ಪ್ರೀತಿ ಪ್ರೇಮವೆಲ್ಲಾ ಕುರುಡು (Love Is Blind) ಅಂತ ಹೇಳಿದ್ದನ್ನು ಕೇಳಿರುತ್ತೇವೆ ಅಲ್ವಾ? ಇತ್ತೀಚಿನ ಕಾಲದಲ್ಲಿ ಸಾಮಾಜಿಕ ಜಾಲತಾಣದಲ್ಲಿ (Social Media) ಅದೆಷ್ಟೋ ಚಿತ್ರ ವಿಚಿತ್ರವಾಗಿ ಮದುವೆ ಆಗೋದು ಅಥವಾ ವಯಸ್ಸಾದವರ ಜೊತೆಗೆ ಯಂಗ್ ಆಗಿ ಇರುವವರೊಂದಿಗೆ ಮದುವೆ ಆಗೋದು ಫೋಟೋಗಳು ಇತ್ತೀಚೆಗೆ ಸಾಕಷ್ಟು ವಿಷಯಗಳು ವೈರಲ್ ಆಗುತ್ತಲೇ ಇರುತ್ತವೆ ಅಲ್ವಾ? ಇದಕ್ಕೆ ತಕ್ಕುದಾಗಿ ಎನೇನೋ ಕಮೆಂಟ್ಗಳು ಕೂಡ ಬರ್ತಾ ಇರುತ್ತವೆ. ಆದ್ರೆ ಇದಕ್ಕೆಲ್ಲಾ ಕ್ಯಾರೇ ಮಾಡೋಲ್ಲ ಈಗಿನ ಜನತೆ. ಇದರ ನಡುವೆ ಇದೀಗ ಸಾಮಾಜಿಕ ಜಾಲತಾಣಗಳು ಕೂಡ ತುಂಬಾ ಟ್ರೆಂಡ್ಲ್ಲಿ ಇವೆ. ಅಂದ್ರೆ ಫೇಸ್‌ಬುಕ್, ಇನ್ಸ್ಟಾಗ್ರಾಮ್ ಖಾತೆಗಳು ಸಖತ್ ಪಾಪ್ಯುಲರ್ನಲ್ಲಿದೆ. ಯಾಕಂದ್ರೆ ಇದರಿಂದ ಅದೆಷ್ಟೋ ಜೋಡಿಗಳು ಒಂದಾಗಿವೆ. ಇದೀಗ ಇದಕ್ಕೆ ಸಂಬಂಧ ಪಟ್ಟ ಒಂದು ಸುದ್ದಿ ಸಖತ್ ವೈರಲ್ ಆಗ್ತಾ ಇದೆ.
ಇಲ್ಲೊಂದು ಘಟನೆ ನಡೆದಿದೆ. ಅದು ಏನಂದ್ರೆ , ಫೇಸ್ಬುಕ್ನಲ್ಲಿ 2 ಜೋಡಿಗಳಿಗೆ ಲವ್ ಆಗಿದೆ. ಅಲ್ಲೇ ಚಾಟ್ ನಡೆದು ಮದುವೆ ಆಗುವ ನಿರ್ಧಾರ ಮಾಡಿದ್ದಾರೆ. ಇದಕ್ಕಾಗಿ ಮಾಡಿದ ಸಾಹಸವು ಇದೀಗ ಸಖತ್ ವೈರಲ್ ಆಗ್ತಾ ಇದೆ. ಈ ಹುಡುಗಿ ಮಾಡಿದ ಸಾಹಸವನ್ನು ಕೇಳಿದ್ರೆ ಎಂಥವರಿಗಾದ್ರೂ ಶಾಕ್ ಆಗುತ್ತೆ.
ಏನಿದು ಘಟನೆ?
ಈತ ಮೂಲತಃ ಭಾರತದ ಯುವಕ. ಆಕೆ ಬಾಂಗ್ಲಾದೇಶದ ಹುಡಿಗಿ. ಇಬ್ಬರಿಗೂ ಪರಿಚಯವಾಗಿದ್ದು ಫೇಸ್ ಬುಕ್ನಲ್ಲಿ. ಮೊದಲಿಗೆ ನೀವು ನಾವು ಎಂದು ಮಾತುಗಳು ಆರಂಭವಾಗಿ ಕೊನೆಗೆ ನಾನು ನೀನು, ಲವ್ ಯೂ, ಲವ್ ಯು ಟೂ ಮಾತಿನ ತನಕ ಬೆಳೆಯಿತು.
ಇದನ್ನೂ ಓದಿ: ಇಂಟರ್ನೆಟ್‌ನಲ್ಲಿ ವೈರಲ್ ಆದ ಮಹಿಳೆಯ ಚಾಕಲೇಟ್ ಹೇರ್‌ಸ್ಟೈಲ್, ಮಕ್ಕಳಿಂದ ದೂರವಿರಿ ಎಂದು ಸಲಹೆ ನೀಡಿದ ನೆಟ್ಟಿಗರು!
ಇದಾದ ನಂತರ ಇವರದ್ದೇನೂ ಟೈಮ್ ಪಾಸ್ ಲವ್ ಅಲ್ಲ. ಹಾಗಾಗಿ ಸೀರಿಯಸ್ ಇರೋದ್ರಿಂದ ಮದುವೆ ಆಗುವ ಯೋಚನೆ ಕೂಡ ಮಾಡಿದ್ರು. ಆದ್ರೆ ಈಕೆಯ ಬಳಿ ಭಾರತದ ವೀಸಾ ಇರಲಿಲ್ಲ. ಹಾಗೆಯೇ ವೀಸಾ ಮಾಡಿಸಲು ಆಕೆಯ ಬಳಿ ಹಣವೂ ಅಷ್ಟು ಇರಲಿಲ್ಲ, ಕಾಯೋ ಅಷ್ಟು ತಾಳ್ಮೆಯೂ ಇರಲಿಲ್ಲ. ಹೀಗಾಗಿ ಈಕೆ ಒಂದು ಧೈರ್ಯ ನಿರ್ಧಾರ ಮಾಡೇ ಬಿಟ್ಲು.
ಏನು ಆ ಧೈರ್ಯ?
ಈಕೆಗೆ ಕೇವಲ 22ವರ್ಷ ಹಸರು ಕೃಷ್ಣ ಮಂಡಲ್. ಅಭಿಕ್ ಮಂಡಲ್ ಎಂಬಾತ ಭಾರತದವನು. ಈತನನ್ನು ಮದುವೆ ಆಗಲು ಕೃಷ್ಣ ಮಂಡಲ್ ಸುಂದರ್‌ಬನ್ ಕಾಡುಗಳ ಮೂಲಕ ಹಾದು ಬಂದು ಕೊನಗೆ ಒಂದು ಗಂಟೆ ಈಜಿಕೊಂಡು ಭಾರತಕ್ಕೆ ತಲುಪುತ್ತಾಳೆ. ಇಲ್ಲಿ ತಲುಪಿದ ನಂತರ ಕೋಲ್ಕತ್ತಾದ ಕಾಳಿಘಾಟ್ ದೇವಸ್ಥಾನದಲ್ಲಿ ಇಬ್ಬರೂ ಮದುವೆ ಆಗಿದ್ದಾರೆ.
ಈ ವಿಷಯ ಸ್ಥಳೀಯರಿಗೆ ತಿಳಿದಿದೆ. ತಿಳಿದ ನಂತರ ಆಕೆಯನ್ನು ಹದಿಹರೆಯದವರು ಎಂದು ಸ್ಥಳೀಯ ಪೊಲೀಸರಿಗೆ ಒಪ್ಪಿಸಲಾಯಿತು, ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅವರನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಯಾಕೆಂದರೆ ವೀಸಾ ಇಲ್ಲದೆ ಹೇಗೆ ಗಡಿ ದಾಟಿದ್ದೀರಾ ಎಂಬುದಾಗಿ ಅರೆಸ್ಟ್ ಮಾಡಲಾಗಿದೆ.
ನೋಡಿದ್ರಲ್ವಾ, ಇದು ಹುಚ್ಚು ಪ್ರೀತಿನಾ ಅಥವಾ ಹುಚ್ಚು ಹುಡುಗಿನಾ ಅಂತ ನೀವು ಹೇಳಲೇಬೇಕು. ಯಾಕಂದ್ರೆ ಇಂತಹ ಒಂದು ಸಾಹಸಕ್ಕೆ ಕೈ ಹಾಕಿದ್ದಾಳೆ ಅದೂ ಸೋಶಿಯಲ್ ಮೀಡಿಯಾ ಲವ್ಗಾಗಿ ಅಂದ್ರೆ ಈಕೆ ಪಾಗಲ್ ಪ್ರೇಮಿನೇ ಇರಬಹುದೇನೋ ಅಲ್ವಾ? ಒಟ್ನಲ್ಲಿ ನವ ದಂಪತಿಗಳು ಇದೀಗ ಜೈಲಿನಿ ಕಂಬಿಗಳನ್ನು ಎಣಿಸುತ್ತಾ ಇದ್ದಾರೆ. ನೀವಂತೂ ಇಂತಹ ಸಾಹಸವನ್ನು ಮಾಡಲು ಹೋಗಬೇಡಿ ಅಷ್ಟೇ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ