Hearing Aid Barbie: ಮಕ್ಕಳ ಕಲ್ಪನೆಗೆ ಪ್ರೋತ್ಸಾಹ ನೀಡಲು ಬಾರ್ಬಿಯ ಹೊಸ ಹೆಜ್ಜೆ

ಹಿಯರಿಂಗ್ ಏಡ್ ಬಾರ್ಬಿ

ಹಿಯರಿಂಗ್ ಏಡ್ ಬಾರ್ಬಿ

ಬಾರ್ಬಿ ತಯಾರಕ ಮ್ಯಾಟೆಲ್, ಹೀಯರಿಂಗ್ ಏಡ್ ಉಳ್ಳ ತನ್ನ ಪ್ರಪ್ರಥಮ ಬಾರ್ಬಿ ಗೊಂಬೆಯನ್ನು ಬಿಡುಗಡೆ ಮಾಡಿದೆ. ಈ ಹೊಸ ಗೊಂಬೆಯ ಕುರಿತು ತಯಾರಕರು ತಮ್ಮ ಪ್ರಕಟಣೆಯಲ್ಲಿ, “ಉತ್ಪನ್ನ ತಮ್ಮನ್ನು ಪ್ರತಿಬಿಂಬಿಸುವುದನ್ನು ಕಾಣಬಹುದು” ಎಂದು ಹೇಳಿದ್ದಾರೆ.

  • Share this:

ಬಾರ್ಬಿ ಗೊಂಬೆಗಳು (Barbie doll)  ಬಾಲೆಯರಿಗೆ ಅಚ್ಚುಮೆಚ್ಚು. ಬಾರ್ಬಿ ಮತ್ತು ಅದರ ಬಳಗದ ಕೆನ್, ಚೆಲ್ಸ, ಸ್ಕಿಪ್ಪರ್ ಮತ್ತಿತರ ಗೊಂಬೆಗಳ ಸೌಂದರ್ಯವು ಕೂಡ ಮಕ್ಕಳನ್ನು (Children) ಸಿಕ್ಕಾಪಟ್ಟೆ ಆಕರ್ಷಿಸುತ್ತದೆ. ಬೆಳೆದು ದೊಡ್ಡವರಾದ ಮೇಲೂ ಕೆಲವರಿಗೆ ಬಾರ್ಬಿಯ ಜೊತೆ ಆಡಿದ ನೆನಪುಗಳನ್ನು ಮರೆಯಲು ಸಾಧ್ಯವಾಗದು. ಬಾರ್ಬಿ ಕಾಲ ಕಳೆದಂತೆ ವಿಕಸನಗೊಳ್ಳುತ್ತಾ ಬಂದಿದೆ. ಬೇರೆ ಬೇರೆ ದೇಶದ ಜನರನ್ನು ಹೋಲುವ ಬಾರ್ಬಿಗಳಿವೆ. ಬಾರ್ಬಿ ಸಂಗ್ರಹದಲ್ಲಿ ಮಕ್ಕಳ ದಿನನಿತ್ಯದ ಬದುಕಿಗೆ ಹೋಲುವ ಬಹಳಷ್ಟು ಆಟಿಕೆಗಳು (Toys) ಮತ್ತು ಗೊಂಬೆಗಳಿವೆ. ಡೆಂಟಿಸ್ಟ್ ಬಾರ್ಬಿ, ಸ್ಪೋಟ್ರ್ಸ್ ಬಾರ್ಬಿ, ಡಾಕ್ಟರ್ ಬಾರ್ಬಿ, ಮದುಮಗಳು ಬಾರ್ಬಿ, ಬಾರ್ಬಿ ಜರ್ನಲಿಸ್ಟ್, ಬಾರ್ಬಿ ರೇಸರ್, ಬಾರ್ಬಿ ಫಾರ್ಮರ್, ಬಾರ್ಬಿ ಫ್ಯಾಶನ್ ಡಿಸೈನರ್ ಹೀಗೆ ಬಾರ್ಬಿ ಸಂಗ್ರಹದಲ್ಲಿನ ವೈವಿಧ್ಯಮಯ ಗೊಂಬೆಗಳ ಪಟ್ಟಿ ಮಾಡುತ್ತಲೇ ಹೋಗಬಹುದು.


ಹೀಯರಿಂಗ್ ಏಡ್ ಬಾರ್ಬಿ
ಬಾರ್ಬಿ ತಯಾರಕ ಮ್ಯಾಟೆಲ್, ಹೀಯರಿಂಗ್ ಏಡ್ ಉಳ್ಳ ತನ್ನ ಪ್ರಪ್ರಥಮ ಬಾರ್ಬಿ ಗೊಂಬೆಯನ್ನು ಬಿಡುಗಡೆ ಮಾಡಿದೆ. ಈ ಹೊಸ ಗೊಂಬೆಯ ಕುರಿತು ತಯಾರಕರು ತಮ್ಮ ಪ್ರಕಟಣೆಯಲ್ಲಿ, “ಉತ್ಪನ್ನ ತಮ್ಮನ್ನು ಪ್ರತಿಬಿಂಬಿಸುವುದನ್ನು ಕಾಣಬಹುದು” ಎಂದು ಹೇಳಿದ್ದಾರೆ. ಕಂಪೆನಿಯ ವಕ್ತಾರರೊಬ್ಬರ ಹೇಳಿಕೆಯ ಪ್ರಕಾರ, ಹೊಸ ಬ್ಯಾಚ್‍ನ ಗೊಂಬೆಗಳು, ಕಂಪೆನಿಯ “ಇದುವರೆಗಿನ ವೈವಿಧ್ಯಮಯ ಮತ್ತು ಇನ್‍ಕ್ಲೂಸಿವ್ “ ಗೊಂಬೆಗಳಾಗಿವೆ.


ವಿಟಿಲಿಗೋ ಹೊಂದಿರುವ ಕೆನ್ ಗೊಂಬೆ
ಬಾರ್ಬಿ ಕಂಪೆನಿಯ ಈಗ ಹೊರ ಬಂದಿರುವ ಹೊಸ ಗೊಂಬೆಗಳ ಸಂಗ್ರಹದಲ್ಲಿ ವಿಟಿಲಿಗೋ ಹೊಂದಿರುವ ಕೆನ್ ಗೊಂಬೆ ಕೂಡ ಇದೆ. ವಿಟಿಲಿಗೋ ಎಂದರೆ, ಚರ್ಮವು ತನ್ನ ವರ್ಣದೃವ್ಯಕೋಶಗಳನ್ನು ಕಳೆದುಕೊಳ್ಳುವ ಸ್ಥಿತಿಯಾಗಿದ್ದು, ಚರ್ಮದ ಮೇಲೆ ಮಚ್ಚೆಗಳಂತೆ ಕಾಣುತ್ತದೆ. ಅಷ್ಟೇ ಅಲ್ಲ, ಈ ಸಂಗ್ರಹದಲ್ಲಿ ಪ್ರಾಸ್ಥೆಟಿಕ್ ಕಾಲಿನ ಗೊಂಬೆ, ಗಾಲಿ ಕುರ್ಚಿಯಲ್ಲಿ ಕುಳಿತಿರುವ ಬಾರ್ಬಿಯನ್ನು ಕೂಡ ಹೊಂದಿದೆ. ಈ ಸಂಗ್ರಹದಲ್ಲಿನ ಗಂಡು ಗೊಂಬೆಗಳು, ಮೂಲ ಕೆನ್ ಗೊಂಬೆಗಿಂತ ಕಡಿಮೆ ಸ್ನಾಯುಗಳನ್ನು ಹೊಂದಿರುತ್ತವೆ.


ಇದನ್ನೂ ಓದಿ: Dinosaur eggs: ಮಧ್ಯಪ್ರದೇಶದಲ್ಲಿ ಪತ್ತೆಯಾಗಿದೆ ಅಪರೂಪದ ಡೈನೋಸಾರ್ ಮೊಟ್ಟೆಗಳು; ಹೇಗಿವೆ ಗೊತ್ತಾ?


ಬಾರ್ಬಿ ತಯಾರಕರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ, “ಹೊಸ ಅಲೆಯ ಎಲ್ಲಾ ಬಾರ್ಬಿ ಫ್ಯಾಶನ್ ಡಾಲ್‍ಗಳ ಜೊತೆ, ನಾವು ಪ್ರಪ್ರಥಮ ಹಿಯರಿಂಗ್ ಏಡ್ ಹೊಂದಿರುವ ಬಾರ್ಬಿ ಗೊಂಬೆಯನ್ನು ಪರಿಚಯಿಸಲು ಹೆಮ್ಮೆ ಪಡುತ್ತಿದ್ದೇವೆ. ಇದು ತಮ್ಮನ್ನು ಮತ್ತು ತಮ್ಮ ಸುತ್ತಲಿನ ಪ್ರಪಂಚವನ್ನು ಪ್ರತಿಬಿಂಬಿಸುವ ಗೊಂಬೆಗಳ ಮೂಲಕ, ಮಕ್ಕಳಿಗೆ ಇನ್ನಷ್ಟು ಹೆಚ್ಚಿನ ಅದ್ಭುತ ಸಾಧ್ಯತೆಗಳ ಬಗ್ಗೆ ಕಲ್ಪನೆ ಮಾಡಿಕೊಳ್ಳಲು ಅವಕಾಶ ನೀಡುತ್ತದೆ” ಎಂದು ಬರೆದಿದ್ದಾರೆ. ಈ ಎಲ್ಲಾ ಹೊಸ ಸಂಗ್ರಹಗಳು ಜೂನ್ 2022 ಗೆ ಸ್ಟೋರ್‍ಗಳಲ್ಲಿ ಲಭ್ಯವಾಗಲಿವೆ.




ಈ ಬಗ್ಗೆ ಬಾರ್ಬಿ ಡಾಲ್ಸ್ ಸಂಸ್ಥೆಯ ಗ್ಲೋಬಲ್ ಹೆಡ್ ಲೀಸಾ ಮೆಕ್‍ನೈಟ್ ಹೇಳಿದ್ದೇನು?
ಬಾರ್ಬಿ ಡಾಲ್ಸ್ ಸಂಸ್ಥೆಯ ಗ್ಲೋಬಲ್ ಹೆಡ್ ಲೀಸಾ ಮೆಕ್‍ನೈಟ್, “ಮಕ್ಕಳಿಗೆ ಉತ್ಪನ್ನದಲ್ಲಿ ತಮ್ಮನ್ನು ತಾವು ಪ್ರತಿಬಿಂಬಿಸುವುದನ್ನು ನೋಡುವುದು ಬಹಳ ಮುಖ್ಯ ಮತ್ತು ಒಳಗೊಳ್ಳುವಿಕೆಯ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳಲು ಹಾಗೂ ಆಚರಿಸಲು, ಮಕ್ಕಳಿಗೆ ತಮಗೆ ಸಮಾನವಲ್ಲದ ಗೊಂಬೆಗಳ ಜೊತೆ ಆಡಲು ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ” ಎಂದು ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.


ಡಾ. ಜೆನ್ ರಿಚರ್ಡ್‍ಸನ್ ಗೊಂಬೆಗಳ ಬಗ್ಗೆ ಹೇಳುವುದು ಹೀಗೆ
ಬಾರ್ಬಿ ಕಂಪೆನಿಯು ಈ ಕುರಿತು ವೈದ್ಯಕೀಯ ತಜ್ಞರ ಜೊತೆ ಮತ್ತಷ್ಟು ಸಮಾಲೋಚನೆ ನಡೆಸಿದೆ. ಗೊಂಬೆಯ ಹಿಯರಿಂಗ್ ಏಡ್ ಸಾಧನಗಳನ್ನು ನಿಖರವಾಗಿ ಪ್ರತಿನಿಧಿಸಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಹೀಗೆ ಮಾಡಲಾಗಿದೆ. ಡಾ. ಜೆನ್ ರಿಚರ್ಡ್‍ಸನ್ ಇದಕ್ಕೆ ತಮ್ಮ ಬೆಂಬಲವನ್ನು ನೀಡಿದ್ದಾರೆ.


ಇದನ್ನೂ ಓದಿ: Potato: 5 ವರ್ಷಗಳಿಂದ ಜೊತೆಗಿದ್ದ ಆಲೂಗಡ್ಡೆಗೆ ನಾಮಕರಣ ಮಾಡಿದ ಮಹಿಳೆ!


“ಶ್ರವಣ ದೋಷದ ಅಡ್ವೋಕೆಸಿಯಾಗಿ 18 ವರ್ಷಗಳ ಕಾಲ ಕೆಲಸ ಮಾಡಿರುವ ಅನುಭವ ಉಳ್ಳ ಶೈಕ್ಷಣಿಕ ಆಡಿಯಾಲಜಿಸ್ಟ್ ಆಗಿರುವ ತನಗೆ, ಶ್ರವಣ ದೋಷವನ್ನು ಹೊಂದಿರುವವರು ಗೊಂಬೆಯೊಂದರಲ್ಲಿ ಪ್ರತಿಬಿಂಬಿಸುತ್ತಿರುವುದನ್ನು ನೋಡಲು ಸ್ಪೂರ್ತಿದಾಯಕವಾಗಿದೆ. ನನ್ನ ಯುವ ರೋಗಿಗಳು ತಮ್ಮಂತೆ ಕಾಣುವ ಗೊಂಬೆಯನ್ನು ನೋಡುವುದು ಮತ್ತು ಅದರ ಜೊತೆಗೆ ಆಟ ಆಡುವುದನ್ನು ನೋಡಲು ನಾನು ಥ್ರಿಲ್ ಆಗಿದ್ದೇನೆ” ಎಂದು ಡಾ. ಜೆನ್ ರಿಚರ್ಡ್‍ಸನ್ ಹೇಳಿದ್ದಾರೆ.

Published by:Ashwini Prabhu
First published: