Idli-Dosa: ಬೆಂಗಳೂರಿನ ಈ ಮಹಿಳೆ ₹2.50ಗೆ ಇಡ್ಲಿ, ₹5ಗೆ ದೋಸೆ ಮಾರುತ್ತಾರೆ, ನೀವೂ ಟೇಸ್ಟ್ ಮಾಡಿ ನೋಡಿ!

ಈ ಮಹಿಳೆ  ಎರಡೂವರೆ ರೂಪಾಯಿಗೆ ಇಡ್ಲಿಯನ್ನು ಮತ್ತು ಐದು ರೂಪಾಯಿಗೆ ದೋಸೆಯನ್ನು ಮಾರಾಟ ಮಾಡುತ್ತಾರೆ. ಇನ್ನು ಯಾರಾದರೂ ಆರ್ಡರ್ ಕೊಟ್ಟರೆ ಫ್ರೆಶ್ ಆಗಿ ಆಹಾರ ತಯಾರಿಸುತ್ತಾರೆ.

ಮಹಿಳೆ ಫೋಟೋ

ಮಹಿಳೆ ಫೋಟೋ

 • Share this:
  ಬೆಂಗಳೂರು: ಮಹಾನಗರಿ ಬೆಂಗಳೂರಲ್ಲಿ(bengaluru) ಬದುಕು(life) ಕಟ್ಟಿಕೊಳ್ಳುತ್ತೇವೆ ಬಂದವರು ಸಾಕಷ್ಟು ತೊಂದರೆ, ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ. ಊಟ, ತಿಂಡಿಗೆ ಹೆಚ್ಚೆಚ್ಚು ದುಡ್ಡು ಖರ್ಚು ಮಾಡಿ, ಬರುವ ಸಂಬಳದಲ್ಲಿ ಮನೆ ಬಾಡಿಗೆ,(home rent) ದೈನಂದಿನ ಖರ್ಚಿನ್ನೂ ಸಹ ಸರಿಯಾಗಿ ನೋಡಿಕೊಳ್ಳಲಾಗದೇ ಮತ್ತೆ ತಮ್ಮ ಊರೇ ಬೆಸ್ಟ್ ಎಂದು ವಾಪಸ್ಸಾದವರೂ ಇದ್ದಾರೆ. ಹಾಗೆಯೇ ಊರು-ಕೇರಿಯನ್ನು ಬಿಟ್ಟು ಬಂದು ಎಲ್ಲಿಯೋ ಉಳಿದುಕೊಂಡು, ಎಲ್ಲೋ ತಿಂದು ಉದ್ಯೋಗ(employment) ಕಂಡುಕೊಂಡು ಬದುಕು ಸಾಗಿಸುತ್ತಿರುವವರ ಸಾವಿರಾರು ಉದಾಹರಣೆಗಳು ಸಾಲು ಸಾಲಾಗಿ ಸಿಗುತ್ತವೆ.

  ಕೊರೊನಾ ಕಾಲಘಟ್ಟದಲ್ಲಿ ವ್ಯಾಪಾರಿಗಳಿಗೂ ಸಮಸ್ಯೆಯ ಬಿಸಿ ತಟ್ಟಿದೆ. ಸಣ್ಣಪುಟ್ಟ ಅಂಗಡಿ, ಗೂಡಂಗಡಿ, ಹೋಟೆಲ್(hotel) ನಡೆಸುವವರ ಪಾಡು ಹೇಳತೀರದು.ಗಿರಾಕಿಗಳಿಲ್ಲದೆ, ವ್ಯಾಪಾರ(buisness) ನಡೆಯದೇ ಇದ್ದದ್ದನ್ನೂ ಕಾಣಬಹುದು. ಆರ್ಥಿಕ ನಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿರುವವರೂ ಸಾಕಷ್ಟು ಜನರಿದ್ದಾರೆ.

  ಅಷ್ಟೇ ಅಲ್ಲ.. ಕಡಿಮೆ ಬೆಲೆಗೆ ತಿಂಡಿ, ಊಟ ಮಾರಾಟ ಮಾಡುವುದು, ಫ್ರೀ ಆಗಿ ರೇಷನ್ ಹಂಚಿರುವುದು, ಬಡವರಿಗೆ ಕೈಲಾದ ಸಹಾಯ ಮಾಡಿದ ಸಾಕಷ್ಟು ಉದಾಹರಣೆಗಳನ್ನು ಕಂಡಿದ್ದೇವೆ. ಈಗ ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಮಾಡುತ್ತಿರುವ ಈ ಕೆಲಸ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಇಷ್ಟು ಕಡಿಮೆ ಬೆಲೆಗೆ ಒಂದು ಚಾಕೋಲೇಟ್ ಸಿಗೋದೇ ಕಷ್ಟ ಅಂಥದ್ದರಲ್ಲಿ ಆಹಾರ ಸಿಗುತ್ತಲ್ಲ ಎಂದು ಅಂದುಕೊಳ್ಳುತ್ತಿದ್ದಾರೆ.

  ಇದನ್ನೂ ಓದಿ: ಬೆಂಗಳೂರಿನಲ್ಲಿ ಇರೋ ಬೆಸ್ಟ್ ಲೈಬ್ರರಿಗಳು ಇವು, ಎಂತೆಂಥಾ ಅದ್ಭುತ ಪುಸ್ತಕಗಳಿವೆ ಗೊತ್ತಾ ಇಲ್ಲಿ?

  ಅತ್ಯಂತ ಕಡಿಮೆ ಬೆಲೆಗೆ ಸಿಗಲಿದೆ ಇಡ್ಲಿ, ದೋಸೆ:

  ಈಗ ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ತಾಜಾ ತಾಜಾ ಇಡ್ಲಿ ಮತ್ತು ದೋಸೆಯನ್ನು ಅತ್ಯಂತ ಕಡಿಮೆ ರೂಪಾಯಿಗೆ ಮಾರಾಟ ಮಾಡುತ್ತಿರುವ ವಿಡಿಯೋ ಒಂದು ಭಾರೀ ವೈರಲ್ ಆಗಿದೆ.

  ಬೆಂಗಳೂರಿನ ಈ ಮಹಿಳೆ ತಮ್ಮ ಮನೆಯ ಹೊರಗೆ ಇಡ್ಲಿ ಮತ್ತು ದೋಸೆ ಪಾತ್ರೆಯನ್ನಿಟ್ಟು ಕುಳಿತು ಮಾರಾಟ ಮಾಡುತ್ತಾರೆ.

  ನೆಟ್ಟಿಗರ ಮನಗೆದ್ದ ವಿಡಿಯೋ

  ಈ ವಿಡಿಯೋವನ್ನು youtubeswadofficial ಅಪ್ ಲೋಡ್ ಮಾಡಿದೆ. ಮಹಿಳೆ  ಇಡ್ಲಿಯನ್ನು ಎರಡೂವರೆ ರೂಪಾಯಿಗೆ ಮತ್ತು ಐದು ರೂಪಾಯಿಗೆ ದೋಸೆಯನ್ನು ಮಾರಾಟ ಮಾಡುತ್ತಾರೆ. ಬೆಂಗಳೂರು ಮೂಲದ ಮಹಿಳೆ ದಕ್ಷಿಣ ಭಾರತದ ಖಾದ್ಯಗಳನ್ನು ಮಾರಾಟ ಮಾಡುತ್ತಿರುವುದು ನೆಟ್ಟಿಗರ ಮನ ಗೆದ್ದಿದೆ.


  ಇನ್ನು ಯಾರಾದರೂ ಆರ್ಡರ್ ಕೊಟ್ಟರೆ ಫ್ರೆಶ್ ಆಗಿ ಆಹಾರ ತಯಾರಿಸುತ್ತಾರೆ. ಮಹಿಳೆಯ ಮನೆಯ ಮೊದಲ ಮಹಡಿಯಲ್ಲಿ ಇಡ್ಲಿ ಮತ್ತು ದೋಸೆಯನ್ನು ತಯಾರಿಸಿ, ದೊಡ್ಡ ದೊಡ್ಡ ಪಾತ್ರೆಗಳ ಮೂಲಕ ಕೆಳಗೆ ತಲುಪಿಸಲಾಗುತ್ತದೆ. ನಂತರ ಅವುಗಳನ್ನು ಮಾರಾಟ ಮಾಡಲಾಗುತ್ತಿದೆ.

  ಮಹಿಳೆ ಕಳೆದ ಮೂವತ್ತು ವರ್ಷಗಳಿಂದ ಇಡ್ಲಿ , ದೋಸೆಯನ್ನು ಮಾರಾಟ ಮಾಡುತ್ತಿದ್ದಾರೆ. ಬೆಂಗಳೂರಿನ ಬಸವನಗುಡಿ, ವಿಶ್ವೇಶ್ವರಪುರ, ಪಾರ್ವತಿಪುರಗಳಲ್ಲಿ ಮಹಿಳೆ ಮಾರಾಟ ಮಾಡುತ್ತಾರೆ.

  ಉತ್ತಮ ಕೆಲಸಕ್ಕೆ ಅಭಿನಂದನೆಗಳ ಸುರಿಮಳೆ:

  ಇನ್ನು ಮಹಿಳೆಯ ಈ ವಿಡಿಯೋ 4.8 ಮಿಲಿಯನ್ ಬಾರಿ ವೀಕ್ಷಿಸಲ್ಪಟ್ಟಿದೆ. ಸಾಕಷ್ಟು ಜನ ಕಮೆಂಟ್ ಮಾಡಿ ಮೆಚ್ಚುಗೆ ಮತ್ತು ಅಭಿನಂದನೆ ಸಲ್ಲಿಸಿದ್ದಾರೆ. ಸುಮಾರು 5.62 ಲಕ್ಷ ಜನರು ಲೈಕ್ ಮಾಡಿದ್ದಾರೆ. ಕೆಲವರು ‘ ಅತ್ಯಂತ ಸಾಮಾನ್ಯರಾಗಿರುವ ಈ ಮಹಿಳೆ ಎಂಥ ಒಳ್ಳೆಯ ಕೆಲಸ ಮಾಡಿದ್ದಾರೆ. ಇಂಥವರನ್ನು ಗುರುತಿಸುವುದು ಸುಲಭದ ಕೆಲಸವಲ್ಲ. ಇವರ ಉತ್ತಮ ಕೆಲಸಕ್ಕೆ ಅಭಿನಂದನೆಗಳು’ ಎಂದು ಕಮೆಂಟ್ ಮಾಡಿದ್ದಾರೆ.

  ಇದನ್ನೂ ಓದಿ: ಸುಖಿ ಕುಟುಂಬಕ್ಕೆ 5 ಸಲಹೆಗಳು, ಇವುಗಳನ್ನ ಫಾಲೋ ಮಾಡಿದ್ರೆ ನಿಮ್ಮ ಸಂಸಾರ ಆನಂದ ಸಾಗರ

  ಅತ್ಯಂತ ಕಡಿಮೆ ಬೆಲೆಯಲ್ಲಿ ಆಹಾರ ನೀಡುತ್ತಿರುವ ಇವರನ್ನು ಭೇಟಿಯಾಗುವುದಾಗಿ ಕೆಲವರು ಹೇಳಿಕೊಂಡಿದ್ದಾರೆ. ಇನ್ನು ಕೆಲವರು ಇಷ್ಟು ಕಡಿಮೆ ಬೆಲೆಗೆ ಆಹಾರ ನೀಡುತ್ತಿರುವದನ್ನು ಶ್ಲಾಘಿಸಿದ್ದಾರೆ.

  ಇಂದಿನ ದಿನಗಳಲ್ಲಿ ಆರ್ಥಿಕ ಕುಸಿತ ಎಂದು ಹಲವು ಕಂಪನಿಗಳು ಬಾಗಿಲು ಮುಚ್ಚಿಕೊಂಡಿದ್ದನ್ನು ನೋಡಿದ್ದೇವೆ. ಪರಿಸ್ಥಿತಿ ಹೀಗಿರುವಾಗ ಎರೂವರೆ ರೂಪಾಯಿಗೆ ಆಹಾರ ನೀಡುತ್ತಿರುವುದು ಸಾಕಷ್ಟು ಜನರಿಗೆ ಸಹಕಾರಿಯಾಗಲಿದೆ. ಇನ್ನು ಇಂತಹ ಕೆಲಸಗಳು ಹೆಚ್ಚೆಚ್ಚು ನಡೆದರೆ ಸಾಕಷ್ಟು ಜನರಿಗೆ ಉಪಯೋಗವೂ ಆಗಲಿದೆ.
  Published by:renukadariyannavar
  First published: