ಅನೇಕರು ತಮ್ಮ ಕಾರುಗಳನ್ನು (Car) ಸ್ಥಳೀಯ ಗ್ಯಾರೇಜ್ ಗಳಲ್ಲಿ ಸರ್ವೀಸಿಂಗ್ಗೆ (Service) ನೀಡಿದರೆ ಎಲ್ಲಿ ಕಾರನ್ನು ಡ್ಯಾಮೇಜ್ (Damage) ಮಾಡಿ ಬಿಡುತ್ತಾರೋ ಅನ್ನೋ ಭಯಕ್ಕೆ ಸರ್ವೀಸಿಂಗ್ ಸೆಂಟರ್ ಗಳಲ್ಲಿಯೇ ತಮ್ಮ ಕಾರುಗಳನ್ನು ಸರ್ವೀಸ್ ಮಾಡಿಸುತ್ತಾರೆ. ಆದರೆ ಇತ್ತೀಚೆಗೆ ಈ ಅಧಿಕೃತ ಸರ್ವೀಸ್ ಸೆಂಟರ್ (Service Centre) ಗಳಲ್ಲಿಯೂ ಸಹ ಕಾರುಗಳು ಡ್ಯಾಮೇಜ್ ಆಗುತ್ತಿರುವಂತಹ ಘಟನೆಗಳನ್ನು ನಾವು ನೋಡುತ್ತಿದ್ದೇವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಇಂತಹ ಘಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದರೂ ಸಹ ಕಾರು ತಯಾರಕರು ಮತ್ತು ಅವರ ಅಧಿಕೃತ ಮಾರಾಟ ಕಂಪನಿಗಳು ಮತ್ತು ಸರ್ವೀಸ್ ಕಂಪನಿಗಳು ಯಾವುದೇ ರೀತಿಯ ಪಾಠವನ್ನು ಕಲಿಯುತ್ತಿಲ್ಲ ಎಂಬುದು ಆಶ್ಚರ್ಯಕರವಾಗಿದೆ.
ಇಲ್ಲಿ ಒಂದು ಘಟನೆ ನಡೆದಿದೆ ನೋಡಿ, ಸರ್ವೀಸ್ಗೆ ಅಂತ ಕೊಟ್ಟ ಕಾರನ್ನು ಡ್ಯಾಮೇಜ್ ಮಾಡಿ ಗ್ರಾಹಕನನ್ನೇ ಬೆದರಿಸುತ್ತಿದ್ದಾರಂತೆ ಆ ಡೀಲರ್.
ಟಾಟಾ ನೆಕ್ಸಾನ್ ಇವಿ ಡ್ಯಾಮೇಜ್ ಆಗಿರುವುದು ಹೇಗೆ?
ಹೈದರಾಬಾದ್ ಮೂಲದ ಆರೆಂಜ್ ಆಟೋ ಪ್ರೈವೇಟ್ ಲಿಮಿಟೆಡ್ ನ ಅಧಿಕೃತ ಸರ್ವೀಸ್ ಸೆಂಟರ್ ಗೆ ಸರ್ವೀಸ್ ಗೆ ಅಂತ ಡಾ.ರಾಜೀವ್ ಬಂಡಾರು ಎಂಬ ವ್ಯಕ್ತಿ ತನ್ನ ಟಾಟಾ ನೆಕ್ಸಾನ್ ಇವಿಯನ್ನು ನೀಡಿದ್ದರು.
ಇದನ್ನೂ ಓದಿ: ವೊಡಾಫೋನ್ ಗ್ರೂಪ್ ಸಿಇಒ ಸ್ಥಾನದಿಂದ ಕೆಳಗಿಳಿದ ನಿಕ್ ರೀಡ್
ಡಾ.ಬಂಡಾರು ಅವರು ತಮ್ಮ ವಾಹನವನ್ನು ಸರ್ವೀಸ್ ಸೆಂಟರ್ ನಲ್ಲಿ ಬಿಟ್ಟ ನಂತರ, ಸರ್ವೀಸ್ ಸೆಂಟರ್ ನಲ್ಲಿ ಸಂಬಂಧಪಟ್ಟವರು ಲಿಫ್ಟ್ ನಲ್ಲಿ ಆ ವಾಹನವನ್ನು ನಿಲ್ಲಿಸುವಾಗ ಅದನ್ನು ತಪ್ಪಾಗಿ ನಿಲ್ಲಿಸಿದ್ದಾರೆ. ನಂತರ ಅದನ್ನು ಮೇಲಕ್ಕೆ ಎತ್ತುವಾಗ, ನೆಕ್ಸಾನ್ ಇವಿಯ ಮುಂಭಾಗದ ತುದಿಯು ಸಂಪೂರ್ಣವಾಗಿ ಹಾನಿಗೊಳಗಾಗಿದೆ.
My Vehicle Nexon EV damaged by Orange Auto Pvt Ltd Service Center, Hafeezpet Miyapur, Hyd which is a TATA Authorized Service center by vehicle lift crash during General Service in the service center.
CEO and MD doesn't take responsibility and not supporting customer #RatanTata pic.twitter.com/S3sFKKLioV
— Dr RAJIV BANDARU (@rajiv_bandaru) November 28, 2022
ಮಾಡಿರುವ ತಪ್ಪನ್ನು ಒಪ್ಪಿಕೊಳ್ಳುತ್ತಿಲ್ಲವಂತೆ ಸರ್ವೀಸ್ ಸೆಂಟರ್ ನ ಅಧಿಕಾರಿಗಳು
ಆಶ್ಚರ್ಯಕರ ಸಂಗತಿಯೆಂದರೆ, ತಮ್ಮ ತಪ್ಪನ್ನು ಒಪ್ಪಿಕೊಳ್ಳುವ ಬದಲು, ಆರೆಂಜ್ ಆಟೋ ಪ್ರೈವೇಟ್ ಲಿಮಿಟೆಡ್ ನ ಸಿಇಒ ಅವರು ಡಾ. ಬಂಡಾರು ಅವರ ತಮ್ಮ ಹಾನಿಗೊಳಗಾದ ವಾಹನದ ವಿಮೆಯನ್ನು ಕ್ಲೈಮ್ ಮಾಡಿಕೊಳ್ಳಲು ಒತ್ತಾಯಿಸುತ್ತಿದ್ದಾರೆ.
ಸರ್ವೀಸ್ ಸೆಂಟರ್ ಅಧಿಕಾರಿಗಳಿಂದ ಎಚ್ಚರಿಕೆ
ಡಾ. ಬಂಡಾರು ಅವರು ಅದಕ್ಕೆ ಸಿದ್ಧರಿಲ್ಲದಿದ್ದರೆ ಅವರ ವಾಹನವನ್ನು ಹಿಂತಿರುಗಿಸುವುದಿಲ್ಲ ಎಂದು ಸರ್ವಿಸಿಂಗ್ ಸೆಂಟರ್ ನ ಅಧಿಕಾರಿಗಳು ಎಚ್ಚರಿಕೆ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಫೋಟೋಗಳಲ್ಲಿ ಟಾಟಾ ನೆಕ್ಸಾನ್ ಇವಿಯ ಮುಂಭಾಗದ ತುದಿಯು ಸಂಪೂರ್ಣವಾಗಿ ಹಾನಿಗೊಳಗಾಗಿರುವುದನ್ನು ನಾವು ನೋಡಬಹುದು, ಬೊನೆಟ್, ಹೆಡ್ಲ್ಯಾಂಪ್ ಗಳು ಮತ್ತು ಮುಂಭಾಗದ ಬಂಪರ್ ಮುರಿದ ಸ್ಥಿತಿಯಲ್ಲಿದೆ. ಸರ್ವಿಸಿಂಗ್ ಸೆಂಟರ್ ದೊಳಗಿನ ಸಿಸಿಟಿವಿಯ ದೃಶ್ಯಾವಳಿಗಳನ್ನು ತೋರಿಸಲು ಸೆಂಟರ್ ನ ಅಧಿಕಾರಿಗಳು ಸಹ ನಿರಾಕರಿಸುತ್ತಿದ್ದಾರೆ ಎಂದು ಡಾ.ಬಂಡಾರು ಹೇಳಿದ್ದಾರೆ.
ನೆಕ್ಸಾನ್ ಇವಿಯ ಮಾಲೀಕರು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ ಗಳಲ್ಲಿ ತಮ್ಮ ಸಂಕಟಗಳನ್ನು ವಿವರಿಸಿದ್ದಾರೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ವಾಹನವನ್ನು ತಮ್ಮ ಸ್ವಂತ ಖರ್ಚಿನಲ್ಲಿ ರಿಪೇರಿ ಮಾಡಲು ಸಿದ್ಧರಿಲ್ಲದಕ್ಕೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಇಂತಹ ಘಟನೆ ನಡೆದಿದ್ದು ಇದೇನು ಮೊದಲನೇ ಬಾರಿ ಅಲ್ಲ
ಇತ್ತೀಚೆಗೆ, ಕಿಯಾ ಸೊನೆಟ್ ಮಾಲೀಕರೊಬ್ಬರು ತಮ್ಮ ವಾಹನವನ್ನು ಸರ್ವೀಸ್ ಸೆಂಟರ್ ನಲ್ಲಿ ಸರ್ವಿಸಿಂಗ್ ಗೆ ಕೊಟ್ಟಾಗ ಇಂತಹದೇ ಒಂದು ಘಟನೆ ನಡೆಯಿತು, ಅಲ್ಲಿ ಸರ್ವೀಸ್ ಸೆಂಟರ್ ಒಳಗೆ ಚಾಲನೆ ಮಾಡುವಾಗ ಕಾರು ಜಖಂಗೊಂಡಿದೆ. ಅಂತಹ ಘಟನೆಗಳಲ್ಲಿ, ಸರ್ವಿಸಿಂಗ್ ಸೆಂಟರ್ ನ ಅಧಿಕಾರಿಗಳು ಜವಾಬ್ದಾರಿಯುತವಾಗಿರಬೇಕು ಮತ್ತು ಗ್ರಾಹಕನಿಗೆ ಅವನು ಜವಾಬ್ದಾರನಲ್ಲದ ಹಾನಿಗಳಿಗೆ ಕಿರುಕುಳ ನೀಡುವ ಬದಲು ಅವನಿಗೆ ಸಹಾಯ ಮಾಡಬೇಕು.
ಈ ಬಗ್ಗೆ ಕಿಯಾ ಇನ್ನೂ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಅಂತಹ ಘಟನೆಗಳನ್ನು ತಯಾರಕರು ಮತ್ತು ಡೀಲರ್ಶಿಪ್ ನೆಟ್ವರ್ಕ್ ವೃತ್ತಿಪರವಾಗಿ ನಿರ್ವಹಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ