Online Scam: 100 ರೂ. ಲಿಪ್​ಸ್ಟಿಕ್ ಕೊಳ್ಳುವ ಭರದಲ್ಲಿ ಕಳೆದುಕೊಂಡಿದ್ದು ಲಕ್ಷ ಲಕ್ಷ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಂಗಳೂರಿನಲ್ಲಿ ಯುವತಿಯೊಬ್ಬಳು ನೂರು ರೂಪಾಯಿಯ ಲಿಪ್ಸ್ಟಿಕ್ ಆಸೆಪಟ್ಟು ಬರೋಬ್ಬರಿ ಮೂರೂವರೆ ಲಕ್ಷ ರೂಪಾಯಿಗಳನ್ನು ಕಳೆದುಕೊಂಡ ಘಟನೆ ನಡೆದಿದೆ.

  • Share this:

ಇಂದಿನ ಮಾಡರ್ನ್ ಯುಗದಲ್ಲಿ ಜನ ಹೇಗೆಲ್ಲಾ ಮೋಸಹೋಗುತ್ತಾರೆ ನೋಡಕ್ಕೆ ತಾಜಾ ಉದಾಹರಣೆ. ಬೆಂಗಳೂರಿನಲ್ಲಿ ಯುವತಿಯೊಬ್ಬಳು ನೂರು ರೂಪಾಯಿ(Hundred Rupees)ಯ ಲಿಪ್ಸ್ಟಿಕ್ (Lips Stick) ಆಸೆಪಟ್ಟು ಬರೋಬ್ಬರಿ ಮೂರೂವರೆ ಲಕ್ಷ ರೂಪಾಯಿಗಳನ್ನು ಕಳೆದುಕೊಂಡ ಘಟನೆ ನಡೆದಿದೆ. ಸಾಮಾನ್ಯವಾಗಿ ಎಲ್ಲರೂ ಇತ್ತೀಚಿನ ದಿನಗಳಲ್ಲಿ ತಮಗೆ ಏನು ಬೇಕೋ ಅದನ್ನು ಆನ್ ಲೈನ್ (Online) ಮುಖಾಂತರವೇ ತರಿಸಿಕೊಳ್ಳುತ್ತಿದ್ದಾರೆ. ಹೌದು, ಆಶ್ಚರ್ಯವಾದರೂ ಇದು ನಿಜ. ಇತ್ತೀಚೆಗೆ ಸೈಬರ್ (Cyber) ವಂಚಕರ ಹಾವಳಿ ಹೆಚ್ಚಾಗ್ತಿದೆ. ಅದರಲ್ಲೂ ಅಮಾಯಕ ಜನ ಸಿಕ್ಕರಂತೂ, ಅವರಿಗೆ ಮೋಸ ಮಾಡೋದಿಕ್ಕೆ ರೆಡಿಯಾಗಿ ಇರ್ತಾರೆ.  


ಆನ್‍ಲೈನ್ ಡೆಲಿವರಿಯಿಂದ ಮೋಸ ಹೋದ ಯುವತಿ


ಬೆಂಗಳೂರಿನ ಹೆಬ್ಬಾಳ ಬಳಿಯ ನಾಗೇನಹಳ್ಳಿ ನಿವಾಸಿಯಾಗಿರೋ ಯುವತಿಯೊಬ್ಬರಿಗೆ ಆನ್‍ಲೈನ್ ಡೆಲಿವರಿ ಕಂಪನಿಯಿಂದ ಕಾಲ್ ಮಾಡ್ತಿದ್ದೀವಿ ಮೇಡಂ ಅಂತಾ ಅಪರಿಚಿತ ವ್ಯಕ್ತಿಯೊಬ್ಬ ಕಾಲ್ ಮಾಡಿದ್ದ. ಹಾಗೇ ಮಾತು ಮುಂದುವರಿಸಿ, ನಮ್ಮಲ್ಲಿ ನೂರು ರೂಪಾಯಿ ಲಿಪ್‍ಸ್ಟಿಕ್ ಬುಕ್ ಮಾಡಿದ್ರೆ, ಲಕ್ಷಾಂತರ ರೂಪಾಯಿ ಬಹುಮಾನ ಗೆಲ್ಲಬಹುದು ಅಂತಾ ಯುವತಿ ತಲೆಗೆ ತುಂಬಿಸಿದ್ದಾನೆ. ಆತನ ಮಾತನ್ನು ನಂಬಿದ ಯುವತಿ ನೂರು ರೂಪಾಯಿ ತಾನೇ ಓಕೆ ಅಂತಾ ಹೇಳಿದ್ದರು.


ಇದನ್ನೂ ಓದಿ: Golden Man: ಮೈಮೇಲೆ 5 ಕೆಜಿ ಚಿನ್ನ ಇಲ್ದೇ ಈತ ಮನೆಯಿಂದ ಹೊರಹೋಗಲ್ವಂತೆ


ಒಂದು ಲ್ಯಾಪ್ ಟಾಪ್ ಮತ್ತು ಐಫೋನ್ ಬಂಪರ್ ಬಹುಮಾನ


ನೂರು ರೂಪಾಯಿ ಬೆಲೆಯ ಲಿಪ್‍ಸ್ಟಿಕ್ ಬುಕ್ ಮಾಡಿದ ಯುವತಿಗೆ ಕೆಲ ನಿಮಿಷದಲ್ಲೇ ಆ ಕಡೆಯಿಂದ ಅಪರಿಚಿತ ಕಾಲ್ ಮಾಡಿದ್ದ. ಮೇಡಂ ನಿಮಗೆ ಒಂದು ಲ್ಯಾಪ್ ಟಾಪ್ ಮತ್ತು ಐಫೋನ್ ಬಂಪರ್ ಬಹುಮಾನ ಬಂದಿದೆ ಅಂದಿದ್ದ. ಈ ಮಾತು ಕೇಳಿದ ಯುವತಿ ಫುಲ್ ಖುಷಿ ಆಗಿ ಥ್ಯಾಂಕ್ ಯೂ ಸರ್ ಅಂದಿದ್ಲು. ಆಗ ಆ ಅಪರಿಚಿತ ವ್ಯಕ್ತಿ ನೀವೇ ಅಂತಾ ಕನ್ಫರ್ಮ್ ಮಾಡೋಕೆ ನಿಮಗೆ ಒಂದು ಲಿಂಕ್ ಕಳಿಸಿದ್ದೀನಿ ಅದನ್ನು ಓಕೆ ಮಾಡಿ ಅಂದಿದ್ದ. ಅಷ್ಟೇ ತಾನೇ ಅಂತಾ ಯುವತಿ ಆ ಲಿಂಕ್ ಓಕೆ ಮಾಡಿದ್ಲು. ಅಷ್ಟೇ ಕ್ಷಣಮಾತ್ರದಲ್ಲೇ ಆ ಯುವತಿ ಅಕೌಂಟ್ ನಲ್ಲಿದ್ದ ಮೂರು ಲಕ್ಷದ ಮೂವತ್ತೆಂಟು ಸಾವಿರ ಡೆಬಿಟ್ ಆಗಿದೆ ಅಂತಾ ಬ್ಯಾಂಕ್ ಕಡೆಯಿಂದ ಮಸೇಜ್ ಬಂದಿತ್ತು. ಯುವತಿ ಆ ಮಸೇಜ್ ನೋಡಿ ದಂಗಾಗಿ ಹೋದರು.


ಹೂಡಿಕೆಯ ಹೆಸರಿನಲ್ಲಿ ಹಣವನ್ನು ಪಡೆದಿದ್ದಾರೆ


ವಂಚಕರು ಖರೀದಿಸಿದ ನಂತರ ಲ್ಯಾಪ್‌ಟಾಪ್ ಮತ್ತು ಐಫೋನ್ ಅನ್ನು ನಮೂದಿಸಿರುವ ಹೆಚ್ಚಿನ ರಿಯಾಯಿತಿಗಳನ್ನು ಪಡೆಯಲು ಆಕೆಯನ್ನು ಆಯ್ಕೆ ಮಾಡಲಾಗಿದೆ ಎಂದು ನಂಬುವಂತೆ ಮತ್ತು ನಂತರ ಹೂಡಿಕೆಯ ಹೆಸರಿನಲ್ಲಿ ಹಣವನ್ನು ಪಡೆದಿದ್ದಾರೆ.


ಆನ್ ಲೈನ್ ನಲ್ಲಿ ಏನೇ ವ್ಯವಹಾರ ಮಾಡಬೇಕಾದ್ರು, ಹತ್ತು ಸಾರಿ ಯೋಚನೆ ಮಾಡಿ. ಯಾಕೆಂದರೆ ಸೈಬರ್ ವಂಚನೆಗೆ ಒಳಗಾದವರು ದುಡ್ಡು ವಾಪಸ್ ಬರೋದು ಬಹುತೇಕ ಡೌಟು. ಸದ್ಯ ಮೋಸ ಹೋದ ಯುವತಿ, ಈ ಸಂಬಂಧ ಬೆಂಗಳೂರು ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.


ಇದನ್ನೂ ಓದಿ: Viral News: ಚಿಕ್ಕೋಳಿದ್ದಾಗ ಮಕ್ಕಳು ನೋಡಿ ನಗ್ತಿದ್ರು, ಈಗ ಈಕೆಯ ಕಣ್ಣಿಗೆ ದುನಿಯಾ ಫಿದಾ


ಮನುಷ್ಯ ತನ್ನ ಚಟುವಟಿಕೆಗಳಿಂದ ಎಲ್ಲಿಯವರೆಗೆ ಯಶಸ್ಸನ್ನು ಕಾಣುತ್ತಾ ಇರುತ್ತಾನೋ ಅಲ್ಲಿಯವರೆಗೆ ಅಪರಾಧಗಳು ಹೆಚ್ಚುತ್ತಲೇ ಇರುತ್ತವೆ. ಅಂತಯೇ, ಈ ಅಪರಾಧಗಳನ್ನು ನಿಯಂತ್ರಿಸುವ ಕೆಲಸ ಆಗಿಂದಾಗ್ಗೆ ಮಾಡುತ್ತಲೇ ಇರಬೇಕಾಗುತ್ತದೆ. ಇದಕ್ಕಾಗಿ ಕಾನೂನು ರಚನಾ ಇಲಾಖೆಗಳನ್ನು ಬಲಪಡಿಸಬೇಕಾಗುತ್ತದೆ ಮತ್ತು ಅಪರಾಧಗಳನ್ನು ಹಿಮ್ಮೆಟ್ಟಿಸಬೇಕಾಗುತ್ತದೆ. 1990ರ ಪೂರ್ವದಲ್ಲಿ ಸೈಬರ್ ಸ್ವೇಸನ್ನು ಸುಮಾರು ಒಂದು ಲಕ್ಷ ಜನರು ಬಳಸುತ್ತಿದ್ದರು. ಇಂದು 500 ಮಿಲಿಯನ್‌ಗಿಂತ ಹೆಚ್ಚು ಜನರು ಪ್ರಪಂಚದ ನಾನಾ ಭಾಗಗಳಿಂದ ಬಳಸುತ್ತಿದ್ದು ಒಂದು ರೀತಿ ಅನೈತಿಕ, ದಿವಾನಿ ಮತ್ತು ಅಪರಾಧಿಕ ತಪ್ಪುಗಳನ್ನು ಎಸಗುವ ತಾಣವಾಗಿರುತ್ತದೆ.

First published: