news18-kannada Updated:November 27, 2020, 11:03 AM IST
Holiday
ಬೆಂಗಳೂರು (ನ. 27): 2020ನೇ ಇಸವಿ ಆರಂಭವಾಗುತ್ತಿದ್ದಂತೆ ಕೊರೋನಾ ಶುರುವಾಗಿದ್ದರಿಂದ ಮಾರ್ಚ್ ತಿಂಗಳಾಂತ್ಯದಲ್ಲಿ ಲಾಕ್ಡೌನ್ ಘೋಷಿಸಲಾಯಿತು. ಆಮೇಲಿಂದ 8 ತಿಂಗಳ ಕಾಲ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ, ವಿದ್ಯಾರ್ಥಿಗಳಿಗೆ ಆನ್ಲೈನ್ ಕ್ಲಾಸ್ ನಡೆಸಿದ್ದರಿಂದ ರಜೆಯ ಅಗತ್ಯವೇ ಕಂಡುಬಂದಿರಲಿಲ್ಲ. ಇನ್ನೇನು ಒಂದೇ ತಿಂಗಳಲ್ಲಿ 2020 ಮುಗಿಯುತ್ತಿದೆ. ಈಗಾಗಲೇ ಕೆಲವು ಕಂಪನಿಗಳು ಆರಂಭವಾಗಿದ್ದು, ಅನೇಕರು ಆಫೀಸಿಗೆ ಹೋಗಲಾರಂಭಿಸಿದ್ದಾರೆ. ವರ್ಕ್ ಫ್ರಂ ಹೋಂನಿಂದ ಆಫೀಸಿಗೆ ಶಿಫ್ಟ್ ಆಗಿದ್ದಕ್ಕೆ ಅನೇಕರಿಗೆ ಬೇಸರವೂ ಕಾಡುತ್ತಿರಬಹುದು. ಈ ಡಿಸೆಂಬರ್ನಲ್ಲಿ ಎಷ್ಟು ರಜೆಗಳಿವೆ? ಎಂಬ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ...
ಡಿಸೆಂಬರ್ ತಿಂಗಳಲ್ಲಿ 7 ದಿನಗಳ ಕಾಲ ಎಲ್ಲ ಬ್ಯಾಂಕ್ಗಳು ಮುಚ್ಚಿರಲಿವೆ. ನಾಲ್ಕು ಭಾನುವಾರ, ಎರಡನೇ ಶನಿವಾರ ಹಾಗೂ ನಾಲ್ಕನೇ ಶನಿವಾರ, ಕ್ರಿಸ್ಮಸ್ ಹಬ್ಬಕ್ಕೆ ಡಿಸೆಂಬರ್ನಲ್ಲಿ ರಜೆ ಇರಲಿದೆ. ಇದರ ಜೊತೆಗೆ ಆಯಾ ರಾಜ್ಯಗಳ ಬ್ಯಾಂಕ್ಗಳಲ್ಲಿ ಹಬ್ಬಗಳಿಗೆ ಪ್ರತ್ಯೇಕವಾದ ರಜೆ ನೀಡಲಾಗುವುದು.
ಡಿಸೆಂಬರ್ 6ರಂದು ಭಾನುವಾರ, ಡಿಸೆಂಬರ್ 12ರ ಎರಡನೇ ಶನಿವಾರ, ಡಿಸೆಂಬರ್ 13ರ ಭಾನುವಾರ, ಡಿ. 20ರ ಭಾನುವಾರ, ಡಿ. 25ರಂದು ಕ್ರಿಸ್ಮಸ್, ಡಿ. 26ರ ನಾಲ್ಕನೇ ಶನಿವಾರ, ಡಿ. 27ರ ಭಾನುವಾರ ಬ್ಯಾಂಕ್ಗಳಿಗೆ ರಜೆ ಇರಲಿದೆ.
ಆಯಾ ರಾಜ್ಯಗಳಲ್ಲಿ ಪ್ರತ್ಯೇಕವಾದ ರಜೆಗಳೂ ಇರಲಿದ್ದು, ಇದು ಇಡೀ ದೇಶದಲ್ಲಿರುವ ಬ್ಯಾಂಕ್ಗಳ ಕಡ್ಡಾಯ ರಜೆಯಾಗಿರಲಿದೆ.
Published by:
Sushma Chakre
First published:
November 27, 2020, 11:03 AM IST