HOME » NEWS » Trend » BANK HOLIDAYS IN JUNE 2021 CHECK OUT FULL LIST LG

Bank holidays in June 2021: ಬ್ಯಾಂಕ್ ಗ್ರಾಹಕರೇ ಗಮನಿಸಿ..!; ಜೂನ್​ ತಿಂಗಳಿನಲ್ಲಿ 9 ದಿನ ಬ್ಯಾಂಕ್​​ಗಳಿಗೆ​ ರಜೆ

Bank Holidays in June 2021: ಗೆಜೆಟೆಡ್ ರಜಾದಿನಗಳು ಮಾತ್ರ ದೇಶಾದ್ಯಂತ ಎಲ್ಲಾ ಬ್ಯಾಂಕ್​ಗಳಿಗೆ ಅನ್ವಯವಾಗಲಿವೆ. ಗೆಜೆಟೆಡ್​ ರಜಾದಿನಗಳಲ್ಲಿ ಶನಿವಾರ ಮತ್ತು ಭಾನುವಾರಗಳು ಸೇರಿವೆ.

news18-kannada
Updated:June 1, 2021, 11:36 AM IST
Bank holidays in June 2021: ಬ್ಯಾಂಕ್ ಗ್ರಾಹಕರೇ ಗಮನಿಸಿ..!; ಜೂನ್​ ತಿಂಗಳಿನಲ್ಲಿ 9 ದಿನ ಬ್ಯಾಂಕ್​​ಗಳಿಗೆ​ ರಜೆ
ಸಾಂದರ್ಭಿಕ ಚಿತ್ರ
  • Share this:
ಪ್ರತಿ ತಿಂಗಳು ಬ್ಯಾಂಕ್‌ಗೆ ಇಂತಿಷ್ಟು ರಜಾ ದಿನಗಳೆಂದು ಘೋಷಿಸಲಾಗುತ್ತದೆ. ಆದರೆ, ಒಮ್ಮೊಮ್ಮೆ ಎಲ್ಲ ರಜೆಗಳು ಒಂದೇ ವೇಳೆಯಲ್ಲಿ ಬರುತ್ತದೆ. ಸತತವಾಗಿ 2 - 3 ದಿನಗಳ ಕಾಲ ರಜಾ ಇದ್ದರೆ ಬ್ಯಾಂಕ್‌ ಗ್ರಾಹಕರಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಎಲ್ಲರಿಗೂ ಆನ್‌ಲೈನ್‌ ಬ್ಯಾಂಕಿಂಗ್‌ ವ್ಯವಹಾರದ ಬಗ್ಗೆ ಹೆಚ್ಚಿನ ಅರಿವಿಲ್ಲದ ಕಾರಣ ಇನ್ನೂ ಹಲವರು ಬ್ಯಾಂಕ್‌ಗೆ ಹೋಗುತ್ತಾರೆ. ಈ ಹಿನ್ನೆಲೆ ಬ್ಯಾಂಕ್‌ ರಜಾ ದಿನಗಳ ವಿವರಗಳನ್ನು ಮೊದಲೇ ನೋಡಿದರೆ, ತಮ್ಮ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುವ ದಿನದಲ್ಲಿ ಅವರು ತಮ್ಮ ಬ್ಯಾಂಕ್‌ ಶಾಖೆಗಳಿಗೆ ಹೋದರೆ ಅವರ ಕೆಲಸ ಬೇಗ ಮುಗಿಸಿಕೊಳ್ಳಬಹುದು. ಇದೇ ರೀತಿ, ರಿಸರ್ವ್​ ಬ್ಯಾಂಕ್​​ ಆಫ್​ ಇಂಡಿಯಾದ ಹಾಲಿಡೇ ಕ್ಯಾಲೆಂಡರ್​ ಪ್ರಕಾರ, ಜೂನ್​​ ತಿಂಗಳಿನಲ್ಲಿ 9 ದಿನಗಳು ಬ್ಯಾಂಕ್‌ ಬಂದ್‌ ಆಗಲಿದೆ. ಇದರಿಂದ ಬ್ಯಾಂಕ್ ಕೆಲಸವಿರುವ ಗ್ರಾಹಕರಿಗೆ ತೊಂದರೆಯಾಗಬಹುದು.

ಎರಡನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಭಾನುವಾರಗಳು ಈ 9 ದಿನಗಳ ರಜೆಯ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ. ಈ ಜೂನ್​ ತಿಂಗಳಿನಲ್ಲಿ ವಿಶೇಷ ದಿನಗಳಿರುವುದರಿಂದ ಬ್ಯಾಂಕ್​ ರಜೆ ಇರುತ್ತದೆ ಎಂದು ರಿಸರ್ವ್​ ಬ್ಯಾಂಕ್​ ಆಫ್ ಇಂಡಿಯಾ ಹೇಳಿದೆ. ಆದರೆ, ಎಲ್ಲಾ ಬ್ಯಾಂಕುಗಳಲ್ಲಿ ಹಾಗೂ ಎಲ್ಲಾ ರಾಜ್ಯಗಳಲ್ಲಿ 9 ದಿನಗಳ ಕಾಲ ರಜೆ ಇರುವುದಿಲ್ಲ. ರಾಜ್ಯದಿಂದ ರಾಜ್ಯಕ್ಕೆ ಬ್ಯಾಂಕ್​ ರಜೆಗಳು ಬದಲಾಗಲಿವೆ. ಗೆಜೆಟೆಡ್ ರಜಾದಿನಗಳು ಮಾತ್ರ ದೇಶಾದ್ಯಂತ ಎಲ್ಲಾ ಬ್ಯಾಂಕ್​ಗಳಿಗೆ ಅನ್ವಯವಾಗಲಿವೆ. ಗೆಜೆಟೆಡ್​ ರಜಾದಿನಗಳಲ್ಲಿ ಶನಿವಾರ ಮತ್ತು ಭಾನುವಾರಗಳು ಸೇರಿವೆ.

ಇದನ್ನೂ ಓದಿ:Karnataka Lockdown Extension: ಲಾಕ್‌ಡೌನ್ ವಿಸ್ತರಿಸಲು ಕರ್ನಾಟಕ ಸರ್ಕಾರ ಮೀನಾಮೇಷ ಎಣಿಸುತ್ತಿರುವುದೇಕೆ? ದೇಶದ ಚಿತ್ರಣ ಹೇಗಿದೆ?

ಬ್ಯಾಂಕ್‌ ರಜಾ ದಿನಗಳ ಪಟ್ಟಿ ಹೀಗಿದೆ ನೋಡಿ...

ಜೂನ್​ 6 -ಭಾನುವಾರ
ಜೂನ್ 12-ಎರಡನೇ ಶನಿವಾರ
ಜೂನ್​ 15-ವೈಎಂಎ ಡೇ-ಮಿಜೋರಾಂನ ಐಜವಾಲ್ ಮತ್ತು ಒಡಿಶಾದ ಭುವನೇಶ್ವರದಲ್ಲಿ ಮಾತ್ರ ರಜಾದಿನಜೂನ್​ 13- ಭಾನುವಾರ
ಜೂನ್ 20-ಭಾನುವಾರ
ಜೂನ್​ 25-ಗುರು ಹಾರ್ಗೊಬಿಂದ್ ಜಿ ಹುಟ್ಟುಹಬ್ಬ-ಜಮ್ಮು ಮತ್ತು ಶ್ರೀನಗರದಲ್ಲಿ ಮಾತ್ರ ರಜಾದಿನ
ಜೂನ್ 26-ನಾಲ್ಕನೇ ಶನಿವಾರ
ಜೂನ್ 27-ಭಾನುವಾರ
ಜೂನ್-30-ರೆಮ್ನಾ ನಿ- ಮಿಜೋರಾಂನ ಐಜವಾಲ್​ನಲ್ಲಿ ಮಾತ್ರ ರಜಾದಿನ
Youtube Video

ರಜಾದಿನಗಳಲ್ಲಿ ಗ್ರಾಹಕರು ಬ್ಯಾಂಕ್​ ವ್ಯವಹಾರ ಇಟ್ಟುಕೊಳ್ಳುವುದನ್ನು ಕ್ಯಾನ್ಸಲ್ ಮಾಡಿ ಎಂದು ಆರ್​ಬಿಐ ಸಲಹೆ ನೀಡಿದೆ. ಈ ಮೇಲ್ಕಂಡ ರಜಾದಿನಗಳಲ್ಲಿ ಬ್ಯಾಂಕ್​ಗಳು ಮುಚ್ಚಲ್ಪಟ್ಟಿರುತ್ತವೆ. ಮೊಬೈಲ್​ ಮತ್ತು ಇಂಟರ್​ನೆಟ್​​​​​​​​ ಬ್ಯಾಂಕಿಂಗ್ ಎಂದಿನಂತೆ ಕಾರ್ಯನಿರ್ವಹಿಸಲಿವೆ.
Published by: Latha CG
First published: June 1, 2021, 10:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories