B R Shetty: ಲಂಡನ್ ಕಂಪೆನಿಗೆ 9,68,41,09,500 ರೂ ಹಣ ಪಾವತಿಸಲು ಬಿ ಆರ್ ಶೆಟ್ಟಿಗೆ ಆದೇಶ!

B.R Shetty assets: ಬಿ ಆರ್​ ಶೆಟ್ಟಿ ಆರ್ಥಿಕ ದಿವಾಳಿತನಕ್ಕೆ ಗುರಿಯಾಗಿದ್ದು, ತೀವ್ರ ಸಂಕಷ್ಟಕ್ಕೆ ಈಡಾಗಿದ್ದಾರೆ. ಅವರು ಸದ್ಯ ಮಂಗಳೂರಿನಲ್ಲಿ ಠಿಕಾಣಿ ಹೂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಇರುವ ಬಿ ಆರ್​ ಶೆಟ್ಟಿಯ ಖಾತೆಗಳನ್ನು, ಆಸ್ತಿಪಾಸ್ತಿಗಳನ್ನು ಸ್ಥಗಿತಗೊಳಿಸುವಂತೆ ಬಾರ್ಕ್ಲೇಸ್ ಕಂಪನಿ ವಕೀಲರು ಕೋರ್ಟ್​ಗೆ ಮೊರೆಯಿಟ್ಟಿದ್ದರು.

ಬಾವಗುತ್ತು ರಘುರಾಮ ಶೆಟ್ಟಿ

ಬಾವಗುತ್ತು ರಘುರಾಮ ಶೆಟ್ಟಿ

  • Share this:
ಅಬುಧಾಬಿಯ(Abu Dhabi) ಭಾರತೀಯ(India) ಮೂಲದ ಕೋಟ್ಯಾಧಿಪತಿ ಬಾವ ಗುತು ರಘುರಾಮ್ ಶೆಟ್ಟಿ(B.R.Shetty) ಅಲಿಯಾಸ್ ಬಿ ಆರ್ ಶೆಟ್ಟಿ ಅವರಿಗೆ ಭಾರೀ ಹಿನ್ನಡೆಯಾಗಿದೆ. ವಿದೇಶಿ ವಿನಿಮಯ ವ್ಯವಹಾರ ವಹಿವಾಟಿನ ಭಾಗವಾಗಿ ಲಂಡನ್ ಬ್ಯಾಂಕ್ ಬಾರ್ಕ್ಲೇಸ್‌ ಗೆ(London Barclays )ಪೂರ್ಣ ಮೊತ್ತ ಪಾವತಿಸಬೇಕೆಂದು ಲಂಡನ್‌ ಕೋರ್ಟ್‌(London Court) ಆದೇಶ ಹೊರಡಿಸಿದೆ. 131 ಮಿಲಿಯನ್ (ಭಾರತೀಯ ಕರೆನ್ಸಿಯಲ್ಲಿ ರೂ 9,68,27,99,500) ಪಾವತಿಸಬೇಕಿದೆ.2020 ರಲ್ಲಿ ಲಂಡನ್‌ ಬ್ಯಾಂಕ್‌ ಬಾರ್ಕ್ಲೇಸ್ ವಿದೇಶಿ ವಿನಿಮಯ ವ್ಯಾಪಾರ ವಹಿವಾಟು ಒಪ್ಪಂದದ ಭಾಗವಾಗಿ ಬಿ ಆರ್ ಶೆಟ್ಟಿ ಸದರಿ ಬ್ಯಾಂಕ್‌ ಗೆ ದೊಡ್ಡ ಮೊತ್ತದ ಹಣ ಪಾವತಿಸಬೇಕಾಗಿತ್ತು. ಇದೇ ವಿಷಯವಾಗಿ ದುಬೈ ಕೋರ್ಟ್ ಬಿ.ಆರ್ ಶೆಟ್ಟಿ ವಿರುದ್ಧ ತೀರ್ಪು ನೀಡಿತ್ತು

ಬಿ.ಆರ್ ಶೆಟ್ಟಿಗೆ ಶಾಕ್ ಮೇಲೆ ಶಾಕ್

ದುಬೈ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಅವರು ಲಂಡನ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಭಾರತದ ಮಂಗಳೂರಿನ ಉದ್ಯಮಿ ಬಿ ಆರ್​ ಶೆಟ್ಟಿ ತಮ್ಮ ಕಂಪನಿಯ ಜೊತೆ 2020ರಲ್ಲಿ ಮಾಡಿಕೊಂಡಿದ್ದ ವಿದೇಶ ವಿನಿಮಯ ಬಿಸಿನೆಸ್​ ಅಗ್ರಿಮೆಂಟ್​ ಪ್ರಕಾರ ಹಣ ಪಾವತಿಸುವಲ್ಲಿ ವಿಫಲವಾಗಿದ್ದಾರೆ. ಹಾಗಾಗಿ ಅವರಿಂದ ಹಣ ಕೊಡಿಸಬೇಕು ಎಂದು ಬಾರ್ಕ್ಲೇಸ್ ಕಂಪನಿ ಲಂಡನ್ ಕೋರ್ಟ್ ಮೊರೆ ಹೋಗಿತ್ತು. ಮನವಿಯನ್ನು ಪುರಸ್ಕರಿಸಿರುವ ಲಂಡನ್ ಕೋರ್ಟ್ ಇದೀಗ ಮಂಗಳೂರಿನ ಉದ್ಯಮಿ ಬಿ ಆರ್​ ಶೆಟ್ಟಿಗೆ 131 ದಶಲಕ್ಷ ಡಾಲರ್ ಕಟ್ಟುವಂತೆ ಸೂಚಿಸಿದೆ.

ಇದರೊಂದಿಗೆ ದಿವಾಳಿಯೆದ್ದಿರುವ ಮಂಗಳೂರಿನ ಬಿ ಆರ್​ ಶೆಟ್ಟಿಗೆ ಸಂಕಷ್ಟಗಳ ಸರಮಾಲೆ ಮುಂದುವರಿದಿದೆ. ಇದಕ್ಕೂ ಮುನ್ನ ದುಬೈ ಕೋರ್ಟ್​ ಸಹ ಬಾರ್ಕ್ಲೇಸ್ ಕಂಪನಿ ಪರ ಆದೇಶ ನೀಡಿತ್ತು. ಜೊತೆಗೆ ಭಾರತ ಸೇರಿದಂತೆ ಇತರ ದೇಶಗಳು, ಲಂಡನ್‌ ನಲ್ಲಿರುವ ಬಿ.ಆರ್.ಶೆಟ್ಟಿ ಅವರ ಆಸ್ತಿ ಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಬ್ಯಾಂಕ್‌ ಪ್ರತಿನಿಧಿಗಳು ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: 3.15 ಬಿಲಿಯನ್ ಡಾಲರ್ ಆಸ್ತಿ, ಬುರ್ಜ್ ಖಲೀಫಾದಲ್ಲಿ ಎರಡಂತಸ್ತು...ಸಾಮಾನ್ಯ ಮನುಷ್ಯ ಅಷ್ಟೊಂದು ಶ್ರೀಮಂತ ಆಗಿದ್ದು ಹೇಗೆ?

ಜಗತ್ತಿನಾದ್ಯಂತ ಇರುವ ಬಿ.ಆರ್​ ಶೆಟ್ಟಿ ಆಸ್ತಿ ಜಪ್ತಿ

ಮಂಗಳೂರಿನ ಉದ್ಯಮಿ, 79 ವರ್ಷದ ಬಿ ಆರ್​ ಶೆಟ್ಟಿ ಆರ್ಥಿಕ ದಿವಾಳಿತನಕ್ಕೆ ಗುರಿಯಾಗಿದ್ದು, ತೀವ್ರ ಸಂಕಷ್ಟಕ್ಕೆ ಈಡಾಗಿದ್ದಾರೆ. ಅವರು ಸದ್ಯ ಮಂಗಳೂರಿನಲ್ಲಿ ಠಿಕಾಣಿ ಹೂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಇರುವ ಬಿ ಆರ್​ ಶೆಟ್ಟಿಯ ಖಾತೆಗಳನ್ನು, ಆಸ್ತಿಪಾಸ್ತಿಗಳನ್ನು ಸ್ಥಗಿತಗೊಳಿಸುವಂತೆ ಬಾರ್ಕ್ಲೇಸ್ ಕಂಪನಿ ವಕೀಲರು ಕೋರ್ಟ್​ಗೆ ಮೊರೆಯಿಟ್ಟಿದ್ದರು.

ಯಾರು ಈ ಬಿ ಆರ್ ಶೆಟ್ಟಿ?

ಬಾವಗುತ್ತು ರಘುರಾಮ ಶೆಟ್ಟಿ (ಬಿಆರ್ ಶೆಟ್ಟಿ) ಐಷಾರಾಮಿ ಜೀವನಕ್ಕೆ ಮತ್ತೊಂದು ಹೆಸರು. ಇಲ್ಲದ ಆಸ್ತಿ ಇದೆ ಎಂದು ತೋರಿಸಿ ಐಷಾರಾಮಿ ಜೀವನ ಸಾಗಿಸುವಲ್ಲಿ ಅವರಿಗೆ ಅವರೇ ಸಾಟಿ ಎಂಬ ಆರೋಪಗಳಿವೆ. ಕರ್ನಾಟಕದ ಉಡುಪಿಯಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದರು. ತಮ್ಮ ಶೈಕ್ಷಣಿಕ ಅರ್ಹತೆಗಳೊಂದಿಗೆ ಫಾರ್ಮಾ ವಲಯದಲ್ಲಿ ಮಾರಾಟ ಪ್ರತಿನಿಧಿಯಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದ್ದರು.

ಇದನ್ನೂ ಓದಿ: ಅತಂತ್ರವಾಗಿದೆ ಬಡವರಿಗಾಗಿ ಉಡುಪಿಯಲ್ಲಿ ನಿರ್ಮಿಸಿದ್ದ ಐಷಾರಾಮಿ ಬಿಆರ್​ಎಸ್ ಆಸ್ಪತ್ರೆ ಭವಿಷ್ಯ!

1973ರಲ್ಲಿ ಉಡುಪಿಯಿಂದ ಯುಎಇಗೆ ತೆರಳಿ ಅಲ್ಲಿ ಫಾರ್ಮಸಿಯಲ್ಲಿ ಕ್ಲಿನಿಕಲ್ ಪದವಿ ಪಡೆದರು . ನಂತರ ಅವರು 1975 ರಲ್ಲಿ ಅಬುಧಾಬಿಯಲ್ಲಿ ತಮ್ಮದೇ ಆದ NMC ಹೆಲ್ತ್ ಹೆಸರಿನಲ್ಲಿ ಆಸ್ಪತ್ರೆಗಳ ನೆಟ್‌ ವರ್ಕ್‌ ಸ್ಥಾಪಿಸಿದರು. ಮುಂದಿನ ದಿನಗಳಲ್ಲಿ ಶತಕೋಟಿ ಆಸ್ತಿ ಸಂಪಾದಿಸಿದ್ದರು. 2019 ರಲ್ಲಿ ಫೋರ್ಬ್ಸ್ ಅಂಕಿಅಂಶಗಳ ಪ್ರಕಾರ, ಅವರು ಭಾರತದ 42 ನೇ ಶ್ರೀಮಂತ ವ್ಯಕ್ತಿ, ಅಬುಧಾಬಿಯ ಐದನೇ ಶ್ರೀಮಂತ ಭಾರತೀಯರಲ್ಲಿ ಒಬ್ಬರು ಎಂದು ಹೇಳಿತ್ತು. ಪ್ರಸ್ತುತ 19 ದೇಶಗಳಲ್ಲಿ ಅವರಿಗೆ ಸೇರಿದ 194 ಆಸ್ಪತ್ರೆಗಳಿವೆ
Published by:ranjumbkgowda1 ranjumbkgowda1
First published: