ನಾವು ಈ ಬ್ಯಾಂಕ್ ಗಳಿಗೆ(Banks) ಹೋದಾಗ, ಅಲ್ಲಿ ಕೆಲವೊಮ್ಮೆ ನಾವು ಯಾವುದಾದರೂ ಪ್ರಶ್ನೆಯನ್ನು(Question) ಬ್ಯಾಂಕ್ ಉದ್ಯೋಗಿಗಳಿಗೆ ಕೇಳಿದರೆ ಅವರು ಬೇರೆಯೊಬ್ಬರ ಹತ್ತಿರ ಕೇಳಿ ಎನ್ನುತ್ತಾರೆ. ಹೀಗೆ ಒಬ್ಬರಿಂದ ಇನ್ನೊಬ್ಬರ ಬಳಿ ಹೋಗಿ ಅಂತ ಅಲೆದಾಡಿಸುವುದನ್ನು ನಾವೆಲ್ಲಾ ನೋಡಿರುತ್ತೇವೆ, ಕೆಲವೊಮ್ಮೆ ನಮ್ಮ ಅನುಭವಕ್ಕೂ ಸಹ ಬಂದಿರುತ್ತದೆ.
ಗ್ರಾಹಕರು(Customers) ಬ್ಯಾಂಕ್ ನಲ್ಲಿ ತಮ್ಮ ಕೆಲಸವನ್ನು ಮಾಡಿಸಿಕೊಳ್ಳಲು ಬಂದಾಗ, ಬ್ಯಾಂಕ್ ಉದ್ಯೋಗಿಗಳು ಸರಿಯಾಗಿ ಪ್ರತಿಕ್ರಿಯೆ ನೀಡದಿರುವುದು ಮತ್ತು ಕೆಲ ಸಂದರ್ಭಗಳಲ್ಲಿ ಅವರ ಅನುಚಿತ ವರ್ತನೆ ಗ್ರಾಹಕರನ್ನು ಕೆರಳುವಂತೆ ಮಾಡುತ್ತದೆ. ಭಾರತೀಯ ಬ್ಯಾಂಕುಗಳು ಮತ್ತು ಸೇವೆಗಳು ಅನೇಕ ಗ್ರಾಹಕರನ್ನು ನಿರಾಶೆಗೊಳಿಸಿವೆ ಮತ್ತು ಅತೃಪ್ತಿಗೊಳಿಸಿವೆ.
ಬ್ಯಾಂಕ್ ಖಾತೆಯನ್ನು ಹೊಂದಿರುವ ಜನರು ಯಾವುದೇ ಉದ್ಯೋಗಿಯೊಂದಿಗೆ ವ್ಯವಹರಿಸುವಾಗ ಒಂದಲ್ಲ ಒಂದು ರೀತಿಯಲ್ಲಿ ಕಹಿಯಾದ ಪರಿಸ್ಥಿತಿಗಳನ್ನು ಮತ್ತು ಕ್ಷಣವನ್ನು ಅನುಭವಿಸಿರುತ್ತಾರೆ.
ಆದರೆ, ಬ್ಯಾಂಕಿಂಗ್ ಸೇವೆಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದ್ದಕ್ಕಾಗಿಯೇ ಇಲ್ಲಿ ಬ್ಯಾಂಕ್ ಉದ್ಯೋಗಿಯೊಬ್ಬರು ಮಹಿಳಾ ಗ್ರಾಹಕಿಯ ತಮ್ಮ ಕೋಪವನ್ನು ಹೇಗೆ ತೀರಿಸಿಕೊಂಡಿದ್ದಾರೆ ನೋಡಿ. ಸೋಸಿಯಲ್ ಮೀಡಿಯಾದಲ್ಲಿ ಹೊಸದಾಗಿ ಹರಿದಾಡುತ್ತಿರುವ ಈ ವೀಡಿಯೋ ನೋಡಿದರೆ ನೀವು ಶಾಕ್ ಆಗೋದು ಗ್ಯಾರಂಟಿ.
ಈ ವೀಡಿಯೋದಲ್ಲಿರುವ ದೃಶ್ಯ ಮಹಿಳಾ ಬ್ಯಾಂಕ್ ಉದ್ಯೋಗಿಯ ದುರ್ವರ್ತನೆಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಮಹಿಳಾ ಗ್ರಾಹಕಿಯು ಬ್ಯಾಂಕ್ ಉದ್ಯೋಗಿ ಬಳಿ ಕೆಲವು ಬ್ಯಾಂಕಿಂಗ್ ವಿಷಯಗಳನ್ನು ವಿಚಾರಿಸಿದ ಬಳಿಕ ಈ ಘಟನೆ ನಡೆದಿದೆ. ಈ ವೀಡಿಯೋ ಗ್ರಾಹಕರಲ್ಲಿನ ಅತೃಪ್ತಿಯನ್ನು ತೋರಿಸುತ್ತದೆ.
ಮಹಿಳಾ ಗ್ರಾಹಕಿಗೆ ಕಪಾಳಕ್ಕೆ ಹೊಡೆದ ಬ್ಯಾಂಕ್ ಉದ್ಯೋಗಿ..
1 ನಿಮಿಷ 30 ಸೆಕೆಂಡುಗಳ ಈ ವೀಡಿಯೋದಲ್ಲಿ ಒಬ್ಬ ಮಹಿಳೆ ತನ್ನ ಮೊಬೈಲ್ ಕ್ಯಾಮೆರಾವನ್ನು ಆನ್ ಮಾಡಿದ್ದು, ಕೆಲವು ಪ್ರಶ್ನೆಗಳನ್ನು ಬ್ಯಾಂಕ್ ಉದ್ಯೋಗಿಗೆ ಕೇಳುತ್ತಿದ್ದಾರೆ.
Kalesh B/w Bank Worker and Lady over Misbehavingpic.twitter.com/JYqByaoVXS
— Ghar Ke Kalesh (@gharkekalesh) December 7, 2022
ಅಸಭ್ಯ ಉದ್ಯೋಗಿಯು ಈ ಮೊದಲು ಅಸಮರ್ಪಕ ಕಾರ್ಯನಿರ್ವಹಣೆ ಯಂತ್ರವನ್ನು ಸಮಸ್ಯೆಗೆ ಕಾರಣವೆಂದು ದೂಷಿಸಿದ್ದಾರೆ. ನಂತರ ಗ್ರಾಹಕರು ತನ್ನ ಸಮಸ್ಯೆಯ ಬಗ್ಗೆ ನಿರಂತರವಾಗಿ ಕೇಳುತ್ತಿದ್ದರೂ ಸಹ ಅವಳು ಯಾವುದೇ ಉತ್ತರವನ್ನು ನೀಡದೆ ಮೌನವಾಗಿದ್ದಳು.
ಉದ್ಯೋಗಿ ಕೂಡ ಈ ಹಿಂದೆ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ಗ್ರಾಹಕಿಯ ವಿರುದ್ಧ ಆರೋಪ ಮಾಡಿದ್ದರು. ಗ್ರಾಹಕಿಯು ಈ ಬ್ಯಾಂಕ್ ಉದ್ಯೋಗಿಯನ್ನು ಹಿಂಬಾಲಿಸಿ ಅವಳನ್ನು ಮಾತನಾಡುವಂತೆ ಕೇಳುತ್ತಲೇ ಇದ್ದಾಗ, ಅವಳು ಮಾತ್ರ ತುಟಿ ಬಿಚ್ಚಿ ಮಾತಾಡಲೇ ಇಲ್ಲ.
ಈ ಹಠಮಾರಿ ಗುಣವನ್ನು ಅಲ್ಲಿಯೇ ನೋಡುತ್ತಾ ನಿಂತ ಮಹಿಳಾ ಗ್ರಾಹಕಿಯನ್ನು ಬ್ಯಾಂಕ್ ಉದ್ಯೋಗಿಯು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಾ ಹೋದಳು ಮತ್ತು ತನ್ನ ಪಾಡಿಗೆ ತಾನು ಕೆಲಸದಲ್ಲಿ ತೊಡಗಿಸಿಕೊಂಡಳು. ಅದರ ನಂತರ, ಗ್ರಾಹಕಿ ಈ ವೀಡಿಯೋವನ್ನು ಆನ್ಲೈನ್ ನಲ್ಲಿ ಅಪ್ಲೋಡ್ ಮಾಡುವ ಬಗ್ಗೆ ಎಚ್ಚರಿಕೆ ನೀಡಿದರು.
ವೀಡಿಯೋ ಮಾಡುತ್ತಿದ್ದ ಮೊಬೈಲ್ ಅನ್ನು ಕೆಳಕ್ಕೆ ಬೀಳಿಸಿದರು ಬ್ಯಾಂಕ್ ಉದ್ಯೋಗಿ
ಆಗ, ಇನ್ನೊಬ್ಬ ವ್ಯಕ್ತಿಯು ಜಗಳದ ಮಧ್ಯೆ ಪ್ರವೇಶಿಸಿ, ಬ್ಯಾಂಕಿನೊಳಗೆ ವೀಡಿಯೋ ಮಾಡಲು ಅನುಮತಿ ಇಲ್ಲ ಎಂದು ಹೇಳಿದರು.
ಬ್ಯಾಂಕ್ ಉದ್ಯೋಗಿಯು ಗ್ರಾಹಕರೊಂದಿಗೆ ಅನುಚಿತವಾಗಿ ವರ್ತಿಸಲು ಅನುಮತಿಸಲಾಗಿದೆಯೇ ಎಂದು ಗ್ರಾಹಕರು ಕೇಳುತ್ತಿದ್ದಾಗ, ಇದ್ದಕ್ಕಿದ್ದಂತೆ, ಉದ್ಯೋಗಿಯು ಮೊಬೈಲ್ ಗೆ ಡಿಕ್ಕಿ ಹೊಡೆದು ಅದನ್ನು ಕೆಳಕ್ಕೆ ಬೀಳಿಸಿದಳು.
ಇಂಟರ್ನೆಟ್ ನಲ್ಲಿ ಈ ಘಟನೆಯ ಬಗ್ಗೆ ಅನೇಕ ನೆಟ್ಟಿಗರು ಬೇರೆ ಬೇರೆ ರೀತಿಯ ಕಾಮೆಂಟ್ ಗಳನ್ನು ಹಾಕಿದ್ದಾರೆ. ಗ್ರಾಹಕರು ಇಡೀ ಘಟನೆಯನ್ನು ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿಯುವ ಮೂಲಕ ಸರಿಯಾದ ಕೆಲಸವನ್ನು ಮಾಡಿದ್ದಾರೆ ಎಂದು ಅನೇಕರು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ