Video: ವಿಶ್ವದ ಅತ್ಯಂತ ತಣ್ಣಗಿನ ಈ ನಗರದಲ್ಲಿ ಮಂಜುಗಟ್ಟಿದ ಬಾಳೆಹಣ್ಣಿನಿಂದ ಹಲಗೆಗೆ ಮೊಳೆ ಹೊಡೆಯಬಹುದು!

ಸೀನೆಟ್ ತೀವ್ರ ತಣ್ಣಗಿನ ತಾಪಮಾನದ ಪರಿಚಯ ಮಾಡಿಸಲಿಕ್ಕಾಗಿ, ವಿಡಿಯೋದಲ್ಲಿ ಹೊರಗೆ ಬಿದ್ದಿರುವ ಮಂಜುಗಡ್ಡೆಯಾದ ಬಾಳೆಹಣ್ಣನ್ನು ಸುತ್ತಿಗೆಯಂತೆ ಬಳಸಿ, ಮರದ ತುಂಡಿಗೆ ಮೊಳೆ ಬಡಿದು ತೋರಿಸುತ್ತಾರೆ.

ಚಳಿಯ ತೀವ್ರತೆ

ಚಳಿಯ ತೀವ್ರತೆ

  • Share this:

    ನಿಜ ಜೀವನದಲ್ಲಿ ‘ಇನ್ ಟು ದ ವೈಡ್’ ಸಿನಿಮಾದಂತಹ ಅನುಭವದ ಬಗ್ಗೆ ತಿಳಿಯುವ ಕೂತುಹಲ ಇದೆಯೇ.. ಹಾಗಾದರೆ, ಡಾಕ್ಯುಮೆಂಟರಿ ಸಿನಿಮಾಗಳನ್ನು ನಿರ್ಮಿಸುವ ಸೀನೆಟ್ ಯೂಟ್ಯೂಬ್ ಚಾನೆಲನ್ನೊಮ್ಮೆ ಖಂಡಿತಾ ವೀಕ್ಷಿಸಿ. ಅವರ ಚ್ಯಾನೆಲ್ ‘ಡಿಸ್ಕವರ್ ವಿತ್ ಸೆನೆಟ್’ ಬಹಳಷ್ಟು ಜನರ ಪಾಲಿಗೆ ಅಜ್ಞಾತವಾಗಿರುವ ಸ್ಥಳಗಳ ಬಗ್ಗೆ ತಿಳಿಸುತ್ತದೆ. ಇತ್ತೀಚೆಗೆ ಈ ಯೂಟ್ಯೂಬರ್ ಜಗತ್ತಿನ ಅತ್ಯಂತ ತಣ್ಣನೆಯ ಪ್ರದೇಶಕ್ಕೆ ಭೇಟಿ ನೀಡಿದ್ದರು. ಯಕುಟ್ಸ್ಕ್, ರಷ್ಯಾದಲ್ಲಿರುವ ತಣ್ಣನೆಯ ನಗರ. “ನಾನು ಗ್ರಹದ ಮೇಲಿನ ಅತ್ಯಂತ ತಣ್ಣನೆಯ ನಗರದಲ್ಲಿ ಇದ್ದೇನೆ; ಯಕುಟ್ಸ್ಕ್ ಇರುವುದು ಯಕುಟಿಯಾ / ಸೈಬೀರಿಯಾ / ರಷ್ಯಾದಲ್ಲಿ. ಇಲ್ಲಿ ದಾಖಲಾಗಿರುವ ಇದುವರೆಗಿನ ಅತ್ಯಂತ ಕಡಿಮೆ ತಾಪಮಾನ -71 ಡಿಗ್ರಿ ಸೆಲ್ಸಿಯಸ್” ಎಂದು ಸೀನೆಟ್ ತಮ್ಮ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.


    ಇಂತಹ ತೀವ್ರ ವಾತಾವರಣದಲ್ಲಿ ಶಕ್ತಿ ಸಂಪನ್ಮೂಲಗಳು ವಿಪರೀತ ಪ್ರಮಾಣದಲ್ಲಿ ಪೋಲಾಗುತ್ತವೆ, ಉದಾಹರಣೆಗೆ ಕಾರಿನ ಒಳಗೆ ಯಾರು ಇಲ್ಲದಿದ್ದರೂ ಎಂಜಿನ್ ರನ್ ಆಗುತ್ತಲೇ ಇರುತ್ತದೆ. ಹೊರ ಸೂಸುವ ಹೊಗೆಗಳು ಕೂಡ ಹೆಪ್ಪುಗಟ್ಟಿರುತ್ತವೆ. ನಗರದಲ್ಲಿನ ಮನೆಗೆ ವಾಸ್ತು ಕೂಡ ಭಿನ್ನವಾಗಿರುತ್ತದೆ. ಈ ನಗರದಲ್ಲಿ ಕೆಲವರು ಮಾಂಸ ಮತ್ತು ಹಾಳಾಗಬಲ್ಲ ಇತರ ಕೆಲವು ಪದಾರ್ಥಗಳನ್ನು ಕೇವಲ ಕಿಟಕಿಯ ಹಲಗೆಗಳಿಗೆ ನೇತು ಹಾಕಿ ಹೇಗೆ ಸಂರಕ್ಷಿಸಿಡುತ್ತಾರೆ ಎಂಬುದನ್ನು ಕೂಡ ಸೀನೆಟ್ ವಿಡಿಯೋದಲ್ಲಿ ತೋರಿಸಿದ್ದಾರೆ.


     

    ಸುಮಾರು 17 ನಿಮಿಷದಷ್ಟು ಉದ್ದದ ಆ ವಿಡಿಯೋದಲ್ಲಿ ತಮ್ಮ ಬೂಟಿನ ಕೆಳಗೆ 100 ಅಡಿ ದಪ್ಪದ ಐಸ್ ಕವರ್ ತೋರಿಸುತ್ತಾರೆ. ಒಬ್ಬ ಮಹಿಳೆ ಕೇವಲ ಒಂದು ನಿಮಿಷಕ್ಕಷ್ಟೆ ತಮ್ಮ ಕೈಗವಸು ತೆಗೆಯುತ್ತಾರೆ, ರಕ್ತ ಪರಿಚಲನೆಯ ಕೊರತೆಯಿಂದಾಗಿ ಆಕೆಯ ಬೆರಳು ಕೂಡಲೇ ಬಿಳುಚಿಕೊಳ್ಳುತ್ತದೆ. ಸೀನೆಟ್ ಭೇಟಿಯ ಸಂದರ್ಭದಲ್ಲಿ ಅಲ್ಲಿನ ತಾಪಮಾನ - 50 ಡಿಗ್ರಿ ಸೆಲ್ಸಿಯಸ್ ಇತ್ತು. ಬಿಸಿ ನೀರನ್ನು ಹೊರಗೆಸೆದ ಕೂಡಲೇ ಗಾಳಿಯಲ್ಲಿ ಹೇಗೆ ಮಂಜುಗಟ್ಟುತ್ತದೆ ಎಂಬುದನ್ನು ತೋರಿಸಿದ್ದಾರೆ.


    ಇಡೀ ವಿಡಿಯೋದಲ್ಲಿ  ಮಂಜುಗಟ್ಟಿದ ಹಾದಿಗಳು ಮತ್ತು ಮಂಜು ಮುಸುಕಿದ ಮಂದ ರಸ್ತೆಗಳ ಅದ್ಭುತ ದೃಶ್ಯಗಳಿವೆ. ಸೀನೆಟ್ ತೀವ್ರ ತಣ್ಣಗಿನ ತಾಪಮಾನದ ಪರಿಚಯ ಮಾಡಿಸಲಿಕ್ಕಾಗಿ, ವಿಡಿಯೋದಲ್ಲಿ ಹೊರಗೆ ಬಿದ್ದಿರುವ ಮಂಜುಗಡ್ಡೆಯಾದ ಬಾಳೆಹಣ್ಣನ್ನು ಸುತ್ತಿಗೆಯಂತೆ ಬಳಸಿ, ಮರದ ತುಂಡಿಗೆ ಮೊಳೆ ಬಡಿದು ತೋರಿಸುತ್ತಾರೆ. ಅಲ್ಲಿನ ಜನರು ಲೋಹದ ಫ್ರೇಮ್ ಉಳ್ಳ ಕನ್ನಡಕ ಹಾಕುವಂತಿಲ್ಲ, ಹಾಕಿದರೆ ಅದು ದೇಹಕ್ಕೆ ಅಂಟಿಕೊಂಡು ಕನ್ನಡಕ ತೆಗೆಯುವಾಗ ಮಾಂಸ ಕೂಡ ಕಿತ್ತುಕೊಂಡು ಬರುತ್ತದೆ.


    ನಗರದಲ್ಲಿ ನೈಸರ್ಗಿಕ ಅನಿಲದ ಪೈಪ್‍ಲೈನ್‍ಗಳನ್ನು ಭೂಮಿಯ ಮೇಲ್ಭಾಗದಲ್ಲೇ ಇರಬೇಕಾಗುತ್ತದೆ, ಏಕೆಂದರೆ ಭೂಮಿಯ ಕೆಳಗಿನ ಭಾಗ ಮಂಜಿನಿಂದ ಹೆಪ್ಪುಗಟ್ಟಿರುತ್ತದೆ ಎನ್ನುತ್ತಾರೆ ಸೀನೆಟ್. ಜಗತ್ತಿನ ಅತ್ಯಂತ ತಣ್ಣಗಿನ ಪ್ರದೇಶದ ಬಗ್ಗೆ ನಿಮಗೆ ಏನನಿಸುತ್ತದೆ? ನೀವು ಕೂಡ ಹೋಗ ಬಯಸುತ್ತೀರಾ?

    First published: