Love & Border: ಪ್ರಿಯಕರನ ಸೇರಲು ಗಡಿದಾಟಿ ಬಂದ ಬಾಂಗ್ಲಾ ಮಹಿಳೆ, ಈಗ ಪೊಲೀಸರ ಅತಿಥಿ

ಅಕ್ರಮವಾಗಿ ಭಾರತದ ಭೂಪ್ರದೇಶವನ್ನು ಪ್ರವೇಶಿಸಲು ಈ ಮಹಿಳೆ ಪ್ರಯತ್ನಿಸುತ್ತಿದ್ದಾಗ ದಕ್ಷಿಣ ಬಂಗಾಳದ ಗಡಿರೇಖೆಯ ಬಳಿ ಉತ್ತರ 24 ಪರಗಣ ಜಿಲ್ಲೆಯಲ್ಲಿ BSF ಯೋಧರು ಆಕೆಯನ್ನು ಬಂಧಿಸಿದ್ದರು

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಝಾರಾವನ್ನು ಹುಡುಕಲು ಪಾಕಿಸ್ತಾನಕ್ಕೆ(Pakistan) ಹೋಗಿ ಜೈಲು ಪಾಲಾದ 'ವೀರ್-ಜಾರಾ'ದ ವೀರ್‌ನ ರೀತಿಯಲ್ಲೇ , ತನ್ನ ದ್ಯೋತಕವಾಗಿ ಭಾರತದ ಗಡಿ ದಾಟಿದ ಬೀಬಿ ಪಶ್ಚಿಮ ಬಂಗಾಳದ (West Bengal) ಜಲ್ಪಾಯ್‌ಗುರಿಯಲ್ಲಿ ಬಿಎಸ್‌ಎಫ್‌ ಕೈಗೆ ದುರಾದೃಷ್ಟವಶಾತ್ ಸಿಕ್ಕಿಬಿದ್ದಿದ್ದಾರೆ. ಬಂಗಾಳದಕೂಚ್ ಬೆಹಾರ್‌ನ ತುಫಂಗಂಜ್‌ನ ಅಲಿಗೆ ಸೇರಿದ ಹಸನ್ ಎಂಬುವವರು 6 ತಿಂಗಳ ಹಿಂದೆ ಸಾಮಾಜಿಕ ಜಾಲತಾಣದ (Social Media) ಒಂದು ವೆಬ್‌ಸೈಟ್‌ನಲ್ಲಿ ಬಾಂಗ್ಲಾದೇಶದ (Bangladesh) ಸಿಬ್‌ಗಂಜ್‌ನ ಅಫ್ಸಾನಾ ಅವರನ್ನು ಭೇಟಿಯಾದರು. ಇಬ್ಬರೂ ಪರಸ್ಪರ ಪ್ರೀತಿಯಲ್ಲಿ ಬಿದ್ದ ನಂತರ ಮದುವೆಯಾಗಲು ಸಹ ನಿರ್ಧರಿಸಿದರು. ಆದರೆ, ಅಫ್ಸಾನಾಳ ಕುಟುಂಬ, ವಿಶೇಷವಾಗಿ ಆಕೆಯ ತಾಯಿ, ಅವರ ಸಂಬಂಧವನ್ನು ಒಪ್ಪಿಕೊಳ್ಳಲು ನಿರಾಕರಿಸಿದುದಲ್ಲದೆ ಬಾಂಗ್ಲಾದೇಶಿ ಪ್ರಜೆಯನ್ನೇ ತಮ್ಮ ಮಗಳು ಮದುವೆಯಾಗಬೇಕೆಂದು ಬಯಸಿದರು .

ಫೆನ್ಸಿಂಗ್ ಇಲ್ಲದ ಕಾರಣ
ಮಂಗಳವಾರ , 21 ವರ್ಷದ ಈಕೆ ಹಸನ್‌ನೊಂದಿಗೆ ಸಂಸಾರ ಮಾಡಲು ತನ್ನ ಮನೆಯಿಂದ ತಪ್ಪಿಸಿಕೊಂಡು ಸ್ಥಳೀಯ ಸಾರಿಗೆಯ ಸಹಾಯದಿಂದ ಗಡಿಯನ್ನು ದಾಟಿ ಭಾರತವನ್ನು ತಲುಪಿದಳು. ಆದರೆ , ವಿಧಿ ಅವಳನ್ನು ಬಿಎಸ್ಎಫ್ ಮುಂದೆ ತಂದು ನಿಲ್ಲಿಸಿತು. ಆಕೆಯನ್ನು ದಿನ್ಹತಾ ನಜಿರ್ಹತ್ ಪ್ರದೇಶದ ಬಿಘಲ್ತಾರಿ ಗಡಿಯಲ್ಲಿ ಬಂಧಿಸಲಾಗಿತ್ತು. ಈ ಭಾಗದಲ್ಲಿ, ಯಾವುದೇ ಫೆನ್ಸಿಂಗ್ ಇಲ್ಲದ ಕಾರಣ ಈಕೆ ಆರಾಮವಾಗಿ ಗಡಿ ದಾಟುವಂತಾಯಿತು. ಮಹಿಳೆಯನ್ನು ಸಾಹೇಬ್‌ಗಂಜ್ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಬಿಎಸ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗ್ಯಾರೇಜ್ ಮಾಲೀಕ ಹಸನ್ ಭೇಟಿ
ಅಫ್ಸಾನಾಳನ್ನು ಭಾನುವಾರ ದಿನ್ಹಾಟಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆಕೆ ಒಳಗಾಗಿದ್ದಾಳೆ. ನಾನು ಹಸನ್ ಅವರನ್ನು ಮದುವೆಯಾಗಲು ಇಚ್ಛಿಸುತ್ತೇನೆ , ಹಾಗಾಗಿ ಅಪಾಯಕಾರಿ ಎಂದು ತಿಳಿದಿದ್ದರೂ ಕೂಡ ನಾನು ನನ್ನ ಮನೆಯಿಂದ ಓಡಿಹೋಗಿ, ಭಾರತವನ್ನು ಪ್ರವೇಶಿಸಿದೆ ಎಂದು ಅಫ್ಸಾನಾ ಹೇಳಿದಳು. ಬಿಘಲ್ತರಿಯ ಗ್ಯಾರೇಜ್ ಮಾಲೀಕ ಹಸನ್ ಈಕೆಯನ್ನು ಭೇಟಿಯಾಗಲು ಬಂದಿದ್ದ. ಈ ಘಟನೆಯ ಪರಿಣಾಮದಿಂದಾಗಿ , ಶಾಕ್‌ನಿಂದ ಆತ ಮಾತನಾಡುವುದನ್ನೇ ನಿಲ್ಲಿಸಿದ್ದಾನೆ .

ಇದನ್ನೂ ಓದಿ: Manipur Attack- ಮಣಿಪುರ ಮಾರಣಹೋಮದಲ್ಲಿ ಚೀನೀ ಸೇನೆ ಕೈವಾಡ? ಯಾಕಿಂಥ ಸೇಡು?

ಅಕ್ರಮವಾಗಿ ದಾಟಲು ಪ್ರಯತ್ನ
ಇಂತಹುದೇ ಇನ್ನೊಂದು ಘಟನೆಯೊಂದರಲ್ಲಿ , ಕಳೆದ ವರ್ಷ ಆಗಸ್ಟ್‌ ತಿಂಗಳಲ್ಲಿ ವೀಸಾ ಸಮಸ್ಯೆಗೆ ಒಳಗಾದ ಬಾಂಗ್ಲಾದೇಶದ ಮಹಿಳೆಯೊಬ್ಬರು ವೈದ್ಯಕೀಯ ಚಿಕಿತ್ಸೆಗಾಗಿ ಅಂತಾರಾಷ್ಟ್ರೀಯ ಗಡಿಯನ್ನು ಅಕ್ರಮವಾಗಿ ದಾಟಲು ಪ್ರಯತ್ನಿಸಿದ್ದರು . BSF ಆಕೆಯನ್ನು ಹಿಡಿದು ವಿಚಾರಣೆಗೆ ಒಳಪಡಿಸುವ ಬದಲು, ಸೌಹಾರ್ದತೆಯ ಸೂಚಕವಾಗಿ ಬಾರ್ಡರ್ ಗಾರ್ಡ್ ಬಾಂಗ್ಲಾದೇಶ (BGB)ಗೆ ಹಸ್ತಾಂತರಿಸಿತು.

ಅಕ್ರಮವಾಗಿ ಭಾರತದ ಭೂಪ್ರದೇಶವನ್ನು ಪ್ರವೇಶಿಸಲು ಈ ಮಹಿಳೆ ಪ್ರಯತ್ನಿಸುತ್ತಿದ್ದಾಗ ದಕ್ಷಿಣ ಬಂಗಾಳದ ಗಡಿರೇಖೆಯ ಬಳಿ ಉತ್ತರ 24 ಪರಗಣ ಜಿಲ್ಲೆಯಲ್ಲಿ BSF ಯೋಧರು ಆಕೆಯನ್ನು ಬಂಧಿಸಿದ್ದರು . ಈಕೆಯನ್ನು ಬಾಂಗ್ಲಾದೇಶದ ನೌಗಾಂವ್ ಜಿಲ್ಲೆಯ ನಿವಾಸಿ ಪೊಲಿಯರ ಬೇಗಂ, 33, (ಕಾಲ್ಪನಿಕ ಹೆಸರು) ಎಂದು ಗುರುತಿಸಲಾಗಿದೆ. ತನಗೆ ಹೃದಯ ಕಾಯಿಲೆ ಇದ್ದು ತಮಿಳುನಾಡಿನ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯರೊಂದಿಗೆ ಅಪಾಯಿಂಟ್‌ಮೆಂಟ್ ಪಡೆದಿದ್ದೆ ಎಂದು ತನಿಖೆಯಲ್ಲಿ ಬಹಿರಂಗಪಡಿಸಿದ್ದರು .

ಇದನ್ನೂ ಓದಿ: Border dispute: ಭಾರತ, ಚೀನಾ ಗಡಿ ವಿವಾದ ಮತ್ತೆ ಮುಂದಿನ ವಾರ 14ನೇ ಸುತ್ತಿನ ಸೇನಾ ಮಾತುಕತೆ..?

ಆಕೆಯ ವೀಸಾ ನಿರಾಕರಿಸಲ್ಪಟ್ಟ ಕಾರಣದಿಂದಾಗಿ ಆಕೆ ಭಾರತದ ಗಡಿಯನ್ನು ದಾಟಲು ದಲ್ಲಾಳಿ ಅನ್ನು ಸಂಪರ್ಕಿಸಿದರು. ಬೋರ್ಡರ್ ದಾಟಿದ ನಂತರ ಆಕೆ ಭಾರತೀಯ ದಲ್ಲಾಳಿಗೆ 18,000 ರೂ. ಪಾವತಿಸಬೇಕಾಗಿತ್ತು. ಆಕೆ ಗಡಿ ದಾಟುತ್ತಿದ್ದಂತೆ ಎಚ್ಚೆತ್ತ ಬಿಎಸ್‌ಎಫ್ ಪಡೆಗಳು ಆಕೆಯನ್ನು ಬಂಧಿಸಿದವು . ಎರಡು ನೆರೆಯ ರಾಷ್ಟ್ರಗಳ ಗಡಿಯನ್ನು ಕಾವಲು ಕಾಯುವ ಪಡೆಗಳ ನಡುವಿನ ಪರಸ್ಪರ ಸೌಹಾರ್ದತೆಯ ಸಂಕೇತವಾಗಿ ಮತ್ತು ಈ ಪ್ರಕರಣದಲ್ಲಿನ ಪೊಲಿಯರ ಬೇಗಂ ಅವರ ಪರಿಸ್ಥಿತಿ ಮತ್ತು ಅಪರಾಧದ ತೀವ್ರತೆಯ ಮಟ್ಟ ವನ್ನು ಪರಿಗಣಿಸಿ ಈ ವಿಷಯವನ್ನು ಕೈಬಿಡಲು ಬಿಎಸ್ಎಫ್ ನಿರ್ಧರಿಸಿತು.
Published by:vanithasanjevani vanithasanjevani
First published: