VIDEO: ವಿದಾಯದ ದಿನದಂದು ಆಫೀಸ್​ನಲ್ಲಿ ಪ್ರತ್ಯಕ್ಷನಾದ ಸ್ಪೈಡರ್ ಮ್ಯಾನ್!

ಕೊನೆಯ ದಿನ ಆಫೀಸ್​ನಲ್ಲಿ ಪ್ರತ್ಯಕ್ಷರಾದ ಸ್ಪೈಡರ್​ ಮ್ಯಾನ್​ನ ಪೋಸ್ಟ್​ಗಳು ಮತ್ತು  ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು

zahir | news18
Updated:January 30, 2019, 9:04 PM IST
VIDEO: ವಿದಾಯದ ದಿನದಂದು ಆಫೀಸ್​ನಲ್ಲಿ ಪ್ರತ್ಯಕ್ಷನಾದ ಸ್ಪೈಡರ್ ಮ್ಯಾನ್!
@Fb
zahir | news18
Updated: January 30, 2019, 9:04 PM IST
ಕೆಲಸಕ್ಕೆ ವಿದಾಯ ಹೇಳುವಾಗ ಎಲ್ಲರು ತುಂಬು ಹೃದಯದಿಂದ ಬೀಳ್ಕೊಡುವುದು ಸಾಮಾನ್ಯ. ಅದರಲ್ಲೂ ಕೆಲಸ ತೊರೆಯುವ ವ್ಯಕ್ತಿಯು ಅಂದು ಭಾರದ ಮನಸ್ಸಿನಿಂದಲೇ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದರೆ ಗುಡ್​ ಬೈ ಸಮಯದಲ್ಲೂ ತನ್ನ ದಿನವನ್ನು ಸ್ಮರಣೀಯವಾಗಿಸಿ ಉದ್ಯೋಗಿವೊಬ್ಬರು ಸುದ್ದಿಯಾಗಿದ್ದಾರೆ.

ಬ್ರೆಜಿಲ್​ ದೇಶದ ಸಾವೊ ಪಾಲೋದ ಬ್ಯಾಂಕ್​ನ ಸಿಬ್ಬಂದಿ ತನ್ನ ವಿದಾಯ ದಿನವನ್ನು ವಿಶೇಷ ದಿನವನ್ನಾಗಿಸಿದ್ದಾರೆ. ಇದಕ್ಕಾಗಿ ಕೊನೆಯ ದಿನದಂದು ಸ್ಪೈಡರ್​ ಮ್ಯಾನ್​ ಲುಕ್​ನಲ್ಲಿ ಆಫೀಸ್​ನಲ್ಲಿ ಪ್ರತ್ಯಕ್ಷರಾಗಿದ್ದರು. ಇದನ್ನು ನೋಡಿದ ಸಹೋದ್ಯೊಗಿಗಳಿಗೆ ಅಚ್ಚರಿ. ಆಮೇಲೆ ಗೊತ್ತಾಗಿದೆ ಎಲ್ಲರನ್ನು ಖುಷಿ ಪಡಿಸಲು ತಮ್ಮ ಉದ್ಯೋಗಿಯೇ ಸ್ಪೈಡರ್​ ಮ್ಯಾನ್​ ಲುಕ್​ನಲ್ಲಿ ಆಫೀಸ್​ಗೆ ಎಂಟ್ರಿ ಕೊಟ್ಟಿದ್ದಾರೆ ಎಂದು.

twitter pic


ವಿದಾಯ ದಿನವನ್ನು ಸಂಪೂರ್ಣ ಸ್ಪೈಡರ್​ ಮ್ಯಾನ್​ ಆಗಿ ಕಳೆದ ಉದ್ಯೋಗಿಯ ಫೋಟೋಗಳು ಮತ್ತು ವಿಡಿಯೋಗಳು ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ತನ್ನ ಸಹಪಾಠಿಗಳೊಂದಿಗೆ ಕಚೇರಿಯಲ್ಲಿ ಸಖತ್​ ಖುಷಿಯಾಗಿ ಸೆಂಡ್​ ಅಪ್​ ಅನ್ನು ಆಚರಿಸಿಕೊಂಡಿದ್ದಾರೆ. ಹೀಗೆ ಕಚೇರಿಯ ಅಂತಿಮ ದಿನವನ್ನು ಸಹೋದ್ಯೋಗಿಗಳ ಜೊತೆ ಸಂಭ್ರಮಿಸಿದರು. ಅಲ್ಲದೆ ಅವರು ಕೂಡ ಸ್ಪೈಡರ್​ ಮ್ಯಾನ್​ ಅನ್ನು ಖುಷಿ ಖುಷಿಯಾಗಿ ಕಳುಹಿಸಿ ಕೊಟ್ಟಿದ್ದಾರೆ.

ಇದನ್ನೂ ಓದಿ: ಮಾನವೀಯತೆ ಮೆರೆದ ನವೀನ್ ಸಜ್ಜು: ಯುವ ಗಾಯಕ ಎಲ್ಲೂ ಕಾಣಿಸದಿರಲು ಇಲ್ಲಿದೆ ಕಾರಣ!

ಕೊನೆಯ ದಿನ ಆಫೀಸ್​ನಲ್ಲಿ ಪ್ರತ್ಯಕ್ಷರಾದ ಸ್ಪೈಡರ್​ ಮ್ಯಾನ್​ನ ಪೋಸ್ಟ್​ಗಳು ಮತ್ತು  ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ತನ್ನ ಮುಂದಿನ ವೃತ್ತಿ ಜೀವನದಲ್ಲಿ ಸ್ಪೈಡರ್​ ಮ್ಯಾನ್ ಸೂಪರ್ ಮ್ಯಾನ್​ ಆಗಲಿ ಎಂದು ಹಲವರು ಹಾರೈಸಿದ್ದಾರೆ.
Loading...

First published:January 30, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ