VIDEO: ನಾನೇ ಬೇರೆ ನನ್ ಸ್ಟೈಲೇ ಬೇರೆ: ಕೊಡಲಿ-ಸುತ್ತಿಗೆಯಿಂದಲೇ ಹೇರ್ ಕಟ್ಟಿಂಗ್..!

Viral video: ಫ್ಯಾಷನ್ ಲೋಕದಲ್ಲಿ ಎಲ್ಲ ಬಾರ್ಬರ್​ಗಳು ಒಂದು ಹಾದಿಯಲ್ಲಾದರೆ ಈತ ಮಾತ್ರ ನಾನು ಡಿಫೆರೆಂಟ್ ಎಂದು ಸುತ್ತಿಗೆ-ಕೊಡಲಿಯಿಂದ ಹೇರ್​ ಸ್ಟೈಲ್ ಮಾಡಿ ಎಲ್ಲರ ಗಮನ ಸೆಳೆಯುತ್ತಿದ್ದಾನೆ.

news18-kannada
Updated:November 27, 2019, 2:31 PM IST
VIDEO: ನಾನೇ ಬೇರೆ ನನ್ ಸ್ಟೈಲೇ ಬೇರೆ: ಕೊಡಲಿ-ಸುತ್ತಿಗೆಯಿಂದಲೇ ಹೇರ್ ಕಟ್ಟಿಂಗ್..!
ಹೇರ್​ಕಟ್
  • Share this:
ಕಾಲಕ್ಕೆ ತಕ್ಕಂತೆ ಹುಡುಗರ ಹೇರ್‌ಸ್ಟೈಲ್ಸ್ ಬದಲಾಗುತ್ತಿರುತ್ತದೆ. ನಾನಾ ಸ್ಟೈಲ್‌ಗಳಲ್ಲಿ ಕೇಶ ವಿನ್ಯಾಸ ಮಾಡಿಕೊಂಡು ಸಾಮಾನ್ಯರು ಕೂಡ ಇಂದು ಸಿನಿಮಾ ಹೀರೊಗಳಂತೆ ಮಿಂಚಲಾರಂಭಿಸಿದ್ದಾರೆ. ಪರಿಣಾಮ, ಫ್ಯಾಷನ್ ಲೋಕದಲ್ಲಿ ಇಂದು ವೈವಿಧ್ಯಮಯ/ ಡಿಫೆರೆಂಟ್​ ಹೇರ್‌ಸ್ಟೈಲ್‌ಗಳು ಚಾಲ್ತಿಯಲ್ಲಿವೆ.

ಸ್ಲೋಪ್ ಕಟಿಂಗ್, ಮಶ್ರೂಮ್ , ಪಂಕ್ ಕಟಿಂಗ್, ಲಾಂಗ್ ,ಮಿಲಿಟರಿ ಕಟ್, ಫ್ರಂಟ್ ಯು, ಟ್ರಿಮ್ ಕಟ್ , ಬಾಕ್ಸ್ , ಸ್ಟೇಪ್ ಕಟ್, ಹಿಪ್ಪಿ, ಫುಲ್ ಶಾರ್ಟ್ ಕಟ್, ಮೀಡಿಯಂ, ಪಿರಮಿಡ್, ಕ್ರಾಫ್, ವೆಜ್, ಬಾಯ್ಸ್ ಕೂಲ್, ಜಿಂಗ್-ಜಾಂಕ್ ಸೇರಿದಂತೆ ಹೀಗೆ ನಾನಾ ಕೇಶ ವಿನ್ಯಾಸಗಳು ಫ್ಯಾಷನ್ ಲೋಕದಲ್ಲಿ ಪ್ರಚಲಿತದಲ್ಲಿವೆ. ಈ ಎಲ್ಲ ಹೇರ್​ಸ್ಟೈಲ್​ಗಳನ್ನು ಸಾಮಾನ್ಯವಾಗಿ ಕತ್ತರಿಯಲ್ಲೇ ಮಾಡುತ್ತಾರೆ. ಅಥವಾ ಆಯಾ ಕಟ್ಟಿಂಗ್​ಗೆ ಅನುಗುಣವಾಗಿ ಟ್ರಿಮ್ಮರ್ ಮತ್ತು ಇತರೆ ಯಂತ್ರಗಳನ್ನು ಬಳಸಲಾಗುತ್ತದೆ.

ಇನ್ನು ಅಂದಕಾಲತ್ತಿಲ್ ಸಣ್ಣ  ಕತ್ತಿ/ ಚಾಕುವಿನಿಂದ ಹೇರ್​ ಕಟ್ಟಿಂಗ್ ಮಾಡುತ್ತಿದ್ದರು ಎಂದು ಹಿರಿಯರು ಹೇಳಿಕೊಳ್ಳುತ್ತಾರೆ. ಆದರೆ ಅದನ್ನು ಕೂಡ ಮೀರಿಸುವಂತೆ ಇಲ್ಲೊಬ್ಬ ಸುತ್ತಿಗೆಯಿಂದ ಹೇರ್​ ಕಟ್ಟಿಂಗ್ ಮಾಡಿ ಸುದ್ದಿಯಾಗಿದ್ದಾನೆ. ತಲೆಗೆ ಕೊಡಲಿಯನ್ನಿಟ್ಟು ಸುತ್ತಿಗೆಯಿಂದ ಹೊಡೆಯುತ್ತಾ  ಕೂದಲು ತೆಗೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಫ್ಯಾಷನ್ ಲೋಕದಲ್ಲಿ ಎಲ್ಲ ಬಾರ್ಬರ್​ಗಳು ಒಂದು ಹಾದಿಯಲ್ಲಾದರೆ ಈತ ಮಾತ್ರ ನಾನು ಡಿಫೆರೆಂಟ್ ಎಂದು ಸುತ್ತಿಗೆ-ಕೊಡಲಿಯಿಂದ ಹೇರ್​ ಸ್ಟೈಲ್ ಮಾಡಿ ಎಲ್ಲರ ಗಮನ ಸೆಳೆಯುತ್ತಿದ್ದಾನೆ. ಆದರೆ ಯಾರೀತ, ಈತನ ಬಾರ್ಬರ್ ಶಾಪ್ ಎಲ್ಲಿರುವುದು ಇತ್ಯಾದಿ ಮಾಹಿತಿಗಳು ಮಾತ್ರ ತಿಳಿದು ಬಂದಿಲ್ಲ. ಆದರೂ ಈತನ ಹೇರ್ ಕಟ್ಟಿಂಗ್ ಸ್ಟೈಲಂತು ಫ್ಯಾಷನ್ ಪ್ರಿಯರನ್ನು ಸೆಳೆಯುತ್ತಿದೆ ಎಂಬುದಕ್ಕೆ ಹರಿದಾಡುತ್ತಿರುವ ಹೇರ್ ಕಟ್ಟಿಂಗ್ ವಿಡಿಯೋನೇ ಸಾಕ್ಷಿ.
First published:November 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading