• Home
 • »
 • News
 • »
 • trend
 • »
 • Cat Missing: ಹೆಸರು ಫ್ರೀಡಾ, 5 ವರ್ಷ, ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಕಾಣೆಯಾಗಿದೆ!

Cat Missing: ಹೆಸರು ಫ್ರೀಡಾ, 5 ವರ್ಷ, ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಕಾಣೆಯಾಗಿದೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಐದು ವರ್ಷದ ಬೆಕ್ಕು ಕಾಣೆಯಾಗಿದೆ. ಬುಧವಾರ ಸ್ಪೇನ್‌ಗೆ ಹೋಗಲು ಮಾಲೀಕರ ಜೊತೆಗೆ ಬಂದಿದ್ದ ಈ ಮರಿ ಬೆಕ್ಕು ನಿಗೂಢವಾಗಿ ಕಾಣೆ ಆಗಿದೆ. ಮುದ್ದಿನ ಬೆಕ್ಕು ಕಾಣದೇ ದಂಪತಿ ಕಂಗಾಲಾಗಿದ್ದಾರೆ.

 • News18 Kannada
 • Last Updated :
 • Bangalore [Bangalore], India
 • Share this:

  ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Bangalore Kempe Gowda International Airport) ದಲ್ಲಿ ಬೆಕ್ಕು (Cat) ಒಂದು ಕಾಣೆಯಾಗಿದೆ. ಸ್ಪೇನ್ ಗೆ ಹೋಗಬೇಕಿದ್ದ ಬೆಕ್ಕು ಮಾಲೀಕರಿಂದ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದು ಹೋಗಿದೆ. ಸುಮಾರು ಐದು ವರ್ಷದ ಬೆಕ್ಕು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಣೆಯಾಗಿದೆ. ಏರ್ ಪೋರ್ಟ್ ನಲ್ಲಿ ಬೆಕ್ಕು ಮಿಸ್ ಆಗಿದ್ದು ಮಾಲೀಕರನ್ನು ಕಂಗಾಲು ಮಾಡಿದೆ. ಸ್ಪೇನ್ ಗೆ ಹೋಗಲು ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಾಲೀಕರ ಜೊತೆ ಬಂದಿದ್ದ ಬೆಕ್ಕು ನಾಪತ್ತೆಯಾಗಿದೆ. ಐದು ವರ್ಷದ ಬೆಕ್ಕು ಇದಾಗಿದೆ. ಬೆಕ್ಕು ಇನ್ನೂ ಪತ್ತೆಯಾಗದ ಹಿನ್ನೆಲೆ ಹುಡುಕಾಟ ನಡೆದಿದೆ.


  ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಕ್ಕು ನಾಪತ್ತೆ


  ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಐದು ವರ್ಷದ ಬೆಕ್ಕು ಕಾಣೆಯಾಗಿದೆ. ಬುಧವಾರ ಸ್ಪೇನ್‌ ಗೆ ಹೋಗಲು ಮಾಲೀಕರ ಜೊತೆಗೆ ಬಂದಿದ್ದ ಬೆಕ್ಕು ನಿಗೂಢವಾಗಿ ಕಾಣೆ ಆಗಿದೆ.


  ಪೌಲಾ ಮತ್ತು ಹೊವಾರ್ಡ್ ಜೇಮ್ಸ್-ಸ್ಕಾಟ್ ಎಂಬ ಬ್ರಿಟಿಷ್ ದಂಪತಿ ಸಾಕಿದ್ದ ಫ್ರೀಡಾ ಮತ್ತು ಇತರೆ ಎರಡು ಸಾಕುಪ್ರಾಣಿಗಳು ಆಗಿವೆ. ಫ್ರೀಡಾ ಎಂಬ ಐದು ವರ್ಷದ ಸಾಕು ಬೆಕ್ಕು ಕೂಡ ಸ್ಪೇನ್ ನಿಜವಾದ ಮಾಲೀಕರ ಬಳಿ ಹೋಗಲು ಪ್ರಯಾಣಿಸಲು ಬೆಂಗಳೂರು ಏರ್ ಪೋರ್ಟ್ ಗೆ ಬಂದಿತ್ತು ಎಂದು ಮೂಲಗಳು ತಿಳಿಸಿವೆ.


  ಸಾಕು ಬೆಕ್ಕು ಫ್ರೀಡಾ ಕಾಣೆ


  ಫ್ರೀಡಾ ಸಾಕು ಬೆಕ್ಕು ಸ್ಪೇನ್ ನಲ್ಲಿ ತನ್ನ ನಿಜವಾದ ಮಾಲೀಕರ ಬಳಿ ಹೋಗಬೇಕಿತ್ತು. ಆದರೆ ಕಾಣೆ ಆಗಿದೆ. ಮೂರು ಸಾಕು ಪ್ರಾಣಿಗಳು ಸ್ಪೇನ್ ಗೆ ಮಾಲೀಕರ ಜೊತೆ ಹೊರಟಿದ್ದವು. ಸಾಕು ಬೆಕ್ಕು ಫ್ರೀಡಾ ಮತ್ತು ಎರಡು ನಾಯಿಗಳಾದ ಜೊಯಿಬೀ ಮತ್ತು ಸಿಂಬಾ ಬೆಂಗಳೂರು ಏರ್ ಪೋರ್ಟ್ ಗೆ ಬಂದಿದ್ದವು.


  ಕತಾರ್ ಏರ್‌ವೇಸ್ ನ್ನು ದೋಹಾಗೆ ಮತ್ತು ನಂತರ ಮ್ಯಾಡ್ರಿಡ್‌ ಹೋಗುವವರಿದ್ದರು. ಅಲ್ಲಿಂದ ಅವರ ಪೋಷಕರು ಪೋರ್ಚುಗಲ್‌ ನ ತಮ್ಮ ಮನೆಗೆ ಹೋಗುವವರಿದ್ದರು. ದಂಪತಿ ಕಳೆದ 15 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು.


  ಕಟ್ಟದಿಂದ ಕೆಳಕ್ಕೆ ಬೀಳುತ್ತಿದ್ದ ಬೆಕ್ಕನ್ನು ರಕ್ಷಿಸಿದ್ದ ದಂಪತಿ


  ನಗರದ ಕಾಡುಬೀಸನಹಳ್ಳಿಯಲ್ಲಿ ಬೆಕ್ಕೊಂದು ಮರಿ ಹಾಕಿತ್ತು. ಬೆಕ್ಕಿನ ಮರಿಯೊಂದು ಕಟ್ಟಡದಿಂದ ಕೆಳಗೆ ಬೀಳುತ್ತಿರುವಾಗ ದಂಪತಿ ರಕ್ಷಣೆ ಮಾಡಿದ್ದರು. ಅದೇ ಈ ಐದು ವರ್ಷದ ಫ್ರೀಡಾ ಬೆಕ್ಕು. ದಂಪತಿಗಳು ಎರಡು ತಿಂಗಳ ಹಿಂದೆ ಪೋರ್ಚುಗಲ್‌ ಗೆ ತೆರಳಿದ್ದರು. ಮತ್ತು ತಮ್ಮ ಸಾಕು ಪ್ರಾಣಿಗಳ ಸ್ಥಳಾಂತರಿಸುವ ಜವಾಬ್ದಾರಿಯನ್ನು ಸ್ಥಳೀಯ ಆಶ್ರಯ ಮಾಲೀಕ ಕೆಲ್ಲಿ ಜಾನ್ಸನ್‌ ಗೆ ವಹಿಸಿ ಕೊಟ್ಟಿದ್ದರು.


  ಆದರೆ ಕೆಲ್ಲಿ ಅವರು, ಸಾಕುಪ್ರಾಣಿಗಳನ್ನು ಕತಾರ್ ಏರ್‌ವೇಸ್‌ನ ಸಿಬ್ಬಂದಿಗೆ ಬೋರ್ಡಿಂಗ್‌ ಗಾಗಿ ನೀಡಿದ್ದರು. ಈ ವೇಳೆ ಬೆಕ್ಕು ಕಾಣೆಯಾಗಿದೆ. ಪಂಜರದಲ್ಲಿದ್ದ ಬೆಕ್ಕು ಕಾಣೆಯಾಗಿದೆ. ಬಹುಶಃ ಯಾರೋ ಪಂಜರವನ್ನು ಹಾಳು ಮಾಡಿರಬೇಕು. ಹೀಗಾಗಿ ಸಾಕು ಬೆಕ್ಕು ಫ್ರೀಡಾ ಕಾಣೆ ಆಗಿದೆ ಎಂದು ಕೆಲ್ಲಿ ಹೇಳಿದ್ದಾರೆ. ಇನ್ನು ತಮ್ಮ ಸಾಕು ಬೆಕ್ಕು ಏರ್ ಪೋರ್ಟ್ ನಲ್ಲಿ ಕಾಣೆಯಾಗಿರುವ ಸುದ್ದಿಯಿಂದ ಸ್ಪೇನ್ ದಂಪತಿ ಮರುಕ ಪಟ್ಟಿದ್ದಾರೆ. ತಮ್ಮ ಬೆಕ್ಕು ಕಾಣೆಯಾಗಿದ್ದಕ್ಕೆ ದುಃಖಿತರಾಗಿದ್ದಾರೆ.


  ಇದನ್ನೂ ಓದಿ: ಮನೆಗೆ ಕರೆದೊಯ್ಯಲು ಮಾಲೀಕ ಬರುವ ಎಂದು ಕಾದಿರುವ ಹಸು!


  ದಂಪತಿ ಸಾಕು ಪ್ರಾಣಿಗಳ ವಿಮಾನ ಪ್ರಯಾಣಕ್ಕಾಗಿ ₹ 3.3 ಲಕ್ಷ ಪಾವತಿಸಿದ್ದರು. ಆದರೆ ಏರ್ ಪೋರ್ಟ್ ನಲ್ಲಿ ಕಾಣೆಯಾಗಿರುವ ಸಾಕು ಬೆಕ್ಕು ಫ್ರೀಡಾ ಇನ್ನೂ ಪತ್ತೆ ಆಗಿಲ್ಲ. ಟರ್ಮಿನಲ್‌ ನಲ್ಲಿ ಕಳೆದು ಹೋಗಿರುವ ಶಂಕೆ ಇದೆ. ಇಲ್ಲಿಯವರೆಗೆ ರಕ್ಷಣಾ ಪ್ರಯತ್ನ ವ್ಯರ್ಥವಾಗಿವೆ.

  Published by:renukadariyannavar
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು