿಂಗ್​​ಗೆ ಸಂಬಂಧಿಸಿದ ವೆಬ್​ಸೈಟ್​​ಗಳನ್ನು ಚೆಕ್ ಮಾಡುವಾದ ಜಾಗ್ರತೆ ವಹಿಸಬೇಕು. ಹೀಗಾಗಿ ಎರಡೆರಡು ಬಾರಿ URL ನ್ನು ಪರಿಶೀಲಿಸಬೇಕು. ಅದು ಅಧಿಕೃತ URL ಎಂದು ನಿಮ್ಮ ಗಮನಕ್ಕೆ ಬರುವವರೆಗೂ ಸರಿಯಾಗಿ ಪರಿಶೀಲಿಸುತ್ತಿರಬೇಕು. ಯಾಕೆಂದರೆ, ಸ್ಕ್ಯಾಮರ್ಸ್​​ಗಳು ನಕಲಿ ಆನ್​ಲೈನ್​ ಬ್ಯಾಂಕಿಂಗ್​​ ವೆಬ್​ಸೈಟ್​​ಗಳನ್ನು ಪೋಸ್ಟ್​ ಮಾಡಿರುವ ಸಾಧ್ಯತೆ ಇರುತ್ತದೆ. ನೀವು ಅರಿಯದೆ ಆ ವೆಬ್​ಸೈಟ್​​ಗಳಲ್ಲಿ ನಿಮ್ಮ ಲಾಗಿಲ್​ ಮಾಹಿತಿಯನ್ನು ನೀಡಿದರೆ ಮೋಸ ಹೋಗುತ್ತೀರಿ ಎಚ್ಚರಿಕೆ. ಹೀಗಾಗಿ ಯಾವಾಗಲೂ ಸುರಕ್ಷಿತ ಆನ್​​​ಲೈನ್​ ಬ್ಯಾಂಕಿಂಗ್​​ ಪೋರ್ಟಲ್​ಗೆ ಲಾಗಿನ್​ ಆಗಲು​​​ ಅಧಿಕೃತ URL ನಮೂದಿಸಿ.

3. ಗೂಗಲ್​ನಲ್ಲಿ ಡೌನ್​ಲೋಡ್​ ಮಾಡಿಕೊಳ್ಳಲು ಆ್ಯಪ್ಸ್​ ಮತ್ತು ಸಾಫ್ಟ್​​ವೇರ್​​​ಗಳನ್ನು ಹುಡುಕಬೇಡಿ.ಆ್ಯಪ್ಸ್​, ಸಾಫ್ಟ್​ವೇರ್​ ಹಾಗೂ ಇನ್ನಿತರೆ ಫೈಲ್​ಗಳನ್ನು ಗೂಗಲ್​ನಲ್ಲಿ ಹುಡುಕಲು ಹೋಗಬೇಡಿ. ಯಾಕೆಂದರೆ ಗೂಗಲ್​ನಲ್ಲಿ ಕೆಲವೊಮ್ಮೆ ದುದ್ದೇಶಪೂರಿತ ಸಾಫ್ಟ್​​ವೇರ್​​​ಗಳು ಹಾಗೂ ಅಪ್ಲಿಕೇಶನ್​ಗಳ ರಾಶಿ ಇರುತ್ತದೆ. ಹಾಗಾಗಿ ಯಾವಾಗಲೂ ಅಧಿಕೃತ ಆ್ಯಪ್​​ ಸ್ಟೋರ್​ಗಳಿಂದ ಆ್ಯಪ್​ ಡೌನ್​ಲೋಡ್ ಮಾಡಿಕೊಳ್ಳಿ. ಆ್ಯಂಡ್ರಾಯ್ಡ್​​ನಲ್ಲಿ ಗೂಗಲ್​ ಪ್ಲೇ ಮತ್ತು ಐಫೋನ್​ಗಳಲ್ಲಿ ಆ್ಯಪ್​ ಸ್ಟೋರ್​​​ ಎಂಬ ಅಧಿಕೃತ ಆ್ಯಪ್​ಗಳು ಲಭ್ಯವಿರುತ್ತವೆ. ಇವುಗಳಲ್ಲಿ ನೀವು ಆ್ಯಪ್ ಅಥವಾ ಸಾಫ್ಟ್​ವೇರ್​ಗಳನ್ನು ಡೌನ್​ಲೋಡ್ ಮಾಡಿಕೊಳ್ಳಬಹುದು.

4.ಗೂಗಲ್​ನಲ್ಲಿ ಮೆಡಿಸಿನ್ ಬಗ್ಗೆ ಸರ್ಚ್​ ಮಾಡುವ ಮೊದಲು ಡಾಕ್ಟರ್​​​ ಬಳಿ ಸಮಾಲೋಚಿಸಿ.

ನಿಮಗೆ ಆರೋಗ್ಯ ಹದಗೆಟ್ಟರೆ ವೈದ್ಯರ ಬಳಿ ಹೋಗಿ. ಆದರೆ ಗೂಗಲ್​ನಲ್ಲಿ ಮೆಡಿಸಿನ್ ಅಥವಾ ಆರೋಗ್ಯ ಸಲಹೆಗಳ ಬಗ್ಗೆ ಸರ್ಚ್​ ಮಾಡಬೇಡಿ. ಯಾಕೆಂದರೆ ಗೂಗಲ್​ನಲ್ಲಿ ಈ ಬಗ್ಗೆ ಸ್ಪಷ್ಟವಾದ ಮಾಹಿತಿ ಇರುವುದಿಲ್ಲ. ಗೂಗಲ್​ ಮಾಹಿತಿಗಿಂತ ವೈದ್ಯರ ಸಲಹೆ ಪಡೆಯುವುದು ಉತ್ತಮ. ಜೊತೆಗೆ ಗೂಗಲ್​ ಸಲಹೆ ಮೇರೆಗೆ ಮೆಡಿಸಿನ್ ತೆಗೆದುಕೊಳ್ಳವುದೂ ಸಹ ಅಷ್ಟೇ ಅಪಾಯಕಾರಿ.

5.ತೂಕ ಇಳಿಸುವಿಕೆ ಅಥವಾ ನ್ಯೂಟ್ರಿಷನ್ ಬಗ್ಗೆ ಗೂಗಲ್ ಸರ್ಚ್ ಮಾಡದಿರುವುದು ಒಳಿತು.
ಪ್ರತಿಯೊಬ್ಬ ಮಾನವನ ದೇಹವು ಒಂದೊಂದು ರೀತಿಯ ಆಕಾರ, ರಚನೆ ಹೊಂದಿರುತ್ತದೆ. ಹೀಗಾಗಿ ತೂಕ ಇಳಿಸುವಿಕೆ ಅಥವಾ ಪೌಷ್ಟಿಕಾಂಶ ಸಲಹೆಗಳನ್ನು ಗೂಗಲ್​ನಿಂದ ಪಡೆಯಬೇಡಿ. ನಿಮ್ಮ ಡಯೆಟ್​ ಬದಲಾವಣೆ ಮಾಡಬೇಕಾದರೆ ವೈದ್ಯರನ್ನು ಸಂಪರ್ಕಿಸಿ. ತೂಕ ಇಳಿಸುವುದಾರೂ ಸಹ ವೈದ್ಯರ ಸಲಹೆ ಪಡೆಯಿರಿ.

6. ಗೂಗಲ್​​ನಲ್ಲಿ ಸರ್ಚ್​ ಮಾಡಿದಾಗ ಸಿಗುವ ಪರ್ಸನಲ್​ ಫೈನಾನ್ಸ್​​, ಸ್ಟಾಕ್ ಮಾರ್ಕೆಟ್​ ಟಿಪ್ಸ್​​ ಗಳನ್ನು ನಂಬಬೇಡಿ.

ಆರೋಗ್ಯ, ಪರ್ಸನಲ್ ಫೈನಾನ್ಸ್​ ವಿಷಯಗಳು ಒಬ್ಬರಿಂದ ಒಬ್ಬರಿಗೆ ವೈಶಿಷ್ಟ್ಯವಾಗಿರುತ್ತವೆ. ಕೇವಲ ಒಂದು ಇನ್ವೆಸ್ಟ್​ಮೆಂಟ್ ಪ್ಲ್ಯಾನ್​ನಿಂದ ಯಾರೂ ಸಹ ಶ್ರೀಮಂತರಾಗಲು ಸಾಧ್ಯವಿಲ್ಲ. ಹೀಗಾಗಿ ಬಂಡವಾಳ ಹೂಡಿಕೆ ವಿಷಯದಲ್ಲಿ ಗೂಗಲ್​ ನೀಡುವ ಸಲಹೆಗಳನ್ನು ತೆಗೆದುಕೊಳ್ಳಬೇಡಿ.

7. ಗೂಗಲ್​ ಸರ್ಚ್​ ಮಾಡುವಾಗ ಸರ್ಕಾರಿ ವೆಬ್​ಸೈಟ್​​ಗಳ URLಗಳನ್ನು ಯಾವಾಗಲೂ ಪರಿಶೀಲಿಸಿ.

ಬ್ಯಾಂಕಿಂಗ್ ವೆಬ್​​ಸೈಟ್​​​ಗಳು, ಸರ್ಕಾರಿ ವೆಬ್​ಸೈಟ್​​​ಗಳಾದ ಮುನಿಸಿಪಾಲಿಟಿ ಟ್ಯಾಕ್ಸ್​, ಹಾಸ್ಪಿಟಲ್ಸ್​​ ಇತ್ಯಾದಿ ವಿಷಯಗಳ ಬಗ್ಗೆ ಗೂಗಲ್​ನಲ್ಲಿ ಸರ್ಚ್ ಮಾಡುವಾಗ ಅವುಗಳ ಅಧಿಕೃತ URLಗಳನ್ನು ಎರಡೆರಡು ಬಾರಿ ಪರಿಶೀಲಿಸಿ. ಈ ವೆಬ್​ಸೈಟ್​​​​ಗಳನ್ನು ಸ್ಕ್ಯಾಮರ್​​ಗಳು ಟಾರ್ಗೆಟ್​ ಮಾಡುವ ಸಾಧ್ಯತೆ ಇರುತ್ತದೆ. ನಿಮಗೆ ಯಾವುದು ಒರಿಜಿನಲ್​ ಅಥವಾ ಡೂಪ್ಲಿಕೇಟ್​ ಎಂದು ಗೊತ್ತಾಗದಿದ್ದರೆ, ಅಧಿಕೃತ ಸರ್ಕಾರಿ ವೆಬ್​​ಸೈಟ್​​ಗೆ ಭೇಟಿ ನೀಡಬಹುದು.

8. ಕೂಪನ್ಸ್​​​​​​​, ಇ-ಕಾಮರ್ಸ್​​ ವೆಬ್​​​ಸೈಟ್​ ಆಫರ್​​​ಗಳ ಬಗ್ಗೆ ಗೂಗಲ್​ ಸರ್ಚ್ ಮಾಡಬೇಡಿ.

ಗೂಗಲ್ ಸರ್ಚ್​ ಮಾಡಿದಾಗ ನಕಲಿ ವೆಬ್​ಪೇಜ್​​ಗಳು ಇ-ಕಾಮರ್ಸ್​​​ ವೆಬ್​​ಸೈಟ್​​​ಗಳ ಬಗ್ಗೆ ಆಫರ್​ಗಳನ್ನು ನೀಡಿರುತ್ತವೆ. ಇದು ಮತ್ತೊಂದು ಹಗರಣವಾಗಿದ್ದು, ಜನರನ್ನು ಆಕರ್ಷಿಸಲು ಯತ್ನಿಸುತ್ತವೆ. ಹೀಗಾಗಿ ಕೂಪನ್ಸ್​, ಇ-ಕಾಮರ್ಸ್​​ ವೆಬ್​ಸೈಟ್​​ ಬಗ್ಗೆ ಗೂಗಲ್​ನಲ್ಲಿ ಹುಡುಕಬೇಡಿ.
Published by: Latha CG
First published: February 25, 2021, 2:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories