• Home
 • »
 • News
 • »
 • trend
 • »
 • Doctor Video: ಈ ವೈದ್ಯರು ಇಂಜೆಕ್ಷನ್​ ಕೊಟ್ರೆ ಮಕ್ಕಳು ಅಳೋದೇ ಇಲ್ವಂತೆ, ಏನಿವರ ಕೈಚಳಕ!

Doctor Video: ಈ ವೈದ್ಯರು ಇಂಜೆಕ್ಷನ್​ ಕೊಟ್ರೆ ಮಕ್ಕಳು ಅಳೋದೇ ಇಲ್ವಂತೆ, ಏನಿವರ ಕೈಚಳಕ!

ವೈರಲ್​ ವಿಡಿಯೋ

ವೈರಲ್​ ವಿಡಿಯೋ

ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗೋದು ಅಂದ್ರೆ ಪೋಷಕರಿಗೆ ಭಯವಾಗುತ್ತದೆ. ಯಾಕಂದ್ರೆ ಇನ್ಜೆಕ್ಷನ್​ ಕೊಡುವ ಸಮಯದಲ್ಲಿ ಮಕ್ಕಳು ಮಾಡುವ ಹಠವನ್ನು ತಪ್ಪಿಸೋಕೆ ಆಗೋಲ್ಲ. ಆದ್ರೆ ಇಲ್ಲೋರ್ವ ವೈದ್ಯರು ಮಕ್ಕಳಿಗೆ ಇನ್ಜೆಕ್ಷನ್​ ಕೊಡುವಾಗ ಅಳೋದೇ ಇಲ್ವಂತೆ!

 • News18 Kannada
 • 5-MIN READ
 • Last Updated :
 • Bangalore, India
 • Share this:

 ಡಾಕ್ಟರ್​ ಅಂತ ಹೇಳಿದ ಕೂಡಲೇ ಮೊದಲಿಗೆ ನಮಗೆ ನೆನಪಿಗೆ ಬರೋದು ಇಂಜೆಕ್ಷನ್​ ಅಲ್ವಾ? ಗಡ ಗಡನೇ ನಡುಗುತ್ತಾ ವೈದ್ಯರ ಬಳಿ ಹೋಗೋರೆ ಹೆಚ್ಚು. ದಿನಕ್ಕೆ ಒಂದು ಸೇಬು ಹಣ್ಣನ್ನು ತಿನ್ನೋದ್ರಿಂದ ವೈದ್ಯರನ್ನು (Doctor) ದೂರವಿಡಬಹುದು ಎಂಬ ಮಾತನ್ನು ಕೇಳಿದ್ದೇವೆ. ಹಾಗಂತ ಎಷ್ಟು ಮಂದಿ ಸೇಬು ಹಣ್ಣನ್ನು ಪ್ರತಿನಿತ್ಯ ತಿನ್ನುತ್ತೀರಾ ಅಂತ ಕೇಳಿದ್ರೆ ಬೆರಳೆಣಿಕೆಯಷ್ಟು ಜನರು ಸಿಗ್ಬೋದು. ಇದರಿಂದ ಅನಾರೋಗ್ಯಕ್ಕೆ ತುತ್ತಾಗುತ್ತೀವಿ ಅಂತನೂ ಹೇಳಲು ಆಗೋದಿಲ್ಲ. ಈಗಿನ ಬದಲಾಗುತ್ತಿವ ವಾತಾವರಣ, ಜೀವನಶೈಲಿಯಿಂದ ದೇಹದಲ್ಲಿ ಏರು ಪೇರಾಗುವುದು ಸಾಮಾನ್ಯ. ಹೀಗಾಗಿ ನಾವೇ ಅವರ ಇವರ ಮಾತುಗಳನ್ನು ಕೇಳಿ, ಯಾವುದ್ಯಾವುದೋ ಮಾತ್ರೆಗಳನ್ನು ಕೊಂಡುಕೊಳ್ಳುವುದರ ಬದಲು ವೈದ್ಯರ ಸಲಹೆಯನ್ನು ಪಡೆಯಲೇ ಬೇಕು. ರೋಗಿಗಳು ಬೇಗನೆ ಹುಷಾರಾಗಲು ವೈದ್ಯರು ಇನ್ಜೆಕ್ಷನ್​ ಕೊಡೋದು ಕಾಮನ್​. ಅದ್ರಲ್ಲೂ ಮಕ್ಕಳನ್ನು( Children) ಕರೆದುಕೊಂಡು ಹೋಗೋಕಂತು ಪೋಷಕರೇ ಹೆದರುತ್ತಾರೆ.


ಮಗು ಹುಟ್ಟಿದಾಗಿನಿಂದ 1 ವರ್ಷದ ತನಕ ನೂರಾರು ರೀತಿಯ ಇಂಜೆಕ್ಷನ್​ ಕೊಡುತ್ತಾರೆ. ಯಾಕಂದರೆ ಮಗು ಹುಷಾರು ತಪ್ಪಾರ್ದು ಎನ್ನುವ ಕಾರಣಕ್ಕಾಗಿ  ಈ ಸಲಹೆಗಳನ್ನು ಪೋಷಕರು  ಪಾಲನೆ ಮಾಡುತ್ತಾರೆ. ಇನ್ಜೆಕ್ಷನ್​ ಕೊಡುವಾಗ ಮಕ್ಕಳು ಎಷ್ಟೂ ಜೋರಾಗಿ ಅಳುತ್ತಾರೆ, ಹಠ ಮಾಡುತ್ತಾರೆ ಎಂದು ನಿಮಗೇ ಗೊತ್ತು.


ಮಕ್ಕಳ ಆಸ್ಪತ್ರೆಗೆ ಹೋದ್ರೆ ಒಂದೊಂದು ಧ್ವನಿಯಲ್ಲಿ, ರಾಗಗಳಲ್ಲಿ  ಅಳ್ತಾ ಇರುವುದನ್ನು ನಾವು ಕೇಳಬಹುದು. ನಿಜ, ಆದ್ರೆ ಇಲ್ಲೋರ್ವ ವೈದ್ಯ  ಇನ್ಜೆಕ್ಷನ್​ ಕೊಟ್ರೇ ಮಕ್ಕಳು ಅಳೋದೇ ಇಲ್ವಂತೆ. ಅರೇ! ಇದೇನಿದು ವಿಚಿತ್ರ ಅಂತ ಅನಿಸ್ತಾ ಇದ್ಯಾ? ಹೌದು, ಅಂದ್ರೆ ಈ ವೈದ್ಯ ಎಷ್ಟು ನಾಜೂಕಾಗಿ, ಐಡಿಯಾಗಳನ್ನು ಮಾಡಿಕೊಂಡು ಮಕ್ಕಳಿಗೆ  ಇನ್ಜೆಕ್ಷನ್​ ಕೊಡ್ತಾರೆ ಅಂತ ವಿಡಿಯೋದಲ್ಲಿ ಕಾಣಬಹುದು.


ಇದನ್ನೂ ಓದಿ: ಉಗುರಿನ ಸೌಂದರ್ಯಕ್ಕಾಗಿ ಮಾಡಿಸಿಕೊಳ್ಳುವ ಮನಿಕ್ಯೂರ್ ಕ್ಯಾನ್ಸರ್ ತರುತ್ತಂತೆ! ಮಹಿಳೆಯರೇ ಹುಷಾರ್ಹುಷಾರ್!


ಡಾಕ್ಟರ್ ಹೈ-ಫೈ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಡಾ. ಸೈಯದ್ ಮುಜಾಹಿದ್ ಹುಸೇನ್ ರವರು  Instagram ಖಾತೆಯನ್ನು ಹೊಂದಿದ್ದು,  ಮಕ್ಕಳೊಂದಿಗೆ ಅವರು ಮಾತನಾಡುವ ಹಲವಾರು ವಿಡಿಯೋಗಳನ್ನುಅಪ್ಲೋಡ್​ ಮಾಡುತ್ತಾರೆ. ಚುಚ್ಚುಮದ್ದಿನಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಆಟಿಕೆಗಳ ಮೂಲಕ ಮಕ್ಕಳನ್ನು ಮೋಸಗೊಳಿಸುವ ವಿಡಿಯೋಗಳು ಜನರ  ಹೃದಯವನ್ನು ಗೆದ್ದಿದೆ. ವರದಿಯ ಪ್ರಕಾರ, ವೈದ್ಯರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಮತ್ತು ನಗರದ ಗುಡ್‌ವಿಲ್ ಚಿಲ್ಡ್ರನ್ಸ್ ಕ್ಲಿನಿಕ್‌ನಲ್ಲಿ ತಮ್ಮ ಕಾಳಜಿಯ ಸೇವೆಗಳನ್ನು ಒದಗಿಸುತ್ತಾರೆ.


ಮೃದುವಾದ ಆಟಿಕೆಗಳು ಮತ್ತು ಟಾರ್ಚ್‌ ಲೈಟ್​ನೊಂದಿಗೆ ಅವರು ನಿಧಾನವಾಗಿ ಹಾಗೂ ಕೌಶಲ್ಯದಿಂದ ಚುಚ್ಚುಮದ್ದನ್ನು ನೀಡುತ್ತಾರೆ. ಮಕ್ಕಳನ್ನು ಮೋಜು ಮಾಡಲು ಪ್ರಯತ್ನಿಸುತ್ತಿರುವ ವಿಡಿಯೋಗಳು ಈ ವಿಡಿಯೋಗಳಲ್ಲಿ ವೈರಲ್​ ಆಗ್ತಾ ಇವೆ. ಚುಚ್ಚುಮದ್ದಿನ ಭಯವನ್ನು ಹೋಗಲಾಡಿಸಲು ವೈದ್ಯರು   ಮಕ್ಕಳೊಂದಿಗೆ ಹೈ-ಫೈ ರೀತಿಯಾಗಿ ಕನೆಕ್ಷನ್​ ಹೊಂದಿದ್ದಾರೆ.
ಇದರ ಜೊತೆಗೆ ಇವರು ಕನ್ನಡದಲ್ಲಿ ಮಾತನಾಡುವುದು  ಮತ್ತಷ್ಟು ಜನಪ್ರಿಯತೆಗೆ ಕಾರಣವಾಗಿದೆ ಅಂತ ಹೇಳಬಹುದು. ಇವರ  ಈ  ಉಪಾಯದಿಂದ ಅದೆಷ್ಟೋ ಪೋಷಕರು ನಿರಾಳವಾಗಿದ್ದಾರೆ. ಮತ್ತಷ್ಟು ಮಗದಷ್ಟು ಜನರು ಈ ಕ್ಲಿನಿಕ್​ಗೆ ಬರ್ತಾ ಇರೋದು ಸಂತೋಷದ ವಿಚಾರ. ನೀವು ಕೂಡ ಬೆಂಗಳೂರಿನ ನಿವಾಸಿಗರಾಗಿದ್ರೆ ನಿಮ್ಮ ಮಕ್ಕಳನ್ನು ಈ ಕ್ಲಿನಿಕ್​ಗೆ ಕರೆದುಕೊಂಡು ಹೋಗಿ.
ಈ ವಿಡಿಯೋ ನೋಡಿದಾಗ ನಿಮಗೆ ವಾಹ್​! ಸೂಪರ್​ ಡಾಕ್ಟರ್​ ಅಂತ ಅನಿಸಿಲ್ವಾ ಹೇಳಿ? ಎಷ್ಟು ನಗುಮುಖದಿಂದ ಮಕ್ಕಳನ್ನು ಮಾತನಾಡಿಸ್ತಾರೆ ಅಲ್ವಾ? ಇದ್ರೆ ಇಂತಾ ಡಾಕ್ಟರ್​ ಇರ್ಬೇಕು ಏನ್​ ಅಂತೀರಾ?

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು