Banana Fibre: ಬಾಳೆ ನಾರಿನಿಂದ ಕರಕುಶಲ ಉದ್ಯಮ: ವರ್ಷಕ್ಕೆ ಲಕ್ಷಾಂತರ ರೂ. ಲಾಭ..!

ಉತ್ಪಾದನೆ ಹೆಚ್ಚಾದಂತೆ ಅವರು ದೆಹಲಿ, ಲಕ್ನೋ, ಅಮೃತ್‍ಸರ್, ಗುಜರಾತ್, ಕೇರಳ, ಮಧ್ಯ ಪ್ರದೇಶ ಮತ್ತಿತರ ರಾಜ್ಯಗಳಲ್ಲಿ ತಮ್ಮ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಸಿದ್ದಾರೆ. ಅಮೆಜಾನ್ ಮತ್ತು ಪ್ಲಿಪ್‌ಕಾರ್ಟ್‌ನಂತಹ ಆನ್‍ಲೈನ್ ವೇದಿಕೆಗಳಲ್ಲಿಯೂ ಅವರ ಉತ್ಪನ್ನಗಳು ಲಭ್ಯ ಇವೆ. ಅವರು ಈ ಉದ್ಯಮದಿಂದ ಒಟ್ಟಾರೆಯಾಗಿ ವಾರ್ಷಿಕ 9 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದೆಹಲಿಯ(Delhi) ಪ್ರಗತಿ ಮೈದಾನದಲ್ಲಿ, ಪ್ರತಿ ವರ್ಷವೂ ಕರಕುಶಲ(Handcraft) ವಸ್ತುಗಳ ಪ್ರದರ್ಶನ ಏರ್ಪಡಿಸಲಾಗುತ್ತದೆ. ಅದರಲ್ಲಿ ದೇಶದ ವಿವಿಧ ರಾಜ್ಯಗಳ ಮೂಲೆ ಮೂಲೆಗಳಿಂದ ಬಂದ ಕಲಾವಿದರು ಪಾಲ್ಗೊಳುತ್ತಾರೆ ಮತ್ತು ತಾವು ತಯಾರಿಸಿದ ಅಪರೂಪದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಾಡುತ್ತಾರೆ. 2016ರಲ್ಲಿ ಆಯೋಜಿಸಲಾಗಿದ್ದ ಅಂತಹ ಪ್ರದರ್ಶನಕ್ಕೆ ಭೇಟಿ ನೀಡಿದ ಜನರಲ್ಲಿ, ಉತ್ತರ ಪ್ರದೇಶದ(Uttar Pradesh) ಕೃಷ್ಣ ನಗರದ ರವಿ ಪ್ರಸಾದ್ (Ravi Prasad)ಕೂಡ ಒಬ್ಬರು. ಆದರೆ, ಆ ಭೇಟಿ ಅವರ ಬದುಕನ್ನೇ ಬದಲಾಯಿಸಿತು. ಕಾರಣ, ಆ ಪ್ರದರ್ಶನದಲ್ಲಿ ಬಾಳೆಗಿಡದ ನಾರಿನಿಂದ  ತಯಾರಿಸಿದ ಕಲಾತ್ಮಕ ವಸ್ತುಗಳನ್ನು ಕಂಡ ರವಿ ಪ್ರಸಾದ್, ತಾನು ಕೂಡ ಅದೇ ರೀತಿಯ ವಸ್ತುಗಳನ್ನು ಉತ್ಪಾದಿಸುವ ಮೂಲಕ ಜೀವನ ಕಟ್ಟಿಕೊಳ್ಳಲು ನಿರ್ಧರಿಸಿದರು.

“ನನ್ನ ಊರಾದ ಹರಿಹರಪುರದಲ್ಲಿ ನೂರಾರು ಎಕರೆ ಬಾಳೆ ತೋಟಗಳಿವೆ. ಆದರೆ ರೈತರು ಬಾಳೆ ಕಾಂಡಗಳನ್ನು ಎಸೆಯುತ್ತಾರೆ, ಅದರಿಂದ ಸುಂದರವಾದ ಮತ್ತು ಆರ್ಥಿಕ ಲಾಭ ತರುವ ಕರಕುಶಲ ವಸ್ತುಗಳನ್ನು ತಯಾರಿಸಬಹುದಿತ್ತು. ಬಾಳೆ ಗಿಡದ ತ್ಯಾಜ್ಯವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬಲ್ಲ ಕರಕುಶಲ ಉದ್ಯಮ ಇರಲಿಲ್ಲ ಮತ್ತು ನಾನು ಈ ನಿಟ್ಟಿನಲ್ಲಿ ಸಂಭಾವ್ಯ ಉದ್ಯಮ ನಿರೀಕ್ಷೆಗಳನ್ನು ಆನ್ವೇಶಿಸಲು ನಿರ್ಧರಿಸಿದೆ” ಎನ್ನುತ್ತಾರೆ ರವಿ ಪ್ರಸಾದ್.

ಪ್ರಗತಿ ಮೈದಾನಕ್ಕೆ ನೀಡಿದ ಒಂದು ಭೇಟಿ ಅವರನ್ನು ಕಡಿಮೆ ಕೌಶ್ಯದ ಉದ್ಯೋಗಿಯಿಂದ ಓರ್ವ ಉದ್ಯಮಿಯನ್ನಾಗಿ ಮಾಡಿತು. ಈಗ ಅದೇ ಮೈದಾನದಲ್ಲಿ ಅವರ ಕಿಯೋಸ್ಕ್ ಇದೆ ಮತ್ತು ಅದರಲ್ಲಿ ಮಳವ ಖೇಲಾ ರೆಸಾ ಉತ್ಪಾದನ್ ಲಘು ಉದ್ಯೋಗ್ ಕೇಂದ್ರ ಎಂಬ ಹೆಸರಿನ ಅಡಿಯಲ್ಲಿ ಬಾಳೆ  ನಾರಿನ ಉತ್ಪನ್ನಗಳನ್ನು ಮಾರಲಾಗುತ್ತದೆ, ಹಾಗೂ ಅದರಿಂದ ವರ್ಷಕ್ಕೆ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದೆ.

ಇದನ್ನೂ ಓದಿ: ದೀರ್ಘಾಯುಷಿಗಳಾಗಬೇಕಾ..? ಹಾಗಾದ್ರೆ ತರಕಾರಿ, ಸೊಪ್ಪು ಸೇವಿಸಿ ಎನ್ನುತ್ತದೆ ಅಧ್ಯಯನ

ತ್ಯಾಜ್ಯದಿಂದ ಚಿನ್ನದ ಸೃಷ್ಟಿ
ದಿನಗೂಲಿ ನೌಕರನ ಮಗನಾಗಿದ್ದ ರವಿ ಅತ್ಯಂತ ಬಡತನದಲ್ಲಿ ಬೆಳೆದರು. ತಂದೆ ಅಪಘಾತವೊಂದರಲ್ಲಿ ಸಾವನ್ನಪ್ಪಿದಾಗ, ತಾಯಿಗೆ ಆಸರೆಯಾಗಿ ನಿಲ್ಲಲು, ಅವರು ಶಾಲೆಯನ್ನು ಅರ್ಧಕ್ಕೆ ತೊರೆದು ಸಣ್ಣಪುಟ್ಟ ಕೆಲಸಗಳನ್ನು ಮಾಡಬೇಕಾಯಿತು. ದುಡಿಯುತ್ತಲೇ, ಕ್ರಮೇಣ ಅವರು ಅರ್ಥಶಾಸ್ತ್ರದಲ್ಲಿ ಪದವಿಯನ್ನು ಮುಗಿಸುವುದರಲ್ಲಿ ಸಫಲರಾದರು. ದೆಹಲಿಯ ಖಾಸಗಿ ಕಂಪೆನಿ ಒಂದರಲ್ಲಿ ಕೆಲಸವೂ ಸಿಕ್ಕಿತು. ಆದರೆ ಅಲ್ಲಿ ಸಂಬಳ ಬಹಳ ಕಡಿಮೆ ಇದ್ದದ್ದರಿಂದ, ರವಿ ಬೇರೆ ಒಳ್ಳೆಯ ಅವಕಾಶಗಳಿಗಾಗಿ ಹುಡುಕಾಡುತ್ತಿದ್ದರು.

ನನ್ನ ರಜಾ ದಿನದಲ್ಲೊಮ್ಮೆ ನಾನು ಪ್ರದರ್ಶನಕ್ಕೆ ಭೇಟಿ ನೀಡಿದೆ” ಎನ್ನುವ 36 ವರ್ಷದ ರವಿ, ಅಲ್ಲಿ ಬಾಳೆ ನಾರಿನ ತ್ಯಾಜ್ಯದಿಂದ ತಯಾರಿಸಿದ ಉತ್ಪನ್ನಗಳನ್ನು ನೋಡಿ, ತನ್ನ ಹಳ್ಳಿಯಲ್ಲಿ ಅದರ ಉದ್ದಿಮೆಯ ಸಂಭಾವ್ಯತೆ ಕಂಡುಕೊಂಡೆ ಎನ್ನುತ್ತಾರೆ.

ಆ ಉತ್ಪನ್ನಗಳನ್ನು ಮಾರುತ್ತಿದ್ದ ವ್ಯಾಪಾರಿಗಳಲ್ಲಿ ಒಬ್ಬರ ಸಂಪರ್ಕದ ವಿವರಗಳನ್ನು ಪಡೆದುಕೊಂಡ ರವಿ, ಕರಕುಶಲ ವಸ್ತುಗಳ ಬಗ್ಗೆ ತಿಳಿದುಕೊಳ್ಳಲು ನಿರ್ಧರಿಸಿದರು. ಮತ್ತು ಅದಕ್ಕಾಗಿ, ಕೊಯಮತ್ತೂರಿನಲ್ಲಿದ್ದ ಉದ್ಯಮಿಗಳ ತರಬೇತಿ ಕೇಂದ್ರವನ್ನು ಸೇರಿದರು.

ಅಲ್ಲಿಂದ ಮರಳಿದ ಬಳಿಕ , ಯಂತ್ರೋಪಕರಣಗಳನ್ನು ಖರೀದಿಸಲು ಮತ್ತು ಉದ್ಯಮ ಆರಂಭಿಸಲು ಸಾಲ ಪಡೆಯಲು ಅರ್ಜಿ ಸಲ್ಲಿಸಲು ನಿರ್ಧರಿಸಿದರು. ಆದರೆ ಬ್ಯಾಂಕ್‍ಗಳು ಸಾಲ ಕೊಡಲಿಲ್ಲ.

“ಬಹಳಷ್ಟು ಹೋರಾಟದ ಬಳಿಕ, ಪರಿಚಯದವರೊಬ್ಬರಿಂದ ರಾಜ್ಯ ಸರಕಾರದ ಜಿಲ್ಲಾ ಉದ್ಯೋಗ ಕೇಂದ್ರದ ಬಗ್ಗೆ ತಿಳಿಯಿತು. ನನ್ನ ಉದ್ಯಮದ ಯೋಜನೆಯನ್ನು ಅಧಿಕಾರಿಗಳ ಜೊತೆ ಹಂಚಿಕೊಂಡೆ ಮತ್ತು ನನ್ನ ಪರಿಕಲ್ಪನೆಯಿಂದ ಪ್ರಭಾವಿತರಾದ ಬಳಿಕ ಅವರು, ಒಂದು ಖಾಸಗಿ ಬ್ಯಾಂಕ್‍ನಿಂದ 5 ಲಕ್ಷ ರೂಪಾಯಿ ಸಾಲ ಪಡೆಯಲು ನನ್ನ ಹೆಸರನ್ನು ಸೂಚಿಸಿದರು. 2018ರಲ್ಲಿ ನಾನು ಮಾಳವ ಖೇಲಾ ರೆಸಾ ಲಘು ಉತ್ಪಾದನ್ ಕೇಂದ್ರ ಎಂಬ ಸಣ್ಣ ಗುಡಿ ಕೈಗಾರಿಕೆಯನ್ನು ಸ್ಥಾಪಿಸಿದೆ” ಎಂದು ತಮ್ಮ ಉದ್ಯಮದ ಆರಂಭದ ದಿನಗಳನ್ನು ನೆನಸಿಕೊಳ್ಳುತ್ತಾರೆ ರವಿ ಪ್ರಸಾದ್.

ಅವರು ಪಾದರಕ್ಷೆಗಳು, ಟೋಪಿಗಳು, ಕಾರ್ಪೆಟ್‍ಗಳು ಮತ್ತು ಬ್ಯಾಗ್‍ಗಳಂತಹ ಉತ್ಪನ್ನಗಳನ್ನು ತಯಾರಿಸಿ, ಸ್ಥಳೀಯ ಮಾರುಕಟ್ಟೆಗಳಲ್ಲಿ ಮಾರಿದರು. ಆಗಿನಿಂದ ಉದ್ಯಮ ಕೈ ಹಿಡಿಯಲು ಆರಂಭಿಸಿತು.

ಅವರು ರಾಜ್ಯ ಸರಕಾರದ ಯೋಜನೆಗಳಲ್ಲಿ ಒಂದಾದ , ಒನ್ ಡಿಸ್ಟ್ರಿಕ್ಟ್ ಒನ್ ಪ್ರಾಡಕ್ಟ್‌ಗೆ (ODOP) ಕೂಡ ಅರ್ಜಿ ಸಲ್ಲಿಸಿದರು. ಅಲ್ಲಿ ಅವರ ವಿಶೇಷ ಕರಕುಶಲ ಉತ್ಪನಗಳು ರಾಜ್ಯಮಟ್ಟದ ಉತ್ಸವಗಳಲ್ಲಿ ಪ್ರದರ್ಶನಕ್ಕೆ ಆಯ್ಕೆಯಾದವು. ಹಲವಾರು ಮಹಿಳೆಯರು ಕೂಡ ರವಿ ಪ್ರಸಾದ್ ಉದ್ಯಮದ ಬಗ್ಗೆ ತಿಳಿದುಕೊಂಡು, ಅವರೊಂದಿಗೆ ಕೆಲಸ ಮಾಡಲು ಆರಂಭಿಸಿದರು.

ಆ ಪ್ರದೇಶದಾದ್ಯಂತ ಇರುವ ರೈತರಿಂದ ಬಾಳೆ ಕಾಂಡ ಪಡೆಯುವ ರವಿ, “ ಕಾಂಡಗಳನ್ನು ಕತ್ತರಿಸಿ, ಅದನ್ನು ಯಂತ್ರದ ಮೂಲಕ ಶೀಟ್‍ಗಳನ್ನಾಗಿ ಪರಿವರ್ತಿಸಲಾಗುತ್ತದೆ. ನಂತರ ಆ ಶೀಟ್‍ಗಳನ್ನು ದಾರಗಳನ್ನಾಗಿ ಮಾಡಿ, ಅವುಗಳಿಂದ ಪಾದರಕ್ಷೆಗಳು, ಟೋಪಿ, ಸ್ಯಾನಿಟರಿ ನ್ಯಾಪ್ಕಿನ್, ಗ್ರೋ ಬ್ಯಾಗ್‍, ಕಾರ್ಪೆಟ್‍ ಮತ್ತು ಇತರ ಉತ್ಪನ್ನಗಳನ್ನು ಹೆಣೆಯಲಾಗುತ್ತದೆ. ಶೀಟ್‍ಗಳನ್ನು ಟೆಕ್ಸ್‌ಟೈಲ್ ಕಂಪೆನಿಗಳಿಗೆ ಕೂಡ ಮಾರಲಾಗುತ್ತದೆ, ಅಲ್ಲಿ ಅವುಗಳನ್ನು ಮೀನಿನ ಬಲೆ, ಬೆಟ್ ಶೀಟ್ ಮತ್ತು ಬಟ್ಟೆಗಳನ್ನಾಗಿ ಪರಿವರ್ತಿಸಲಾಗುತ್ತದೆ” ಎಂದು ತಮ್ಮ ಉದ್ಯಮದ ಪ್ರಕ್ರಿಯೆ ವಿವರಿಸುತ್ತಾರೆ.

ಅವರು ತಯಾರಿಸುವ ಉತ್ಪನ್ನಗಳಲ್ಲಿ ಅತ್ಯಂತ ಕಡಿಮೆ ಬೆಲೆಯದ್ದು 600 ರೂ.ಗಳ ಯೋಗ ಮ್ಯಾಟ್ ಮತ್ತು ಹೆಚ್ಚು ಬೆಲೆ ಉಳ್ಳದ್ದು 6,000 ರೂ.ಗಳ ಕಾರ್ಪೆಟ್ .

ಬಾಳೆ ನಾರುಗಳಿಂದ ಮೀನುಗಳ ಆಹಾರ ಮತ್ತು ಕೃಷಿಗೆ ಸಾವಯವ ಗೊಬ್ಬರಗಳನ್ನು ಕೂಡ ತಯಾರಿಸಲಾಗುತ್ತದೆ.

ಉತ್ಪಾದನೆ ಹೆಚ್ಚಾದಂತೆ ಅವರು ದೆಹಲಿ, ಲಕ್ನೋ, ಅಮೃತ್‍ಸರ್, ಗುಜರಾತ್, ಕೇರಳ, ಮಧ್ಯ ಪ್ರದೇಶ ಮತ್ತಿತರ ರಾಜ್ಯಗಳಲ್ಲಿ ತಮ್ಮ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಸಿದ್ದಾರೆ. ಅಮೆಜಾನ್ ಮತ್ತು ಪ್ಲಿಪ್‌ಕಾರ್ಟ್‌ನಂತಹ ಆನ್‍ಲೈನ್ ವೇದಿಕೆಗಳಲ್ಲಿಯೂ ಅವರ ಉತ್ಪನ್ನಗಳು ಲಭ್ಯ ಇವೆ. ಅವರು ಈ ಉದ್ಯಮದಿಂದ ಒಟ್ಟಾರೆಯಾಗಿ ವಾರ್ಷಿಕ 9 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ.

ಇದನ್ನೂ ಓದಿ: ಉದ್ದನೆಯ, ಹೊಳಪುಳ್ಳ ಕೇಶರಾಶಿಗಾಗಿ ಈ ಮೂರು ವಸ್ತುಗಳನ್ನು ಸೇವಿಸಿ

ಮಹಿಳೆಯರಿಗೂ ಉದ್ಯೋಗ
ಈ ಉದ್ಯಮದಿಂದ ಅವರ ಜಿಲ್ಲೆಯ 450ಕ್ಕೂ ಹೆಚ್ಚು ಮಹಿಳೆಯರು ಪ್ರಯೋಜನ ಪಡೆದಿದ್ದಾರೆ. ರಾಜ್ಯ ಇಲಾಖೆಯ ODOP ಯೋಜನೆ ಅಡಿಯಲ್ಲಿ , ಮಹಿಳೆಯರಿಗೆ 10 ದಿನಗಳ ತರಬೇತಿ ನೀಡಲಾಗುತ್ತದೆ ಮತ್ತು ಕಾರ್ಯಾಗಾರಕ್ಕೆ ಹಾಜರಾಗಲು 200 ರೂ. ಗಳ ಸ್ಟೈಫಂಡ್ ಮತ್ತು ಒಂದು ಟೂಲ್ ಕಿಟ್ ಕೊಡಲಾಗುತ್ತದೆ. ಇದರಿಂದಾಗಿ ಆ ಮಹಿಳೆಯರು ಆರ್ಥಿಕ ಸ್ವಾತಂತ್ರ್ಯ ಹೊಂದುವುದು ಸಾಧ್ಯವಾಗಿದೆ.

ಬಾಳೆ ನಾರುಗಳನ್ನು ಹೊಂದಿರುವ ವ್ಯಾಪಾರಿಗಳು ಲಾಭಕ್ಕಾಗಿ ಈ ಉದ್ಯಮ ಮಾಡಬೇಕು ಎಂದು ಸಲಹೆ ನಿಡುವ ರವಿ ಪ್ರಸಾದ್ ಅವರಿಗೆ, ತನ್ನ ಉದ್ಯಮದಿಂದ ತ್ಯಾಜ್ಯ ಮರುಬಳಕೆ ಮಾಡಲು ಮತ್ತು ಮಹಿಳೆಯರ ಸ್ವಾವಲಂಬನೆಗೆ ದಾರಿ ಮಾಡಿಕೊಡಲು ಸಾಧ್ಯವಾಗಿರುವುದಕ್ಕೆ ಸಂತೋಷವಿದೆ.
Published by:Sandhya M
First published: