HOME » NEWS » Trend » BANKS ARE SHUT TODAY LIST OF BANK HOLIDAYS IN MAY 2021 STG SKTV

BANK HOLIDAYS: ಮೇ ತಿಂಗಳ ಬ್ಯಾಂಕಿನ ಕೆಲಸಗಳನ್ನು ಈಗ್ಲೇ ಪ್ಲಾನ್ ಮಾಡಿ, ಸಾಲು ಸಾಲು ರಜೆಗಳಿವೆ !

ಬ್ಯಾಂಕಿಂಗ್ ರಜಾದಿನಗಳು ನಿರ್ದಿಷ್ಟ ರಾಜ್ಯಗಳಲ್ಲಿ ಆಚರಿಸಲಾಗುವ ಹಬ್ಬಗಳ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಇದು ರಾಜ್ಯದಿಂದ ರಾಜ್ಯಕ್ಕೆ ಬದಲಾಗಬಹುದು ಎಂಬುದನ್ನು ಸಹ ಗಮನಿಸಬೇಕು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಮೇ 2021 ರ ಬ್ಯಾಂಕ್ ರಜಾದಿನಗಳ ಪಟ್ಟಿ ಇಲ್ಲಿದೆ.

news18-kannada
Updated:May 1, 2021, 11:24 AM IST
BANK HOLIDAYS: ಮೇ ತಿಂಗಳ ಬ್ಯಾಂಕಿನ ಕೆಲಸಗಳನ್ನು ಈಗ್ಲೇ ಪ್ಲಾನ್ ಮಾಡಿ, ಸಾಲು ಸಾಲು ರಜೆಗಳಿವೆ !
ಸಾಂದರ್ಭಿಕ ಚಿತ್ರ
  • Share this:
Bank Holiday: ಭಾರತದ ಬ್ಯಾಂಕುಗಳು ಮೇ 2021 ರಲ್ಲಿ 12 ದಿನಗಳ ಕಾಲ ಮುಚ್ಚಲ್ಪಡುತ್ತವೆ. ಇದರಲ್ಲಿ ವಾರಾಂತ್ಯಗಳು ಮತ್ತು ಹಬ್ಬಗಳು ಸೇರಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮಾರ್ಗಸೂಚಿಗಳ ಪ್ರಕಾರ, ದೇಶಾದ್ಯಂತ ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಮತ್ತು ಪ್ರಾದೇಶಿಕ ಬ್ಯಾಂಕುಗಳು ಸೇರಿದಂತೆ ಎಲ್ಲಾ ಬ್ಯಾಂಕುಗಳು ಕೆಲವು ಸಂದರ್ಭಗಳಲ್ಲಿ ಕ್ಲೋಸ್‌ ಆಗಿರುತ್ತವೆ. ಈ ಪೈಕಿ ನೆಗೋಶಿಯಬಲ್‌ ಇನ್ಸ್ಟ್ರುಮೆಂಟ್ಸ್ ಆ್ಯಕ್ಟ್, ಹಾಲಿಡೇ, ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ ಮತ್ತು ಬ್ಯಾಂಕುಗಳ ಅಕೌಂಟ್‌ಗಳನ್ನು ಕ್ಲೋಸ್‌ ಮಾಡಲು ಸೇರಿ ಆ ದಿನಗಳಲ್ಲಿ ಸಾರ್ವಜನಿಕ ಸೇವೆಗಳಿಗೆ ಬ್ಯಾಂಕುಗಳು ಲಭ್ಯವಿರುವುದಿಲ್ಲ.

ಇನ್ನು, ರಜೆಯ ಜತೆಗೆ ಸಾಂಕ್ರಾಮಿಕ ರೋಗದ ಎರಡನೇ ಅಲೆಯು ಉತ್ತುಂಗಕ್ಕೇರುವ ನಿರೀಕ್ಷೆಯಿರುವಾಗ ಮೇ ತಿಂಗಳಲ್ಲಿ ಪಾಲಿಸಬೇಕಾದ ಕಟ್ಟುನಿಟ್ಟಾದ ಪ್ರೋಟೋಕಾಲ್ ನಡುವೆ, ಹಲವಾರು ರಾಜ್ಯಗಳಲ್ಲಿ ಕೆಲಸದ ಸಮಯವನ್ನು ಕಡಿಮೆ ಮಾಡಲು ಬ್ಯಾಂಕ್‌ಗಳ ಸಂಘಟನೆ ಕೇಳಿದೆ.

ಬ್ಯಾಂಕಿಂಗ್ ರಜಾದಿನಗಳು ನಿರ್ದಿಷ್ಟ ರಾಜ್ಯಗಳಲ್ಲಿ ಆಚರಿಸಲಾಗುವ ಹಬ್ಬಗಳ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಇದು ರಾಜ್ಯದಿಂದ ರಾಜ್ಯಕ್ಕೆ ಬದಲಾಗಬಹುದು ಎಂಬುದನ್ನು ಸಹ ಗಮನಿಸಬೇಕು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಮೇ 2021 ರ ಬ್ಯಾಂಕ್ ರಜಾದಿನಗಳ ಪಟ್ಟಿ ಇಲ್ಲಿದೆ.

ಮೇ 1: ಕಾರ್ಮಿಕ ದಿನ ಮತ್ತು ಮಹಾರಾಷ್ಟ್ರ ದಿನ - ಈ ದಿನ, ಕೋಲ್ಕತಾ, ಕೊಚ್ಚಿ, ಬೆಂಗಳೂರು, ಮುಂಬೈ, ನಾಗ್ಪುರ, ಪಣಜಿ ಸೇರಿ ಬಹುತೇಕ ನಗರಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

ಮೇ 7: ಜುಮಾತ್ ಉಲ್ ವಿದಾ - ಜಮ್ಮು ಕಾಶ್ಮೀರದ ಬ್ಯಾಂಕುಗಳು ಮುಚ್ಚಲ್ಪಡುತ್ತದೆ.

ಮೇ 13: ರಂಜಾನ್- ಈದ್ (ಈದ್-ಉಲ್-ಫಿತರ್) - ಇದು ದೇಶಾದ್ಯಂತ ರಾಷ್ಟ್ರೀಯ ರಜಾದಿನವಾಗಿದೆ.

ಮೇ 14: ಭಗವಾನ್ ಶ್ರೀ ಪರಶುರಾಮ್ ಜಯಂತಿ / ಬಸವ ಜಯಂತಿ / ಅಕ್ಷಯ ತೃತೀಯ - ರಾಷ್ಟ್ರ ರಾಜಧಾನಿ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು ಸೇರಿ ಇತರ ನಗರಗಳ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.ಮೇ 26: ಬುದ್ಧ ಪೂರ್ಣಿಮಾ - ಇದನ್ನು ಹಲವಾರು ರಾಜ್ಯಗಳಲ್ಲಿ ರಜಾ ದಿನವನ್ನಾಗಿ ಘೋಷಣೆ ಮಾಡಲಾಗಿದೆ

ಇನ್ನು, ಮೇಲಿನ ಈ ಉಲ್ಲೇಖಿತ ಪಟ್ಟಿಯ ಹೊರತಾಗಿ, ಮೇ 2021 ರಲ್ಲಿ ವಾರಾಂತ್ಯದ ಬ್ಯಾಂಕ್ ರಜಾದಿನಗಳು ಹೀಗಿದೆ..

ಮೇ 2: ಸಾಪ್ತಾಹಿಕ ರಜೆ (ಭಾನುವಾರ)
ಮೇ 8: ಎರಡನೇ ಶನಿವಾರ

ಮೇ 9: ಸಾಪ್ತಾಹಿಕ ರಜೆ (ಭಾನುವಾರ)

ಮೇ 16: ಸಾಪ್ತಾಹಿಕ ರಜೆ (ಭಾನುವಾರ)

ಮೇ 22: ನಾಲ್ಕನೇ ಶನಿವಾರ

ಮೇ 23: ಸಾಪ್ತಾಹಿಕ ರಜೆ (ಭಾನುವಾರ)

ಮೇ 30: ಸಾಪ್ತಾಹಿಕ ರಜೆ (ಭಾನುವಾರ)

ಇನ್ನು, ಈ ರಜಾ ದಿನಗಳನ್ನು ಹೊರತುಪಡಿಸಿ ಯಾವುದೇ ಹೊಸ ಅಪ್‌ಡೇಟ್‌ಗಳಿಗಾಗಿ ಬ್ಯಾಂಕ್ ರಜಾ ಪಟ್ಟಿಯನ್ನು ನಿಯಮಿತವಾಗಿ ಪರಿಶೀಲಿಸಲು ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿರುವ ರಜೆಯ ಪಟ್ಟಿಯೊಂದಿಗೆ ಪರಿಶೀಲಿಸಬಹುದು.
Published by: Soumya KN
First published: May 1, 2021, 11:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories